ಗಡ್ಕರಿ-ಮೋಶಾ ಆಡಳಿತದಲ್ಲಿ ‘ವೋಟ್‌ ಚೋರಿ’ ಬೆನ್ನಲ್ಲೇ ‘ಪೆಟ್ರೋಲ್ ಚೋರಿ’: ₹62,000 ಕೋಟಿ ದೋಚುವ ಹುನ್ನಾರ!

Date:

ದೇಶಾದ್ಯಂತ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿರುವ ‘ವೋಟ್‌ ಚೋರಿ’ ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಬಿಜೆಪಿಗಾಗಿ ನಡೆದ ಮತದಾರರ ಹಕ್ಕು ಹರಣ, ಮತಗಳತನದ ಎಸ್‌ಐಆರ್‌ ರದ್ದಾಗಬೇಕು, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ರಾಜೀನಾಮೆ ಕೊಡಬೇಕು ಹಾಗೂ ಚುನಾವಣಾ ಅಕ್ರಮಗಳ ಕುರಿತು ಸ್ವತಂತ್ರ ತನಿಖೆ ನಡೆಯಬೇಕು ಎಂದು ವಿಪಕ್ಷಗಳು ಮತ್ತು ನಾಗರಿಕ ಸಂಘಟನೆಗಳು ಒತ್ತಾಯಿಸುತತಿವೆ. ಗಂಭೀರ ಮತಗಳವು ಪ್ರಕರಣದ ಕಾವು ದೇಶಾದ್ಯಂತ ಆಕ್ರೋಶ ಹುಟ್ಟುಹಾಕಿರುವ ಸಮಯದಲ್ಲೇ, ಮೋದಿ-ಅಮಿತ್ ಶಾ-ಗಡ್ಕರಿ ನೇತೃತ್ವದ ಸರ್ಕಾರದಲ್ಲಿ ಮತ್ತೊಂದು ದೈತ್ಯ ಆರ್ಥಿಕ ವಂಚನೆಯ ಹಗರಣ ಮುನ್ನೆಲೆಗೆ ಬಂದಿದೆ. ಜನಸಾಮಾನ್ಯರು ತಮ್ಮ ಬೈಕುಗಳು ಮತ್ತು ಕಾರುಗಳಿಗೆ ದಿನನಿತ್ಯ ತುಂಬಿಸುವ ಪೆಟ್ರೋಲ್‌ನಲ್ಲಿಯೇ ಅವರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ ಎಂಬ ಸ್ಫೋಟಕ ಸತ್ಯ ಹೊರಬಿದ್ದಿದೆ. 20% ಎಥೆನಾಲ್ ಮಿಶ್ರಣದ ಮುಖವಾಡ ಧರಿಸಿ ಜನಸಾಮಾನ್ಯರ ರಕ್ತಹೀರುವ ಈ ‘ಪೆಟ್ರೋಲ್ ಚೋರಿ‘ ನೀತಿಯು ಕೇಂದ್ರ ಸರ್ಕಾರದ ಭ್ರಷ್ಟ ಮುಖವನ್ನು ಮತ್ತೊಮ್ಮೆ ಬಯಲು ಮಾಡಿದೆ.

- Advertisement -

E20 ಹೆಸರಿನಲ್ಲಿ E31: ಕರ್ನಾಟಕದ ವರದಿಯಿಂದ ಬಯಲಾಯ್ತು ತೈಲ ದಂಧೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಗಲಕೋಟೆ | ಉತ್ಪಾದನೆ ಕುಸಿತ, ಭರ್ಜರಿ ಬೇಡಿಕೆ: ದಾಖಲೆ...

