ಅತ್ಯಾಚಾರ ಆರೋಪ ಎದುರಿಸುತ್ತಿರುವ ಪೋಕ್ಸೋ ನ್ಯಾಯಾಧೀಶರ ತೆರವಿಗೆ ಅರ್ಜಿ; ಅಲಹಾಬಾದ್ ಹೈಕೋರ್ಟ್‌ಗೆ ಸುಪ್ರೀಂ ನೋಟಿಸ್

Date:

ಅತ್ಯಾಚಾರ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಅಲಹಾಬಾದ್‌ನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ (ADJ) ಅಶೋಕ್ ಭರ್ತೇಂದು ಅವರನ್ನು ಪೋಕ್ಸೋ (POCSO) ವಿಶೇಷ ನ್ಯಾಯಾಧೀಶರ ಹುದ್ದೆಯಿಂದ ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಅಲಹಾಬಾದ್ ಹೈಕೋರ್ಟ್ ಆಡಳಿತ ಮಂಡಳಿ ಹಾಗೂ ನ್ಯಾಯಾಧೀಶ ಅಶೋಕ್ ಭರ್ತೇಂದು ಅವರಿಂದ ಪ್ರತಿಕ್ರಿಯೆ ಕೋರಿದೆ.

- Advertisement -

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರಿದ್ದ ಪೀಠವು, ನ್ಯಾಯಾಧೀಶರ ವಿರುದ್ಧ ಸಲ್ಲಿಕೆಯಾಗಿರುವ ವಿಜಿಲೆನ್ಸ್ ದೂರಿನ ಪ್ರಗತಿಯ ಬಗ್ಗೆಯೂ ಪರಿಶೀಲನೆ ನಡೆಸುವುದಾಗಿ ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಮನಿಗೆ ₹150 ಕೋಟಿ, ಸೀತೆಗೆ ₹12 ಕೋಟಿ! ಬಿಗ್...

₹4,000 ಕೋಟಿಯ ಬೃಹತ್ ಬಜೆಟ್‌ನ 'ರಾಮಾಯಣ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹೊತ್ತಿನಲ್ಲಿ ಚಿತ್ರರಂಗದ ಅದೇ ಹಳೆ ಹಣೆಬರಹವೊಂದು ಚರ್ಚೆಗೆ ಸಿಕ್ಕಿದೆ. ರಾಮನ ಪಾತ್ರಕ್ಕೆ ₹150 ಕೋಟಿ, ರಾವಣನಿಗೆ ₹100 ಕೋಟಿ ಸಂಭಾವನೆ!...

ರಾಮಲೀಲಾ ಮೈದಾನದಲ್ಲಿ ವಿಪಕ್ಷಗಳ ಬಲಪ್ರದರ್ಶನ; ಬೀದಿ ಹೋರಾಟ ಬೇರುಮಟ್ಟದ...

ನವಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಸಮಾವೇಶವು ಭಾರತೀಯ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ರಾಜಕೀಯ ಮೈಲಿಗಲ್ಲಾಗಿ ದಾಖಲಾಗಿದೆ. ಚುನಾವಣಾ ಆಕ್ರಮ, ಎಸ್‌ಐಆರ್ ಷಡ್ಯಂತ್ರದ ವಿರುದ್ಧ ಮತ್ತು ಮುಖ್ಯ ಚುನಾವಣಾ...

ಮಣಿಪುರವನ್ನು ಜನಾಂಗೀಯ ಘರ್ಷಣೆಯ ದಳ್ಳುರಿಗೆ ತಳ್ಳಿ ಕೈಚೆಲ್ಲಿದೆ ಮೋ-ಶಾ...

ಮ್ಯಾನ್ಮಾರ್‌ನೊಂದಿಗೆ ಸುಮಾರು 400 ಕಿಲೋಮೀಟರ್ ಗಡಿ ಹಂಚಿಕೊಳ್ಳುವ ಈಶಾನ್ಯ ಭಾರತದ ಗಡಿ ರಾಜ್ಯ ಮಣಿಪುರದಲ್ಲಿ ಶತಮಾನಗಳಿಂದ ಬೆಳೆದು ಬಂದಿದ್ದ ಸೌಹಾರ್ದತೆಯ ಬೇರುಗಳನ್ನು ಸಂಪೂರ್ಣವಾಗಿ ಕೊಳೆತು ಹೋಗಲು ಕೇಂದ್ರ ಸರ್ಕಾರ ಬಿಟ್ಟಂತಿದೆ. 2023ರಿಂದ ನಡೆಯುತ್ತಿರುವ...

ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ನ್ಯಾಯಾಂಗ ಅಧಿಕಾರಿಯೊಬ್ಬರು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ತಡೆ ಕಾಯ್ದೆ (POCSO) ಅಡಿಯಲ್ಲಿ ನೇಮಕಗೊಂಡ ವಿಶೇಷ ನ್ಯಾಯಾಧೀಶರಾಗಿ ಮುಂದುವರಿಯುತ್ತಿರುವುದು ವಿಪರ್ಯಾಸ ಎಂದು ಸಂತ್ರಸ್ತೆಯ ಪರ ವಕೀಲ ರಾಕೇಶ್ ಕುಮಾರ್ ಸಿಂಗ್ ನ್ಯಾಯಾಲಯದ ಗಮನಕ್ಕೆ ತಂದರು.

Advertisements

ನ್ಯಾಯಾಧೀಶರ ವಿರುದ್ಧದ ಪ್ರಕರಣದಲ್ಲಿ ಈಗಾಗಲೇ ವಿಚಾರಣಾ ನ್ಯಾಯಾಲಯವು ಆರೋಪಗಳನ್ನು ಪರಿಗಣಿಸಿ ಮುಂದಿನ ಕಾನೂನು ಪ್ರಕ್ರಿಯೆಗೆ ಮುಂದಾಗಿದೆ. ಪ್ರಕರಣವನ್ನು ರದ್ದುಗೊಳಿಸುವಂತೆ ಅವರು ಸಲ್ಲಿಸಿರುವ ಅರ್ಜಿ ಬಾಕಿ ಇದ್ದರೂ, ವಿಚಾರಣೆಗೆ ಯಾವುದೇ ತಡೆಯಾಜ್ಞೆ ಇಲ್ಲ ಎಂದು ವಕೀಲರು ವಾದಿಸಿದರು. ಆರಂಭದಲ್ಲಿ, ‘ನೀವು ಕ್ರಿಮಿನಲ್ ಪ್ರಕರಣದ ವಿಚಾರಣೆಯನ್ನು ಮುಂದುವರಿಸಿ’ ಎಂದು ನ್ಯಾಯಪೀಠ ಪ್ರತಿಕ್ರಿಯಿಸಿತು.

ಆದರೆ, ನ್ಯಾಯಾಧೀಶರ ವಿರುದ್ಧ ಯಾವುದೇ ಶಿಸ್ತುಕ್ರಮ ಕೈಗೊಳ್ಳಲಾಗಿಲ್ಲ. ವಿಜಿಲೆನ್ಸ್‌ಗೆ ದೂರು ಸಲ್ಲಿಸಿದ್ದರೂ ಅದರ ಪ್ರಗತಿ ಕಂಡುಬರುತ್ತಿಲ್ಲ. ಹೀಗಾಗಿ ಸಂವಿಧಾನದ ಅಡಿಯಲ್ಲಿ ಸುಪ್ರೀಂ ಕೋರ್ಟ್ ಹೊಂದಿರುವ ಮೇಲ್ವಿಚಾರಣಾ ಅಧಿಕಾರವನ್ನು ಬಳಸಿಕೊಂಡು ಅವರನ್ನು ನ್ಯಾಯಾಂಗ ಕರ್ತವ್ಯಗಳಿಂದ ಮುಕ್ತಗೊಳಿಸಬೇಕು ಎಂದು ವಕೀಲರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ, ವಿಜಿಲೆನ್ಸ್ ದೂರಿನ ಪ್ರಗತಿಯ ಬಗ್ಗೆ ದೂರುದಾರರಿಗೆ ಮಾಹಿತಿ ನೀಡಲಾಗಿಲ್ಲ ಮತ್ತು ಯಾವುದೇ ಗೋಚರ ಪ್ರಗತಿಯೂ ಕಂಡುಬಂದಿಲ್ಲ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿದೆ. ಈ ಹಿನ್ನೆಲೆಯಲ್ಲಿ ಶಿಸ್ತುಕ್ರಮದ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹೈಕೋರ್ಟ್‌ಗೆ ನಿರ್ದೇಶನ ನೀಡುವುದಾಗಿ ತಿಳಿಸಿದರು.

ಆದರೆ, ನ್ಯಾಯಾಧೀಶರನ್ನು ನೇರವಾಗಿ ಹುದ್ದೆಯಿಂದ ತೆರವುಗೊಳಿಸುವ ನಿರ್ಧಾರವನ್ನು ಸುಪ್ರೀಂ ಕೋರ್ಟ್ ತೆಗೆದುಕೊಳ್ಳುವುದಿಲ್ಲ. ಈ ವಿಚಾರವನ್ನು ಅಲಹಾಬಾದ್ ಹೈಕೋರ್ಟ್ ಆಡಳಿತ ಮಂಡಳಿಯೇ ನಿರ್ಧರಿಸಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ಏನಿದು ಪ್ರಕರಣ?

ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದ ಮೇಲೆ ಅಶೋಕ್ ಭರ್ತೇಂದು ವಿರುದ್ಧ 2022ರ ಡಿಸೆಂಬರ್ 8ರಂದು ದೆಹಲಿಯ ಮಯೂರ್ ವಿಹಾರ್ ಫೇಸ್-1 ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376ರ ಅಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.

