ಚಿನ್ನವು ಆರ್ಥಿಕ ಕವಚ, ಕೇವಲ ಸಾರ್ವಜನಿಕ ಮನವಿಗಳಿಂದ ಪ್ರಯೋಜನವಿಲ್ಲ: ತಜ್ಞರ ಅಭಿಪ್ರಾಯ

Date:

ಭಾರತೀಯರು ಅತಿಯಾಗಿ ಚಿನ್ನ ಖರೀದಿಸುವುದನ್ನು ಬಿಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಸಾರ್ವಜನಿಕ ಮನವಿ ಮಾಡಿದ್ದಾರೆ. ಆ ಮನವಿಯು ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾಗುವ ಚಿನ್ನದ ಮೇಲೆ ಭಾರತವು ಹೊಂದಿರುವ ದೀರ್ಘಕಾಲದ ಅವಲಂಬನೆಯ ಕುರಿತ ಚರ್ಚೆ ಹುಟ್ಟುಹಾಕಿದೆ. ಮೋದಿ ಅವರ ಕರೆಯನ್ನು ಹಲವಾರು ತಜ್ಞರು ತಳ್ಳಿಹಾಕಿದ್ದಾರೆ. ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

ಇತ್ತೀಚಿನ ವರ್ಷಗಳಲ್ಲಿ, ಭಾರತಕ್ಕೆ ಆಮದಾಗುತ್ತಿರುವ ಚಿನ್ನದ ಪ್ರಮಾಣವು ಗಣನೀಯವಾಗಿ ಹೆಚ್ಚಾಗಿದೆ. ಅಧಿಕೃತ ಅಂದಾಜಿನ ಪ್ರಕಾರ, 2025-16ರ ಆರ್ಥಿಕ ವರ್ಷದಲ್ಲಿ ಚಿನ್ನದ ಆಮದು ಮೌಲ್ಯವು ಬರೋಬ್ಬರಿ 72 ಶತಕೋಟಿ ಡಾಲರ್‌ಗಳನ್ನು ಸಮೀಪಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಪ್ರಸ್ತುತದ ಹಣದುಬ್ಬರದ ಪರಿಸ್ಥಿತಿಯಲ್ಲಿ, ಭಾರತೀಯ ರೂಪಾಯಿ ಮೌಲ್ಯದ ಮೇಲಿರುವ ಜಾಗತಿಕ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ರಧಾನಿ ಮೋದಿಯವರು ಚಿನ್ನ ಖರೀದಿ ಸ್ಥಿಗಿತದ ಹೇಳಿಕೆ ನೀಡಿದ್ದಾರೆ. ಆದರೆ, ಚಿನ್ನದೊಂದಿಗೆ ಭಾರತೀಯರು ಹೊಂದಿರುವ ಬಾಂಧವ್ಯವು ಕೇವಲ ಆರ್ಥಿಕತೆಯನ್ನು ಮೀರಿದ್ದಾಗಿದೆ. ಚಿನ್ನವನ್ನು ಕೇವಲ ಸಾರ್ವಜನಿಕ ಮನವಿಗಳ ಮೂಲಕ ಬದಲಾಯಿಸಲು ಸಾಧ್ಯವಿಲ್ಲ ಎಂದು ಚಿನ್ನ ಉದ್ಯಮದಲ್ಲಿರುವ ಪ್ರಮುಖರು ವಾದಿಸಿದ್ದಾರೆ.

ಭಾರತದಲ್ಲಿ ಈ ಅಮೂಲ್ಯವಾದ ಲೋಹವನ್ನು ಕೇವಲ ಒಂದು ಐಷಾರಾಮಿ ವಸ್ತುವಾಗಿ ನೋಡುವುದಿಲ್ಲ, ಬದಲಿಗೆ ದೇಶದ ಜನರು ಇದನ್ನು ಯಾವುದೇ ತುರ್ತು ಸಂದರ್ಭಗಳಲ್ಲಿ ತಕ್ಷಣವೇ ಕೈ ಹಿಡಿಯುವ ಒಂದು ಅತ್ಯಂತ ಸುರಕ್ಷಿತವಾದ ‘ಆರ್ಥಿಕ ಕವಚ’ವಾಗಿ ಭಾವಿಸುತ್ತಾರೆ ಎಂಬುದು ತಜ್ಞರ ವಾದ.

