ಭಾರತೀಯ ಯುವಕರಿಗೆ ಜರ್ಮನಿ ರೆಡ್‌ ಕಾರ್ಪೆಟ್ ಹಾಸಿದೆ; ನೀವೂ ಹೋಗ್ತೀರಾ?

Date:

ಜರ್ಮನಿಗೆ ತೆರಳುತ್ತಿರುವ ಭಾರತೀಯ ಯುವಕರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರೂ ಸೇರಿದ್ದಾರೆ. ಭಾರತದಲ್ಲಿನ ಉದ್ಯೋಗದ ಪೈಪೋಟಿ ನಡುವೆ ಜರ್ಮನಿಯ ‘ಆಸ್‌ಬಿಲ್ಡಂಗ್’ (ತರಬೇತಿ) ಕಾರ್ಯಕ್ರಮಗಳು ಅವರಿಗೆ ಉತ್ತಮ ಸಾಮಾಜಿಕ ಭದ್ರತೆ, ಅಧಿಕ ವೇತನ ಮತ್ತು ಶುದ್ಧ ಪರಿಸರವನ್ನು ಒದಗಿಸುತ್ತಿವೆ.

- Advertisement -

ಜರ್ಮನಿಯು ಪ್ರಸ್ತುತ ಕುಶಲ ಕಾರ್ಮಿಕರ ತೀವ್ರ ಕೊರತೆ ಎದುರಿಸುತ್ತಿದೆ. ದೇಶದ ಹಿರಿಯ ಸಿಬ್ಬಂದಿ ನಿವೃತ್ತರಾಗುತ್ತಿದ್ದು, ಖಾಲಿ ಜಾಗ ಭರ್ತಿಗೆ ಅಲ್ಲಿನ ಸ್ಥಳೀಯ ಯುವ ಸಮುದಾಯ ಮುಂದೆ ಬಾರದಿರುವುದರಿಂದ ಸದ್ಯ ಅದು ಭಾರತದತ್ತ ಮುಖ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಭಾರತ ಮತ್ತು ಜರ್ಮನಿ ನಡುವಿನ ಈ ವೃತ್ತಿಪರ ಸಹಕಾರದಿಂದ ಮೆಕ್ಯಾನಿಕ್ಸ್, ರಸ್ತೆ ನಿರ್ಮಾಣ, ಕಲ್ಲುಕುಟಿಗರು ಮತ್ತು ಬೇಕರಿ ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾವಿರಾರು ಭಾರತೀಯ ಯುವಕರು ತರಬೇತಿ ಮತ್ತು ಉದ್ಯೋಗಕ್ಕಾಗಿ ಜರ್ಮನಿಗೆ ಕಾಲ್ಕೀಳುತ್ತಿದ್ದಾರೆ. 2022ರಲ್ಲಿ ಉಭಯ ದೇಶಗಳ ನಡುವೆ ಸಹಿ ಹಾಕಲಾದ ‘ವಲಸೆ ಮತ್ತು ಚಲನಶೀಲತೆ ಪಾಲುದಾರಿಕೆ ಒಪ್ಪಂದ’ವು (Migration and Mobility Partnership Agreement) ವಲಸೆ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಿ ಇಲ್ಲಿಂದ ಅಲ್ಲಿಗೆ ಹೋಗುವವರಿಗೆ ದಾರಿ ಸುಗಮಗೊಳಿಸಿಕೊಟ್ಟಿದೆ.

ಇದರ ಮುಂದುವರಿದ ಭಾಗವಾಗಿ, ಜರ್ಮನಿಯು ಭಾರತೀಯ ಕುಶಲ ಕಾರ್ಮಿಕರ ಮೇಲಿಟ್ಟಿರುವ ನಂಬಿಕೆ ಇನ್ನಷ್ಟು ವೃದ್ಧಿಸಿದಂತೆ ತೋರುತ್ತದೆ. 2024ರ ಅಂತ್ಯದ ವೇಳೆಗೆ ಜರ್ಮನಿಯು ಭಾರತೀಯರಿಗೆ ನೀಡುವ ವೃತ್ತಿಪರ ವೀಸಾ ಕೋಟಾವನ್ನು ವಾರ್ಷಿಕ ₹20,000ದಿಂದ ಭರ್ಜರಿ ₹90,000ಕ್ಕೆ ಏರಿಸುವ ಮೂಲಕ ಭಾರತೀಯ ಪ್ರತಿಭೆಗಳನ್ನು ತನ್ನತ್ತ ಸೆಳೆಯುತ್ತಿದೆ.

