ಒತ್ತುವರಿ ತೆರವು ತಡೆಗೆ ಹೈಕೋರ್ಟ್ ನಕಾರ; 2,000 ಗುಡಿಸಲುಗಳು ಧ್ವಂಸ

Date:

ನಿರಾಶ್ರಿತರು ಜೀವನ ದೂಡಲು ಅಹಮದಾಬಾದ್‌ನ ಸರ್ಕಾರಿ ಭೂಮಿಯಲ್ಲಿ ಕಟ್ಟಿಕೊಟ್ಟಿದ್ದ ಸುಮಾರು 2,000 ಗುಡಿಸಲುಗಳನ್ನು ಗುಜರಾತ್‌ ಸರ್ಕಾರ ಧ್ವಂಸಗೊಳಿದೆ. ಅಧಿಕಾರಿಗಳು ಆರಂಭಿಸಿದ್ದ ಒತ್ತುವರಿ ಕಾರ್ಯಾಚರಣೆಗೆ ತಡೆ ನೀಡಲು ಗುಜರಾತ್‌ ಹೈಕೋರ್ಟ್‌ ನಿರಾಕರಿಸಿದ ಬೆನ್ನಲ್ಲೇ, ನಿರಾಶ್ರಿತರ ಗುಡಿಸಲುಗಳನ್ನು ನೆಲಸಮ ಮಾಡಲಾಗಿದೆ.

- Advertisement -

ಅಹಮದಾಬಾದ್‌ನ ಚಂಡೋಲ್ ಲೇಕ್ ಪ್ರದೇಶದಲ್ಲಿ ನಿರಾಶ್ರಿತರು ಗುಡಿಸಲುಗಳನ್ನು ಕಟ್ಟಿಕೊಂಡು ಬದುಕುತ್ತಿದ್ದರು. ಆದರೆ, ಅವರು ಬಾಂಗ್ಲಾದೇಶದ ಅಕ್ರಮ ವಲಸಿಗರು ಎಂದು ಶಂಕಿಸಲಾಗಿದೆ. ಇದೇ ಶಂಕೆಯ ಮೇಲೆ ಸುಮಾರು 900 ಮಂದಿಯನ್ನು ಪೊಲೀಸರು ಮೂರು ದಿನಗಳ ಹಿಂದೆ ವಶಕ್ಕೆ ಪಡೆದಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

E20 ಹೆಸರಲ್ಲಿ E31 ಸುಲಿಗೆ: ಕರ್ನಾಟಕದಲ್ಲಿ ಮೋದಿ ಸರ್ಕಾರದ...

ದೇಶದ ಇಂಧನ ಮಾರುಕಟ್ಟೆಯ ಇತಿಹಾಸದಲ್ಲೇ ಅತ್ಯಂತ ಕರಾಳವಾದ, ಜನರ ಕಣ್ಣಿಗೆ ಮಣ್ಣು ಎರಚಿ ಅವರ ವಾಹನಗಳ ಎಂಜಿನ್‌ಗಳನ್ನು ನಾಶಪಡಿಸುವ ಮತ್ತು ಜೇಬಿಗೆ ಕತ್ತರಿ ಹಾಕುವ ಬೃಹತ್ ದರೋಡೆಕೋರತನ ಕರ್ನಾಟಕದಲ್ಲಿ ಬಯಲಾಗಿದೆ. ಪೆಟ್ರೋಲ್‌ನಲ್ಲಿ 20%ರ...

ಮೀಟರ್ ಹಾಕಲ್ಲ, ನಿಗದಿತ ಬಾಡಿಗೆಗೆ ಬರಲ್ಲ: ಆಟೋ ಸುಲಿಗೆಯಿಂದ...

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಟೋಗಳ ಸಂಚಾರ ಮತ್ತು ಆಟೋ ಪ್ರಯಾಣಿಕರ ಸಮಸ್ಯೆ ಇಂದು ಸಾರ್ವಜನಿಕ ಚರ್ಚೆಯ ವಿಷಯವಾಗಿದೆ. ನಗರದ ರಸ್ತೆಗಳಲ್ಲಿ ಆಟೋಗಳ ಸಂಖ್ಯೆ ಹೆಚ್ಚುತ್ತಿರುವುದು, ನಿಗದಿತ ದರಕ್ಕಿಂತ ಹೆಚ್ಚಿನ ಬಾಡಿಗೆ ಕೇಳುವುದು,...