ಮುಂಗಾರು ಮಳೆಯ ಕೊರತೆ, ಭೀಕರ ಬರದ ಪರಿಣಾಮ ಹೊಲಗಳಲ್ಲಿ ಮೆಕ್ಕೆಜೋಳದ ಇಳುವರಿ ಕುಸಿದಿದೆ. ಆದರೆ, ಮಾರುಕಟ್ಟೆಯಲ್ಲಿ ಮಾತ್ರ ಮೆಕ್ಕೆಜೋಳಕ್ಕೆ ಚಿನ್ನದ ಬೆಲೆ ಬಂದಿದೆ! ಕಡಿಮೆ ಬೆಲೆಯಿಂದ ವರ್ಷಗಟ್ಟಲೆ ನಷ್ಟ ಅನುಭವಿಸಿದ್ದ ಬೆಳೆಗಾರರಿಗೆ ಈ...

ಏಳು ಕೊಲೆಗಳು ಮತ್ತು ಮನುಷ್ಯ ಮೃಗ!: ಕ್ರೋಧ, ಕ್ರೌರ್ಯ,...

ಮನುಷ್ಯತ್ವದ ಮುಖವಾಡ ಕಳಚಿದಾಗಒಳಗಿನ ಮೃಗ ಎಚ್ಚರಗೊಳ್ಳುತ್ತದೆ…ವಿವೇಕದ ಬೆಳಕು ಆರಿದಾಗಕ್ರೋಧವೇ ದಾರಿದೀಪವಾಗುತ್ತದೆ… ಬುದ್ಧಿಯೇ ಅದರ ಆಯುಧವಾದಾಗಸೇಡಿನ ಯೋಚನೆ ಸಂಚಾಗುತ್ತದೆ…ಪರರ ನೋವಿನಲ್ಲಿ ಸುಖ ಕಾಣುವ ಮನಸ್ಸುಕ್ರೌರ್ಯದ ಪರಮಾವಧಿ ತಲುಪುತ್ತದೆ… ಸುತ್ತಲಿನವರ ಮೌನ, ನಿರ್ಲಕ್ಷ್ಯಕೆಲವೊಮ್ಮೆ ಅಪಾಯಕ್ಕೆ ಆಹ್ವಾನವಾಗುತ್ತದೆ…ಕಾಲ ಮಿಂಚುವ ಮುನ್ನ...

ಮೀಸಲಾತಿ ಬಗ್ಗೆ ಮಾತನಾಡುವ ಮೊದಲು ತಮ್ಮ ಕುಟುಂಬದ ರಾಜಕೀಯ...

ಮೂರು ತಲೆಮಾರುಗಳಿಂದ ರಾಜಕೀಯ ಅಧಿಕಾರ ಅನುಭವಿಸುತ್ತಿರುವ ದೇವೇಗೌಡರ ಕುಟುಂಬಕ್ಕೆ ಇತರರ ಮೀಸಲಾತಿಯ ಬಗ್ಗೆ ಮಾತನಾಡುವ ನೈತಿಕ ಅರ್ಹತೆ ಇದೆಯೇ? “ಮೀಸಲು ಅನುಕೂಲ ಪಡೆದವರೇ ಮತ್ತೆ ಮತ್ತೆ ಪಡೆಯುತ್ತಿದ್ದಾರೆ, ನನ್ನ ಜನ ಅನಾಥರಾಗಿದ್ದಾರೆ” ಎಂಬ ಕೇಂದ್ರ...