2021ರಲ್ಲಿ ಫ್ರೈಬರ್ಗ್ ಕ್ರಾಫ್ಟ್ಸ್ ಚೇಂಬರ್‌ಗೆ ಭಾರತದಿಂದ ತಲುಪಿದ ಒಂದು ಸಣ್ಣ ಇಮೇಲ್‌ನೊಂದಿಗೆ ಈ ಮಹತ್ವದ ಬದಲಾವಣೆ ಆರಂಭವಾಯಿತು. ಭಾರತದಲ್ಲಿ ವೃತ್ತಿಪರ ತರಬೇತಿ ಪಡೆಯಲು ಉತ್ಸುಕರಾಗಿರುವ ನೂರಾರು ಯುವಕರಿದ್ದಾರೆ ಎಂಬ ಆ ಇಮೇಲ್‌ ಸಂದೇಶ, ಕಾರ್ಮಿಕರಿಲ್ಲದೆ ಕಂಗಾಲಾಗಿದ್ದ ಜರ್ಮನಿಯ ಉದ್ದಿಮೆದಾರರಿಗೆ ಹೊಸ ದಾರಿ ತೋರಿಸಿಕೊಟ್ಟಿತು. ಆರಂಭದಲ್ಲಿ ಕಸಾಯಿ ವೃತ್ತಿಯ ಅಪ್ರೆಂಟಿಸ್‌ಶಿಪ್‌ಗಾಗಿ ಕೇವಲ 13 ಭಾರತೀಯ ಯುವಕರು ಜರ್ಮನಿಗೆ ತೆರಳಿದ್ದರು. ಕಾಲಾನಂತರದಲ್ಲಿ ಈ ಪ್ರಯೋಗ ಯಶಸ್ವಿಯಾಗಿ, ಇಂದು ಸುಮಾರು 200ಕ್ಕೂ ಹೆಚ್ಚು ಭಾರತೀಯ ಯುವಕರನ್ನು ಜರ್ಮನಿಯ ಮಾಂಸದಂಗಡಿಗಳು ಕೆಲಸಕ್ಕಿಟ್ಟುಕೊಂಡಿವೆ ಎಂದು BBC ವರದಿ ಮಾಡಿದೆ.

image 2026 03 26T140328.520

ಜರ್ಮನಿಗೆ ತೆರಳುತ್ತಿರುವ ಭಾರತೀಯ ಯುವಕರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರೂ ಸೇರಿದ್ದಾರೆ. ಭಾರತದಲ್ಲಿನ ಉದ್ಯೋಗದ ಪೈಪೋಟಿ ನಡುವೆ ಜರ್ಮನಿಯ ‘ಆಸ್‌ಬಿಲ್ಡಂಗ್’ (ತರಬೇತಿ) ಕಾರ್ಯಕ್ರಮಗಳು ಅವರಿಗೆ ಉತ್ತಮ ಸಾಮಾಜಿಕ ಭದ್ರತೆ, ಅಧಿಕ ವೇತನ ಮತ್ತು ಶುದ್ಧ ಪರಿಸರವನ್ನು ಒದಗಿಸುತ್ತಿವೆ. ಜರ್ಮನಿಯ ನಾಯಕರ ಪ್ರಕಾರ, ದೇಶದ ಭವಿಷ್ಯದ ಅಭಿವೃದ್ಧಿಗೆ ವಿದೇಶಿ ಯುವ ಪ್ರತಿಭೆಗಳನ್ನು ಆಹ್ವಾನಿಸುವುದು ಈಗ ಅನಿವಾರ್ಯವಾಗಿದೆಯಂತೆ.

ʼಮೇಕ್ ಇನ್ ಇಂಡಿಯಾ’ ಯೋಜನೆಯಡಿ ಭಾರತವು ಜಾಗತಿಕ ಉತ್ಪಾದನಾ ಕೇಂದ್ರವಾಗಲು ಪ್ರಯತ್ನಿಸುತ್ತಿದೆ ನಿಜ. ಆದರೆ, ಪ್ರತಿ ವರ್ಷ ಭಾರತದ ಉದ್ಯೋಗ ಮಾರುಕಟ್ಟೆಗೆ ಸೇರುತ್ತಿರುವ ಲಕ್ಷಾಂತರ ಪದವೀಧರರಿಗೆ ತಕ್ಕಂತೆ ಇಲ್ಲಿನ ಉತ್ಪಾದನಾ ವಲಯ ಇನ್ನೂ ಅಷ್ಟೊಂದು ವೇಗವಾಗಿ ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ. ಹಾಗಾಗಿಯೇ ಇಲ್ಲಿ ವ್ಯಾಸಂಗ ಮಾಡಿ, ತಮಗೊಪ್ಪುವ ಕೆಲಸ ಸಿಗದಿದ್ದಾಗ, ಜರ್ಮನಿಯಂತಹ ದೇಶಗಳಲ್ಲಿ ಸಿಗುವ ‘ಆಸ್‌ಬಿಲ್ಡಂಗ್’ (ವೃತ್ತಿಪರ ತರಬೇತಿ) ಮೊರೆ ಹೋಗುತ್ತಿದ್ದಾರೆ. ಅಂದರೆ, ಭಾರತದಲ್ಲಿ ಪದವಿ ಇದ್ದರೂ ‘ಪ್ರಾಯೋಗಿಕ ಕೌಶಲ’ದ ಕೊರತೆ ಅಥವಾ ಆ ಕೌಶಲಕ್ಕೆ ತಕ್ಕ ವೇತನದ ಕೊರತೆ ಇದ್ದೇ ಇದೆ.

