ಸಾವೇ ಇಲ್ಲದ ‘ಜೆಲ್ಲಿಫಿಶ್‌’ ಎಂಬ ಜೈವಿಕ ಅದ್ಭುತದ ಬಗ್ಗೆ ನಿಮಗೆಷ್ಟು ಗೊತ್ತು?

Date:

ಪ್ರಕೃತಿಯ ನಿಯಮದಂತೆ ಹುಟ್ಟಿದ ಪ್ರತಿಯೊಂದು ಜೀವಿಯೂ ಸಾವು ಎದುರಿಸಲೇಬೇಕು. ಆದರೆ, ಈ ಅಲಿಖಿತ ನಿಯಮವನ್ನೇ ಅಣಕಿಸುವ ಪುಟ್ಟ ಜೀವಿಯೊಂದಿದೆ. ಅದರ ವೈಜ್ಞಾನಿಕ ಹೆಸರು 'ಟುರಿಟೊಪ್ಸಿಸ್ ಡೊರ್ನಿ'. ಇದು ಸಾವಿನ ದವಡೆಯಿಂದ ಮರಳಿ ಬರುವ ಅದ್ಭುತ ಶಕ್ತಿ ಹೊಂದಿದ್ದು, ಮನುಕುಲದ ಕಲ್ಪನೆಗೂ ನಿಲುಕದ ಮೃತ್ಯುಂಜಯಿ ಎನಿಸಿಕೊಂಡಿದೆ.

ಪ್ರಕೃತಿ ಎನ್ನುವುದು ಸಮೃದ್ಧವಾಗಿ ಬೆಳೆದ ಒಂದು ಎಲೆಕೋಸಿನಂತೆ… ಒಂದೊಂದೇ ಪದರ ಸುಲಿಯುತ್ತಾ ಹೋದಂತೆ ಹೊಸ ಹೊಸ ರಹಸ್ಯಗಳು, ಪ್ರತಿ ಪದರದ ಕೆಳಗೂ ಮತ್ತೊಂದು ಪದರ, ಪ್ರತಿ ಉತ್ತರಕ್ಕೂ ಸಾವಿರ ಪ್ರಶ್ನೆ, ಕುತೂಹಲ! ಮನುಷ್ಯ ತಾನು ಎಲ್ಲವನ್ನೂ ತಿಳಿದವನು ಎಂದು ಬೀಗುತ್ತಿರುವಾಗ, ಪ್ರಕೃತಿ ತನ್ನ ಯಾವುದೋ ಒಂದು ಗಹನವಾದ ಪದರದೊಳಗಿಂದ ಅಚ್ಚರಿಯೊಂದನ್ನು ಹೊರಹಾಕುತ್ತದೆ. ಅಂತಹದ್ದೇ ಒಂದು ಅಚ್ಚರಿ ಈ ʼಸಾವಿಲ್ಲದ ‌ಜೆಲ್ಲಿಫಿಶ್ʼ.

- Advertisement -

ಪ್ರಕೃತಿಯ ನಿಯಮದಂತೆ ಹುಟ್ಟಿದ ಪ್ರತಿಯೊಂದು ಜೀವಿಯೂ ಸಾವು ಎದುರಿಸಲೇಬೇಕು. ಆದರೆ, ಈ ಅಲಿಖಿತ ನಿಯಮವನ್ನೇ ಅಣಕಿಸುವ ಪುಟ್ಟ ಜೀವಿಯೊಂದಿದೆ. ಅದರ ವೈಜ್ಞಾನಿಕ ಹೆಸರು ʼಟುರಿಟೊಪ್ಸಿಸ್ ಡೊರ್ನಿ’. ಮನುಷ್ಯನ ಒಂದು ಉಗುರಿಗಿಂತಲೂ ಚಿಕ್ಕದಾದ ಈ ಜೀವಿ, ಸಾವಿನ ದವಡೆಯಿಂದ ಮರಳಿ ಬರುವ ಅದ್ಭುತ ಶಕ್ತಿ ಹೊಂದಿದ್ದು, ಮನುಕುಲದ ಕಲ್ಪನೆಗೂ ನಿಲುಕದ ಮೃತ್ಯುಂಜಯಿ ಎನಿಸಿಕೊಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...
image 2026 03 25T145826.044

