ಅದಾನಿ – ಸೆಬಿ ಮುಖ್ಯಸ್ಥರ ಬಂಡವಾಳ ಬಯಲು ಮಾಡಿದ ಹಿಂಡೆನ್‌ಬರ್ಗ್ ಆಂಡರ್ಸನ್ ಯಾರು ಗೊತ್ತೆ?

Date:

2023ರ ಜನವರಿ 24ರಿಂದು ಅದಾನಿ ಸಂಸ್ಥೆಯ ಅಕ್ರಮ ವಹಿವಾಟಿನ ಬಗ್ಗೆ ಹಿಂಡೆನ್‌ಬರ್ಗ್‌ 32,000 ಪದಗಳ ವರದಿಯ ಆರೋಪ ಪ್ರಕಟಿಸಿದ ನಂತರ ಅದಾನಿ ಸಮೂಹದ ಕಂಪನಿಗಳ ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿ 8 ಲಕ್ಷ ರೂ.ಗೂ ಹೆಚ್ಚು ನಷ್ಟ ಉಂಟಾಗಿತ್ತು. ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಸಂಪತ್ತಿನಲ್ಲಿ 11.8 ಲಕ್ಷ ಕೋಟಿ ರೂ. ಕರಗಿತ್ತು. ಮಾರುಕಟ್ಟೆ ನಷ್ಟಕ್ಕೆ ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹ ನಡೆಸಿರುವ ಅವ್ಯವಹಾರಗಳೇ ಇದಕ್ಕೆ ಕಾರಣ ಎಂದು ಹಿಂಡೆನ್‌ಬರ್ಗ್‌ ದೂರಿತ್ತು.

ಕಳೆದ ವರ್ಷ ಜನವರಿ 24 ರಂದು ಅದಾನಿ ಸಂಸ್ಥೆಯ ವಂಚನೆಯನ್ನು ಬಯಲು ಮಾಡಿದ್ದ ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್‌ ಕಂಪನಿ ಹಿಂಡೆನ್‌ಬರ್ಗ್ ಇದೀಗ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ(ಸೆಬಿ)ಯ ಮುಖ್ಯಸ್ಥರಾದ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ವಿರುದ್ಧ ಗಂಭೀರ ಆರೋಪ ಮಾಡಿದೆ. ಗೌತಮ್‌ ಅದಾನಿ ಸಮೂಹದ ಸಾಗರೋತ್ತರ ಹೂಡಿಕೆಯಲ್ಲಿ ಮಾಧವಿ ಮತ್ತು ಅವರ ಪತಿ 10 ಮಿಲಿಯನ್‌ ಡಾಲರ್‌ವರೆಗೂ ಪಾಲುದಾರಿಕೆ ಹೊಂದಿದ್ದಾರೆ ಎಂದು ಹಿಂಡೆನ್‌ಬರ್ಗ್ ತನ್ನ ವರದಿಯಲ್ಲಿ ತಿಳಿಸಿದೆ. ಅಷ್ಟಕ್ಕೂ ಹಿಂಡೆನ್‌ಬರ್ಗ್‌ ಸಂಶೋಧನೆಯ ವರದಿಯನ್ನು ಬಿಡುಗಡೆ ಮಾಡುತ್ತಿರುವುದು ನಾಥನ್‌ ಆಂಡರ್ನ್‌ನ್‌ ಮತ್ತು ಅವರ ತಂಡ. ಹಿಂಡೆನ್‌ಬರ್ಗ್ ರಿಸರ್ಚ್ ಅಮೆರಿಕದ ಶಾರ್ಟ್‌ ಸೆಲ್ಲರ್‌ ಸಂಸ್ಥೆಯಾಗಿದ್ದು, ಇದರ ಸಂಸ್ಥಾಪಕ ಕೂಡ ನಾಥನ್ ಆಂಡರ್ಸನ್. ಈತನ ಜೀವನ ಹಾಗೂ ವೃತ್ತಿ ಬದುಕು ಕೂಡ ಸ್ವಾರಸ್ಯಕರವಾಗಿದೆ.

