ಸೈಬರ್ ನರಕ: ಮ್ಯಾನ್ಮಾರ್‌ನಲ್ಲಿ ಮಹಾರಾಷ್ಟ್ರದ 25 ಮಂದಿ ಸೇರಿ 400 ಭಾರತೀಯರ ಅತಂತ್ರ

Date:

ವಿದೇಶದಲ್ಲಿ ಕೈತುಂಬಾ ಸಂಬಳದ ನಕಲಿ ಉದ್ಯೋಗದ ಆಮಿಷಕ್ಕೆ ಬಲಿಯಾದ ಮಹಾರಾಷ್ಟ್ರದ ಕನಿಷ್ಠ 25 ಯುವಕರು ಥಾಯ್ಲೆಂಡ್-ಮ್ಯಾನ್ಮಾರ್ ಗಡಿಯಲ್ಲಿರುವ ಸೈಬರ್ ವಂಚನೆ ಜಾಲದ ಶಿಬಿರಗಳಲ್ಲಿ ಸಿಲುಕಿ, ಅಮಾನವೀಯ ಚಿತ್ರಹಿಂಸೆಗೆ ಒಳಗಾಗಿದ್ದಾರೆ. ನಾಸಿಕ್ ಜಿಲ್ಲೆಯ 8 ಮಂದಿ, ಹಾಗೂ ಬೀಡ್, ಧಾರಾಶಿವ್ ಜಿಲ್ಲೆಗಳ ಯುವಕರು ಇದರಲ್ಲಿ ಸೇರಿದ್ದು, ತಮ್ಮವರನ್ನು ರಕ್ಷಿಸುವಂತೆ ಸಂತ್ರಸ್ತರ ಕುಟುಂಬಗಳು ಸರ್ಕಾರದ ಮೊರೆ ಹೋಗಿವೆ.

- Advertisement -

ಇತ್ತೀಚೆಗೆ ತಮ್ಮ ಕುಟುಂಬವನ್ನು ವಾಟ್ಸ್ಆ್ಯಪ್ ಕರೆ ಮೂಲಕ ಸಂಪರ್ಕಿಸಿದ ನಾಸಿಕ್ ಮೂಲದ 30 ವರ್ಷದ ಯುವಕನೊಬ್ಬ, ಶಿಬಿರದಲ್ಲಿನ ಭೀಕರ ಪರಿಸ್ಥಿತಿಯನ್ನು ವಿವರಿಸಿದ್ದಾನೆ. ಏಪ್ರಿಲ್ 25ರಿಂದ ಬಂಧನದಲ್ಲಿರುವ ಈತ, ಸ್ನೇಹಿತನೊಬ್ಬನ ಮೂಲಕ ಬ್ಯಾಂಕಾಕ್‌ನ ಕಾಲ್‌ ಸೆಂಟರ್‌ನಲ್ಲಿ ತಿಂಗಳಿಗೆ ₹70,000 ಸಂಬಳದ ಆಮಿಷಕ್ಕೆ ಒಳಗಾಗಿ ಥಾಯ್ಲೆಂಡ್‌ಗೆ ತೆರಳಿದ್ದ. ಅಲ್ಲಿಂದ ಆತನನ್ನು ಅಪರಿಚಿತರು ಥಾಯ್ಲೆಂಡ್-ಮ್ಯಾನ್ಮಾರ್ ಗಡಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೂಡಿಹಾಕಿದ್ದಾರೆ. ಆತನ ಬಿಡುಗಡೆಗೆ 8 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಡಲಾಗಿದೆ ಎಂದು ಆತನ ಕುಟುಂಬ ಮಾಧ್ಯಮಗಳಿಗೆ ತಿಳಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನ್ಯಾಯಕ್ಕಾಗಿ ಬಿಲ್ಕಿಸ್ ಬಾನೋ 22 ವರ್ಷಗಳ ಅಲೆದಾಟ: ಇಂದಿಗೂ...

2002ರ ಗುಜರಾತ್ ಗಲಭೆಯ ಕರಾಳ ನೆನಪುಗಳನ್ನು ಹೊತ್ತು, ತಮ್ಮವರನ್ನೆಲ್ಲಾ ಕಳೆದುಕೊಂಡು, ಅತ್ಯಾಚಾರದ ಘೋರ ಕ್ರೌರ್ಯಕ್ಕೆ ತುತ್ತಾದ ಬಿಲ್ಕಿಸ್ ಬಾನೋ ಬದುಕು ಇಂದಿಗೂ ನೆಮ್ಮದಿ ಕಂಡಿಲ್ಲ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಇಬ್ಬರು ಅಪರಾಧಿಗಳ ಜೀವಾವಧಿ...