ಸಾಮಾನ್ಯವಾಗಿ ಸಮುದ್ರದಲ್ಲಿ ನಮಗೆ ಕಾಣಸಿಗುವ ಸಾವಿರಾರು ತಳಿಯ ಜೆಲ್ಲಿಫಿಶ್‌ಗಳು ಪ್ರಕೃತಿಯ ಇತರ ಜೀವಿಗಳಂತೆಯೇ ಹುಟ್ಟುತ್ತವೆ, ಬೆಳೆಯುತ್ತವೆ ಮತ್ತು ಸಂತಾನೋತ್ಪತ್ತಿ ಮಾಡಿದ ನಂತರ ನೈಸರ್ಗಿಕವಾಗಿ ಸಾಯುತ್ತವೆ. ಆದರೆ, ಸಾವಿನಿಂದ ತಪ್ಪಿಸಿಕೊಂಡು ಮತ್ತೆ ಮಗುವಾಗಬಲ್ಲ ವಿಶಿಷ್ಟ ತಳಿ ‘ಟುರಿಟೊಪ್ಸಿಸ್ ಡೊರ್ನಿ’ (Turritopsis dohrnii). ವಿಜ್ಞಾನ ಲೋಕದಲ್ಲಿ ಈ ನಿರ್ದಿಷ್ಟ ತಳಿಯನ್ನು ಹೊರತುಪಡಿಸಿ ಉಳಿದ ಜೆಲ್ಲಿಫಿಶ್‌ಗಳಿಗೆ ಈ ಅಮರತ್ವದ ಅವಕಾಶ ಇಲ್ಲ. ಹೆಚ್ಚಿನ ಜೆಲ್ಲಿಫಿಶ್‌ಗಳು ತಮ್ಮ ಜೀವನ ಚಕ್ರದ ಅಂತ್ಯದಲ್ಲಿ ಕರಗಿ ಹೋದರೆ, ಈ ‘ಟುರಿಟೊಪ್ಸಿಸ್ ಡೊರ್ನಿ’ ಮಾತ್ರ ತನ್ನ ಜೀವಕೋಶಗಳನ್ನು ಪುನರ್ನಿರ್ಮಿಸಿಕೊಳ್ಳುವ (Remodeling) ಅದ್ಭುತ ಸಾಮರ್ಥ್ಯ ಹೊಂದಿದೆ.

ಈ ಜೀವಿಯ ವಿಚಿತ್ರ ಶಕ್ತಿ ಜಗತ್ತಿಗೆ ತಿಳಿದದ್ದು ತೀರಾ ಆಕಸ್ಮಿಕವಾಗಿ. 1980ರ ದಶಕದ ಕೊನೆಯಲ್ಲಿ ಜರ್ಮನಿಯ ಜೀವವಿಜ್ಞಾನ ವಿದ್ಯಾರ್ಥಿಗಳಾದ ಕ್ರಿಶ್ಚಿಯನ್ ಸೋಮರ್ ಮತ್ತು ಜಾರ್ಜಿಯೊ ಬ್ಯಾವೆಸ್ಟ್ರೆಲ್ಲೊ ಇಟಲಿಯ ಸಮುದ್ರ ತೀರದಲ್ಲಿ ಸಂಶೋಧನೆ ನಡೆಸುತ್ತಿದ್ದರು. ಅಲ್ಲಿ ಸಿಕ್ಕ ಕೆಲವು ಜೆಲ್ಲಿಫಿಶ್‌ಗಳನ್ನು ಸಂಗ್ರಹಿಸಿ ತಮ್ಮ ಲ್ಯಾಬ್‌ನ ಅಕ್ವೇರಿಯಂನಲ್ಲಿಟ್ಟರು. ಕೆಲವು ದಿನಗಳ ನಂತರ ಅಕ್ವೇರಿಯಂ ನೋಡಿ ಬೆಚ್ಚಿಬಿದ್ದಿದ್ದರು. ಅಲ್ಲಿರಿಸಿದ್ದ ವಯಸ್ಕ ಜೆಲ್ಲಿಫಿಶ್‌ಗಳು ಮಾಯವಾಗಿ, ‘ಪಾಲಿಪ್ಸ್'(ಜೆಲ್ಲಿಫಿಶ್‌ನ ಜೀವನ ಚಕ್ರದ ಆರಂಭಿಕ ಹಂತ)ಗಳು ಬೆಳೆದಿದ್ದವು. ಅಂದರೆ, ಆ ಜೀವಿಗಳು ಸಾಯುವ ಬದಲಿಗೆ ತಮ್ಮ ವಯಸ್ಸನ್ನು ಹಿಂದಕ್ಕೆ ತಳ್ಳಿಕೊಂಡು ಮತ್ತೆ ಶಿಶುಗಳಾಗಿದ್ದವು. ಇದು ಜೀವವಿಜ್ಞಾನದ ಇತಿಹಾಸದಲ್ಲೇ ಅತ್ಯಂತ ಕ್ರಾಂತಿಕಾರಿ ಆವಿಷ್ಕಾರವಾಗಿತ್ತು ಮತ್ತು ಅಮರತ್ವ ಎಂಬುದು ಕೇವಲ ಪುರಾಣವಲ್ಲ, ವಿಜ್ಞಾನವೂ ಹೌದು ಎಂದು ಸಾಬೀತಾಯಿತು.

ಈ ಜೆಲ್ಲಿಫಿಶ್‌ನ ದೈಹಿಕ ರಚನೆಯೂ ಅದರ ಹೆಸರಿನಷ್ಟೇ ವಿಶಿಷ್ಟವಾಗಿದೆ. ಇದು ಕೇವಲ 4.5 ಮಿಲಿಮೀಟರ್ ವ್ಯಾಸ ಹೊಂದಿದ್ದು, ನೋಡಲು ಪಾರದರ್ಶಕವಾದ ಗಂಟೆಯಾಕಾರದ ದೇಹ ರಚನೆ ಹೊಂದಿದೆ. ಇದರ ದೇಹದ ಮಧ್ಯಭಾಗದಲ್ಲಿ ಗಾಢ ಕೆಂಪು ಬಣ್ಣದ ದೊಡ್ಡ ಜಠರ (Stomach) ಸ್ಪಷ್ಟವಾಗಿ ಕಾಣುತ್ತದೆ. ಇದು ಅದರ ವಿಶಿಷ್ಟ ಗುರುತುಗಳಲ್ಲಿ ಒಂದಾಗಿದೆ. ಇದರ ಗಂಟೆಯಾಕಾರದ ದೇಹದ ಅಂಚಿನಿಂದ ಸಣ್ಣ ಸಣ್ಣ ತಂತುಗಳಂತಹ ಸ್ಪರ್ಶಕಗಳು (Tentacles) ಹೊರಬಂದಿರುತ್ತವೆ. ಎಳೆಯ ಜೆಲ್ಲಿಫಿಶ್‌ಗಳಲ್ಲಿ ಕೇವಲ 8 ಸ್ಪರ್ಶಕಗಳಿದ್ದರೆ, ವಯಸ್ಸಾದಂತೆ ಅವುಗಳ ಸಂಖ್ಯೆ ಹೆಚ್ಚಾಗಿ, ಸುಮಾರು 80ರಿಂದ 90ರವರೆಗೆ ತಲುಪುತ್ತದೆ. ಈ ಸ್ಪರ್ಶಕಗಳು ಆಹಾರವನ್ನು ಸುಲಭವಾಗಿ ಹಿಡಿಯಲು ಮತ್ತು ಈಜಲು ಸಹಾಯ ಮಾಡುತ್ತವೆ. ಇದರ ದೇಹ ರಚನೆ ಸರಳವಾಗಿದ್ದರೂ, ಅದರೊಳಗಿನ ಕೋಶಗಳ ಪುನರುಜ್ಜೀವನ ಸಾಮರ್ಥ್ಯ ಅದನ್ನು ಜಗತ್ತಿನ ಅತ್ಯಂತ ಸಂಕೀರ್ಣ ಜೀವಿಗಳಲ್ಲಿ ಒಂದನ್ನಾಗಿ ಮಾಡಿದೆ.