39 ವರ್ಷದ ನಾಥನ್ ಆಂಡರ್ಸನ್ ಜನಿಸಿದ್ದು, 1985ರಲ್ಲಿ. ಅಮೆರಿಕದ ಕನಕ್ಟಿಕಟ್‌ ರಾಜ್ಯದ ಸಣ್ಣ ಪಟ್ಟಣದಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ ಜನಿಸಿದರು. ಆಂಡರ್ಸನ್ ಪೋಷಕರು ಹಾಗೂ ಖಾಸಗಿ ಮಾಹಿತಿ ಕೂಡ ಗೌಪ್ಯವಾಗಿದೆ. ನಾಥನ್ ಆಂಡರ್ಸನ್‌ ಒಬ್ಬ ಚಾರ್ಟರ್ಡ್‌ ಅಕೌಂಟೆಂಟ್. ಅಮೆರಿಕದ ಕನೆಕ್ಟಿಕಟ್‌ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಬಿಸಿನೆಸ್‌ ವಿಷಯದಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ. ಜೊತೆಗೆ ಚಾರ್ಟರ್ಡ್‌ ಅಕೌಂಟೆಂಟ್ ವೃತ್ತಿಯ ಸಿಎಐಎ, ಸಿಎಫ್‌ಎ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ. ನಾಥನ್‌ ಮೊದಲು ಫ್ಯಾಕ್ಟ್‌ಸೆಟ್‌ ರೀಸರ್ಚ್‌ ಸಿಸ್ಟಮ್ಸ್‌ ಇಂಕ್‌ ಎಂಬ ಸಂಸ್ಥೆಯಲ್ಲಿ ತಮ್ಮ ವೃತ್ತಿ ಆರಂಭಿಸಿದರು.

2004 ಮಾರ್ಚ್ ಮತ್ತು 2005 ಜನವರಿ ನಡುವೆ ಇಸ್ರೇಲಿನ ಮಾಧ್ಯಮ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಬಳಿಕ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದರು. ನಂತರದಲ್ಲಿ ಕ್ಲಾರಿಟಿಸ್ಪ್ರಿಂಗ್‌ ಎಂಬ ಹಣಕಾಸು ಕಂಪನಿಯನ್ನು ಸ್ಥಾಪಿಸಿದ್ದರು. ಬಳಿಕ 2018ರಲ್ಲಿ ಹಿಂಡೆನ್‌ಬರ್ಗ್‌ ರೀಸರ್ಚ್‌ ಸಂಸ್ಥೆಯನ್ನು ಹುಟ್ಟು ಹಾಕಿದರು. ಇಸ್ರೇಲಿನಲ್ಲಿ ಹಣಕಾಸು ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಮುನ್ನ ಕೆಲ ಕಾಲ ಆಂಬುಲೆನ್ಸ್‌ ಚಾಲಕನಾಗಿಯೂ ಸೇವೆಯಲ್ಲಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹಣಕಾಸಿನ ಅಕ್ರಮದ ಬಗ್ಗೆ ವಿವಿಧ ರೀತಿಯ ತನಿಖೆಗಳು

ಹಿಂಡೆನ್‌ಬರ್ಗ್‌ ರೀಸರ್ಚ್‌ ಸಂಸ್ಥೆ ಹಣಕಾಸು ಕುರಿತ ವಿಧಿ ವಿಜ್ಞಾನದಲ್ಲಿ ಪರಿಣತಿ ಗಳಿಸಿದೆ. ಲೆಕ್ಕಪರಿಶೋಧಕ ಅಕ್ರಮಗಳು, ಅನೈತಿಕ ಹಣಕಾಸಿನ ವ್ಯವಹಾರಗಳು, ಈಕ್ವೆಟಿ ಮತ್ತು ಬಹಿರಂಗಪಡಿಸದ ಹಣಕಾಸಿನ ಸಮಸ್ಯೆಗಳು ಅಥವಾ ವಹಿವಾಟುಗಳನ್ನು ತನಿಖೆ ಮಾಡುತ್ತದೆ ಹಾಗೂ ವಿಶ್ಲೇಷಿಸುತ್ತದೆ. ಕೆಲವು ಕಂಪನಿಗಳ ಕುರಿತಾದ ಹಿಂಡೆನ್‌ಬರ್ಗ್‌ ವರದಿಯು ಆ ಕಂಪನಿಗಳ ಮಾರುಕಟ್ಟೆ ಮೌಲ್ಯವು ಕಡಿಮೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಊಹಿಸುವುದರ ಜೊತೆ ಅದರ ಸ್ಥಾನಮಾನದ ಬಗ್ಗೆಯೂ ಮಾಹಿತಿಯನ್ನು ಒದಗಿಸುತ್ತದೆ. 2017 ರಿಂದ, ಹಿಂಡೆನ್‌ಬರ್ಗ್ ಯುನೈಟೆಡ್ ಸ್ಟೇಟ್ಸ್ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್‌ಗೆ 16 ವರದಿಗಳನ್ನು ನೀಡಿತ್ತು. ಜೊತೆಗೆ ಖಾಸಗಿ ಕಂಪನಿಗಳಾದ ಅಫೆರಿಯಾನಾ, ಪರ್ಶಿಂಗ್ ಗೋಲ್ಡ್, ನಿಕೋಲಾ ಮತ್ತು ವಿವಿಧ ಪ್ರದೇಶಗಳು ಮತ್ತು ದೇಶಗಳಲ್ಲಿನ ಇತರ ಕಂಪನಿಗಳು ಅಕ್ರಮ ವಹಿವಾಟುಗಳು, ಹಣಕಾಸು ವಂಚನೆ ಇತ್ಯಾದಿಗಳನ್ನು ಬಯಲಿಗೆಳದಿದೆ.

