‘ಪಿಎಫ್‌ ಪಾವತಿಸಲು ಅಪ್ಪನ ಸಾವಿಗಾಗಿ ಕಾಯುತ್ತಿದ್ದರು’; ಇಪಿಎಫ್‌ಒ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಕುಟುಂಬ

Date:

ನನ್ನ ತಂದೆ ಬದುಕಿರುವವರೆಗೂ ಅವರು ಪಿಎಫ್‌ ಹಣವನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ಮರುಪಾವತಿ ಮಾಡಲಿಲ್ಲ. ಅವರು ಸಾವನ್ನಪ್ಪಿದ ಕೂಡಲೇ, ಹಣ ಪಾವತಿ ಮಾಡಿದ್ದಾರೆ. ಅವರು ನನ್ನ ತಂದೆಯ ಪಿಎಫ್‌ ಹಣ ಪಾವತಿಸಲು ಅವರ ಸಾವಿಗಾಗಿ ಕಾಯುತ್ತಿದ್ದರು ಎಂದು ಕೇರಳದಲ್ಲಿ ಇಪಿಎಫ್‌ಒ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಶವರಾಮನ್ ಅವರ ಪುತ್ರ ಪ್ರದೀಪ್ ಆರೋಪಿಸಿದ್ದಾರೆ. ತಮ್ಮ ಕುಟುಂಬಕ್ಕಾದ ಅನ್ಯಾಯ, ದೌರ್ಜನ್ಯ ಬೇರೆ ಕುಟುಂಬಗಳಿಗೆ ಆಗಬಾರದೆಂದುಇಪಿಎಫ್‌ಒ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

- Advertisement -

ಕೇರಳದ ತ್ರಿಶೂರ್ ಮೂಲದ ಶಿವರಾಮನ್ ಅವರು ಅಪೋಲೋ ಟೈರ್ಸ್‌ನಲ್ಲಿ ನೌಕರರಾಗಿದ್ದರು. 9 ವರ್ಷಗಳ ಹಿಂದೆ ಅವರು ನಿವೃತ್ತರಾಗಿದ್ದರು. ಅಂದಿನಿಂದಲೂ, ತಮ್ಮ ಪಿಎಫ್‌ ಹಣವನ್ನು ಪಡೆಯಲು ಇಪಿಎಫ್‌ಒ ಕಚೇರಿಗೆ ಅಲೆಯುತ್ತಿದ್ದರು. ಆದರೆ, ದಾಖಲೆಗಳು ಹೋಲಿಕೆಯಾಗುತ್ತಿಲ್ಲವೆಂದು ಅಧಿಕಾರಿಗಳ ಅವರ ಹಣವನ್ನು ಪಾವತಿಸಲು ನಿರಾಕರಿಸಿದ್ದರು ಎನ್ನಲಾಗಿದೆ. ಮನನೊಂದಿದ್ದ ಶಿವರಾಮನ್ ಕಳೆದ ತಿಂಗಳು (ಫೆಬ್ರವರಿ) 7ರಂದು ಕೊಚ್ಚಿಯಲ್ಲಿರುವ ಇಪಿಎಫ್‌ಒ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಕೊನೆಯುಸಿರೆಳೆದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ತಮ್ಮ ತಂದೆಯ ಸಾವಿಗೆ ಇಪಿಎಫ್‌ಒ ಅಧಿಕಾರಿಗಳೇ ಕಾರಣವೆಂದು ಆರೋಪಿಸಿರುವ ಪ್ರದೀಪ್, ಫೆಬ್ರವರಿ 7ರಂದು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಇದೀಗ, ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದೆ. ನಾವು ನಮ್ಮಂತೆ ಇತರ ಕುಟುಂಬಗಳಿಗೆ ನೋವು ಎದುರಾಗಬಾರದು ಎಂಬ ಕಾರಣಕ್ಕೆ ಕಾನೂನು ಹೋರಾಟ ಮಾಡುತ್ತಿದ್ದೇವೆ ಎಂದು ಪ್ರದೀಪ್ ಹೇಳಿದ್ದಾರೆ.