ಸಾಮಾನ್ಯವಾಗಿ ಜೆಲ್ಲಿಫಿಶ್‌ಗಳ ಜೀವನ ಚಕ್ರವು ಮೊಟ್ಟೆಯಿಂದ ಆರಂಭವಾಗಿ ಲಾರ್ವಾ ಹಂತದ ಮೂಲಕ ಸಾಗಿ, ನಂತರ ಸಮುದ್ರದ ತಳಕ್ಕೆ ಅಂಟಿಕೊಳ್ಳುವ ‘ಪಾಲಿಪ್’ ಹಂತವನ್ನು ತಲುಪುತ್ತದೆ. ಅಲ್ಲಿಂದ ಕೊನೆಯದಾಗಿ ನಮಗೆ ಕಾಣುವ ಈಜುವ ‘ಮೆಡುಸಾ’ ರೂಪವನ್ನು ಪಡೆದುಕೊಳ್ಳುತ್ತದೆ. ಹೆಚ್ಚಿನ ಜೆಲ್ಲಿಫಿಶ್‌ಗಳು ಮೆಡುಸಾ ಹಂತದಲ್ಲಿ ಸಂತಾನೋತ್ಪತ್ತಿ ಮಾಡಿದ ನಂತರ ಸಾಯುತ್ತವೆ. ಆದರೆ ‘ಟುರಿಟೊಪ್ಸಿಸ್ ಡೊರ್ನಿ’ ಮಾತ್ರ ಭಿನ್ನ. ಇದಕ್ಕೆ ಏನಾದರೂ ಅಪಾಯ ಎದುರಾದಾಗ, ಅಂದರೆ ಆಹಾರದ ಕೊರತೆ, ಗಾಯ ಅಥವಾ ವೃದ್ಧಾಪ್ಯ ಆವರಿಸಿದಾಗ ಇದು ತನ್ನ ‘ಮೆಡುಸಾ’ ರೂಪವನ್ನು ಕಳಚಿಕೊಳ್ಳುತ್ತದೆ. ತನ್ನ ದೇಹದ ಎಲ್ಲಾ ಕೋಶಗಳನ್ನು ಸಂಕುಚಿತಗೊಳಿಸಿ ಸಮುದ್ರದ ತಳಕ್ಕೆ ಹೋಗಿ ಅಂಟಿಕೊಳ್ಳುವ ಮೂಲಕ ಮತ್ತೆ ‘ಪಾಲಿಪ್’ ಸ್ಥಿತಿಗೆ ಮರಳುತ್ತದೆ. ಈ ಅದ್ಭುತ ಪ್ರಕ್ರಿಯೆಯನ್ನು ವಿಜ್ಞಾನಿಗಳು ‘ಟ್ರಾನ್ಸ್‌ಡಿಫರೆನ್ಸಿಯೇಷನ್’ ಎಂದು ಕರೆಯುತ್ತಾರೆ. ಇದು ಹೇಗೆಂದರೆ, ಸ್ನಾಯುವಿನ ಜೀವಕೋಶವು ನರಕೋಶವಾಗಿ ಅಥವಾ ರಕ್ತದ ಕೋಶವಾಗಿ ತನ್ನ ರೂಪವನ್ನೇ ಬದಲಿಸಿಕೊಳ್ಳುವ ವೈಜ್ಞಾನಿಕ ಕ್ರಿಯೆ.

