ಮಹಿಳೆಗೆ ಕಿರುಕುಳ ಆರೋಪ; ಇಂದೋರ್‌ನ ‘ಡ್ಯಾನ್ಸಿಂಗ್‌ ಪೊಲೀಸ್‌’ ರಂಜೀತ್ ಸಿಂಗ್‌ಗೆ ಹಿಂಬಡ್ತಿ

Date:

‘ಡ್ಯಾನ್ಸಿಂಗ್ ಪೊಲೀಸ್‌’ ಎಂದೇ ಖ್ಯಾತಿ ಪಡೆದಿದ್ದ ಇಂದೋರ್‌ನ ಪೊಲೀಸ್‌ ಹೆಡ್‌ ಕಾನ್‌ಸ್ಟೇಬಲ್ ರಂಜೀತ್ ಸಿಂಗ್‌ ವಿರುದ್ಧ ಮಹಿಳೆಯೊಬ್ಬರು ಕಿರುಕುಳದ ಆರೋಪ ಮಾಡಿದ್ದಾರೆ. ಮಹಿಳೆ ದೂರು ದಾಖಲಿಸಿದ ಬೆನ್ನಲ್ಲೇ, ರಂಜೀತ್ ಸಿಂಗ್‌ ಅವರಿಗೆ ಹೆಡ್‌ ಕಾನ್‌ಸ್ಟೇಬಲ್ ಹುದ್ದೆಯಿಂದ ಕಾನ್‌ಸ್ಟೇಬಲ್ ಹುದ್ದೆಗೆ ಹಿಂಬಡ್ತಿ ನೀಡಿ ಮಧ್ಯಪ್ರದೇಶ ಪೊಲೀಸ್‌ ಇಲಾಖೆ ಆದೇಶಿಸಿದೆ.

- Advertisement -

ಸಂಚಾರ ನಿರ್ವಹಣೆ ವೇಳೆ ಡ್ಯಾನ್ಸ್‌ ಮಾಡತ್ತಲೇ ಕರ್ತವ್ಯ ನಿರ್ವಹಿಸುತ್ತಿದ್ದ ರಂಜೀತ್ ಸಿಂಗ್‌ ನೆಟ್ಟಿಗರಿಂದ ಪ್ರಸಂಶೆ ಪಡೆದಿದ್ದರು. ಇದೀಗ ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಸಿಂಗ್‌ ವಿರುದ್ಧ ದೂರು ದಾಖಲಿಸಿರುವ ಮಹಿಳೆ, “ತಮಗೆ ಅನುಚಿತ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಇಂದೋರ್‌ಗೆ ಬರುವಂತೆ ಒತ್ತಡ ಹೇರುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ರಂಜೀತ್ ಸಿಂಗ್ ವಿರುದ್ಧ ನಡೆದ ಪ್ರಾಥಮಿಕ ತನಿಖೆಯ ಆಧಾರದಲ್ಲಿ ಅವರಿಗೆ ಹಿಂಬಡ್ತಿ ನೀಡಲಾಗಿದೆ. ಪ್ರಕರಣವನ್ನು ವಿವರವಾದ ತನಿಖೆ ನಡೆಸಲು ಡಿಸಿಪಿಗೆ ಪೊಲೀಸ್ ಇಲಾಖೆ ಸೂಚಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

ತಮ್ಮ ವಿರುದ್ಧದ ಆರೋಪವನ್ನು ರಂಜೀತ್ ಸಿಂಗ್ ನಿರಾಕರಿಸಿದ್ದಾರೆ. ಮಹಿಳೆಯು ಸುಳ್ಳು ಆರೋಪ ಮಾಡಿ, ಪ್ರಚಾರ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರ: ಅಪ್ರಾಪ್ತೆಯನ್ನು ನಡುರಸ್ತೆಯಲ್ಲಿ ಎಳೆದಾಡಿ, ಕಿರುಕುಳ ನೀಡಿದ ಪುಂಡರು

ಬಿಹಾರದ ಜಮುಯಿಯಲ್ಲಿ 10ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳನ್ನು ಯುವಕರ ಗುಂಪೊಂದು ನಡುರಸ್ತೆಯಲ್ಲಿ...

ಐಐಟಿ ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಹಿಂದಿನ ಹೇಳಿಕೆಗೆ ಆಡಳಿತ ಮಂಡಳಿ ಕ್ಷಮೆ, ಡೀನ್ ಅಮಾನತು

ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ವಿದ್ಯಾರ್ಥಿಗಳ...

ಗಗನಕ್ಕೇರಿದ ದಿನಬಳಕೆ ವಸ್ತುಗಳ ದರ: ‘ಕ್ಯಾ ಹುವಾ ತೇರಾ ವಾದಾ’ – ಪ್ರಧಾನಿ ಮೋದಿಗೆ ಕಾಂಗ್ರೆಸ್ ಪ್ರಶ್ನೆ

ದೇಶದಲ್ಲಿ ಪ್ರಮುಖ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿರುತ್ತಿದೆ. ಇದನ್ನು ಖಂಡಿಸಿ ಕಾಂಗ್ರೆಸ್...