ಅಸ್ಸಾಂನಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಬಹುತೇಕ ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೂಟ ಮುನ್ನಡೆಯನ್ನು ಸಾಧಿಸಿದೆ. ಈ ನಡುವೆ ವಿರೋಧ ಪಕ್ಷದ ಬಹುತೇಕ ಪ್ರಮುಖ ನಾಯಕರುಗಳು ತೀವ್ರ ಹಿನ್ನಡೆ ಕಂಡಿದ್ದಾರೆ.
ವಿಪಕ್ಷ ನಾಯಕ ದೇಬಬ್ರತ ಸೈಕಿಯಾ, ಅಖಿಲ್ ಗೊಗೊಯ್, ಲುರಿಂಜ್ಯೋತಿ ಗೊಗೊಯ್, ಜಗದೀಶ್ ಭುಯಾನ್ ಮತ್ತು ರಾಜೇನ್ ಗೊಹೈನ್ ಸೇರಿದಂತೆ ಅಸ್ಸಾಂನ ಪ್ರಮುಖ ವಿರೋಧ ಪಕ್ಷದ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಹಿನ್ನಡೆಯಲ್ಲಿದ್ದಾರೆ.
ಇದನ್ನು ಓದಿದ್ದೀರಾ? ಅಸ್ಸಾಂ ಚುನಾವಣೆ | ಕಾಂಗ್ರೆಸ್‌ನಲ್ಲಿ ಸರಣಿ ರಾಜೀನಾಮೆ: ಪ್ರಿಯಾಂಕಾಗೆ ಹೆಚ್ಚಿದ ಚುನಾವಣಾ ಸವಾಲು
ಶಿವಸಾಗರ್ ಜಿಲ್ಲೆಯ ನಜೀರಾ ಸ್ಥಾನದಲ್ಲಿ ಕಾಂಗ್ರೆಸ್ ನಾಯಕ ಸೈಕಿಯಾ 4,967 ಮತಗಳಿಂದ ಹಿನ್ನಡೆಯಲ್ಲಿದ್ದಾರೆ. ಸಿಬ್ಸಾಗರ್ ಸ್ಥಾನವನ್ನು ಉಳಿಸಿಕೊಳ್ಳಲು ಸ್ಪರ್ಧೆಗೆ ಇಳಿದಿದ್ದ ರೈಜೋರ್ ದಳದ ಅಧ್ಯಕ್ಷ ಮತ್ತು ಶಾಸಕ ಅಖಿಲ್ ಗೊಗೊಯ್ ಮೊದಲ ಸುತ್ತಿನ ನಂತರ ಹಿನ್ನಡೆಯಲ್ಲಿದ್ದಾರೆ. ಅಸ್ಸಾಂ ರಾಷ್ಟ್ರೀಯ ಪರಿಷತ್ (ಎಜೆಪಿ) ಅಧ್ಯಕ್ಷೆ ಲುರಿಂಜ್ಯೋತಿ ಗೊಗೊಯ್ ಕೂಡ ತಮ್ಮ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಗಿಂತ ಹಿಂದುಳಿದಿದ್ದರು.
This video cannot be played in your browser. Open the video directly
ಅಸ್ಸಾಂ ವಿಧಾನಸಭೆಯ ಒಟ್ಟು 126 ಸ್ಥಾನಗಳಿಗೆ ಮತ ಎಣಿಕೆ ನಡೆಯುತ್ತಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಬಹುಮತದ ಗಡಿಯನ್ನು ದಾಟಿವೆ. ಅಸ್ಸಾಂನಲ್ಲಿ ಈ ಬಾರಿ ಶೇ. 85.62 ರಷ್ಟು ಐತಿಹಾಸಿಕ ಮತದಾನವಾಗಿತ್ತು.





