ಕಲಬುರಗಿ | ಸಾಮರಸ್ಯ, ಸಂವಿಧಾನ ಉಳಿಯಬೇಕಾದರೆ ಬಿಜೆಪಿಯ ಹೆಡೆಮುರಿ ಕಟ್ಟಬೇಕು: ಮಲ್ಲಿಗೆ ಸಿರಿಮನೆ

Date:

ಅಸ್ತಿತ್ವ, ದೇಶದ ಭವಿಷ್ಯ, ಜನಸಾಮಾನ್ಯರ ಬದುಕನ್ನು, ಪ್ರಜಾತಂತ್ರದ ಉಳಿವನ್ನು ತೀರ್ಮಾನಿಸಲಿರುವ ಅತಿ ಮಹತ್ವದ ಲೋಕಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ. ಅತ್ಯಂತ ಪ್ರತಿಗಾಮಿ ಶಕ್ತಿಗಳು, ದುರಾಸೆಪೀಡಿತ ಕಾರ್ಪೋರೇಟ್ ಕುಳಗಳು ಸೇರಿ ದೇಶವನ್ನು ಹಿಡಿತಕ್ಕೆ ತೆಗೆದುಕೊಂಡಿದ್ದಾರೆ ಎಂದು ಎದ್ದೇಳು ಕರ್ನಾಟಕದ ಮಲ್ಲಿಗೆ ಸಿರಿಮನೆ ತಿಳಿಸಿದರು.

- Advertisement -

ಕಲಬುರಗಿ ಲೋಕಸಭಾ ಕ್ಷೇತ್ರ ರಾಜ್ಯ ಪ್ರವಾಸ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗಾಗಿ ಎದ್ದೇಳು ಕರ್ನಾಟಕದಿಂದ ʼನಮ್ಮ ಆಂದೋಲನʼ ಎಂಬುವ ವಿಚಾರ ಕುರಿತು ನಡೆದ ಸಂವಾದ ಮತ್ತು ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

“ದೇಶದ ಮುಗ್ಧ ಜನರನ್ನು ದಿಕ್ಕುತಪ್ಪಿಸಿ, ಜನರನ್ನು ಒಡೆದು, ಅದರ ಲಾಭ ಪಡೆದು ಜನರ ಶ್ರಮ, ಆದಾಯ, ಬೆಳೆ, ಅಳಿದುಳಿದಿರುವ ಆಸ್ತಿಯನ್ನೂ, ಈ ದೇಶದ ಬೃಹತ್ ಸಾರ್ವಜನಿಕ ಸಂಪತ್ತನ್ನು ಸೂರೆಗೈಯ್ಯುವ ಕೆಲಸದಲ್ಲಿ ತೊಡಗಿಕೊಂಡಿವೆ. ಈ ಬಾರಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ರಾಜ್ಯಗಳಿಗೂ, ಜನಸಮಾನ್ಯರಿಗೂ, ತುಳಿತಕ್ಕೊಳಗಾದ ಜನರಿಗೂ ನೀಡಿರುವ ರಕ್ಷಣೆಗಳನ್ನು ಕಿತ್ತೊಗೆದು ಸರ್ವಾಧಿಕಾರವನ್ನು ಹೇರುವ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಅವರ ಸಂಚು ಫಲಿಸದಂತೆ ನೋಡಿಕೊಳ್ಳುವ ಹೊಣೆ ಪ್ರತಿಯೊಬ್ಬರ ಮೇಲಿದೆ” ಎಂದು ಹೇಳಿದರು.

“ಈ ಜೀವವಿರೋಧಿ ಶಕ್ತಿಗಳ ವಿರುದ್ಧ ದೇಶವ್ಯಾಪಿಯಾಗಿ ಜನಪರ ಶಕ್ತಿಗಳು ತಮ್ಮದೇ ರೀತಿಯಲ್ಲಿ ಪ್ರತಿರೋಧ ಒಡ್ಡುತ್ತಿದ್ದಾರೆ. ರೈತರು, ಕಾರ್ಮಿಕರು, ತಳಸಮುದಾಯಗಳ ನಿರಂತರ ಹೋರಾಟಗಳು ನಡೆದಿವೆ. ಅನೇಕ ಜನಪರ ಮಾಧ್ಯಮಗಳು ಹುಟ್ಟಿ ಇವರ ಸಂಚುಗಳನ್ನು ಬಯಲುಗೊಳಿಸುತ್ತಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ “ಎದ್ದೇಳು ಕರ್ನಾಟಕ”ವನ್ನೂ ಒಳಗೊಂಡಂತೆ ಅನೇಕ ಜನಪರ ವೇದಿಕೆಗಳು ಕಟಿಬದ್ಧವಾದ ಹಾಗೂ ಸೃಜನಶೀಲವಾದ ರೀತಿಯಲ್ಲಿ ಅಭಿಯಾನಗಳನ್ನು ನಡೆಸಿ ಕರ್ನಾಟಕಕ್ಕೆ ಶಾಪವಾಗಿದ್ದ ಬಿಜೆಪಿಯನ್ನು ಸೋಲಿಸಿ ಹಿಂದಟ್ಟಿವೆ” ಎಂದು ಹೇಳಿದರು.