ಡಿಪಿಡಿಪಿ ಕಾಯ್ದೆ: ನಾಗರಿಕರ ಖಾಸಗಿತನದ ರಕ್ಷಣೆಯೋ, ಪತ್ರಿಕಾ ಸ್ವಾತಂತ್ರ್ಯದ...

ಡಿಪಿಡಿಪಿ ಕಾಯ್ದೆ ನಾಗರಿಕರ ಗೌಪ್ಯತೆಯನ್ನು ಕಾಪಾಡುವ ಭರವಸೆ ನೀಡುತ್ತಿದೆ. ಆದರೆ, ಇದೇ ಕಾಯ್ದೆಯು ಪತ್ರಕರ್ತರ ಮೂಲಭೂತ ಹಕ್ಕು ಮತ್ತು ತನಿಖಾ ಪತ್ರಿಕೋದ್ಯಮದ ಮೇಲೆ ಕರಿನೆರಳು ಬೀರಲಿದೆಯೇ? ಆರ್‌ಟಿಐ ದುರ್ಬಲಗೊಳ್ಳುತ್ತಿದೆಯೇ? ಒಂದೆಡೆ ವ್ಯಕ್ತಿಯ ಖಾಸಗಿತನದ...

ಉಳಿತಾಯದ ಪಾಠ ಹೇಳಿದ ಮೋದಿ: ಬೆಲೆ ಏರಿಕೆ, ನಿರುದ್ಯೋಗ;...

ಮಕ್ಕಳ ಶಿಕ್ಷಣ, ಮದುವೆ ಮತ್ತು ಮುಪ್ಪಿನ ಕಾಲಕ್ಕಾಗಿ ಹೊಟ್ಟೆಬಟ್ಟೆ ಕಟ್ಟಿ ಉಳಿತಾಯ ಮಾಡುವುದು ಭಾರತೀಯರ ಸಂಸ್ಕೃತಿಯಲ್ಲೇ ಬಂದಿದೆ. ಅವರಿಗೆ ಉಳಿತಾಯದ ಪಾಠ ಕಲಿಸುವ ಅಗತ್ಯವಿಲ್ಲ; ಬದಲಾಗಿ ಬಡತನದಿಂದ ಹೊರಬಂದ ಕುಟುಂಬಗಳು ಮತ್ತೆ ಸಂಕಷ್ಟಕ್ಕೆ...

ಕ್ಯಾಂಪ್‌ನಲ್ಲಿರುವ ಯುವಕರನ್ನು ಪ್ರತಿದಿನ 18 ಗಂಟೆಗಳ ಕಾಲ ಬಲವಂತವಾಗಿ ದುಡಿಸಿಕೊಳ್ಳಲಾಗುತ್ತಿದೆ. “ಇಲ್ಲಿ ನೀಡುವ ಆಹಾರವನ್ನು ಇಲಿ ಮತ್ತು ಜಿರಳೆಗಳು ಸಹ ತಿನ್ನುವುದಿಲ್ಲ. ಕೆಲಸ ಮಾಡಲು ನಿರಾಕರಿಸಿದರೆ ಕೋಣೆಯೊಳಗೆ ಕಟ್ಟಿಹಾಕಿ ವಿದ್ಯುತ್ ಶಾಕ್ ನೀಡಲಾಗುತ್ತದೆ. ಇಲ್ಲಿರುವ ಮಹಿಳೆಯರ ಮೇಲೂ ದೌರ್ಜನ್ಯ ಎಸಗಲಾಗುತ್ತಿದೆ,” ಎಂದು ಸಂತ್ರಸ್ತ ಯುವಕ ತನ್ನ ಕುಟುಂಬದ ಎದುರು ಕಣ್ಣೀರು ಹಾಕಿದ್ದಾನೆ. ಫೇಸ್‌ಬುಕ್‌ನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಆನ್‌ಲೈನ್ ಮೂಲಕ ಜನರೊಂದಿಗೆ ಸ್ನೇಹ ಬೆಳೆಸಿ, ಬಳಿಕ ಅವರನ್ನು ಕ್ರಿಪ್ಟೋಕರೆನ್ಸಿ ಹೂಡಿಕೆ ನೆಪದಲ್ಲಿ ವಂಚಿಸುವ ಕೆಲಸವನ್ನು ಇವರ ಬಳಿ ಬಲವಂತವಾಗಿ ಮಾಡಿಸಲಾಗುತ್ತಿದೆ. ಗುರಿ ತಲುಪದವರಿಗೆ ತೀವ್ರವಾಗಿ ಹಲ್ಲೆ ಮಾಡಲಾಗುತ್ತಿದ್ದು, ಒಂದು ಚಿಕ್ಕ ಕೋಣೆಯಲ್ಲಿ 20 ಜನರನ್ನು ಕೂಡಿಹಾಕಲಾಗಿದೆ.

