ಸಹಜ ಶೀಲತೆ, ಉದಾರ ಮನಸ್ಸು ಹಾಗೂ ತಾಳ್ಮೆಯನ್ನು ಕಳೆದುಕೊಂಡಿರುವ ಮನುಷ್ಯನು ಕಾನೂನಿನ ಅರಿವಿಲ್ಲದೆ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಅಸಹಜ ವರ್ತನೆಗಳಿಂದ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳುತ್ತಿವೆ ಎಂದು ನ್ಯಾಯವಾದಿಗಳಾದ ಆರ್ ಎಂ ಹೊನ್ನಾರೆಡ್ಡಿ ಅಭಿಪ್ರಾಯಪಟ್ಟರು.
ನಗರದ ಬಸವಮಾರ್ಗ ಪ್ರತಿಷ್ಠಾನ, ಸತ್ಯಂಪೇಟೆ ವತಿಯಿಂದ ಬುಧವಾರ ಆಯೋಜಿಸಲಾದ ತಿಂಗಳ “ಬಸವ ಬೆಳಕು 131” ಕಾರ್ಯಕ್ರಮದಲ್ಲಿ “ಕಾನೂನು ಮತ್ತು ಆರೋಗ್ಯ” ವಿಷಯದ ಕುರಿತು ಮಾತನಾಡಿದ ಅವರು, ‘ಇತ್ತೀಚಿನ ದಿನಗಳಲ್ಲಿ ಅತಿಯಾದ ಸ್ವಾರ್ಥ ಹಾಗೂ ಸಂಪತ್ತಿನ ಮೇಲಿನ ವ್ಯಾಮೋಹದಿಂದ ಕೋರ್ಟ್‌ಗಳು ಮತ್ತು ಆರೋಗ್ಯ ಕೇಂದ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದು ಹೇಳಿದರು.

‘ಸಂಬಂಧಗಳಿಗಿಂತ ಹಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಕಾನೂನು ತುಳಿತಕ್ಕೊಳಗಾದವರ ಪರವಾಗಿದ್ದರೂ, ಅನಿವಾರ್ಯತೆ ಇಲ್ಲದೆ ಕುಟುಂಬ ಸಂಬಂಧಗಳನ್ನು ಮುರಿಯುವ ಘಟನೆಗಳು ಹೆಚ್ಚುತ್ತಿರುವುದು ಕಳವಳಕಾರಿ’ ಎಂದು ವಿಷಾದ ವ್ಯಕ್ತಪಡಿಸಿದರು.
ಆರೋಗ್ಯದ ಕುರಿತು ಮಾತನಾಡಿದ ಅವರು, ಬೀದಿಯಲ್ಲಿ ದೊರೆಯುವ ಕುರುಕಲು ತಿಂಡಿಗಳು, ಗುಟ್ಕಾ, ಸಿಗರೇಟ್‌ಗಳಂತಹ ಹಾನಿಕಾರಕ ಪದಾರ್ಥಗಳ ಬಳಕೆಯಿಂದ ಮನುಷ್ಯ ತನ್ನ ಆರೋಗ್ಯವನ್ನು ತಾನೇ ಹಾಳು ಮಾಡಿಕೊಳ್ಳುತ್ತಿದ್ದಾನೆ ಎಂದು ಹೇಳಿದರು. ಯೋಗಾಭ್ಯಾಸದಿಂದ ದೇಹವನ್ನು ಸದೃಢವಾಗಿಡಬೇಕು ಹಾಗೂ ಸತ್ಸಂಗದಿಂದ ಮನಸ್ಸನ್ನು ಪ್ರಫುಲ್ಲಿತವಾಗಿಡಬೇಕು’ ಎಂದು ಸಲಹೆ ನೀಡಿದರು.
ಕರ್ನಾಟಕ ಸೇನೆಯ ರಾಜ್ಯ ಪ್ರಧಾನ ಸಂಚಾಲಕ ಭೀಮಾಶಂಕರ ಮಾತನಾಡಿ, ಬಸವಣ್ಣನವರ ವಚನಗಳು ಕನ್ನಡ ಭಾಷೆಗೆ ಶಾಶ್ವತತೆ ನೀಡಿವೆ ಎಂದರು. ಜಾನಪದ ಹೆಸರಿನಲ್ಲಿ ಅಶ್ಲೀಲ ಸಾಹಿತ್ಯ ಹರಡುವುದನ್ನು ತಡೆಯಬೇಕು. ತಾಯಂದಿರು ಮಕ್ಕಳಿಗೆ ಉತ್ತಮ ಜನಪದ ಹಾಡುಗಳನ್ನು ಕಲಿಸಬೇಕು ಎಂದು ಕರೆ ನೀಡಿದರು.
ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ‘ಧರ್ಮದ ಹೆಸರಿನಲ್ಲಿ ನಡೆಯುವ ಮೋಸಗಳಿಂದ ಎಚ್ಚರಿಕೆಯಿಂದಿರಬೇಕು ಎಂದು ಮಹಿಳೆಯರಿಗೆ ಸಲಹೆ ನೀಡಿದರು. ತಮ್ಮ ಸಮಸ್ಯೆಗಳನ್ನು ಕುಟುಂಬದ ವಿಶ್ವಾಸಪಾತ್ರರೊಂದಿಗೆ ಹಂಚಿಕೊಳ್ಳುವುದು ಉತ್ತಮ’ ಎಂದರು.
ಕಾರ್ಯಕ್ರಮದಲ್ಲಿ ಷಣ್ಮುಖ ಬನ್ನಮ್ಮ ಜೈನ್ ಅವರನ್ನು ಸತ್ಕರಿಸಲಾಯಿತು. ಅಮೋಘ ಸತ್ಯಂಪೇಟೆ ಸ್ವಾಗತಿಸಿದರು. ಶಿವಣ್ಣ ಇಜೇರಿ ಕಾರ್ಯಕ್ರಮ ನಿರ್ವಹಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ನಡುರಸ್ತೆಯಲ್ಲೇ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿ
ಈ ಸಂದರ್ಭದಲ್ಲಿ ಅನಿಲಕುಮಾರ ಐಕೂರ, ಪ್ರಮೋದ ಶಾಬಾದಿ, ಸಂಗಮ್ಮ ಹರನೂರ, ಗಂಗಮ್ಮ ತುಂಬಗಿ, ಲಕ್ಷ್ಮಣ ಲಾಳಸಂಗಿ, ಶಿವಲೀಲಾ ವಡಗೇರಿ, ಬಸವರಾಜ ನಂದಿ, ಸುರೇಶ ಅರುಣಿ, ಡಾ. ಬಸವರಾಜ ಹಾದಿಮನಿ, ಗುರಣ್ಣ ಮದರಿ, ಸಾಹೇಬಣ್ಣ ಮಡಿವಾಳಕರ್, ವಿರೂಪಾಕ್ಷಿ ಸಿಂಪಿ ಸೇರಿದಂತೆ