ಇನ್ನೊಂದು ಮುಖ್ಯ ಅಂಶವನ್ನು ಗಮನಿಸಲೇಬೇಕು. ಜರ್ಮನಿಯಲ್ಲಿ ಕಸಾಯಿ ಕೆಲಸ, ಬಡಗಿ ಅಥವಾ ರಸ್ತೆ ನಿರ್ಮಾಣದಂತಹ ಕೆಲಸಗಳಿಗೆ ಹೆಚ್ಚಿನ ಗೌರವ ಮತ್ತು ಅಧಿಕ ವೇತನವಿದೆ. ಭಾರತದಲ್ಲಿ ಇಂತಹ ವೃತ್ತಿಗಳನ್ನು ಇಂದಿಗೂ ‘ಕಡಿಮೆ ದರ್ಜೆಯ’ ಕೆಲಸಗಳೆಂದು ನೋಡುವ ಸಾಮಾಜಿಕ ದೃಷ್ಟಿಕೋನವಿದೆ. ಇಲ್ಲಿನ ವೇತನ ಕೂಡ ಕನಿಷ್ಟ ಜೀವನ ನಿರ್ವಹಣೆಗೂ ಸಾಕಾಗುವುದಿಲ್ಲ. ಜರ್ಮನಿಯು ನೀಡುವ ಸಾಮಾಜಿಕ ಭದ್ರತೆ ಮತ್ತು ಯುರೋಪ್ ಮಟ್ಟದ ಜೀವನಶೈಲಿ ಭಾರತೀಯ ಯುವಕರನ್ನು ಆಕರ್ಷಿಸುತ್ತಿದೆ. ಇದರಿಂದಾಗಿ ‘Make in India’ಕ್ಕಿಂತ ಹೆಚ್ಚಾಗಿ ‘Earn in Germany’ ಎಂಬ ಪ್ರವೃತ್ತಿ ಹೆಚ್ಚುತ್ತಿದೆ.