jelly

ಈ ಅಮರತ್ವದ ರಹಸ್ಯ ಭೇದಿಸಲು 2022ರಲ್ಲಿ ಸ್ಪೇನ್‌ನ ಓವಿಯೆಡೋ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಜೀವಿಯ ಸಂಪೂರ್ಣ ಜಿನೋಮ್ ಮ್ಯಾಪಿಂಗ್ ಮಾಡಿದರು. ಈ ಜೆಲ್ಲಿಫಿಶ್ ತನ್ನ ‘DNA’ಯನ್ನು ರಕ್ಷಿಸಿಕೊಳ್ಳಲು ವಿಶೇಷ ಜೀನ್‌ಗಳನ್ನು ಹೊಂದಿರುವುದನ್ನು ಪತ್ತೆ ಮಾಡಿದರು. ಮನುಷ್ಯರಲ್ಲಿ ವಯಸ್ಸಾದಂತೆ ಕ್ರೋಮೋಸೋಮ್‌ಗಳ ತುದಿಯಲ್ಲಿರುವ ‘ಟೆಲೋಮಿಯರ್’ಗಳು ಸವೆದು ಹೋಗುತ್ತವೆ, ಇದರಿಂದ ಸಾವು ಸಂಭವಿಸುತ್ತದೆ. ಆದರೆ ಈ ಜೆಲ್ಲಿಫಿಶ್ ಆ ಟೆಲೋಮಿಯರ್‌ಗಳನ್ನು ಮತ್ತೆ ಬೆಳೆಸಿಕೊಳ್ಳುವ ಶಕ್ತಿ ಹೊಂದಿದೆ. ಅಲ್ಲದೆ, ತನ್ನ ಡಿಎನ್‌ಎಯಲ್ಲಿ ಎಲ್ಲೇ ಸಣ್ಣ ಹಾನಿಯಾದರೂ ಅದನ್ನು ತಕ್ಷಣವೇ ರಿಪೇರಿ ಮಾಡಿಕೊಳ್ಳುವ ಸಾವಿರಾರು ‘ಮೆಕ್ಯಾನಿಕ್’ ಜೀನ್‌ಗಳು ಇದರೊಳಗಿವೆ. ಈ ರಹಸ್ಯ ಮಾನವ ವೈದ್ಯಕೀಯ ಲೋಕದಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡಲಿದೆ ಎನ್ನುವುದು ತಜ್ಞರ ವಿಶ್ವಾಸ. ವಿಶೇಷವಾಗಿ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳನ್ನು ಗುಣಪಡಿಸಲು ಅಥವಾ ಹಾನಿಗೊಳಗಾದ ಹೃದಯ ಮತ್ತು ಮೆದುಳಿನ ಕೋಶಗಳನ್ನು ಪುನರುಜ್ಜೀವನಗೊಳಿಸಲು ಈ ಸಂಶೋಧನೆ ದಾರಿಯಾಗಬಹುದು.

ಆದರೆ, ಇಲ್ಲೊಂದು ಚಿಕ್ಕ ಸೂಕ್ಷ್ಮವಿದೆ. ಈ ಜೆಲ್ಲಿಫಿಶ್‌ಗಳಿಗೆ ನೈಸರ್ಗಿಕವಾಗಿ ಸಾವಿಲ್ಲದಿರುವುದರಿಂದ ಇವುಗಳ ಸಂಖ್ಯೆ ಸಾಗರಗಳಲ್ಲಿ ಅತಿಯಾಗಿ ಹೆಚ್ಚಾಗುತ್ತಿದೆ. ಹಡಗುಗಳ ತಳಭಾಗದಲ್ಲಿರುವ ನೀರಿನ ಟ್ಯಾಂಕ್‌ಗಳ ಮೂಲಕ ಇವು ಕೆರಿಬಿಯನ್ ಸಮುದ್ರದಿಂದ ಹಿಡಿದು ಜಪಾನ್ ಮತ್ತು ಅಮೆರಿಕದ ತೀರದವರೆಗೂ ಹರಡುತ್ತಿವೆ. ವಿಜ್ಞಾನಿಗಳು ಇವುಗಳನ್ನು ‘ಮೌನ ಆಕ್ರಮಣಕಾರರು’ (Silent invaders) ಎಂದು ಗುರುತಿಸಿದ್ದಾರೆ. ಕಾರಣ, ಇವು ಇತರ ಸಣ್ಣ ಜೀವಿಗಳ ಆಹಾರವನ್ನು ಕಸಿದುಕೊಳ್ಳುವ ಮೂಲಕ ಸಮುದ್ರದ ಸಮತೋಲನವನ್ನು ಏರುಪೇರು ಮಾಡಬಲ್ಲವು. ಆದರೂ, ಇದನ್ನು ಬೇರೆ ದೊಡ್ಡ ಪ್ರಾಣಿಗಳು ತಿಂದರೆ ಅಥವಾ ಸಮುದ್ರದ ಮಾಲಿನ್ಯ ಮಿತಿಮೀರಿದರೆ ಇದು ಸಾಯುತ್ತದೆ. ಪ್ರಕೃತಿಯು ಈ ಜೀವಿಗೆ ಕೇವಲ ನೈಸರ್ಗಿಕ ಸಾವಿನಿಂದ ಮುಕ್ತಿ ನೀಡಿದೆಯೇ ಹೊರತು ಸಂಪೂರ್ಣ ರಕ್ಷಣೆಯನ್ನಂತೂ ನೀಡಿಲ್ಲ ಎನ್ನುವುದು ನಿಜ.

