ಜೆ&ಕೆ ಇತಿಹಾಸದಲ್ಲೇ ಮೊದಲು: ಅಂತರ್ಧರ್ಮೀಯ ಅಂಗಾಂಗ ದಾನ ಅಭಿಯಾನ

Date:

ಜಮ್ಮು ಮತ್ತು ಕಾಶ್ಮೀರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ವಿವಿಧ ಧಾರ್ಮಿಕ ಸಮುದಾಯಗಳ ಪ್ರತಿನಿಧಿಗಳು ಭಾನುವಾರ ಜಂಟಿಯಾಗಿ ಅಂತರ್ಧರ್ಮೀಯ ಅಂಗಾಂಗ ದಾನ ಅಭಿಯಾನ ನಡೆಸಿದ್ದಾರೆ. ಈ ಮೂಲಕ ಯಾವುದೇ ಧರ್ಮವು ಜೀವ ಉಳಿಸುವ ಪದ್ಧತಿಯನ್ನು ನಿಷೇಧಿಸುವುದಿಲ್ಲ ಎಂದು ಸಾರಿದ್ದಾರೆ.

- Advertisement -

ಜಮ್ಮು ಮತ್ತು ಕಾಶ್ಮೀರದ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (SOTTO) S.S. ಜೈನ ಸಭಾ ಜಮ್ಮುವಿನ ಸಹಯೋಗದೊಂದಿಗೆ ಅಂಗಾಂಗ ದಾನದ ಕುರಿತು ಸರ್ವ ಧರ್ಮ ಜಾಗೃತಿ ಸಭೆಯನ್ನು ಆಯೋಜಿಸಿತ್ತು. ಮುಸ್ಲಿಂ, ಹಿಂದೂ, ಸಿಖ್, ಕ್ರಿಶ್ಚಿಯನ್ ಮತ್ತು ಜೈನ ಸಮುದಾಯಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಒಟ್ಟುಗೂಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಇದನ್ನೂ ಓದಿ: ವ್ಯಕ್ತಿಯೊಬ್ಬರಿಗೆ ಕೃತಕ ಹೃದಯ ಅಳವಡಿಕೆ; ಎಲ್ಲರ ಹೃದಯ ಲಬ್-ಡಬ್ ಎಂದರೆ, ಕೃತಕ ಹೃದಯ ‘ಮಶಿನ್ ಶಬ್ದ’ ಮಾಡುತ್ತೆ

ಸಭೆಯನ್ನುದ್ದೇಶಿಸಿ ಮಾತನಾಡಿದ SOTTO J&K ನ ಜಂಟಿ ನಿರ್ದೇಶಕಿ ಡಾ. ಪೂನಂ ಮಹಾಜನ್, ಇಸ್ಲಾಂ, ಹಿಂದೂ ಧರ್ಮ, ಕ್ರಿಶ್ಚಿಯನ್ ಧರ್ಮ, ಸಿಖ್ ಧರ್ಮ, ಬೌದ್ಧಧರ್ಮ ಮತ್ತು ಜೈನ ಧರ್ಮದ ಬೋಧನೆಗಳು ಕರುಣೆ, ದಾನ ಮತ್ತು ಮಾನವೀಯತೆಯನ್ನು ಎತ್ತಿಹಿಡಿಯುತ್ತವೆ ಎಂದು ಹೇಳಿದರು.

ಅಂಗಾಂಗ ದಾನದ ಸುತ್ತಲಿನ ತಪ್ಪು ನಂಬಿಕೆಗಳನ್ನು ಬಿಟ್ಟು ಅಂಗಾಗ ದಾನಿಗಳಾಗಿ ನೋಂದಾಯಿಸಿಕೊಳ್ಳುವಂತೆ ಭಾಗವಹಿಸಿದವರನ್ನು ಒತ್ತಾಯಿಸಿದರು. ಹಾಗೆಯೇ ಈ ಸಂಬಂಧ ಹೆಚ್ಚಿನ ಜನಜಾಗೃತಿ ಅಗತ್ಯವಿದೆ ಎಂದು ಅಭಿಪ್ರಾಯಿಸಿದರು.