ಇದನ್ನೂ ಓದಿ: ಸಾವೇ ಇಲ್ಲದ ‘ಜೆಲ್ಲಿಫಿಶ್‌’ ಎಂಬ ಜೈವಿಕ ಅದ್ಭುತದ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತ ವಿಶ್ವದ ಟಾಪ್ ಆರ್ಥಿಕತೆಗಳಲ್ಲಿ ಒಂದು. ಇಂದು ದೇಶದ ಅಭಿವೃದ್ಧಿ ಹೆಚ್ಚಾಗಿ ಬೃಹತ್ ಮೂಲಸೌಕರ್ಯಗಳು, ಕಾರ್ಪೊರೇಟ್ ವಲಯದ ಲಾಭಾಂಶ ಹಾಗೂ ಕೆಲವೇ ವ್ಯಕ್ತಿಗಳಲ್ಲಿ ಕೇಂದ್ರೀಕೃತವಾಗಿರುವ ಹಣದಲ್ಲಿ ಮಾತ್ರ ಎದ್ದು ಕಾಣುತ್ತಿದೆ. ಆದರೆ, ಈ ‘ಬೆಳವಣಿಗೆ’ ಸಾಮಾನ್ಯ ಜನರಿಗೆ ಬೇಕಾದ ಉದ್ಯೋಗ ಸೃಷ್ಟಿ, ಶ್ರಮಕ್ಕೆ ತಕ್ಕ ವೇತನ, ಯುವಕರಿಗೆ ಬೇಕಾದ ಕೌಶಲ್ಯ ತರಬೇತಿ ಯಾವೊಂದೂ ನೀಡುವಲ್ಲಿ ವಿಫಲವಾಗುತ್ತಿದೆ. ಇಲ್ಲಿನ ಶಿಕ್ಷಣ ಪದ್ಧತಿ ಪದವೀಧರರನ್ನು ಸೃಷ್ಟಿಸುತ್ತಿದೆಯೇ ಹೊರತು, ಜಾಗತಿಕ ಮಾರುಕಟ್ಟೆಗೆ ಬೇಕಾದ ಪ್ರಾಯೋಗಿಕ ಕೌಶಲಗಳನ್ನು ನೀಡುತ್ತಿಲ್ಲ. ಭಾರತದಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚಿರುವುದರಿಂದ ಉದ್ಯೋಗದಾತರು ಅತಿ ಕಡಿಮೆ ವೇತನಕ್ಕೆ ಹೆಚ್ಚು ದುಡಿಸಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ, ಇದು ಯುವಜನತೆಯಲ್ಲಿ ವ್ಯವಸ್ಥೆಯ ಬಗ್ಗೆ ಬೇಸರ, ಹತಾಶೆ ಮೂಡಿಸುತ್ತಿದೆ. ಪರಿಣಾಮವಾಗಿ, ಉನ್ನತ ಪದವಿ ಪಡೆದ ಯುವಕರೂ ಕೂಡ ಭಾರತದಲ್ಲಿ ತಮಗೊಪ್ಪುವ ಕೆಲಸ ಸಿಗದೆ ಅಥವಾ ಸಿಕ್ಕರೂ ಅಲ್ಪ ಸಂಬಳಕ್ಕೆ ಜೀವನ ಸಾಗಿಸಲಾಗದೆ ಜರ್ಮನಿಯಂತಹ ದೇಶಗಳತ್ತ ಮುಖ ಮಾಡುವಂತಾಗಿದೆ.

ಭಾರತದ ಪ್ರತಿಭೆಗಳು ʼEarn in Germanyʼ ಎನ್ನುವುದಕ್ಕಿಂತ ಹೆಚ್ಚಾಗಿ ʼBuild in Indiaʼ ಎನ್ನುವ ವಾತಾವರಣ ನಿರ್ಮಾಣವಾದಾಗ ಮಾತ್ರ ದೇಶದ ನಿಜವಾದ ಅಭಿವೃದ್ಧಿ ಸಾಧ್ಯ. ಅಲ್ಲಿಯವರೆಗೆ, ದೇಶದ ಅಮೂಲ್ಯ ಮಾನವ ಸಂಪನ್ಮೂಲ ಪರಕೀಯರ ಏಳಿಗೆಗೆ ಇಂಧನವಾಗುವುದನ್ನು ತಡೆಯುವುದು ಕಷ್ಟದ ಮಾತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡಿನಲ್ಲಿ ತೀವ್ರ ವಿರೋಧ: ‘ಆರ್‌ಟಿಐ ವಿನಾಯಿತಿ’ ನಿರ್ಧಾರದಿಂದ ಹಿಂದೆ ಸರಿದ ವಿಜಯ್ ಸರ್ಕಾರ

ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ'...

ಗಾಜಾದಲ್ಲಿ ಮೃತರ ಸಂಖ್ಯೆ 74,000 ದಾಟಿದೆ: ಆರೋಗ್ಯ ಸಚಿವಾಲಯ

ಇಸ್ರೇಲ್ ನಡೆಸುತ್ತಿರುವ ದೀರ್ಘಕಾಲದ ಕ್ರೌರ್ಯದಿಂದಾಗಿ ಗಾಜಾ ಪಟ್ಟಿಯಲ್ಲಿ ಮೃತರ ಸಂಖ್ಯೆ 74,000...

ಅಸ್ಸಾಂ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡಲು ನಮ್ಮ ಬಂಧನ: ಸಿಜೆಪಿ ನಾಯಕ ಅಶುತೋಷ್ ರಂಕಾ ಆರೋಪ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ-ಸಂಚಾಲಕ ಅಶುತೋಷ್ ರಂಕಾ ಮತ್ತು ಅವರ...

ದಕ್ಷಿಣ ಆಫ್ರಿಕಾದ ಹಲವೆಡೆ ಸಾಮೂಹಿಕ ಗುಂಡಿನ ದಾಳಿ; 27 ಮಂದಿ ಭೀಕರ ಸಾವು

ದಕ್ಷಿಣ ಆಫ್ರಿಕಾದ ವಿವಿಧ ಪಟ್ಟಣಗಳಲ್ಲಿ ಭೀಕರ ಸಾಮೂಹಿಕ ಗುಂಡಿನ ದಾಳಿಗಳು ನಡೆದಿದ್ದು,...