ಅಸ್ಸಾಂ | ಸಾಮಾಜಿಕ ಮಾಧ್ಯಮದಲ್ಲಿ ‘ಪಾಕ್ ಪರ’ ಪೋಸ್ಟ್‌ ಆರೋಪ; 30ಕ್ಕೂ ಹೆಚ್ಚು ಮಂದಿ ಬಂಧನ

Date:

ಪಹಲ್ಗಾಮ್‌ನಲ್ಲಿನ ಭಯೋತ್ಪಾದಕ ದಾಳಿಯ ಕುರಿತಾಗಿ ವಿವಾದಾತ್ಮಕ ಮತ್ತು ಪಾಕಿಸ್ತಾನ ಪರವೆಂಬಂತೆ ಧ್ವನಿಸುವ ಪೋಸ್ಟ್‌ಗಳನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ಆರೋಪದ ಮೇಲೆ ಅಸ್ಸಾಂನಲ್ಲಿ ಸುಮಾರು 30ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

- Advertisement -

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕಳೆದ ವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ 28 ಮಂದಿ ಸಾವನ್ನಪ್ಪಿದ್ದಾರೆ. ಈ ದಾಳಿಯ ವಿಚಾರದಲ್ಲಿ ಹಲವರು ಕೇಂದ್ರ ಸರ್ಕಾರವನ್ನೇ ದೂಷಿಸಿದ್ದಾರೆ. ಕೆಲವರು ಪಾಕ್‌ ಪರವಾದಂತಹ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಅದಕ್ಕಾಗಿ ಕೆಲವರನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ನಮ್ಮ ಜೀವನ ಪ್ರೇಮ, ಸ್ನೇಹ, ಸೌಂದರ್ಯ ಹರಡುವ ಹೂವಿನಂತಿರಲಿ:...

ಶ್ರೀರಂಗಪಟ್ಟಣ ಪುರಸಭೆ ಚಾಮನ್ ಬಯಲನ್ನು ʼಹೂವಿನ ಗ್ರಾಮʼ ಎಂದು ಘೋಷಿಸಿ, ಅಲ್ಲಿ ಗುಲಾಬಿ ಎಣ್ಣೆ ತಯಾರಿಕಾ ಘಟಕ, ಪ್ರವಾಸಿ ತಾಣ ಮಾಡಬೇಕು. ಟಿಪ್ಪು ಕಾಲದ ಚಾಮನ್ ಎಂಬ ಹೆಸರನ್ನು ಉಳಿಸಬೇಕು. ಗುಲಾಬಿ ಕೇವಲ ಒಂದು...

ಜರ್ಮನಿಯಲ್ಲಿ ತೀವ್ರಗಾಮಿಗಳ ಅಬ್ಬರ: ದಿಕ್ಕುತಪ್ಪಿದ ಮಧ್ಯಮಾರ್ಗ, ಮರುಜೀವ ಪಡೆಯುತ್ತಿದೆಯೇ...

ಜರ್ಮನಿಯಲ್ಲಿ ತೀವ್ರ ಬಲಪಂಥೀಯರ ಈ ಮಟ್ಟದ ಏರಿಕೆ ಕೇವಲ ರಾಜಕೀಯ ಪೈಪೋಟಿಯಲ್ಲ, ಬದಲಾಗಿ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಜರ್ಮನಿ ಮತ್ತು ಬಲಪಂಥ ಎಂದಾಕ್ಷಣ ಇಡೀ ವಿಶ್ವಕ್ಕೆ ಅಡಾಲ್ಫ್ ಹಿಟ್ಲರ್ ಮತ್ತು ಆತನ ನಾಜಿ...

ಸೌಜನ್ಯಳನ್ನು ಕೊಂದವರು ಯಾರು? ಹೊಸ ತನಿಖೆಯಲ್ಲಿ ಉತ್ತರ ಸಿಗುವ...

14 ವರ್ಷಗಳು... 3 ತನಿಖಾ ಸಂಸ್ಥೆಗಳಾದ ಪೊಲೀಸ್, ಸಿಐಡಿ, ಸಿಬಿಐ ತನಿಖೆಗಳು... ಅಮಾಯಕನಾದ ಒಬ್ಬನೇ ಆರೋಪಿಯ ಸುತ್ತಲಿನ ತನಿಖೆ-... ಕೊನೆಗೆ ಆತ ನಿರಪರಾಧಿ ಎಂದು ಸಾಬೀತು, ಆತನ ಖುಲಾಸೆ. ಹಾಗಾದರೆ 17 ವರ್ಷದ...

“ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು. ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಹೋಲಿಕೆಗಳಿಲ್ಲ. ಎರಡೂ ದೇಶಗಳು ಶತ್ರು ರಾಷ್ಟ್ರಗಳು. ನಾವು ಹಾಗೆಯೇ ಇರಬೇಕು” ಎಂದು ಶರ್ಮಾ ಹೇಳಿದ್ದಾರೆ.

2019ರ ಪುಲ್ವಾಮಾ ಮತ್ತು ಇತ್ತೀಚಿನ ಪಹಲ್ಗಾಮ್ ದಾಳಿಗಳು ‘ಸರ್ಕಾರದ ಪಿತೂರಿಗಳು’ ಎಂದು ಹೇಳಿಕೆ ನೀಡಿದ್ದಕ್ಕಾಗಿ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ನ (ಎಐಯುಡಿಎಫ್) ಶಾಸಕ ಅಮೀನುಲ್ ಇಸ್ಲಾಂ ವಿರುದ್ಧವೂ ದೇಶದ್ರೋಹ ಆರೋಪ ಹೊರಿಸಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕದ 4 ಎಂಎಲ್‌ಸಿ ಸ್ಥಾನಗಳಿಗೆ ಚುನಾವಣೆ ಘೋಷಣೆ; ಅಕ್ಟೋಬರ್ 23ಕ್ಕೆ ಮತದಾನ

ಕರ್ನಾಟಕದಲ್ಲಿ ಖಾಲಿಯಾಗಲಿರುವ ನಾಲ್ಕು ವಿಧಾನ ಪರಿಷತ್ (ಎಂಎಲ್‌ಸಿ) ಸ್ಥಾನಗಳು ಸೇರಿದಂತೆ ಒಟ್ಟು...

ಸಿಜೆಪಿ ಪ್ರತಿಭಟನೆ: ಟಿವಿ ವಾಹಿನಿಗಳ ವಿಶ್ವಾಸಾರ್ಹತೆ ಕೊರತೆಗೆ ಕನ್ನಡಿ ಎಂದ ‘ಎಡಿಟರ್ಸ್ ಗಿಲ್ಡ್’

ದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಿಜೆಪಿ (CJP) ಪ್ರತಿಭಟನೆಗಳ ವರದಿಗಾರಿಕೆಯಲ್ಲಿ ಬಹುತೇಕ ಮುಖ್ಯವಾಹಿನಿಯ...

ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಯತ್ನಿಸಿದ್ದ 8 ವಿದ್ಯಾರ್ಥಿಗಳಿಗೆ ಐಐಐಟಿ ಹೈದರಾಬಾದ್ ನೋಟಿಸ್

ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ...

ಪೌರತ್ವ ಪಡೆಯುವ ಮುನ್ನವೇ ಮತದಾರರ ಪಟ್ಟಿಗೆ ಸೋನಿಯಾ ಹೆಸರು: ಮ್ಯಾಜಿಸ್ಟ್ರೇಟ್ ಆದೇಶ ರದ್ದು

ಭಾರತೀಯ ಪೌರತ್ವ ಪಡೆಯುವ ಮುನ್ನವೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ...