ಕೇಂದ್ರದ ಭಾರತಮಾಲಾ ಪರಿಯೋಜನಾ ಹಂತ-1ರ ಅಡಿಯಲ್ಲಿ ನಿರ್ಮಿಸಲಾದ ದ್ವಾರಕಾ ಎಕ್ಸ್‌ಪ್ರೆಸ್‌ವೇ ವೆಚ್ಚವು 2017 ರಲ್ಲಿ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಮಂಜೂರು ಮಾಡಿದ ಮೊತ್ತಕ್ಕಿಂತ 14 ಪಟ್ಟು ಮೀರಿದೆ ಎಂಬ ಅಂಶವನ್ನು ಸರ್ಕಾರದ ಉನ್ನತ ಲೆಕ್ಕ ಪರಿಶೋಧಕ ಕಂಟ್ರೋಲರ್ ಮತ್ತು ಆಡಿಟರ್ ಜನರಲ್( ಸಿಎಜಿ) ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ವರದಿಯ ಪ್ರಕಾರ, ದೆಹಲಿ ಮತ್ತು ಗುರುಗ್ರಾಮದ ನಡುವಿನ ದಟ್ಟಣೆಯನ್ನು ಕಡಿಮೆ ಮಾಡಲು ರಾಷ್ಟ್ರೀಯ ಹೆದ್ದಾರಿ 48 ಅನ್ನು ಆದ್ಯತೆಯ ಮೇರೆಗೆ 14-ಪಥ ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿ ಪಡಿಸುವ ಮೂಲಕ ಸಮಾನಾಂತರವಾಗಿ ಚಲಿಸುವ ದ್ವಾರಕಾ ಎಕ್ಸ್‌ಪ್ರೆಸ್‌ವೇ ಅನ್ನು ಪ್ರತಿ ಕಿಮೀಗೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ(ಸಿಸಿಇಎ) ಅನುಮೋದಿಸಿದ್ದ 18.20 ಕೋಟಿ ರೂ. ವೆಚ್ಚಕ್ಕಿಂತ 14 ಪಟ್ಟು ಅತ್ಯಂತ ಹೆಚ್ಚಿನ ದರ ಅಂದರೆ 250.77 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಈ ಯೋಜನೆಯ ವೆಚ್ಚವನ್ನು ಮೂಲತಃ 528.8 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಆದರೆ ನಂತರ 7287.2 ಕೋಟಿಗೆ ಹೆಚ್ಚಿಸಲಾಗಿದೆ.
ಏಪ್ರಿಲ್ 2022 ರಿಂದ ಈ ಕುರಿತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿರುವಂತೆ, ದ್ವಾರಕಾ ಎಕ್ಸ್‌ಪ್ರೆಸ್‌ವೇ ಅನ್ನು ಅಂತರರಾಜ್ಯ ಸಂಚಾರದ ತಡೆರಹಿತ ಚಲನೆಯನ್ನು ಅನುಮತಿಸಲು ಸೀಮಿತ ಪ್ರವೇಶ ನಿರ್ಗಮನ ವ್ಯವಸ್ಥೆಗಳೊಂದಿಗೆ ಎಂಟು ಪಥದ ಎಲಿವೇಟೆಡ್ ರಸ್ತೆಯಾಗಿ ಅಭಿವೃದ್ಧಿ ಪಡಿಸಲು ಯೋಜಿಸಲಾಗಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಏಪ್ರಿಲ್ 2022ರಲ್ಲಿ ತಿಳಿಸಿರುವ ವರದಿಯಂತೆ, ಅಂತರರಾಜ್ಯ ಸಾರಿಗೆಯನ್ನು ಸುಗಮಗೊಳಿಸುವ ಸಲುವಾಗಿ ಈ ಹೆದ್ದಾರಿಯನ್ನು ಕನಿಷ್ಠ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆಯೊಂದಿಗೆ ಎಂಟು ಪಥಗಳ ಕಾರಿಡಾರ್ ಆಗಿ ನಿರ್ಮಿಸಲು ಉದ್ದೇಶಿಸಲಾಗಿಲಾಗಿತ್ತು. ಇದು ವೆಚ್ಚ ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಸೈಬರ್ ದಾಳಿ | ಆಂಡ್ರಾಯ್ಡ್ ಮೊಬೈಲ್ ಬಳಕೆದಾರರಿಗೆ ಸರ್ಕಾರದಿಂದ ತುರ್ತು ಎಚ್ಚರಿಕೆ
ಸರಿಸುಮಾರು 55,432 ಪ್ರಯಾಣಿಕ ವಾಹನಗಳ ಸರಾಸರಿ ದೈನಂದಿನ ಸಂಚಾರಕ್ಕಾಗಿ ಎಂಟು ಪಥಗಳ ಹೆದ್ದಾರಿಯ ಯೋಜನೆ ನಿರ್ಮಾಣಕ್ಕೆ ದಾಖಲೆಯಲ್ಲಿ ಯಾವುದೇ ಸಮರ್ಥನೆ ಇಲ್ಲ ಎಂದು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಹೇಳಿದ್ದಾರೆ.
