ಹಳೆಯ ಕಾರುಗಳಿಗೆ E20 ಇಂಧನ ಕಂಟಕ? E10 ವಾಹನಗಳ ರಬ್ಬರ್ ಬಿಡಿಭಾಗ ಹಾಳಾಗುವ ಸಾಧ್ಯತೆ

Date:

ವಾಹನಗಳ ಇಂಧನ ವ್ಯವಸ್ಥೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಹಳೆಯ ಮಾದರಿಯ, ಅಂದರೆ ‘E10’ (ಶೇ 10ರಷ್ಟು ಎಥೆನಾಲ್ ಮಿಶ್ರಿತ) ಇಂಧನ ಬಳಕೆಗೆ ವಿನ್ಯಾಸಗೊಳಿಸಲಾದ ಕಾರುಗಳಲ್ಲಿ ‘E20’ (ಶೇ 20ರಷ್ಟು ಎಥೆನಾಲ್ ಮಿಶ್ರಿತ) ಇಂಧನವನ್ನು ಬಳಸುವುದರಿಂದ ವಾಹನದ ರಬ್ಬರ್ ಬಿಡಿಭಾಗಗಳಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ‘ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ’ (ARAI) ಸಿದ್ಧಪಡಿಸಿರುವ ವರದಿಯೊಂದು ತಿಳಿಸಿದೆ.

- Advertisement -

ಈ ವರದಿ ಇನ್ನೂ ಅಧಿಕೃತವಾಗಿ ಪ್ರಕಟಗೊಂಡಿಲ್ಲವಾದರೂ, ವಾಹನ ತಯಾರಕರಿಗೆ ಮತ್ತು ಸರ್ಕಾರಕ್ಕೆ ಇದು ಪ್ರಮುಖ ಉಲ್ಲೇಖವಾಗಲಿದೆ. ಹೊಸ ಇಂಧನ ಬಳಕೆಯಿಂದ ಹೋಸ್‌ಗಳು, ಗ್ಯಾಸ್ಕೆಟ್‌ಗಳು, ಸೀಲ್‌ಗಳು ಮತ್ತು ಒ-ರಿಂಗ್‌ಗಳಂತಹ ರಬ್ಬರ್ ಭಾಗಗಳು ಬೇಗನೆ ಸವೆತಕ್ಕೆ ಒಳಗಾಗಲಿದ್ದು, ಇವುಗಳನ್ನು ಬದಲಾಯಿಸುವ ಅನಿವಾರ್ಯತೆ ಎದುರಾಗಬಹುದು ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?

ಚುನಾವಣಾ ಆಯೋಗದಲ್ಲಿ ಎಸ್‌ಐಆರ್‌ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಸರ್ವಾಧಿಕಾರಿಯಂತೆ, ಏಕಪಕ್ಷೀಯವಾಗಿ ನಿರ್ಧಾರಗಳ ತೆಗೆದುಕೊಂಡು, ಜಾರಿ ಮಾಡುತ್ತಿದ್ದಾರೆ ಎಂಬ ತನಿಖಾ ವರದಿ ದೇಶಾದ್ಯಂತ ಭಾರೀ ಚರ್ಚೆ...

ಎಂಜಿನ್ ಬಾಳಿಕೆ ಪರೀಕ್ಷೆಯಲ್ಲಿನ ಆತಂಕ:ವಾಹನಗಳ ಲೋಹದ (metallic) ಬಿಡಿಭಾಗಗಳ ಮೇಲೆ E20 ಇಂಧನ ಯಾವುದೇ ಪ್ರತಿಕೂಲ ಪರಿಣಾಮ ಬೀರಿಲ್ಲ ಹಾಗೂ ಮಾಲಿನ್ಯ ಹೊರಸೂಸುವಿಕೆ ಪ್ರಮಾಣವೂ ನಿಯಮಾವಳಿಯ ಮಿತಿಯಲ್ಲೇ ಇದೆ. ಆದರೆ, ನಾಲ್ಕು ಚಕ್ರದ ವಾಹನಗಳ ಎಂಜಿನ್ ಬಾಳಿಕೆ ಪರೀಕ್ಷೆಯ ವೇಳೆ ಕೆಲವು ಸಮಸ್ಯೆಗಳು ಗೋಚರಿಸಿವೆ. ಬಿಎಸ್-6 (BS-VI) ಟರ್ಬೊ ಚಾರ್ಜ್ಡ್ ಎಂಜಿನ್‌ವೊಂದು 265 ಗಂಟೆಗಳ ಬಳಕೆಯ ನಂತರ ಸಮಸ್ಯೆ ಎದುರಿಸಿದೆ.