ಹಿಂಡೆನ್‌ಬರ್ಗ್‌ 2020ರಲ್ಲಿ ಅಮೆರಿಕದ ನಿಕೋಲಾ ಆಟೊಮೊಬೈಲ್‌ ಕಂಪನಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ವರದಿ ಪ್ರಕಟಿಸಿದ ಬಳಿಕ ಕಂಪನಿಯ ಭ್ರಷ್ಟಾಚಾರ ಸಾಬೀತಾಗಿ ಸಂಸ್ಥೆಯ ಸ್ಥಾಪಕ ಟ್ರೆವರ್‌ ಮಿಲ್ಟನ್‌ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ಅಮೆರಿಕದ ತನಿಖಾ ಸಂಸ್ಥೆಗಳು ಟ್ರೆವರ್‌ ಮಿಲ್ಟನ್‌ನನ್ನು ಬಂಧಿಸಿತ್ತು. ಕಂಪನಿಗೆ ಸಂಬಂಧಹೊಂದಿದವರು ತಮಗೆ ಸಹಕರಿಸಿದರು ಎಂಬ ಮಾಹಿತಿಯನ್ನು ಆಂಡರ್ಸನ್‌ ನಂತರದಲ್ಲಿ ತಿಳಿಸಿದ್ದರು. ಚೀನಾದ ವಿನ್ಸ್‌ ಫೈನಾನ್ಸ್‌, ಚೀನಾ ಮೆಟಲ್‌ ರಿಸೋರ್ಸಸ್‌ ಯುಟಿಲೈಸೇಶನ್‌ ಸೇರಿದಂತೆ ಹತ್ತಾರು ಕಂಪನಿಗಳ ವಿರುದ್ಧ ವರದಿಗಳನ್ನು ಹಿಂಡೆನ್‌ಬರ್ಗ್‌ ಪ್ರಕಟಿಸಿದೆ. ಟೆಸ್ಲಾ ಕಂಪನಿಯೂ ತನ್ನ ತಂತ್ರಜ್ಞಾನದ ಬಗ್ಗೆ ಸುಳ್ಳು ಹೇಳಿದೆ ಎಂದು ಆರೋಪಿಸಿತ್ತು. ಕೊನೆಗೆ ಟೆಸ್ಲಾ ಅಮೆರಿಕದ ಸೆಕ್ಯುರಿಟೀಸ್‌ ಮತ್ತು ಎಕ್ಸ್‌ಚೇಂಜ್‌ ಕಮಿಷನ್‌ನಲ್ಲಿ 125 ದಶಲಕ್ಷ ಡಾಲರ್‌ ನೀಡಿ ಭ್ರಷ್ಟಾಚಾರ ಆರೋಪಗಳನ್ನು ಇತ್ಯರ್ಥಪಡಿಸಿತ್ತು.