ಕರ್ನಾಟಕ ಸರ್ಕಾರದ ಆಹಾರ, ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರು ಇತ್ತೀಚೆಗೆ ಬಿಡುಗಡೆ ಮಾಡಿದ ಪ್ರಯೋಗಾಲಯದ ವರದಿಗಳು ದೇಶದ ಇಂಧನ ಮಾರುಕಟ್ಟೆಯ ಕರಾಳ ಸತ್ಯವನ್ನು ಬಹಿರಂಗಪಡಿಸಿವೆ. ರಾಜ್ಯಾದ್ಯಂತ ಸಂಗ್ರಹಿಸಿದ 63 ಪೆಟ್ರೋಲ್ ಮಾದರಿಗಳ ಪೈಕಿ ಸುಮಾರು 80%ರಷ್ಟು ಮಾದರಿಗಳಲ್ಲಿ ನಿಗದಿತ ಮಿತಿಗಿಂತ ಅತ್ಯಂತ ಹೆಚ್ಚಿನ ಪ್ರಮಾಣದ ಎಥೆನಾಲ್ ಬೆರೆಸಿರುವುದು ಪತ್ತೆಯಾಗಿದೆ. ಕೇಂದ್ರ ಸರ್ಕಾರವು ಇಂಧನದಲ್ಲಿ ಗರಿಷ್ಠ 20% (E20) ಎಥೆನಾಲ್ ಮಿಶ್ರಣಕ್ಕೆ ಮಾತ್ರ ಅನುಮತಿ ನೀಡಿದ್ದರೂ, ಮಾರುಕಟ್ಟೆಯಲ್ಲಿ ಇಂಡಿಯನ್ ಆಯಿಲ್ -31.2%, ಹಿಂದೂಸ್ತಾನ್ ಪೆಟ್ರೋಲಿಯಂ – 30.5%, ಭಾರತ್ ಪೆಟ್ರೋಲಿಯಂ – 26.5%, ನಯಾರಾ – 26.1% ಮತ್ತು ಶೆಲ್ – 25.5% ಸೇರಿದಂತೆ ಬೃಹತ್ ಕಂಪನಿಗಳ ಪಂಪ್‌ಗಳಲ್ಲಿ 31.2%ವರೆಗೆ ಎಥೆನಾಲ್ ಬೆರೆಸಿರುವುದು ಸಾಬೀತಾಗಿದೆ. ಇದು ನಿಗದಿತ ಮಿತಿಗಿಂತ ಬರೋಬ್ಬರಿ 56%ರಷ್ಟು ಹೆಚ್ಚಿನ ಅಕ್ರಮ ಮಿಶ್ರಣವನ್ನು ಬಹಿರಂಗಗೊಳಿಸಿದೆ. ಸಾರ್ವಜನಿಕರ ಜೇಬಿನ ಹಗಲು ದರೋಡೆ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿ ಒದಗಿಸಿದೆ.

ಆದರೆ, ಎಂದಿನಂತೆ ತನ್ನ ಆಡಳಿತಾತ್ಮಕ ವೈಫಲ್ಯವನ್ನು ಮುಚ್ಚಿಹಾಕಲು ಹೊರಟ ಕೇಂದ್ರ ಪೆಟ್ರೋಲಿಯಂ ಸಚಿವಾಲಯವು, ಬೋಗಸ್ ಸಮರ್ಥನೆಗಳನ್ನು ನೀಡುತ್ತಿದೆ. 893 ಮಾದರಿಗಳಲ್ಲಿ ಯಾವುದೇ ಲೋಪವಿಲ್ಲ ಎಂದು ಕೈತೊಳೆಯಲು ಯತ್ನಿಸುತ್ತಿದೆ. ರಾಜ್ಯ ಸರ್ಕಾರದ ಪರೀಕ್ಷಾ ವಿಧಾನಗಳನ್ನೇ ಪ್ರಶ್ನಿಸುವ ಮೂಲಕ ಜನರನ್ನು ದಾರಿ ತಪ್ಪಿಸಲು ಹವಣಿಸುತ್ತಿದೆ. ಮಾತ್ರವಲ್ಲದೆ, ತನ್ನದೇ ಸಾರ್ವಜನಿಕ ತೈಲ ಕಂಪನಿಗಳು ಮಾಡುತ್ತಿರುವ ಈ ಅಕ್ರಮದ ವಿರುದ್ಧ ತನಿಖೆ ನಡೆಸಲು ಹಿಂಜರಿಯುತ್ತಿದೆ. ಇದು ಮೋದಿ ಸರ್ಕಾರದ ಮೇಲಿನ ಸಾರ್ವಜನಿಕ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ.