“ಯಾರದ್ದಾದರೂ ಮನೆಯಲ್ಲಿ ಮದುವೆ ಸಮಾರಂಭಗಳಿದ್ದರೆ ಅಥವಾ ಅವರು ಚಿನ್ನವನ್ನು ಖರೀದಿಸಲು ನಿರ್ಧರಿಸಿದ್ದರೆ, ಅವರು ಮಾರುಕಟ್ಟೆಯ ಪರಿಸ್ಥಿತಿಯನ್ನು ಲೆಕ್ಕಿಸುವುದಿಲ್ಲ. ಅವರು ಅದನ್ನು ಖರೀದಿಸಿಯೇ ತೀರುತ್ತಾರೆ. ದೇಶದ ಪ್ರಧಾನಿಯೇ ಹೇಳಿದರೂ, ಜನರು ತಕ್ಷಣವೇ ಚಿನ್ನ ಖರೀದಿಯನ್ನು ನಿಲ್ಲಿಸಿಬಿಡುವುದಿಲ್ಲ. ಭಾರತದಂತಹ ಸಾಂಪ್ರದಾಯಿಕ ದೇಶದಲ್ಲಿ ಮೋದಿ ಅವರ ಕರೆಗಳು ಯಾವುದೇ ಕಾರಣಕ್ಕೂ ಪ್ರಾಯೋಗಿಕವಾಗಿ ಸಾಧ್ಯವಿಲ್ಲ” ಎಂದು ಚಿನ್ನದ ಮಾರುಕಟ್ಟೆ ಮತ್ತು ವ್ಯವಹಾರಗಳ ಬಗ್ಗೆ ತಿಳಿದಿರುವ ರಾಜೇಶ್ ಅಗರ್ವಾಲ್ ಅಭಿಪ್ರಾಯಪಟ್ಟಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಗಮನಾರ್ಹವಾಗಿ, ಪ್ರಧಾನಿ ಮೋದಿಯವರು ಚಿನ್ನ ಖರೀದಿ ಸ್ಥಗಿತತೆಯ ಕರೆ ಕೊಡುವುದಕ್ಕೂ ಮುನ್ನವೇ ದೇಶದ ಚಿನ್ನದ ಮಾರುಕಟ್ಟೆಯು ತೀವ್ರ ಮಂದಗತಿಯನ್ನು ಎದುರಿಸುತ್ತಿತ್ತು. ಚಿನ್ನದ ಬೆಲೆಯಲ್ಲಿ ಉಂಟಾಗುತ್ತಿರುವ ನಿರಂತರ ಏರಿಕೆ, ಮಾರುಕಟ್ಟೆಯ ತೀವ್ರ ಅಸ್ಥಿರತೆ ಹಾಗೂ ಗ್ರಾಹಕರು ಹಣ ಖರ್ಚು ಮಾಡಲು ತೋರುತ್ತಿರುವ ಮುನ್ನೆಚ್ಚರಿಕೆಯ ಧೋರಣೆಯಿಂದಾಗಿ ಪ್ರಸಕ್ತ ತ್ರೈಮಾಸಿಕದಲ್ಲೇ ಆಭರಣಗಳ ಬೇಡಿಕೆ ಗಣನೀಯವಾಗಿ ಕುಸಿದಿತ್ತು ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