“ಕರ್ನಾಟಕದ ಈ ಯಶಸ್ಸು, ಅದರಲ್ಲೂ ನಾಗರಿಕ ಸಮಾಜದ ಪಾತ್ರ “ಎದ್ದೇಳು ಮಾದರಿ”ಯಾಗಿ ಇತರೆ ರಾಜ್ಯದ ಜನರನ್ನೂ ಹುರುದುಂಬಿಸಿದೆ. ಅಲ್ಲೂ ಇದೇ ರೀತಿಯ ವೇದಿಕೆಗಳು ರೂಪಗೊಂಡು ಕಾರ್ಯೋನ್ಮುಖವಾಗಿವೆ. ಈ ಎಲ್ಲ ಜೀವಪರ ಪ್ರಯತ್ನಗಳನ್ನು ಬೆಸೆದು ಒಂದು ಬಲವಾದ ಶಕ್ತಿಯಾಗಿಸುವ ಸಮಯ ಈಗ ಬಂದಿದೆ” ಎಂದರು.

“ಕೇಂದ್ರ ಸರ್ಕಾರ ಗಣರಾಜ್ಯದ ಪರಿಕಲ್ಪನೆಯನ್ನೇ ಮರೆತು ಸರ್ವಾಧಿಕಾರಿಯಾಗಿ ಎಲ್ಲ ರಾಜ್ಯಗಳ ಹಕ್ಕುಗಳನ್ನೂ ಕಸಿದು ಕೇಂದ್ರದ ದಬ್ಬಾಳಿಕೆಯನ್ನು ಹೇರಲು ಪ್ರಯತ್ನಿಸುತ್ತಿದೆ. ರಾಜ್ಯಗಳ ಆರ್ಥಿಕ ಸ್ವಾವಲಂಬನೆಯನ್ನು ಮುರಿಯುವ ಸಲುವಾಗಿಯೇ ಜಿಎಸ್‌ಟಿ ಎಂಬ ಕೇಂದ್ರೀಕೃತ ತೆರಿಗೆ ಪದ್ದತಿಯನ್ನು ತಂದಿದೆ. ಜಿಎಸ್‌ಟಿ ಮೂಲಕ ಒಂದೆಡೆ ಜನಸಾಮಾನ್ಯರಿಂದ ಪ್ರತಿನಿತ್ಯ ತೆರಿಗೆ ವಸೂಲಿ ಮಾಡುತ್ತಿದೆ. ಮತ್ತೊಂದೆಡೆ ಎಲ್ಲ ತೆರಿಗೆಯನ್ನು ತಾನು ಕಬಳಿಸಿ, ರಾಜ್ಯಕ್ಕೆ ಕಾಡಿಸಿ ಬೇಡಿಸಿ, ಅರೆಬರೆ ವಾಪಾಸ್ ಕೊಡುವ ತಂತ್ರ ಜಾರಿಗೆ ತಂದಿದೆ” ಎಂದು ಹೇಳಿದರು.

“ಭ್ರಷ್ಟಾಚಾರ ಮುಕ್ತ ಭಾರತ”, “ಸಶಕ್ತ ಭಾರತ”, “ಅಚ್ಛೇ ದಿನ್”, “ಕಪ್ಪು ಹಣ ವಾಪಾಸ್”, “ಪ್ರತಿಯೊಬ್ಬರ ಖಾತೆಗೂ ನೇರ ಹಣ”, “ಪೆಟ್ರೋಲ್ ಅಗ್ಗ”, “ಉಚಿತ ಗ್ಯಾಸ್”, “ಸಬ್
ಕೆ ಸಾಥ್ ಸಬ್ ಕಾ ವಿಕಾಸ್”, “ಬೇಟಿ ಪಡಾವ್”, “ಸ್ಮಾರ್ಟ್ ಸಿಟಿಗಳು”, “ಬುಲೆಟ್ ರೈಲುಗಳು”, “ವರ್ಷಕ್ಕೆ 2 ಕೋಟಿ ಉದ್ಯೋಗಗಳು”, “ರೈತರಿಗೆ ದುಪ್ಪಟ್ಟು ಆದಾಯ”, “ಮೇಕ್ ಇನ್ ಇಂಡಿಯಾ”, “ಸೂಪರ್ ಪವರ್ ಭಾರತ” ಎಲ್ಲ ಖಾಲಿ ಪೊಟ್ಟಣಗಳು, ಬರೀ ಬೊಗಳೆಗಳನ್ನು ಬಿಟ್ಟಿದ್ದೇ ಬಿಟ್ಟಿದ್ದು” ಎಂದರು.