ವಾರ್ಷಿಕ ₹62,000 ಕೋಟಿಯ ಆರ್ಥಿಕ ಹೊರೆ: ವಾಹನ ಸವಾರರ ಜೇಬಿಗೆ ನೇರ ಕತ್ತರಿ

ಕೇಂದ್ರದ ಈ ಅವೈಜ್ಞಾನಿಕ ನೀತಿ ಮತ್ತು ಇಂಧನ ಕಂಪನಿಗಳ ಅಕ್ರಮಗಳಿಂದಾಗಿ ದೇಶದ ಕೋಟ್ಯಂತರ ವಾಹನ ಸವಾರರ ಮೇಲೆ ಬಿದ್ದಿರುವ ಆರ್ಥಿಕ ಹೊರೆ ಅಷ್ಟಿಷ್ಟಲ್ಲ. ನೀತಿ ಆಯೋಗದ 2021ರ ವರದಿಯಲ್ಲೇ 20% ಎಥೆನಾಲ್ ಮಿಶ್ರಣದಿಂದ ವಾಹನಗಳ ಮೈಲೇಜ್ 6ರಿಂದ 7%ರಷ್ಟು ಕುಸಿಯುತ್ತದೆ ಎಂದು ಸ್ಪಷ್ಟವಾಗಿ ಒಪ್ಪಿಕೊಳ್ಳಲಾಗಿತ್ತು.

ಹೀಗಿರುವಾಗ, ಎಥೆನಾಲ್ ಪ್ರಮಾಣ 30%ಗಿಂತಲೂ ಹೆಚ್ಚಿದ್ದಾಗ, ಮೈಲೇಜ್ ಇನ್ನಷ್ಟು ಭೀಕರವಾಗಿ ಕುಸಿದು, ರಬ್ಬರ್ ಗ್ಯಾಸ್ಕೆಟ್‌ಗಳು,  ಎಂಜಿನ್‌ನ ಸೀಲುಗಳು, ಪೈಪ್‌ಗಳು ಹಾಗೂ ಆಂತರಿಕ ಬಿಡಿಭಾಗಗಳು ಬೇಗನೇ ಹಾಳಾಗುತ್ತವೆ. ದೇಶದಲ್ಲಿ ವಾರ್ಷಿಕವಾಗಿ ಮಾರಾಟವಾಗುವ 6,200 ಕೋಟಿ ಲೀಟರ್ ಪೆಟ್ರೋಲ್ ಲೆಕ್ಕಾಚಾರದಲ್ಲಿ, ಈ ಮೈಲೇಜ್ ನಷ್ಟದಿಂದಾಗಿಯೇ ದೇಶದ ಸಾರ್ವಜನಿಕರು ವರ್ಷಕ್ಕೆ ಅಂದಾಜು 62,000 ಕೋಟಿ ರೂ.ಗೂ ಅಧಿಕ ಹೆಚ್ಚುವರಿ ಹಣವನ್ನು ಇಂಧನಕ್ಕಾಗಿ ವ್ಯಯಿಸಬೇಕಾಗಿದೆ.

ಕಚ್ಚಾ ತೈಲ ಆಮದು ಕಡಿಮೆ ಮಾಡಿ 1.44 ಲಕ್ಷ ಕೋಟಿ ರೂ. ವಿದೇಶಿ ವಿನಿಮಯ ಉಳಿಸಿದ್ದೇವೆ ಎಂದು ಬಿಲ್ಡಪ್ ಕೊಡುವ ಮೋದಿ ಸರ್ಕಾರ, ಆ ಉಳಿತಾಯದ ಪೈಸೆ ಲಾಭವನ್ನೂ ಸಾಮಾನ್ಯ ಗ್ರಾಹಕನಿಗೆ ತಲುಪಿಸಿಲ್ಲ. ಬದಲಾಗಿ, ಇಂಧನ ದರವನ್ನು ಗಗನಕ್ಕೇರಿಸಿ, ಮೈಲೇಜ್ ಕಡಿತಗೊಳಿಸಿ, ದಿನನಿತ್ಯ ಕಷ್ಟಪಟ್ಟು ಬದುಕು ಕಟ್ಟಿಕೊಳ್ಳುವ ಆಟೋ ಚಾಲಕರು, ಕ್ಯಾಬ್‌ ಡ್ರೈವರ್‌ಗಳು, ಡೆಲಿವರಿ ಬಾಯ್‌ಗಳು ಹಾಗೂ ಜನಸಾಮಾನ್ಯರ ದುಡಿಮೆಯನ್ನು ಇಂಧನ ಮಾಫಿಯಾ ಮತ್ತು ಕಾರ್ಪೊರೇಟ್ ಮಿತ್ರರ ಜೇಬಿಗೆ ಹರಿಸಲಾಗುತ್ತಿದೆ.

