ಮುಂಬೈ ಮೊಹರಂ | 15,000 ವಿಷದ ಮಾತ್ರೆ ಹಂಚುವ ಸಂಚನ್ನು ಭಗ್ನಗೊಳಿಸಿದ ಇಬ್ಬರು ಮುಸ್ಲಿಂ ವನಿತೆಯರು!

Date:

ಮುಂಬೈನ ಬೈಕುಲ್ಲಾ ಪ್ರದೇಶದಲ್ಲಿ ನಡೆದ ಮೊಹರಂ ಮೆರವಣಿಗೆಯ ಸಂದರ್ಭದಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರ ಸಮಯಪ್ರಜ್ಞೆ ಮತ್ತು ಅದ್ಭುತ ಧೈರ್ಯದಿಂದಾಗಿ ಒಂದು ಭೀಕರ ಸಾಮೂಹಿಕ ಕೊಲೆಯ ಸಂಚು ಭಗ್ನಗೊಂಡಿದೆ. ಇಹಲಾಮ್ ಹಮೀದಿ ಮತ್ತು ರುಖ್ಸಾರ್ ಸಯೀದ್ ಎಂಬ ಇಬ್ಬರು ಮಹಿಳೆಯರು, ಸುಮಾರು 15,000 ಜನರ ಪ್ರಾಣ ಉಳಿಸಿದ್ದಾರೆ.

- Advertisement -

ಆ ಬೃಹತ್ ಮೆರವಣಿಗೆಯಲ್ಲಿದ್ದ  ಜನಸ್ತೋಮದ ನಡುವೆ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬ ನೀಲಿ ಬಣ್ಣದ ಬ್ಯಾಗ್ ಹಿಡಿದುಕೊಂಡು ಓಡಾಡುತ್ತಿದ್ದ. ಆತನನ್ನು ಆರೋಪಿ ಫಯಾಜ್ ಪ್ರೇಮ್‌ಜಿ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಮನಿಗೆ ₹150 ಕೋಟಿ, ಸೀತೆಗೆ ₹12 ಕೋಟಿ! ಬಿಗ್...

₹4,000 ಕೋಟಿಯ ಬೃಹತ್ ಬಜೆಟ್‌ನ 'ರಾಮಾಯಣ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹೊತ್ತಿನಲ್ಲಿ ಚಿತ್ರರಂಗದ ಅದೇ ಹಳೆ ಹಣೆಬರಹವೊಂದು ಚರ್ಚೆಗೆ ಸಿಕ್ಕಿದೆ. ರಾಮನ ಪಾತ್ರಕ್ಕೆ ₹150 ಕೋಟಿ, ರಾವಣನಿಗೆ ₹100 ಕೋಟಿ ಸಂಭಾವನೆ!...

ರಾಮಲೀಲಾ ಮೈದಾನದಲ್ಲಿ ವಿಪಕ್ಷಗಳ ಬಲಪ್ರದರ್ಶನ; ಬೀದಿ ಹೋರಾಟ ಬೇರುಮಟ್ಟದ...

ನವಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಸಮಾವೇಶವು ಭಾರತೀಯ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ರಾಜಕೀಯ ಮೈಲಿಗಲ್ಲಾಗಿ ದಾಖಲಾಗಿದೆ. ಚುನಾವಣಾ ಆಕ್ರಮ, ಎಸ್‌ಐಆರ್ ಷಡ್ಯಂತ್ರದ ವಿರುದ್ಧ ಮತ್ತು ಮುಖ್ಯ ಚುನಾವಣಾ...

ಮಣಿಪುರವನ್ನು ಜನಾಂಗೀಯ ಘರ್ಷಣೆಯ ದಳ್ಳುರಿಗೆ ತಳ್ಳಿ ಕೈಚೆಲ್ಲಿದೆ ಮೋ-ಶಾ...

ಮ್ಯಾನ್ಮಾರ್‌ನೊಂದಿಗೆ ಸುಮಾರು 400 ಕಿಲೋಮೀಟರ್ ಗಡಿ ಹಂಚಿಕೊಳ್ಳುವ ಈಶಾನ್ಯ ಭಾರತದ ಗಡಿ ರಾಜ್ಯ ಮಣಿಪುರದಲ್ಲಿ ಶತಮಾನಗಳಿಂದ ಬೆಳೆದು ಬಂದಿದ್ದ ಸೌಹಾರ್ದತೆಯ ಬೇರುಗಳನ್ನು ಸಂಪೂರ್ಣವಾಗಿ ಕೊಳೆತು ಹೋಗಲು ಕೇಂದ್ರ ಸರ್ಕಾರ ಬಿಟ್ಟಂತಿದೆ. 2023ರಿಂದ ನಡೆಯುತ್ತಿರುವ...