ಮ್ಯಾನ್ಮಾರ್, ಕಾಂಬೋಡಿಯಾ, ಲಾವೋಸ್ ಸೇರಿದಂತೆ ನೆರೆಯ ದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಇಂತಹ ಸೈಬರ್ ಕ್ರೈಮ್ ಜಾಲಗಳು, ಡೇಟಾ ಎಂಟ್ರಿ, ಡಿಜಿಟಲ್ ಮಾರ್ಕೆಟಿಂಗ್ ಹೆಸರಿನಲ್ಲಿ ಭಾರತೀಯರನ್ನು ಆಕರ್ಷಿಸಿ ಪಾಸ್‌ಪೋರ್ಟ್ ಕಸಿದು ಗುಲಾಮರಂತೆ ನಡೆಸಿಕೊಳ್ಳುತ್ತಿವೆ. ಕಳೆದ ಜನವರಿ 2026ರಲ್ಲೂ ಇದೇ ರೀತಿಯ ಕಾರ್ಯಾಚರಣೆಯ ಮೂಲಕ ಆಂಧ್ರಪ್ರದೇಶದ 120ಕ್ಕೂ ಹೆಚ್ಚು ಜನರನ್ನು ಮ್ಯಾನ್ಮಾರ್‌ನಿಂದ ರಕ್ಷಿಸಲಾಗಿತ್ತು. ಪ್ರಸ್ತುತ ಭಾರತದ 400ಕ್ಕೂ ಹೆಚ್ಚು ಮಂದಿ ಇಂತಹ ಕ್ಯಾಂಪ್‌ಗಳಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೋಹಿಂಗ್ಯಾ ನರಮೇಧಕ್ಕೆ ಮ್ಯಾನ್ಮಾರ್ ಹೊಣೆ ಎಂದ ಐಸಿಜೆ ತೀರ್ಪಿನ ಅರ್ಥವೇನು?

ರೋಹಿಂಗ್ಯಾ ಅಲ್ಪಸಂಖ್ಯಾತ ಸಮುದಾಯದ ನರಮೇಧಕ್ಕೆ ಮ್ಯಾನ್ಮಾರ್ ಹೊಣೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ...

ವಿಜಯಪುರ |ಜನರ ಕೆಲಸಕ್ಕೆ ಅಲೆದಾಡಿಸುವ ಅಧಿಕಾರಿಗಳ ನಿರ್ಲಕ್ಷ್ಯ ಸಹಿಸಲ್ಲ: ಉಪಲೋಕಾಯುಕ್ತ ಫಣೀಂದ್ರ ಎಚ್ಚರಿಕೆ

ಸಾರ್ವಜನಿಕರ ಅಗತ್ಯ ಸೇವೆಗಳನ್ನು ಸಕಾಲದಲ್ಲಿ ಒದಗಿಸದೇ, ಕರ್ತವ್ಯ ನಿರ್ವಹಣೆಯಲ್ಲಿ ವಿಳಂಬ ಮಾಡಿದರೆ...

ನ್ಯೂಜಿಲೆಂಡ್ ವಿರುದ್ಧ ಟೆಸ್ಟ್‌ಗೆ ಸಿರಾಜ್ ಅವರನ್ನು ಕೈಬಿಟ್ಟಿದ್ದಕ್ಕೆ ವ್ಯಾಪಕ ಅಸಮಾಧಾನ

ನಿಮ್ಮ ಅಗ್ರ ನಾಲ್ವರು ಬೌಲರ್‌ಗಳಲ್ಲಿ ಸಿರಾಜ್‌ಗೆ ಸ್ಥಾನವಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ನನಗೆ...