ಗಡ್ಕರಿ ಕುಟುಂಬದ ಉದ್ಯಮ ಮತ್ತು ಅಮಿತ್ ಶಾ ನೀತಿ: ಭ್ರಷ್ಟ ಹಿತಾಸಕ್ತಿ ಜಾಲ

ಈ ಇಂಧನ ಹಗರಣದ ಕರಾಳ ಒಳಮರ್ಮವು ಕೇಂದ್ರದ ಪ್ರಭಾವಿ ಸಚಿವರಾದ ನಿತಿನ್ ಗಡ್ಕರಿ ಮತ್ತು ಅಮಿತ್ ಶಾ ಅವರ ನೇರ ಪಾತ್ರ ಮತ್ತು ಹಿತಾಸಕ್ತಿಗಳನ್ನು ಒಳಗೊಂಡಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಅಂದಹಾಗೆ, ನಿತಿನ್ ಗಡ್ಕರಿ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿದ್ದರೂ ಅವರು ತಮ್ಮ ಸಚಿವಾಲಯದ ಕಾರ್ಯ-ನಿರ್ಧಾರಗಳಿಂದ ಹೆಚ್ಚಾಗಿ ಇಂಧನ ಸಚಿವಾಲಯದ ವಕ್ತಾರಿಕೆಯಲ್ಲಿ ತೊಡಗಿದ್ದಾರೆ. ಯಾಕೆಂದರೆ, ಗಡ್ಕರಿ ಪುತ್ರರಾದ ಸಾರಂಗ್ ಗಡ್ಕರಿ ಮತ್ತು ನಿಖಿಲ್ ಗಡ್ಕರಿ ಅವರು ಎಥೆನಾಲ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ‘ಮಾನಸ್ ಅಗ್ರೋ ಇಂಡಸ್ಟ್ರೀಸ್’ ಮತ್ತು ‘ಸಿಯಾನ್ ಅಗ್ರೋ ಇಂಡಸ್ಟ್ರೀಸ್’ ಕಂಪನಿಗಳನ್ನು ನಡೆಸುತ್ತಿದ್ದಾರೆ. ಪೆಟ್ರೋಲ್‌ನಲ್ಲಿ ಎಥನಾಲ್ ಬೆರಕೆಯಾದಷ್ಟೂ ಹೆಚ್ಚು ಲಾಭ ಗಡ್ಕರಿ ಪುತ್ರರ ಜೇಬು ಸೇರುತ್ತದೆ.

ಅಂತೆಯೇ, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ದೇಶದ ಎಲ್ಲ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಎಥನಾಲ್ ಉತ್ಪಾದನಾ ಕೇಂದ್ರಗಳನ್ನಾಗಿ ಪರಿವರ್ತಿಸಿ, ಎಥೆನಾಲ್ ಪೂರೈಕೆಯ ಪಾಲನ್ನು 25%ಗೆ ಹೆಚ್ಚಿಸುವ ಬೃಹತ್ ಯೋಜನೆ ರೂಪಿಸಿದ್ದಾರೆ. ರೈತರ ಹೆಸರಿನಲ್ಲಿ ರೂಪಿಸಲಾಗುತ್ತಿರುವ ಈ ಬೃಹತ್ ಆರ್ಥಿಕ ಯೋಜನೆಯ ನಿಜವಾದ ತಲುಪುವುದು ಎಥನಾಲ್ ಕುಳಗಳ ಜೇಬನ್ನು ಎಂಬುದರಲ್ಲಿ ಅನುಮಾನವೇ ಇಲ್ಲ.