ದೆಹಲಿಯಲ್ಲಿ ದಿನಕ್ಕೆ 20 ಸಿಗರೇಟು ‘ಉಚಿತ’ ಕೊಡುಗೆ! ‘ವಿಷ’...

ಪ್ರತಿ ವರ್ಷ ನವೆಂಬರ್ ಬಂತೆಂದರೆ ದೆಹಲಿ ಜಗತ್ತಿನ ಅತಿ ದೊಡ್ಡ ಗ್ಯಾಸ್ ಚೇಂಬರ್ ಆಗುತ್ತದೆ. ಟಿವಿ ತೆರೆದರೆ ನ್ಯಾಯಾಲಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತದೆ. ಸರ್ಕಾರ ಮತ್ತೊಂದು ಸರ್ಕಾರವನ್ನು ದೂರುತ್ತದೆ. ಪಂಜಾಬ್ ಹರಿಯಾಣದ ಕಡೆ...

ಈ ಬೆನ್ನಲ್ಲೇ, ಅಧಿಕಾರಿಗಳು ಸೋಮವಾರ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ್ದರು. ಅಲ್ಲಿ ವಾಸಿಸುತ್ತಿದ್ದ 18 ಮಂದಿ ನಿವಾಸಿಗಳು ಹೈಕೋರ್ಟ್‌ ಮೆಟ್ಟಿಲೇರಿ, ಒತ್ತುವರಿ ಕಾರ್ಯಾಚರಣೆಗೆ ತಡೆಯಾಜ್ಞೆ ನೀಡುವಂತೆ ಅರ್ಜಿ ಸಲ್ಲಿಸಿದ್ದರು.

ಮಂಗಳವಾರ ರಜೆ ದಿನವಾದರೂ, ಹೈಕೋರ್ಟ್‌ ನ್ಯಾಯಮೂರ್ತಿ ಮೌನಾ ಭಟ್ಟ ಅವರು ಅರ್ಜಿಯ ವಿಚಾರಣೆ ನಡೆಸಿದರು. ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲ ಆನಂದ್ ಯಾಜ್ಞಿಕ್, “ಎಲ್ಲ ಅರ್ಜಿದಾರರು ಭಾರತೀಯ ಪೌರರಾಗಿದ್ದಾರೆ. ಕಳೆದ 50 ವರ್ಷಗಳಿಂದ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಆದಾಗ್ಯೂ, ತಮ್ಮ ಪೌರತ್ವವನ್ನು ಸಾಬೀತು ಮಾಡಲು ಅವರ ಬಳಿ ಅಗತ್ಯ ದಾಖಲೆಗಳಿಲ್ಲ” ಎಂದು ಹೇಳಿದ್ದಾರೆ.

“ತೆರವು ಕಾರ್ಯಾಚರಣೆಗೂ ಮುನ್ನವೇ ನೋಟಿಸ್‌ ನೀಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ, ಕೋರ್ಟ್‌ ಆದೇಶವನ್ನು ಉಲ್ಲಂಘಿಸಿ, ನೋಟಿಸ್‌ ನೀಡದೆಯೇ ತೆರವು ಕಾರ್ಯಾರಣೆ ನಡೆಸಲು ಅಧಿಕಾರಿ ಮುಂದಾಗಿದ್ದಾರೆ. ಅರ್ಜಿದಾರರು ಆ ಭೂಮಿಯ ಮಾಲೀಕರಲ್ಲ. ಅದರೆ ಸಿಆರ್‌ಝೆಡ್ ಅಧಿಸೂಚನೆಯಡಿ ಕೊಳಗೇರಿ ಪುನರ್ವಸತಿ ಯೋಜನೆಯಿಂದ ಅವರಿಗೆ ಪರ್ಯಾಯ ವಸತಿ ಸೌಲಭ್ಯ ನೀಡಲು 2010ರಲ್ಲಿ ರಾಜ್ಯ ಸರ್ಕಾರವು ನಿರ್ಧರಿಸಿತ್ತು. ಈಗ ಪರ್ಯಾಯ ವ್ಯವಸ್ಥೆ ಮಾಡದೆ, ಅವರನ್ನು ತೆರವುಗೊಳಿಸುವುದು ಸರಿಯಲ್ಲ” ಎಂದು ವಾದಿಸಿದರು.