“ಚಿನ್ನದ ಬೇಡಿಕೆಯು ಮೊದಲೇ ದುರ್ಬಲವಾಗಿದ್ದರಿಂದ ಪ್ರಧಾನಿಯವರ ಇತ್ತೀಚಿನ ಮಾತುಗಳು ಮಾರುಕಟ್ಟೆಯ ಮೇಲೆ ಯಾವುದೇ ಹೊಸ ಅಥವಾ ಭಾರಿ ದೊಡ್ಡ ಪರಿಣಾಮವನ್ನೇನೂ ಬೀರಲಿಲ್ಲ. ಕಳೆದ ಕೆಲವು ತಿಂಗಳುಗಳಲ್ಲಿ ಚಿನ್ನದ ಆಭರಣಗಳ ಮಾರಾಟವು ಬರೋಬ್ಬರಿ 70% ರಷ್ಟು ಕುಸಿದಿದೆ. ಹಾಗೆಯೇ ಬೆಳ್ಳಿಯ ಆಭರಣಗಳ ಬೇಡಿಕೆಯು 20ರಿಂದ 30% ರಷ್ಟು ಇಳಿಕೆಯಾಗಿದೆ” ಎಂದು ಉದ್ಯಮದಲ್ಲಿ ತೊಡಗಿರುವವರು ಹೇಳುತ್ತಿದ್ದಾರೆ.

ಆದಾಗ್ಯೂ, ಇದೇ ಸಮಯದಲ್ಲಿ, ಹೂಡಿಕೆಯ ರೂಪದಲ್ಲಿ ಚಿನ್ನಕ್ಕೆ ಇರುವ ಬೇಡಿಕೆ ಮಾತ್ರ ಮಾರುಕಟ್ಟೆಯಲ್ಲಿ ಸ್ಥಿರವಾಗಿ ಉಳಿದುಕೊಂಡಿದೆ.

ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಎಚ್ಚರ: ಎಸ್‌ಐಆರ್‌ – ಮತಪಟ್ಟಿ ಪರಿಶೀಲನೆಯಲ್ಲ, ಪೌರತ್ವ ಪರೀಕ್ಷೆ!

ಜಾಗತಿಕ ಮಾರುಕಟ್ಟೆಯ ಅಸ್ಥಿರತೆ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರದಿಂದ ತಮ್ಮ ಆಸ್ತಿಯನ್ನು ರಕ್ಷಿಸಿಕೊಳ್ಳಲು ಬಯಸುತ್ತಿರುವ ಹೂಡಿಕೆದಾರರನ್ನು ಚಿನ್ನದ ಇಟಿಎಫ್‌ಗಳು (Exchange-Traded Funds) ನಿರಂತರವಾಗಿ ಆಕರ್ಷಿಸುತ್ತಿವೆ. ಇಟಿಎಫ್‌ಗಳಲ್ಲಿನ ಈ ಹೂಡಿಕೆಯು ಸದ್ಯಕ್ಕೆ ಸ್ಥಿರವಾಗಿದ್ದು, ಮುಂಬರುವ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ರಾಜೇಶ್ ಅಗರ್ವಾಲ್ ವಿಶ್ಲೇಷಿಸಿದ್ದಾರೆ.

ಆಮದು ಹೆಚ್ಚಾಗುತ್ತಿರುವ ಬಗ್ಗೆ ಕಳವಳ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ತನ್ನ ನೀತಿಗಳನ್ನು ಮತ್ತಷ್ಟು ಕಠಿಣಗೊಳಿಸಲು ಮುಂದಾಗಿದೆ. ಈ ಹಿಂದೆ ಕಳ್ಳಸಾಗಣೆಯನ್ನು ತಡೆಯುವ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಇಂಧನ ಮತ್ತು ಚಿನ್ನದ ಬೆಲೆಗಳನ್ನು ಸ್ಥಿರಗೊಳಿಸುವ ಉದ್ದೇಶದಿಂದ ಸರ್ಕಾರವು ಸುಂಕವನ್ನು ಕಡಿತಗೊಳಿಸಿತ್ತು. ಆದರೆ, ಆ ಕಡಿತದ ಹೊರತಾಗಿಯೂ ಆಮದು ನಿರಂತರವಾಗಿ ಹೆಚ್ಚಾಗುತ್ತಲೇ ಇದ್ದುದರಿಂದ, ಕೇಂದ್ರ ಸರ್ಕಾರವು ತನ್ನ ಹಳೆಯ ನಿರ್ಧಾರವನ್ನು ಬದಲಾಯಿಸಿದೆ. ಇತ್ತೀಚೆಗೆ, ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು 18%ಗೆ ಹೆಚ್ಚಿಸಿದೆ.