ಈ ಸುದ್ದಿ ಓದಿದ್ದೀರಾ? ಗದಗ | ಗ್ರಾಮ ಮಟ್ಟದಲ್ಲಿ ಉತ್ತಮ ಶಿಕ್ಷಣದ ಜತೆಗೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ: ರಾಜ್ಯಪಾಲರು

“ಅರಣ್ಯ ಕಾಯ್ದೆಯನ್ನು ಅರಣ್ಯವಾಸಿಗಳ ವಿರುದ್ಧವಾಗಿ ಮತ್ತು ಬಂಡವಾಳಿಗರ ಪರವಾಗಿ ಪರಿವರ್ತಿಸಿದ್ದು, ಸಮುದ್ರ ತೀರಗಳನ್ನು ಮತ್ತು ಸಮುದ್ರವನ್ನೂ ಖಾಸಗೀಯವರ ಸ್ವತ್ತಾಗಿಸಿದ್ದು, ಲಕ್ಷಾಂತರ ಎಕರೆ ಸರ್ಕಾರಿ ಭೂಮಿಯನ್ನು ಬಡವರಿಂದ ಕಿತ್ತು ಬಂಡವಾಳಿಗರಿಗೆ ಒಪ್ಪಿಸಿದೆ. ಒಟ್ಟಿನಲ್ಲಿ ಜನರ ಆದಾಯ ಕುಸಿದು, ದುಪಟ್ಟುಗೊಂಡು, ಪ್ರತಿ ಕುಟುಂಬ ಖರ್ಚುಗಳು ಸಾಲದ ಸಂಕಟಕ್ಕೆ ಸಿಲುಕುವಂತೆ ಮಾಡಿದೆ. ಇಂದು ಇಡೀ ದೇಶವನ್ನು ಸಾಲಗಾರರ ದೇಶವನ್ನಾಗಿ ಪರಿವರ್ತಿಸಿದ್ದು, ಇಡೀ ದೇಶದ ಸಾಲ ಕಳೆದ ಮೂರು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ” ಎಂದರು.

ಈ ಸಂದರ್ಭದಲ್ಲಿ ವೇದಿಕೆ ಮೇಲೆ ವೀರಸಂಗಯ್ಯ, ಯೂಸುಫ್ ಕನ್ನಿ, ಮರೆಪ್ಪ ಹಳ್ಳಿ, ಮರೆಪ್ಪ ಚಟ್ಟೇರಕೇರಾ, ರಾಜೇಂದ್ರ ರಾಜವಾಳ, ಅಶ್ವಿನಿ ಮದನಕರ್, ನಾಗೇಶ್ ಹರಳಯ್ಯ, ವಿವಿಧ ಸಂಘಟನೆ ಮುಖಂಡರು, ಪ್ರಗತಿಪರ ಚಿಂತಕರು, ಯುವಜನರು ಸೇರಿದಂತೆ ಇತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | 25 ವರ್ಷ ನೆನಗುದಿಗೆ ಬಿದ್ದಿದ್ದ ಆಟೋ ನಿಲ್ದಾಣ ನಿರ್ಮಾಣ 

ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದ ಹಳೆ ಬಸ್ ನಿಲ್ದಾಣದ ಸಮೀಪ ಸ್ಥಳೀಯ...

ಕಾರವಾರ | ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ ಸುಸೂತ್ರ: ಒಟ್ಟು 11,671 ಅಭ್ಯರ್ಥಿಗಳು ಹಾಜರು

ಕಾರವಾರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಕಂದಾಯ ಇಲಾಖೆಯ ಗ್ರಾಮ...

ಹಾಸನ | ₹426 ಕೋಟಿ; ಹಾಸನ-ಬೇಲೂರು ಚತುಷ್ಪಥ ರಸ್ತೆ ಅಭಿವೃದ್ಧಿ ಯೋಜನೆ; ಸಂಸದ ಶ್ರೇಯಸ್ ಪಟೇಲ್ 

ಹಾಸನ ನಗರದಲ್ಲಿ ಸುದ್ದಿಗಾರರೊಂದಿಗೆ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಹಾಸನ -...

ಯಲ್ಲಾಪುರ | ವಜ್ರಳ್ಳಿಯಲ್ಲಿ ರಸ್ತೆ ಕಾಮಗಾರಿಗೆ ಸಂಗ್ರಹಿಸಿದ್ದ ₹36 ಸಾವಿರ ಮೌಲ್ಯದ ಕಡಿ, ಎಂ-ಸ್ಯಾಂಡ್ ಕಳವು

ಯಲ್ಲಾಪುರ: ರಸ್ತೆ ಕಾಮಗಾರಿಗಾಗಿ ಸಂಗ್ರಹಿಸಿಟ್ಟಿದ್ದ ಕಡಿ ಹಾಗೂ ಎಂ-ಸ್ಯಾಂಡ್ ಕಳವು ಮಾಡಿರುವ...