 ಮೊಹರಂ ಮೆರವಣಿಗೆಯ ಸಂಭ್ರಮದಲ್ಲಿ ಮುಳುಗಿ ಸುಸ್ತಾಗಿದ್ದ ಜನರಿಗೆ ಆತ ಸಣ್ಣ ಪ್ಯಾಕೆಟ್‌ಗಳಲ್ಲಿದ್ದ ಮಾತ್ರೆಗಳನ್ನು ವಿತರಿಸುತ್ತಿದ್ದ. ಇದನ್ನು ಗಮನಿಸಿದ ಸ್ವಯಂಸೇವಕರಾಗಿದ್ದ ಇಹಲಾಮ್ ಹಮೀದಿ ಮತ್ತು ರುಖ್ಸಾರ್ ಸಯೀದ್ ಅವರಿಗೆ ಆತನ ನಡವಳಿಕೆಯ ಮೇಲೆ ಅನುಮಾನ ಮೂಡಿದೆ. ಅವರು ಆ ವ್ಯಕ್ತಿಯ ಬಳಿ ಹೋಗಿ ವಿಚಾರಿಸಿದಾಗ, ಇವು ಮೆರವಣಿಗೆಯಲ್ಲಿ ಭಾಗವಹಿಸುವವರ ಆಯಾಸ ಮತ್ತು ದೇಹದ ನೋವು ನಿವಾರಿಸುವ ‘ಪೇನ್‌ಕಿಲ್ಲರ್’ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳು ಎಂದು ಆತ ಸಮಜಾಯಷಿ ನೀಡಿದ್ದಾನೆ.

ಆದರೆ, ಸಾಮಾನ್ಯವಾಗಿ ಇಂತಹ ಧಾರ್ಮಿಕ ಮೆರವಣಿಗೆಗಳಲ್ಲಿ ಅಪರಿಚಿತರು ಈ ರೀತಿ ಮಾತ್ರೆಗಳನ್ನು ಉಚಿತವಾಗಿ ಹಂಚುವ ಪ್ರವೃತ್ತಿ ಇಲ್ಲವೆಂಬುದನ್ನು ಅರಿತ ಮಹಿಳೆಯರು, ತಕ್ಷಣವೇ ಒಂದು ಮಾತ್ರೆಯನ್ನು ತೆರೆದು ನೋಡಿದ್ದಾರೆ. ಆಗ, ಆ ಮಾತ್ರೆಯೊಳಗೆ ಯಾವುದೇ ವೈದ್ಯಕೀಯ ಔಷಧ ಇರಲಿಲ್ಲ. ಬದಲಿಗೆ ವಿಚಿತ್ರವಾದ ಕಪ್ಪು ಬಣ್ಣದ ಪುಡಿ ಇದ್ದುದ್ದನ್ನು ಕಂಡಿದ್ದಾರೆ. ಅದು ಅತ್ಯಂತ ತೀವ್ರವಾದ ವಿಷಕಾರಿ ರಾಸಾಯನಿಕ ಎಂಬುದು ಅವರಿಗೆ ಮನವರಿಕೆಯಾಗಿದೆ. ತಕ್ಷಣವೇ ಆತನನ್ನು ಹಿಡಿಯಲು ಮುಂದಾಗಿದ್ದರು.

ಆದರೆ, ಆತ ತಪ್ಪಿಸಿಕೊಂಡಿದ್ದ. ಜನದಟ್ಟಣೆಯೊಳಗೆ ನಿರಂತರವಾಗಿ ಹುಟುಕಾಟ ನಡೆಸಿದ ಮಹಿಳೆಯರು, ಅಂತಿಮವಾಗಿ ಆತನನ್ನು ಹಿಡಿದಿದ್ದಾರೆ. ಬೈಕುಲ್ಲಾ ಪೊಲೀಸರಿಗೆ ಒಪ್ಪಿಸಿದ್ದಾರೆ.