ಈ ಸುದ್ದಿ ಓದಿದ್ದೀರಾ? ಅದಾನಿ ಗ್ರೂಪ್‌ ಹಗರಣದಲ್ಲಿ ಸೆಬಿ ಮುಖ್ಯಸ್ಥೆ ಮತ್ತು ಪತಿ ಭಾಗಿ: ಹಿಂಡನ್‌ಬರ್ಗ್ ಸ್ಪೋಟಕ ವರದಿ

ನ್ಯೂಯಾರ್ಕ್ ಟೈಮ್ಸ್ ಪ್ರೊಫೈಲ್ ಪ್ರಕಾರ, ಹಿಂಡೆನ್‌ಬರ್ಗ್ ತಂಡವು ಬ್ಲೂಮ್‌ಬರ್ಗ್ ಮತ್ತು ಸಿಎನ್‌ಎನ್‌ನ ಮಾಜಿ ವರದಿಗಾರರು ಮತ್ತು ವಿಶ್ಲೇಷಕರನ್ನು ಒಳಗೊಂಡಿದೆ.

ಹಿಂಡೆನ್‌ಬರ್ಗ್ ಹೆಸರಿಡುವುದಕ್ಕೂ ವಿಶೇಷ ಕಾರಣ

ನಾಥನ್ ಆಂಡರ್ಸನ್ ತಮ್ಮ ಸಂಸ್ಥೆಗೆ ಹಿಂಡೆನ್‌ಬರ್ಗ್ ಎಂದು ಹೆಸರಿಡುವುದಕ್ಕೆ ವಿಶೇಷ ಕಾರಣ ನೀಡುತ್ತಾರೆ. ರೈಟ್‌ ಸೋದರರು ವಿಮಾನ ಕಂಡು ಹಿಡಿಯುವುದಕ್ಕೆ ಮೊದಲು ಹೈಡ್ರೋಜನ್‌ ತುಂಬಿದ ದೊಡ್ಡ ಬಲೂನನ್ನು ಹೊಂದಿರುವ ಏರ್‌ಶಿಪ್‌ ಮೂಲಕ ಹಾರಾಟ ನಡೆಸುವ ವ್ಯವಸ್ಥೆ ಯುರೋಪ್‌ನಲ್ಲಿತ್ತು. ಹಿಂಡೆನ್‌ಬರ್ಗ್‌ ಎಂಬುದು ಅಂತಹ ಏರ್‌ಶಿಪ್‌ ಒಂದರ ಹೆಸರು. ಜರ್ಮನಿಯ ಕಂಪನಿಯೊಂದು ಹಿಂಡೆನ್‌ಬರ್ಗ್‌ ವಿಮಾನವನ್ನು ಜರ್ಮನಿಯ ಫ್ರಾಂಕ್‌ ಫರ್ಟ್‌ನಿಂದ ಅಮೆರಿಕದ ನ್ಯೂಜೆರ್ಸಿಗೆ ಹಾರಾಟ ನಡೆಸಿತ್ತು. 1937ರ ಮೇನಲ್ಲಿ ನಡೆದ ಈ ಹಾರಾಟ ಭೀಕರ ಅಪಘಾತದಲ್ಲಿ ಅಂತ್ಯವಾಯಿತು.

ಬಲೂನ್‌ ವಿಮಾನ ಕೆಳಗೆ ಇಳಿಯುವಾಗ ಏನೋ ಅವಘಡಕ್ಕೀಡಾಗಿ ಹಿಂಡೆನ್‌ಬರ್ಗ್‌ ಏರ್‌ಶಿಪ್‌ಗೆ ಬೆಂಕಿ ಹತ್ತಿಕೊಂಡು ಕೆಲವೇ ಕ್ಷಣಗಳಲ್ಲಿ ಭಸ್ಮವಾಯಿತು. ವಿಮಾನದಲ್ಲಿದ್ದ 90 ಜನರ ಪೈಕಿ 36 ಮಂದಿ ಸಜೀವ ದಹನವಾದರು. ಈ ದುರಂತದ ಬಳಿಕ ಹಿಂಡೆನ್‌ಬರ್ಗ್‌ ಏರ್‌ಶಿಪ್‌ಗಳ ಹಾರಾಟವನ್ನು ನಿಲ್ಲಿಸಲಾಯಿತು. ಈ ಹಿಂಡೆನ್‌ಬರ್ಗ್‌ ಅವಘಡ ಮಾನವ ನಿರ್ಮಿತ ದುರಂತ ಎಂದು ಕುಖ್ಯಾತಿ ಗಳಿಸಿದೆ. ಇದೇ ಹೆಸರನ್ನು ಆಂಡರ್ಸನ್‌ ಅವರು ತಮ್ಮ ಸಂಸ್ಥೆಗೂ ಇಟ್ಟಿದ್ದಾರೆ. ನಾವು ಹಣಕಾಸು ಜಗತ್ತಿನಲ್ಲಿ ಹಿಂಡೆನ್‌ಬರ್ಗ್‌ ಮಾದರಿಯ ಮಾನವ ನಿರ್ಮಿತ ದುರಂತಗಳನ್ನು ಪತ್ತೆ ಹೆಚ್ಚುತ್ತೇವೆ. ಅನುಮಾನಾಸ್ಪದ ಚಟುವಟಿಕೆಗಳು, ಅವ್ಯವಹಾರ, ಭ್ರಷ್ಟಾಚಾರಗಳ ಬಗ್ಗೆ ಸಂಶೋಧನೆ ನಡೆಸುತ್ತೇವೆ ಎಂದು ಹೇಳುತ್ತಾರೆ.