ದೇಶದಲ್ಲಿ ಅಂಗಾನಿ ದಾನಿಗಳ ಕೊರತೆ

ದೇಶದಲ್ಲಿ ಅಂಗಾಗ ದಾನಿಗಳ ಕೊರತೆಯ ನಡುವೆ ಜಮ್ಮು ಕಾಶ್ಮೀರದಲ್ಲಿ ಈ ಅಭಿಯಾನ ಆರಂಭವಾಗಿದೆ. ರಾಷ್ಟ್ರೀಯ ವೈದ್ಯಕೀಯ ವಿಜ್ಞಾನಗಳ ಅಕಾಡೆಮಿ (NAMS) ಪ್ರಕಾರ, ದೇಶಕ್ಕೆ ಪ್ರತಿ ವರ್ಷ ಅಂದಾಜು 1.75 ಲಕ್ಷ ಮೂತ್ರಪಿಂಡ ಕಸಿ ಮತ್ತು ಸುಮಾರು 50,000 ಯಕೃತ್ತು, ಹೃದಯ ಕಸಿ ಅಗತ್ಯವಿದೆ. ಆದರೆ, ಅದರಲ್ಲಿ ಕೇವಲ 2-3% ಜನರಿಗೆ ಮಾತ್ರ ಅಂಗಾಂಗಗಳು ದೊರೆಯುತ್ತಿವೆ.

ಭಾರತದಲ್ಲಿ ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಅಂಗಾಂಗ ದಾನ ಮಾಡುವವರ ದರ (Deceased Donation Rate) 1 ಕ್ಕಿಂತ ಕಡಿಮೆ ಇದೆ. ಅದೇ ಸ್ಪೇನ್ ಅಥವಾ ಅಮೆರಿಕದಂತಹ ದೇಶಗಳಲ್ಲಿ ಈ ದರ 30ರಿಂದ 45ರಷ್ಟಿದೆ.

ಮರಣಾನಂತರ ದೇಹವನ್ನು ದಹನ ಅಥವಾ ದಫನ ಮಾಡುವಾಗ ಅಂಗಗಳನ್ನು ತೆಗೆದರೆ ಮುಂದಿನ ಜನ್ಮದಲ್ಲಿ ವಿಕಲಚೇತನರಾಗಿ ಹುಟ್ಟುತ್ತಾರೆ ಎಂಬಿತ್ಯಾದಿ ತಪ್ಪು ಕಲ್ಪನೆಗಳು ಇಂದಿಗೂ ಜನರಲ್ಲಿವೆ.

ಇಸ್ಲಾಂ ಧರ್ಮದಲ್ಲಿ ಇತರ ಧರ್ಮದವರಿಗೆ ಅಂಗಾಂಗ ದಾನ ಮಾಡುವುದನ್ನು ಅಥವಾ ಅವರಿಂದ ಪಡೆಯುವುದನ್ನು ನಿಷೇಧಿಸಲಾಗಿದೆ ಎಂಬ ತಪ್ಪು ಕಲ್ಪನೆ ಜಮ್ಮು ಕಾಶ್ಮೀರದ ಇಸ್ಲಾಂ ಧರ್ಮ ಪಾಲಿಸುವವರಲ್ಲಿದೆ. ಆದರೆ ಇದು ತಪ್ಪು ಕಲ್ಪನೆ. ಕುರಾನ್‌ನ (5:32) ಸೂಕ್ತಿಯಾದ “ಒಬ್ಬ ವ್ಯಕ್ತಿಯ ಜೀವ ಉಳಿಸುವುದು ಇಡೀ ಮಾನವಕುಲವನ್ನು ಉಳಿಸಿದಂತೆ” ಎಂದು ಧಾರ್ಮಿಕ ಮುಖಂಡರು ಹೇಳುತ್ತಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಜಾದಲ್ಲಿ ಮೃತರ ಸಂಖ್ಯೆ 74,000 ದಾಟಿದೆ: ಆರೋಗ್ಯ ಸಚಿವಾಲಯ

ಇಸ್ರೇಲ್ ನಡೆಸುತ್ತಿರುವ ದೀರ್ಘಕಾಲದ ಕ್ರೌರ್ಯದಿಂದಾಗಿ ಗಾಜಾ ಪಟ್ಟಿಯಲ್ಲಿ ಮೃತರ ಸಂಖ್ಯೆ 74,000...

ಅಸ್ಸಾಂ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡಲು ನಮ್ಮ ಬಂಧನ: ಸಿಜೆಪಿ ನಾಯಕ ಅಶುತೋಷ್ ರಂಕಾ ಆರೋಪ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ-ಸಂಚಾಲಕ ಅಶುತೋಷ್ ರಂಕಾ ಮತ್ತು ಅವರ...

ದಕ್ಷಿಣ ಆಫ್ರಿಕಾದ ಹಲವೆಡೆ ಸಾಮೂಹಿಕ ಗುಂಡಿನ ದಾಳಿ; 27 ಮಂದಿ ಭೀಕರ ಸಾವು

ದಕ್ಷಿಣ ಆಫ್ರಿಕಾದ ವಿವಿಧ ಪಟ್ಟಣಗಳಲ್ಲಿ ಭೀಕರ ಸಾಮೂಹಿಕ ಗುಂಡಿನ ದಾಳಿಗಳು ನಡೆದಿದ್ದು,...