ಜೊತೆಗೆ, ಇಡೀ ಮೆರವಣಿಗೆಯುದ್ದಕ್ಕೂ ಜೋರಾಗಿ ಕಿರುಚುತ್ತಾ, “ಯಾರೂ ಆ ಮಾತ್ರೆಗಳನ್ನು ತಿನ್ನಬೇಡಿ, ಅದು ವಿಷ” ಎಂದು ಜನರನ್ನು ಎಚ್ಚರಿಸಿದ್ದಾರೆ. ಅದಾಗಲೇ ಹಂಚಲಾಗಿದ್ದ ನೂರಾರು ಮಾತ್ರೆಗಳನ್ನು ಜನರ ಕೈಯಿಂದ ಹಾಗೂ ರಸ್ತೆಯಿಂದ ವಾಪಸ್ ಪಡೆದು ಪೊಲೀಸರ ವಶಕ್ಕೆ ನೀಡಿದ್ದಾರೆ.

ಆದಾಗ್ಯೂ, ಈಗಾಗಲೇ ಆತ ಹಂಚಿದ್ದ ಮಾತ್ರೆಗಳಲ್ಲಿ ಕೆಲವನ್ನು ಸೇವಿಸಿದ್ದ ಹತ್ತಕ್ಕೂ ಹೆಚ್ಚು ಜನರಿಗೆ ತೀವ್ರ ಹೊಟ್ಟೆನೋವು ಮತ್ತು ವಾಂತಿ ಕಾಣಿಸಿಕೊಂಡಿದ್ದು, ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯಕ್ಕೆ ಎಲ್ಲರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮುಂಬೈ ನಗರದಲ್ಲಿ ಸಂಭವಿಸಬಹುದಾಗಿದ್ದ ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಭೀಕರ ಸಾಮೂಹಿಕ ವಿಷ ದುರಂತವನ್ನು ಇಬ್ಬರು ಹೆಣ್ಣುಮಕ್ಕಳ ಸಮಯಪ್ರಜ್ಞೆ, ಧೈರ್ಯ ಹಾಗೂ ಜಾಗರೂಕತೆ ಯಶಸ್ವಿಯಾಗಿ ತಡೆದಿದೆ.

ಇಹಲಾಮ್ ಹಮೀದಿ ಅವರು ಬೈಕುಲ್ಲಾದಲ್ಲಿ ಕಾಫಿ ವ್ಯಾಪಾರಿಯಾಗಿದ್ದಾರೆ. ರುಖ್ಸಾರ್ ಸಯೀದ್ ಅವರು ಮುಂಬೈನಲ್ಲಿ ಕಾಸ್ಮೆಟಿಕ್ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿ ಹೊಂದಿದ್ದಾರೆ. ಅವರಿಬ್ಬರೂ ಆತ್ಮೀಯ ಸ್ನೇಹಿತರಾಗಿದ್ದಾರೆ.

ಬಿಬಿಸಿ ಹಿಂದಿ ವಾಹಿನಿಯೊಂದಿಗೆ ಮಾತನಾಡಿದ ರುಖ್ಸಾರ್ ಸಯೀದ್, “ಇಹಲಾಮ್ ಮತ್ತು ನಾನು ಮಜ್‌ಗಾಂವ್ ಮಸೀದಿಯ ಹೊರಗೆ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದವು. ಮೆರವಣಿಗೆಯಲ್ಲಿದ್ದ ಕೆಲವು ಜನರು ಸುಸ್ತಾಗಿ ಅಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಅದೇ ಸಮಯದಲ್ಲಿ ಒಬ್ಬ ವ್ಯಕ್ತಿ ಅಪಾರ ಪ್ರಮಾಣದಲ್ಲಿ ಮಾತ್ರೆಗಳನ್ನು ಹಂಚುತ್ತಿದ್ದನು. ಜನರು ಸಹ ಅದನ್ನು ‘ನಿಯಾಜ್-ಎ-ಹುಸೇನ್’ (ಪವಿತ್ರ ಪ್ರಸಾದ) ಎಂದು ಭಾವಿಸಿ ಪಡೆದುಕೊಳ್ಳುತ್ತಿದ್ದರು. ಆಗ ರಾತ್ರಿಯಾಗಿದ್ದರಿಂದ ಪ್ಯಾಕೆಟ್ ಮೇಲೆ ಏನು ಬರೆಯಲಾಗಿದೆ ಎಂಬುದು ಯಾರಿಗೂ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ” ಎಂದು ವಿವರಿಸಿದ್ದಾರೆ.