ಇದೇ ಸಮಯದಲ್ಲಿ, ಜಾಗತಿಕ ರಾಜಕೀಯ ಅಸ್ಥಿರತೆಯ ನಡುವೆಯೂ ಚಿನ್ನದ ಮಾರುಕಟ್ಟೆಯು ನಿರಂತರವಾಗಿ ಏರಿಳಿತಗಳನ್ನು ಕಾಣುತ್ತಿದೆ. ಸಾಮಾನ್ಯವಾಗಿ ಜಾಗತಿಕವಾಗಿ ಯುದ್ಧದ ಸನ್ನಿವೇಶಗಳು ಎದುರಾದಾಗ ಜನರು ಭಯದಿಂದ ಚಿನ್ನವನ್ನು ಖರೀದಿಸುವುದು ಮತ್ತು ಚಿನ್ನದ ಬೆಲೆಗಳು ಗಗನಕ್ಕೇರುವುದು ಇತಿಹಾಸದುದ್ದಕ್ಕೂ ನಡೆಯುವ ಸಂಪ್ರದಾಯವಾಗಿದೆ. ಇದು ಈಗಲೂ ಮುಂದುವರೆಯಲಿದೆ. ಎನ್ನುತ್ತಾರೆ ತಜ್ಞರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜನರೇ ತೀರ್ಮಾನಿಸುತ್ತಾರೆ, ಇಸಿಐ ಅಲ್ಲ: ಗ್ಯಾನೇಶ್ ಕುಮಾರ್ ವಿರುದ್ಧ ಒಂದಾದ ಠಾಕ್ರೆ ಸಹೋದರರು

ಕೇಂದ್ರ ಚುನಾವಣಾ ಆಯೋಗ (ಇಸಿಐ) ಜಾರಿಗೆ ತಂದಿರುವ ಮತದಾರರ ಪಟ್ಟಿ ವಿಶೇಷ...

SIR | ಸತ್ಯ ಹೇಳದೇ ಸಹಿ ಪಡೆದರು; ಎಫ್‌ಐಆರ್ ದಾಖಲಾಗುತ್ತಿದ್ದಂತೆ ತಮ್ಮ ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ (ಡಿಲಿಷನ್) ಪ್ರಕ್ರಿಯೆ...

ಶರತ್ತುಗಳು ಈಡೇರುವವರೆಗೆ ಹಾರ್ಮುಜ್ ಜಲಸಂಧಿ ತೆರೆಯುವುದಿಲ್ಲ: ಇರಾನ್ ಸ್ಪಷ್ಟನೆ

ತನ್ನ ಎಲ್ಲ ಶರತ್ತುಗಳು ಸಂಪೂರ್ಣವಾಗಿ ಈಡೇರುವವರೆಗೆ ಜಾಗತಿಕ ತೈಲ ಮತ್ತು ಅನಿಲ...

ದೆಹಲಿ ಪ್ರತಿಭಟನೆ ವೇಳೆ ಪೊಲೀಸರಿಂದ ಲೈಂಗಿಕ ಕಿರುಕುಳ: ಮೂವರು ಪತ್ರಕರ್ತೆಯರ ಆರೋಪ

ದೇಶದ ರಾಜಧಾನಿ ದೆಹಲಿಯ ಜಂತರ್ ಮಂತರ್ ಬಳಿ ನಡೆದ ಪ್ರತಿಭಟನೆಯ ವರದಿಗಾರಿಕೆಯಲ್ಲಿ...