ಮತ್ತೊಂದು ವಾಹನ ತಯಾರಕ ಕಂಪನಿಯ ಎಂಜಿನ್ 809 ಗಂಟೆಗಳ ಪರೀಕ್ಷೆಯ ಬಳಿಕ ‘ಎಕ್ಸಾಸ್ಟ್ ವಾಲ್ವ್’ನ ಉಷ್ಣ-ಯಾಂತ್ರಿಕ (thermomechanical) ವೈಫಲ್ಯ ಕಂಡಿದೆ. ಸಾಮಾನ್ಯವಾಗಿ ಇಂತಹ ಎಂಜಿನ್ ಪರೀಕ್ಷೆಗಳನ್ನು 2,000 ಗಂಟೆಗಳ ಕಾಲ ನಡೆಸಲಾಗುತ್ತದೆ ಎಂಬುದು ಗಮನಾರ್ಹ. ಆದರೆ, ದ್ವಿಚಕ್ರ ವಾಹನಗಳ ವಿಚಾರದಲ್ಲಿ E20 ಇಂಧನದಿಂದ ಯಾವುದೇ ಅಡ್ಡಪರಿಣಾಮ ಕಂಡುಬಂದಿಲ್ಲ ಎಂದು ಮೂರು ಪ್ರಮುಖ ತಯಾರಕ ಕಂಪನಿಗಳ ಪರೀಕ್ಷೆಯಿಂದ ದೃಢಪಟ್ಟಿದೆ.

ವಾಹನದ ಬಿಡಿಭಾಗಗಳ ಮೇಲಿನ ಪರಿಣಾಮದ ಜೊತೆಗೆ ಇಂಧನ ದಕ್ಷತೆಯ ಕುರಿತೂ ವರದಿ ಬೆಳಕು ಚೆಲ್ಲಿದೆ. E10 ಇಂಧನಕ್ಕೆ ಹೋಲಿಸಿದರೆ, E20 ಇಂಧನ ಬಳಸುವ ವಾಹನಗಳ ಇಂಧನ ಬಳಕೆಯ ಪ್ರಮಾಣ ಶೇಕಡಾ 2 ರಿಂದ 6 ರಷ್ಟು ಹೆಚ್ಚಾಗಲಿದೆ. ಅಂದರೆ, ಈ ವಾಹನಗಳ ಮೈಲೇಜ್ ಕೊಂಚ ಕಡಿಮೆಯಾಗಲಿದೆ. ಆದರೆ, ಈ ಮೈಲೇಜ್ ಇಳಿಕೆಯ ಪ್ರಮಾಣವು ಆಯಾ ವಾಹನದ ಮಾದರಿ ಮತ್ತು ಎಂಜಿನ್ ಸಾಮರ್ಥ್ಯಕ್ಕೆ ಅನುಗುಣವಾಗಿ ಭಿನ್ನವಾಗಿರಲಿದೆ ಎಂದು ವರದಿ ಉಲ್ಲೇಖಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ಶಿಸ್ತು ಮೈಗೂಡಿಸಿಕೊಳ್ಳಿ : ಜಯಕುಮಾರ ಶಿಂಧೆ

ಸಮಯ ಪ್ರಜ್ಞೆ ಹಾಗೂ ಶಿಸ್ತು ಮೈಗೂಡಿಸಿಕೊಳ್ಳುವುದರಿಂದ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು...

ಮುದ್ದೇಬಿಹಾಳದಲ್ಲಿ ತೀವ್ರ ಬರ; ಕಾಲುವೆಗಳಿಗೆ ನೀರು ಹರಿಸಲು ಶಾಸಕ ನಾಡಗೌಡ ಮನವಿ

ಬರದ ಬಿಸಿಲಿಗೆ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕುಗಳ ಗ್ರಾಮೀಣ ಬದುಕು ತತ್ತರಿಸುತ್ತಿರುವ...

ಈ ದಿನ ಸಂಪಾದಕೀಯ | ಪ್ರಧಾನಿಗೂ ಸಿಗದ ʼಬಾರಾಖೂನ್ ಮಾಫಿʼ ಗ್ಯಾನೇಶ್ ಕುಮಾರ್‌ಗೆ ಯಾಕೆ? ಕೊಡಿಸಿದವರು ಯಾರು?

ಚುನಾವಣೆಯ ಕಾವಲುಗಾರನಿಗೆ ಕಾನೂನಿನ ಕವಚ ಕುಂಡಲಗಳನ್ನು ನೀಡಿ, ಕಾನೂನಿನ ಕೈಗಳು ಮುಟ್ಟದಂತೆ,...

ಪದೇ ಪದೇ ಬಂಧನವಾದರೂ ಹಿಂಜರಿಯದ ವಿಪಕ್ಷಗಳು: ಮತ್ತೆ ಜಂತರ್ ಮಂತರ್‌ನತ್ತ ಹೆಜ್ಜೆಯಿಟ್ಟ ಇಂಡಿಯಾ ಒಕ್ಕೂಟ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಸೇರಿದಂತೆ ಚುನಾವಣಾ...