“ಇಹಲಾಮ್ ಆ ಮಾತ್ರೆಗಳ ಒಂದು ಪ್ಯಾಕೆಟ್ ಪಡೆದುಕೊಂಡರು. ಆದರೆ ಅದರ ಮೇಲೆ ಯಾವುದೇ ಮಾಹಿತಿ ಸ್ಪಷ್ಟವಾಗಿ ಇರಲಿಲ್ಲ. ಇದು ನಮಗೆ ಮತ್ತಷ್ಟು ಅನುಮಾನ ಮೂಡಿಸಿತು. ನಾವು ತಕ್ಷಣ ಆ ಮಾತ್ರೆಗಳಲ್ಲಿ ಒಂದನ್ನು ಬಿಡಿಸಿ ನೋಡಿದಾಗ ಅದರೊಳಗೆ ಕಪ್ಪು ಬಣ್ಣದ ಪುಡಿ ಇರುವುದು ಕಂಡುಬಂದಿತು. ಅದು ವಿಚಿತ್ರವಾದ ರಾಸಾಯನಿಕ ವಾಸನೆ ಬರುತ್ತಿತ್ತು. ಅನುಮಾನಗೊಂಡು, ಆತನ ಬ್ಯಾಗ್‌ಅನ್ನು ಕಸಿದುಕೊಡೆವು. ಆದರೆ, ಆತ ತಪ್ಪಿಸಿಕೊಂಡ. ಬಳಿಕ, ಆತನನ್ನು ಹುಡುಕಿ ಹಿಡಿದೆವು” ಎಂದು ತಿಳಿಸಿದ್ದಾರೆ.  

ಈ ಲೇಖನ ಓದಿದ್ದೀರಾ?: ಬೆಂಗಳೂರಿಗೆ ಇನ್ನೊಂದು ಫ್ಲೈಓವರ್ ಬೇಡ; ಸಮಗ್ರ ಪುನರ್‌ಅಭಿವೃದ್ಧಿ ಬೇಕು

ಪೊಲೀಸರು ಆತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ತನ್ನ ಈ ಕೃತ್ಯದ ಹಿಂದಿನ ಉದ್ದೇಶಗಳನ್ನು ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ. 2015ರಲ್ಲಿ ನಡೆದ ಜಮಾತ್ ಚುನಾವಣೆಯಲ್ಲಿ ತಾನು ಸೋತ ನಂತರ ತನ್ನಲ್ಲಿ ಧರ್ಮ ವಿರೋಧಿ ಭಾವನೆಗಳು ತೀವ್ರವಾಗಿ ಮೂಡತೊಡಗಿದ್ದವು ಎಂದು ಅತ ಹೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಆ ಚುನಾವಣೆಯ ಸೋಲಿನಿಂದ, ತನ್ನ ‘ಸುಧಾರಣಾವಾದಿ ವಿಚಾರಗಳಿಗೆ’ ತನ್ನದೇ ಆದ ಖೋಜಾ ಶಿಯಾ ಸಮುದಾಯದಲ್ಲಿ ಯಾವುದೇ ಬೆಂಬಲವಿಲ್ಲ ಎಂಬುದು ಆತ ಭಾವಿಸಿದ್ದ. ಅದೇ ಕಾರಣಕ್ಕಾಗಿ 2015-16ರ ಸುಮಾರಿಗೆ ತನ್ನ ಸಮುದಾಯದಿಂದಲೂ ದೂರ ಸರಿದಿದ್ದ. ಇಸ್ಲಾಂನ ಸಾಂಪ್ರದಾಯಿಕ ಆಚರಣೆಗಳನ್ನು ನಿರಂತರವಾಗಿ ಟೀಕಿಸುವ ಮೂಲಕ, ಸಮುದಾಯದ ತೀವ್ರ ಪ್ರತಿರೋಧಕ್ಕೆ ಗುರಿಯಾಗಿದ್ದ. ಆತನನ್ನು ಸಾಮಾಜಿಕವಾಗಿಯೂ ಬಹಿಷ್ಕರಿಸಲಾಗಿತ್ತು. ಆತ ತನ್ನನ್ನು ತಾನು ‘ಎಕ್ಸ್-ಮುಸ್ಲಿಂ’ (ಮಾಜಿ ಮುಸ್ಲಿಂ) ಎಂದು ಘೋಷಿಸಿಕೊಂಡಿದ್ದ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ತನ್ನ ಎಲ್ಲ ರೀತಿಯ ಹಿನ್ನಡೆಗೂ ಸಮುದಾಯದವರೇ ಕಾರಣವೆಂದು ಆತ ನಿರಂತರವಾಗಿ ದೂಷಿಸುತ್ತಿದ್ದನು. ಇದೇ ಸಿಟ್ಟಿನಿಂದ ಇಂತಹ ಭೀಕರ ಸಂಚನ್ನು ಹೆಣೆದಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿರುವುದಾಗಿ ಪೊಲೀಸಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಇತರ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.