ಇದೆಲ್ಲಕ್ಕೂ ಮೂಲ ಕಾರಣ, 2018ರ ಜೈವಿಕ ಇಂಧನ ನೀತಿಗೆ ತಿದ್ದುಪಡಿ ಮಾಡಿ, 2030ರ ವೇಳೆಗೆ ದೇಶಾದ್ಯಂತ ಚಾಲ್ತಿಗೆ ಬರಬೇಕಿದ್ದ E20 ಗುರಿಯನ್ನು 2025-26ರಲ್ಲೇ ತರಾತುರಿಯಲ್ಲಿ ಜಾರಿಗೊಳಿಸಿದ ಮೋದಿ ಅವರ ಕುಕೃತ್ಯ. ವಿದೇಶಿ ವಿನಿಮಯ ಉಳಿತಾಯದ ಕ್ರೆಡಿಟ್ ಪಡೆದುಕೊಳ್ಳಲು ಪೋಸ್ಟರ್‌ಗಳನ್ನು ಹಾಕಿಕೊಳ್ಳುವ ಪ್ರಧಾನಿ ಮೋದಿ,  ಈಗ ಪೆಟ್ರೋಲ್‌ನಲ್ಲಿ 31%ರಷ್ಟು ಕಲಬೆರಕೆ ನಡೆದು ಸಾರ್ವಜನಿಕರ ಜೇಬಿಗೆ 62,000 ಕೋಟಿ ರೂ. ಕನ್ನ ಹಾಕುತ್ತಿರುವ ಖದೀಮರನ್ನು ರೆಡ್‌ಕಾರ್ಪೆಟ್‌ ಹಾಸಿದ್ದಾರೆ.

ಈ ಲೇಖನ ಓದಿದ್ದೀರಾ?: ಮೀಸಲಾತಿ ಬಗ್ಗೆ ಮಾತನಾಡುವ ಮೊದಲು ತಮ್ಮ ಕುಟುಂಬದ ರಾಜಕೀಯ ಇತಿಹಾಸವನ್ನೊಮ್ಮೆ ನೋಡಿಕೊಳ್ಳಲಿ!

ಮತದಾರರ ಪಟ್ಟಿಯಲ್ಲಿ ಜನರ ಪ್ರಜಾಸತ್ತಾತ್ಮಕ ಹಕ್ಕನ್ನು ಕಸಿದುಕೊಂಡ ‘ವೋಟ್ ಚೋರಿ’ ಎಂಬ ಪಾಪದ ಕೃತ್ಯ ಎಸಗುತ್ತಿರುವ ಮೋದಿ ಸರ್ಕಾರ, ಈಗ ಇಂಧನ ಪಂಪ್‌ಗಳಲ್ಲಿ ‘ಪೆಟ್ರೋಲ್ ಚೋರಿ’ ಮಾಡುವ ಮೂಲಕ ಜನರ ದೈನಂದಿನ ಜೀವನೋಪಾಯವನ್ನೂ ಹರಣ ಮಾಡುತ್ತಿದೆ.