2,32,959 ಪ್ರಯಾಣಿಕ ವಾಹನಗಳ ಸರಾಸರಿ ವಾರ್ಷಿಕ ದೈನಂದಿನ ಸಂಚಾರಕ್ಕಾಗಿ ಕೇವಲ ಆರು ಪಥಗಳನ್ನು ನಿರ್ಮಿಸಲಾಗುತ್ತದೆ ಎಂದು ಸಿಎಜಿ ಹೇಳಿದ್ದಾರೆ.
ಈ ರೀತಿ ವೆಚ್ಚ ಮೀರಿರುವುದು ಇದೊಂದೆ ಹೆದ್ದಾರಿ ನಿರ್ಮಾಣವಲ್ಲ. ದೇಶದಾದ್ಯಂತ ಕೇಂದ್ರದ ಭಾರತ ಮಾಲಾ ಪರಿಯೋಜನೆಯಡಿ ನಿರ್ಮಾಣವಾಗುತ್ತಿರುವ ಹೆದ್ದಾರಿಗಳ ವೆಚ್ಚ ನಿಗದಿತ ವೆಚ್ಚಕ್ಕಿಂತ ಶೇ 58 ರಷ್ಟು ಹೆಚ್ಚಾಗಿದೆ ಎಂದು ವರದಿ ಬಹಿರಂಗಪಡಿಸಿದೆ.
26,316 ಕಿಮೀ ಯೋಜನೆಯ ಉದ್ದದ ಹೆದ್ದಾರಿಗೆ ಮಂಜೂರಾದ ವೆಚ್ಚ 8,46,588 ಕೋಟಿ (ರೂ 32.17 ಕೋಟಿ/ಕಿಮೀ) ಆಗಿದೆ. ಆದರೆ ಸಿಸಿಇಎ ಅನುಮೋದಿಸಿದ್ದು 34,800 ಕಿಮೀ ಉದ್ದಕ್ಕೆ 5,35,000 ಕೋಟಿ (ರೂ. 15.37 ಕೋಟಿ/ಕಿಮೀ) ವೆಚ್ಚವಾಗಿದೆ.
ವೆಚ್ಚದ ಹೆಚ್ಚಳದ ಹೊರತಾಗಿ, 34,800 ಕಿಮೀ ರಾಷ್ಟ್ರೀಯ ಹೆದ್ದಾರಿಗಳನ್ನು ಪೂರ್ಣಗೊಳಿಸಲು 2022ರ ಗಡುವನ್ನು ನೀಡಲಾಗಿತ್ತು. ಆದರೆ 31 ಮಾರ್ಚ್ 2023 ರವರೆಗೆ ಕೇವಲ 13,499 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿಗಳು ಪೂರ್ಣಗೊಂಡಿವೆ ಎಂದು ವರದಿ ಹೇಳಿದೆ.