ಜೆಲ್ಲಿಫಿಶ್‌ ತಿನ್ನಲು ಯೋಗ್ಯವೇ?

ಸಮುದ್ರದ ಅನೇಕ ‘ತರಕಾರಿ’ಗಳು ನಮ್ಮ ತಟ್ಟೆ ಅಲಂಕರಿಸುತ್ತವೆ. ಊಟವಾಗಿ ಹೊಟ್ಟೆ ಸೇರುತ್ತವೆ. ಈ ಟುರಿಟೊಪ್ಸಿಸ್ ಡೊರ್ನಿ ತಿನ್ನಲು ಯೋಗ್ಯವೇ? ಎನ್ನುವ ಕುತೂಹಲ ಸಾಮಾನ್ಯವಾಗಿ ಹುಟ್ಟುತ್ತದೆ. ಈ ಜೆಲ್ಲಿಫಿಶ್ ಅಡುಗೆ ಮನೆಗಿಂತ ವಿಜ್ಞಾನಿಗಳ ಪ್ರಯೋಗಾಲಯಕ್ಕೇ ಹೆಚ್ಚು ಸೀಮಿತ‌ ಎನ್ನುತ್ತವೆ ಪ್ರಯೋಗಗಳು. ಇದಕ್ಕೆ ಮೊದಲ ಕಾರಣ ಅದರ ಅತಿ ಸಣ್ಣ ಗಾತ್ರ. ಕೇವಲ 4.5 ಮಿಲಿಮೀಟರ್‌ಗಳಷ್ಟು ಇರುವ ಈ ಜೀವಿಯನ್ನು ಹಿಡಿದು ಅಡುಗೆ ಮಾಡುವುದು ಪ್ರಾಯೋಗಿಕವಾಗಿ ಅಸಾಧ್ಯ. ಅಲ್ಲದೆ, ಇದರ ದೇಹದ ಶೇ.95ರಷ್ಟು ಭಾಗ ಕೇವಲ ನೀರಿನಿಂದ ಕೂಡಿದ್ದು, ಉಳಿದ ಭಾಗದಲ್ಲಿ ಪೌಷ್ಟಿಕಾಂಶಗಳಿಗಿಂತ ಹೆಚ್ಚಾಗಿ ‘ಕೊಲಾಜಿನ್'(ದೇಹದ ಭಾಗಗಳನ್ನು ಒಂದಕ್ಕೊಂದು ಹಿಡಿದಿಟ್ಟುಕೊಳ್ಳುವ ‘ನೈಸರ್ಗಿಕ ಗ್ಲೂ’ (Natural Glue) ಅಥವಾ ಅಂಟು) ಇರುತ್ತದೆ.

jgt

ಚೀನಾ ಅಥವಾ ಜಪಾನ್‌ನಂತಹ ದೇಶಗಳಲ್ಲಿ ಮಾತ್ರ ಕ್ಯಾನನ್‌ಬಾಲ್‌ನಂತಹ ದೊಡ್ಡ ಗಾತ್ರದ ಜೆಲ್ಲಿಫಿಶ್‌ಗಳನ್ನು ಸಲಾಡ್‌ಗಳಲ್ಲಿ ಬಳಸಲಾಗುತ್ತದೆ. ಇದು ಕುಟುಕುವ ‘ನಿಮಟೋಸಿಸ್ಟ್ಸ್’ ಎಂಬ ಕೋಶಗಳನ್ನು ಹೊಂದಿರುವುದರಿಂದ ಇದನ್ನು ನೇರವಾಗಿ ಸೇವಿಸುವುದರಿಂದ ಚರ್ಮದ ಉರಿ ಅಥವಾ ಅಲರ್ಜಿಯಾಗಬಹುದು. ಇನ್ನೊಂದು ಮುಖ್ಯ ವಿಷಯವೆಂದರೆ, ಈ ಜೀವಿಯನ್ನು ತಿನ್ನುವುದರಿಂದ ನಮಗೇನೂ ‘ಅಮರತ್ವ’ ಲಭಿಸುವುದಿಲ್ಲ! ಬದಲಿಗೆ ಅದರ ಹೊಟ್ಟೆಯಲ್ಲಿರುವ ಪ್ಲಾಂಕ್ಟನ್‌ಗಳ ಅಜೀರ್ಣ ಸಿಗಬಹುದಷ್ಟೆ. ವಿಜ್ಞಾನಿಗಳ ಪ್ರಕಾರ, ಇದನ್ನು ಆಹಾರವಾಗಿ ಸೇವಿಸುವುದಕ್ಕಿಂತ ಇದರ ಡಿಎನ್‌ಎ (DNA) ಸಂಶೋಧನೆ ಮಾಡುವುದು ಹೆಚ್ಚು ಲಾಭದಾಯಕ. ಈ ವಿಚಿತ್ರ ಜೀವಿಯು ರುಚಿಕರವಾದ ತಿನಿಸಾಗುವ ಬದಲು, ಮನುಷ್ಯನಿಗೆ ವಯಸ್ಸಾಗುವುದನ್ನು ತಡೆಯುವ ಅಥವಾ ಕ್ಯಾನ್ಸರ್‌ನಂತಹ ರೋಗಗಳಿಗೆ ಮದ್ದು ಕಂಡುಹಿಡಿಯುವ ಸಂಶೋಧನೆಯ ಮಹತ್ವದ ಸಾಧನವಾಗಬಹುದು.