ಕರ್ನಾಟಕದಲ್ಲಿ ಪತ್ತೆಯಾಗಿರುವ ಈ E31 ಇಂಧನ ವಂಚನೆಯು ಕೇವಲ ಒಂದು ರಾಜ್ಯದ ಸಮಸ್ಯೆ ಮಾತ್ರವಲ್ಲ. ಇದು ಇಡೀ ದೇಶದ ಕೋಟ್ಯಂತರ ವಾಹನ ಮಾಲೀಕರ ಜೇಬಿಗೆ ಹಾಕುತ್ತಿರುವ ಕನ್ನ. ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳು ತಕ್ಷಣವೇ ತಮ್ಮ ಜಾರಿಕೆಯ ಮಾತುಗಳನ್ನು ನಿಲ್ಲಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿ ಪೆಟ್ರೋಲ್ ಬಂಕ್‌ನಲ್ಲೂ ತಾವು ಮಾರಾಟ ಮಾಡುತ್ತಿರುವ ಇಂಧನದಲ್ಲಿರುವ ಎಥೆನಾಲ್ ಪ್ರಮಾಣವನ್ನು ಕಡ್ಡಾಯವಾಗಿ ಗ್ರಾಹಕರಿಗೆ ಕಾಣಿಸುವಂತೆ ಪ್ರದರ್ಶಿಸುವಂತೆ ಮಾಡಬೇಕು. ಕಳಪೆ ಮತ್ತು ಅತಿಯಾದ ಎಥೆನಾಲ್ ಇಂಧನದಿಂದ ಎಂಜಿನ್ ಹಾನಿಗೊಳಗಾದ ವಾಹನ ಮಾಲೀಕರಿಗೆ ತೈಲ ಕಂಪನಿಗಳಿಂದಲೇ ದಂಡ ಮತ್ತು ಸೂಕ್ತ ಪರಿಹಾರವನ್ನು ಭರಿಸಬೇಕು. ಜೊತೆಗೆ ಗಡ್ಕರಿ ಕುಟುಂಬ ಸೇರಿದಂತೆ ಎಥನಾಲ್ ಪೂರೈಕೆದಾರ ಖಾಸಗಿ ಕಂಪನಿಗಳಿಗೂ ಮತ್ತು ತೈಲ ಕಂಪನಿಗಳು ಅಕ್ರಮವಾಗಿ ಹೆಚ್ಚುವರಿ ಎಥನಾಲ್ ಖರೀದಿಸುತ್ತಿರುವುದರ ಹಿಂದಿನ ಹುನ್ನಾರದ ಕುರಿತು ಉನ್ನತ ಮಟ್ಟದ ಸ್ವತಂತ್ರ ತನಿಖೆಯಾಗಬೇಕು.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಾಯುಮಾಲಿನ್ಯದಿಂದ ಲಕ್ಷಾಂತರ ಸಾವು: ಮೋದಿ ಸರ್ಕಾರದ ‘ನಿರಾಕರಣೆ’ ಧೋರಣೆಗೆ ಕಾಂಗ್ರೆಸ್ ತೀವ್ರ ಆಕ್ರೋಶ

ದೇಶದಲ್ಲಿ ಉಲ್ಬಣಿಸುತ್ತಿರುವ ವಾಯುಮಾಲಿನ್ಯ ಮತ್ತು ಅದರಿಂದ ಉಂಟಾಗುತ್ತಿರುವ ಅಪಾರ ಪ್ರಾಣಹಾನಿಯ ಕುರಿತು...

ಮಗುವಿನ ಜೀವನಾಂಶ ಕೇಳುವ ತಾಯಿ ‘ಗೋಲ್ಡ್‌ ಡಿಗ್ಗರ್‌’ ಅಲ್ಲ: ಮದ್ರಾಸ್ ಹೈಕೋರ್ಟ್‌ ಅಸಮಾಧಾನ

ತನ್ನ ಮಗುವಿನ ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಮತ್ತು ಪಾಲನೆಗೆ ಹಣ ಕೇಳುವ...

ಬಳ್ಳಾರಿ | ₹25 ಲಕ್ಷ ಸಾಲದ ಆಸೆಗೆ ಬಿದ್ದು ₹49.90 ಲಕ್ಷ ಕಳೆದುಕೊಂಡ ವ್ಯಾಪಾರಿ

ವ್ಯವಹಾರದಲ್ಲಿನ ನಷ್ಟ ಸರಿದೂಗಿಸಲು ₹25 ಲಕ್ಷ ಸಾಲ ಪಡೆಯಲು ಮುಂದಾದ 52...

‘ಕೂಡಲೇ ಕ್ರಮ ಕೈಗೊಳ್ಳಿ’: ಚೀನಾ ಅತಿಕ್ರಮಣಕ್ಕೆ ಕೇಂದ್ರಕ್ಕೆ ಅರುಣಾಚಲ ಸಂಘಟನೆಗಳ ಆಗ್ರಹ

ಅರುಣಾಚಲ ಪ್ರದೇಶದಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಅತಿಕ್ರಮಣ ಮಾಡುತ್ತಿದೆ...