ಈ ಎಫ್‌ಐಆರ್ ಪ್ರಶ್ನಿಸಿ ಭರ್ತೇಂದು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 2023ರ ಮಾರ್ಚ್‌ನಲ್ಲಿ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಲಾಗಿತ್ತು. ಪ್ರಾಥಮಿಕವಾಗಿ ಇದು ಮದುವೆಯ ಭರವಸೆಯನ್ನು ಈಡೇರಿಸದ ಪ್ರಕರಣವಾಗಿರಬಹುದು ಎಂಬ ಅಭಿಪ್ರಾಯವನ್ನು ನ್ಯಾಯಾಲಯ ವ್ಯಕ್ತಪಡಿಸಿತ್ತು.

ಇದನ್ನೂ ಓದಿ: ʼಗೂಂಡಾ ಕಾಯ್ದೆಯ ದುರ್ಬಳಕೆ ಸಲ್ಲದುʼ; ಯುಪಿ ಸರ್ಕಾರದ ವಿರುದ್ದ ಅಲಹಾಬಾದ್‌ ಹೈಕೋರ್ಟ್‌ ಅಸಮಾಧಾನ

ಆದರೆ, ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ಯಾವುದೇ ತಡೆಯಾಜ್ಞೆ ಇಲ್ಲ ಎಂದು ದೆಹಲಿ ಹೈಕೋರ್ಟ್ ನಂತರ ಸ್ಪಷ್ಟಪಡಿಸಿತ್ತು. ಆರೋಪಪಟ್ಟಿ ಸಲ್ಲಿಕೆಯಾದ ಬಳಿಕ ಕಾನೂನು ಪ್ರಕಾರ ವಿಚಾರಣೆ ಮುಂದುವರಿಸುವಂತೆ ಸೂಚಿಸಿತ್ತು.

ಇದರಂತೆ ದೆಹಲಿಯ ಕರ್ಕರ್ಡೂಮಾ ಜಿಲ್ಲಾ ನ್ಯಾಯಾಲಯವು ಭರ್ತೇಂದು ವಿರುದ್ಧದ ಪ್ರಕರಣದಲ್ಲಿ ಆರೋಪಗಳನ್ನು ಪರಿಗಣಿಸಿ ಮುಂದಿನ ಪ್ರಕ್ರಿಯೆ ಆರಂಭಿಸಿತು. ಪ್ರಕರಣದ ದಾಖಲೆಗಳಿಂದ ತಮ್ಮ ಹೆಸರನ್ನು ತೆಗೆದುಹಾಕುವಂತೆ ಅವರು ಸಲ್ಲಿಸಿದ್ದ ಅರ್ಜಿಯನ್ನೂ ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು.

ಪ್ರಕರಣದ ವಿಚಾರಣೆ ಔಪಚಾರಿಕವಾಗಿ ಮುಂದುವರಿಯಬೇಕಿರುವ ಹಂತದಲ್ಲಿರುವಾಗ, ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ನ್ಯಾಯಾಂಗ ಅಧಿಕಾರಿಯೊಬ್ಬರು ಪೋಕ್ಸೋ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಧೀಶರಾಗಿ ಮುಂದುವರಿಯಬಾರದು ಎಂದು ಸಂತ್ರಸ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಎಸ್‌ಐಆರ್‌ ರದ್ದತಿಗೆ ಆಗ್ರಹ: ನ.5ರ ಪ್ರತಿಭಟನೆಗೆ ಬೆಂಬಲ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯು ಪ್ರಜಾಪ್ರಭುತ್ವದ ಮೂಲ...

ನಟಿ ನೋರಾ ಫತೇಹಿಗೆ ದೆಹಲಿ ಕೋರ್ಟ್ ತರಾಟೆ; ₹200 ಕೋಟಿ ಸುಲಿಗೆ ಕೇಸ್‌ನಲ್ಲಿ ಮರು ಸಮನ್ಸ್

ಬಹುಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ...

ವಿಜಯಪುರ | ಗಾಂಧಿ ಚಿಂತನೆಗಳು ಇಂದಿಗೂ ಪ್ರಸ್ತುತ: ಪ್ರೊ. ವಿಜಯಾ ಕೋರಿಶೆಟ್ಟಿ

ಸತ್ಯ, ಅಹಿಂಸೆ ಮತ್ತು ಮಾನವೀಯ ಮೌಲ್ಯಗಳ ಮೂಲಕ ಜಗತ್ತಿಗೆ ಶಾಂತಿ ಹಾಗೂ...

ದೀಪಾವಳಿಗೆ ಎರಡು ದಿನ ಹಸಿರು ಪಟಾಕಿಗಳಿಗೆ ಸುಪ್ರೀಂ ಕೋರ್ಟ್ ಅನುಮತಿ

ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ಧಾರ್ಮಿಕ ಆಚರಣೆ ಎಂದು ಪರಿಗಣಿಸಿರುವ ಸುಪ್ರೀಂ...