“ಇಪಿಎಫ್‌ಒ ಅಧಿಕಾರಿಗಳು ದಾಖಲೆಗಳ ಸಮಸ್ಯೆಗಳನ್ನು ಉಲ್ಲೇಖಿಸಿ 9 ವರ್ಷಗಳಿಂದ ನನ್ನ ತಂದೆಯನ್ನು ಸತಾಯಿಸಿದರು. ಹಣ ಮರುಪಾವತಿಸಲು ನಿರಾಕರಿಸಿದ್ದರು. ಆದರೆ, ಅವರು ಸಾವನ್ನಪ್ಪಿದ ಬಳಿಕ, ನಾವು ಯಾವುದೇ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸದೇ ಇದ್ದರೂ, ಈಗ ತಂದೆಯ ಪಿಎಫ್‌ ಹಣ ಪಾವತಿಸಿದ್ದಾರೆ. ವಿಪರ್ಯಾಸವೆಂದರೆ, ಅಧಿಕಾರಿಗಳು ನಮ್ಮ ತಂದೆಯ ಮರಣ ಪ್ರಮಾಣಪತ್ರವನ್ನೂ ಸಹ ಕೇಳಿಲ್ಲ” ಎಂದು ಪ್ರದೀಪ್ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ನ್ಯಾಯಾಲಯಗಳಲ್ಲಿ ಪೂಜೆ-ಪುನಸ್ಕಾರ ನಿಲ್ಲಿಸಿ; ಸಂವಿಧಾನಕ್ಕೆ ತಲೆಬಾಗಿ: ನ್ಯಾಯಮೂರ್ತಿ ಅಭಯ್ ಓಕಾ

“ನನ್ನ ತಂದೆ ಹೋದರು. ಆದರೆ, ಬೇರೆಯವರ ತಂದೆಗೆ ಈ ರೀತಿ ಆಗಬಾರದು. ಅದಕ್ಕಾಗಿ ಕಾನೂನು ಹೋರಾಟಕ್ಕೆ ನಿರ್ಧರಿಸಿದ್ದೇವೆ” ಎಂದು ಅವರು ಹೇಳಿರುವುದಾಗಿ ‘ಟಿಐಇ’ ವರದಿ ಮಾಡಿದೆ.

ವರದಿಯ ಪ್ರಕಾರ, ಶಿವರಾಮನ್ ಅವರ 90,000 ರೂ. ಪಿಎಫ್‌ ಹಣ ಇಪಿಎಫ್‌ಒ ಖಾತೆಯಲ್ಲಿತ್ತು. ಅದನ್ನು ಪಡೆಯಲು ಅವರು ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಗುರುತಿನ ದಾಖಲೆಗಳು ಹೊಂದಿಕೆಯಾಗುತ್ತಿಲ್ಲವೆಂದು ಅಧಿಕಾರಿಗಳು ಮರುಪಾವತಿಗೆ ನಿರಾಕರಿಸಿದ್ದರು. ಅಲ್ಲದೆ, ಅವರ ಶಾಲೆಯ ಪ್ರಮಾಣ ಪತ್ರಕ್ಕಾಗಿ ಬೇಡಿಕೆ ಇಟ್ಟಿದ್ದರು. ಆದರೆ, ಅವರಿಗೆ ಅದನ್ನು ನೀಡಲು ಸಾಧ್ಯವಾಗಿರಲಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಐ ದುರ್ಬಳಕೆ; ಅಶ್ಲೀಲ ವಿಡಿಯೋ, ಫೋಟೋ ವೈರಲ್: ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಕಂಗನಾ

ಸಾಮಾಜಿಕ ಜಾಲತಾಣಗಳಲ್ಲಿ ಎಐ ತಂತ್ರಜ್ಞಾನ ಬಳಸಿ ರಚಿಸಲಾದ ಅಶ್ಲೀಲ ಮತ್ತು ನಕಲಿ...

ಬಡತನದ ಸರಪಳಿ ಮುರಿಯಲು ಸೀರೆಯಲ್ಲೇ ಓಟ: ಹೋಮ್ ಗಾರ್ಡ್ ಉದ್ಯೋಗಾಕಾಂಕ್ಷಿಯ ಸಾಹಸಕ್ಕೆ ಪ್ರಶಂಸೆ

ಹೋಮ್ ಗಾರ್ಡ್ (ಗೃಹ ರಕ್ಷಕ ಸಿಬ್ಬಂದಿ) ನೇಮಕಾತಿಯ ದೈಹಿಕ ದಾರ್ಢ್ಯ ಪರೀಕ್ಷೆಯ...

CEC ನೇಮಕ ಬಲು ದೊಡ್ಡ ತಲೆನೋವು ಎಂದಿದ್ದ ಸಂವಿಧಾನ ರಚನಾ ಸಭೆ; ಯಾಕೆ ಗೊತ್ತೇ?

ಚುನಾವಣಾ ಆಯುಕ್ತರ ನೇಮಕಾತಿ ಮತ್ತು ಸ್ವಾಯತ್ತತೆಯ ವಿವಾದ ಇಂದು ನಿನ್ನೆಯದಲ್ಲ. ಇದು...