ಕರಗಿದ ಅದಾನಿಯ 8 ಲಕ್ಷ ಕೋಟಿ ರೂ. ಸಂಪತ್ತು

2023ರ ಜನವರಿ 24ರಿಂದು ಅದಾನಿ ಸಂಸ್ಥೆಯ ಅಕ್ರಮ ವಹಿವಾಟಿನ ಬಗ್ಗೆ ಹಿಂಡೆನ್‌ಬರ್ಗ್‌ 32,000 ಪದಗಳ ವರದಿಯ ಆರೋಪ ಪ್ರಕಟಿಸಿದ ನಂತರ ಅದಾನಿ ಸಮೂಹದ ಕಂಪನಿಗಳ ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿ 8 ಲಕ್ಷ ರೂ.ಗೂ ಹೆಚ್ಚು ನಷ್ಟ ಉಂಟಾಗಿತ್ತು. ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಸಂಪತ್ತಿನಲ್ಲಿ 11.8 ಲಕ್ಷ ಕೋಟಿ ರೂ. ಕರಗಿತ್ತು. ಮಾರುಕಟ್ಟೆ ನಷ್ಟಕ್ಕೆ ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹ ನಡೆಸಿರುವ ಅವ್ಯವಹಾರಗಳೇ ಇದಕ್ಕೆ ಕಾರಣ ಎಂದು ಹಿಂಡೆನ್‌ಬರ್ಗ್‌ ದೂರಿತ್ತು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಬಕಾರಿ ನೀತಿ ಪ್ರಕರಣ | ಕೇಜ್ರಿವಾಲ್ ‘ಕ್ರಿಮಿನಲ್ ಪಿತೂರಿ’ಯಲ್ಲಿ ಭಾಗಿ: ಸಿಬಿಐ

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ), ತನ್ನ...

ಹರಿಯಾಣ ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ಗೆ ಸೇರಿದ ದಿನವೇ ವಿನೇಶ್ ಫೋಗಟ್‌ಗೆ ಟಿಕೆಟ್

ಹರಿಯಾಣದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಶುಕ್ರವಾರ ರಾತ್ರಿ ತನ್ನ...

ಮಧ್ಯಪ್ರದೇಶ । ಹಾಡಹಗಲೇ ಮಹಿಳೆ ಮೇಲೆ ಅತ್ಯಾಚಾರ; ಕಾಮುಕನ ಕೃತ್ಯ ನೋಡುತ್ತ ನಿಂತ ಜನ

ಕಾಮುಕನೊಬ್ಬ ಮಹಿಳೆಯ ಮೇಲೆ ಹಾಡಹಗಲೆ ಸಾರ್ವಜನಿಕ ಸ್ಥಳದಲ್ಲಿ ಅತ್ಯಾಚಾರ ಎಸಗಿರುವ ಆಘಾತಕಾರಿ...

ಕ್ರಿಸ್ಟಿಯಾನೊ ರೊನಾಲ್ಡೊ ಎಂಬ ದಾಖಲೆಗಳ ದಿಗ್ಗಜ; 900 ಗೋಲುಗಳ ಸರದಾರ

900 ಗೋಲುಗಳನ್ನು ಹೊಡೆದಿರುವ ಕ್ರಿಸ್ಟಿಯಾನೊ ರೊನಾಲ್ಡೊ, ಫುಟ್‌ಬಾಲ್‌ ಲೋಕದ ಜನಪ್ರಿಯ ಆಟಗಾರ....