ಭಯೋತ್ಪಾದನೆ ಹಾಗೂ ಹಿಂಸಾಚಾರವನ್ನು ಯಾವುದೇ ಕಾರಣಕ್ಕೂ ಆಯ್ಕೆಗಳ ಆಧಾರದ ಮೇಲೆ ಅಥವಾ ತಾರತಮ್ಯದಿಂದ ಖಂಡಿಸಲು ಸಾಧ್ಯವಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಹಾಗೂ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿರುವುದನ್ನು ಸ್ವಾಗತಿಸಿರುವ ಮೆಹಬೂಬಾ ಮುಫ್ತಿ, ಅದೇ ವೇಳೆ ಗಾಜಾ ಮತ್ತು ಇರಾನ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಕೂಟವು ಮೌನ ವಹಿಸಿರುವುದನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಸೇರಿ ಮೂವರ ಎನ್‌ಕೌಂಟರ್
“ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ಬಿಆರ್‌ಐಸಿಎಸ್ ಒಕ್ಕೂಟ ಖಂಡಿಸಿರುವುದು ಒಳ್ಳೆಯ ನಡೆ. ಆದರೆ, ಭಯೋತ್ಪಾದನೆ ಮತ್ತು ನಿರಪರಾಧಿಗಳ ಹತ್ಯೆ ಎಲ್ಲಿಯೇ ನಡೆದರೂ ಅದು ಖಂಡನೀಯ. ಗಾಜಾ ಮತ್ತು ಇರಾನ್‌ನಲ್ಲಿ ಸಾವಿರಾರು ಅಮಾಯಕ ಜನರು ಹಾಗೂ ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದರೂ ಬಿಆರ್‌ಐಸಿಎಸ್ ನಾಯಕರು ಮೌನ ವಹಿಸಿರುವುದು ದುರದೃಷ್ಟಕರ,” ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಯೋತ್ಪಾದನೆಯ ವಿರುದ್ಧದ ಹೋರಾಟವು ಜಾಗತಿಕ ಮಟ್ಟದಲ್ಲಿ ನಿಷ್ಪಕ್ಷಪಾತವಾಗಿರಬೇಕು. ಒಂದು ಪ್ರದೇಶದ ಹಿಂಸಾಚಾರವನ್ನು ಖಂಡಿಸಿ, ಮತ್ತೊಂದು ಕಡೆ ಮಾನವೀಯ ಬಿಕ್ಕಟ್ಟು ಉಂಟಾಗಿದ್ದರೂ ಮೌನ ತಾಳುವುದು ರಾಜಕೀಯ ತಾರತಮ್ಯವನ್ನು ತೋರಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.