ಜೊತೆಗೆ, ಫಯಾಜ್ ಪ್ರೇಮ್‌ಜಿ ಸುಮಾರು 14,900 ಮಾತ್ರೆಗಳೊಳಗೆ ತುಂಬಿಸಲು ಬಳಸಿದ್ದ 40 ಕೆ.ಜಿ. ಗಿಂತಲೂ ಹೆಚ್ಚಿನ ತೂಕದ ‘ಇಲಿ ಪಾಷಾಣ’ವನ್ನು ಹೇಗೆ ಮತ್ತು ಎಲ್ಲಿಂದ ಪಡೆದುಕೊಂಡನು ಎಂಬುದನ್ನು ಪತ್ತೆಹಚ್ಚಲು ಇಡೀ ಪೂರೈಕೆ ಜಾಲ ಮತ್ತು ಆರ್ಥಿಕ ಮೂಲಗಳನ್ನು ಜಾಲಾಡುತ್ತಿದ್ದಾರೆ. ಆದರೆ, ಆತನಿಗೆ ಕೆಮಿಕಲ್ ಪೂರೈಸಿದ ವ್ಯಾಪಾರಿಗಳಿಗೆ ಫಯಾಜ್ ಪ್ರೇಮ್‌ಜಿಯ ಈ ಕ್ರಿಮಿನಲ್ ಮತ್ತು ವಿನಾಶಕಾರಿ ಸಂಚಿನ ಬಗ್ಗೆ ಯಾವುದೇ ಸುಳಿವಿರಲಿಲ್ಲ. ಅವರು ಇದನ್ನು ಕೇವಲ ಒಂದು ಸಾಮಾನ್ಯ ವಾಣಿಜ್ಯ ವ್ಯವಹಾರ ಎಂದು ಭಾವಿಸಿದ್ದರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಸದ್ಯಕ್ಕೆ ತಿಳಿದುಬಂದಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಪಾವಳಿಗೆ ಎರಡು ದಿನ ಹಸಿರು ಪಟಾಕಿಗಳಿಗೆ ಸುಪ್ರೀಂ ಕೋರ್ಟ್ ಅನುಮತಿ

ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ಧಾರ್ಮಿಕ ಆಚರಣೆ ಎಂದು ಪರಿಗಣಿಸಿರುವ ಸುಪ್ರೀಂ...

ಜರ್ಮನಿ | ಅಂಗಡಿಗಳ ಲೂಟಿಗೆ ತಿರುಗಿದ ಜೆನ್ ಜೀ ಪ್ರತಿಭಟನೆಗಳು!

ಸಾಮಾಜಿಕ ಭದ್ರತೆ, ಶಿಕ್ಷಣ, ವಸತಿ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚದ ವಿರುದ್ಧ...

ಈ ದಿನ ಸಂಪಾದಕೀಯ | ರಾಮಲೀಲಾ ಪ್ರತಿಭಟನೆ ಐತಿಹಾಸಿಕ; ಪ್ರಚಂಡ ಜನಶಕ್ತಿಯಿಂದ ಮಾತ್ರವೇ ಸರ್ವಾಧಿಕಾರಿ ಶಕ್ತಿಗಳ ಧೂಳೀಪಟ ಸಾಧ್ಯ

ಬೃಹತ್ ಪ್ರತಿಭಟನೆಗಳಷ್ಟೇ ಸಾಲದು, ಪಕ್ಷಗಳ ಸಂಘಟನೆಗಳನ್ನು ಬಲಿಷ್ಠವಾಗಿ ಕಟ್ಟುವುದು ಪ್ರತಿಪಕ್ಷಗಳ ಮುಂದಿರುವ...