ಅಲ್ಲದೆ, “ಬಾಂಗ್ಲಾದಿಂದ ಬಂದಿರುವ ಅಕ್ರಮ ವಲಸಿಗರ ವಿರುದ್ದದ ಕ್ರಮವೆಂಬ ನೆಪದಲ್ಲಿ ಭಾರತೀಯರೇ ಆದ ನಿರಾಶ್ರಿತರನ್ನು ಹೊರದೂಡಲು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೀಗಾಗಿ, ಕಾರ್ಯಾಚರಣೆಗೆ ತಡೆ ನೀಡಬೇಕು”” ಎಂದು ಕೋರ್ಟ್‌ಗೆ ಮನವಿ ಮಾಡಿದರು.

ಈ ವರದಿ ಓದಿದ್ದೀರಾ?: ಯುದ್ಧದ ಪರಿಣಾಮಗಳು ಯುದ್ಧಭೂಮಿಗೆ ಮಾತ್ರ ಸೀಮಿತವಾಗುವುದಿಲ್ಲ…

ಆದರೆ, ಅರ್ಜಿದಾರರ ವಾದವನ್ನು ರಾಜ್ಯ ಸರ್ಕಾರ ತಳ್ಳಿಹಾಕಿದೆ. ಜಲಪ್ರದೇಶದ ಭೂಭಾಗವನ್ನು ಅತಿಕ್ರಮಿಸಲಾಗಿದೆ. ಯಾವುದೇ ರೀತಿಯ ಅನಧಿಕೃತ ಒತ್ತುವರಿ ಮತ್ತು ನಿರ್ಮಾಣಗಳ ತೆರವಿಗೆ ನೋಟಿಸ್ ನೀಡುವ ಅಗತ್ಯವಿಲ್ಲ ಎಂದು ತನ್ನ ವಾದವನ್ನು ಮುಂದಿಟ್ಟಿದೆ.

ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್, ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಅರ್ಜಿಯ ವಿಚಾರಣೆಯನ್ನು ಜೂನ್‌ ತಿಂಗಳಿಗೆ ಮುಂದೂಡಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂ ಮಾಫಿಯಾ, ಬೆದರಿಕೆ ಆರೋಪ: ಫೇಸ್‌ಬುಕ್ ಲೈವ್‌ನಲ್ಲಿ ಕಣ್ಣೀರಿಟ್ಟು ಜಾರ್ಖಂಡ್ ಬುಡಕಟ್ಟು ನಾಯಕಿ ಆತ್ಮಹತ್ಯೆ

ಜಾರ್ಖಂಡ್‌ನ ರಾಂಚಿಯಲ್ಲಿ ಬುಡಕಟ್ಟು ಹಕ್ಕುಗಳ ಹೋರಾಟಗಾರ್ತಿ ಮತ್ತು ನಾಯಕಿ ನಿಶಾ ಕುಮಾರಿ...

ದೇಶದ ಭದ್ರತೆಗೆ ಧಕ್ಕೆಯಾದ ಅಗ್ನಿಪಥ್ ಯೋಜನೆ ತಕ್ಷಣವೇ ರದ್ದುಗೊಳಿಸಿ: ಕಾಂಗ್ರೆಸ್ ಆಗ್ರಹ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಶಸ್ತ್ರ ಪಡೆಗಳ 'ಅಗ್ನಿಪಥ್' ನೇಮಕಾತಿ ಯೋಜನೆಯನ್ನು...

ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತದ ಮೂಲಕ ಆಕ್ರೋಶ ಹೊರಹಾಕಿ: ಕಾಂಗ್ರೆಸ್ ಕರೆ

ದೇಶದಲ್ಲಿ ನಿರಂತರವಾಗಿ ಬೆಲೆ ಏರಿಕೆಯಾಗುತ್ತಿದೆ, ಇದರಿಂದ ಸಾಲದ ಸುಳಿಯಲ್ಲಿ ಸಿಲುಕಿ ಸಾಮಾನ್ಯ...

ಮೋದಿ ಸರ್ಕಾರದಿಂದ ‘ಮತ ಕಳ್ಳತನ’ದ ನಂತರ ‘ಹಕ್ಕುಗಳ ಕಳ್ಳತನ’ ಶುರು: ರಾಹುಲ್ ಗಾಂಧಿ ಆಕ್ರೋಶ

ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದ ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಆಧಾರ್...