ಇದನ್ನೂ ಓದಿ: ವಿಶ್ವ ಗುಬ್ಬಚ್ಚಿ ದಿನ | ಎತ್ತ ಹೋದಿರೇ ಪುಟ್ಟ ಗುಬ್ಬಿಗಳಾ…

ಸಮುದ್ರದ ನೀಲಿ ಗರ್ಭದೊಳಗೆ ಅಡಗಿರುವ ಈ ಪುಟ್ಟ ಜೀವಿ ಮನುಷ್ಯನ ಅಹಂಕಾರಕ್ಕೆ ದೊಡ್ಡ ಪೆಟ್ಟು ಕೊಟ್ಟು “ನೀವು ತಂತ್ರಜ್ಞಾನದ ಮೂಲಕ ಬಾಹ್ಯಾಕಾಶವನ್ನು ಗೆದ್ದಿರಬಹುದು, ಆದರೆ ಸುತ್ತಲಿನ ಪರಿಸರ, ಜೀವರಾಶಿಯ ರಹಸ್ಯವನ್ನು ಪೂರ್ತಿಯಾಗಿ ತಿಳಿಯಲು ನಿಮಗೆ ಸಾಧ್ಯವೇ?” ಎನ್ನುವ ಸವಾಲು ಹಾಕುತ್ತದಲ್ಲ! ಬದುಕು ಎಂಬುದು ಅಂತ್ಯವಲ್ಲ, ಅದೊಂದು ನಿರಂತರ ಬದಲಾವಣೆ. ಪ್ರತಿ ಅಂತ್ಯದಲ್ಲೂ ಹೊಸದೊಂದು ಆರಂಭ. ವಿಜ್ಞಾನವು ಈ ರಹಸ್ಯವನ್ನು ಸಂಪೂರ್ಣವಾಗಿ ಭೇದಿಸಿದ ದಿನ, ಮನುಷ್ಯನ ಬದುಕು ಮತ್ತು ಸಾವಿನ ವ್ಯಾಖ್ಯಾನವೇ ಬದಲಾಗಬಹುದು.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | 200 ಪ್ಲೇಟ್‌ಗೆ ಸೀಮಿತವಾದ ಇಂದಿರಾ ಕ್ಯಾಂಟಿನ್: 500ಕ್ಕೆ ಹೆಚ್ಚಿಸಲು ಆಗ್ರಹ

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬಡವರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು...

ಹಾವೇರಿ | ಬರದ ಬೇಗೆಯಲ್ಲೂ ಕೈ ಹಿಡಿದ ಮೆಕ್ಕೆಜೋಳ; ರೈತ ಚಂ.ಸು ಪಾಟೀಲ್ ಸಾವಯವ ಸಾಧನೆ

"ಯಾವುದೇ ರಸಗೊಬ್ಬರಗಳನ್ನು ಬಳಸದೇ, ಕೀಟನಾಶಕಗಳನ್ನು ಸಿಂಪಡಿಸದೆಯೇ ಸಹಜ ಸಮೃದ್ಧ ಬೆಳೆ ಬೆಳೆಯುವುದು...

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ ‘ಮಹಾಭಿಯೋಗ’ ನಡೆದಿದೆಯೇ?

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ...

ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ...