ಇಂದು ಭಾರತ-ಪಾಕ್ ಪಂದ್ಯ: ‘ಕ್ರಿಕೆಟ್ ಅನ್ನು ಕ್ರಿಕೆಟ್ ಆಗಿಯೇ ನೋಡಬೇಕು’ ಎಂದ ಹರ್ಭಜನ್ ಸಿಂಗ್

Date:

ಟಿ20 ವಿಶ್ವಕಪ್‌ ಟೂರ್ನಿಯ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್‌ ತಂಡಗಳ ನಡುವಿನ ಪಂದ್ಯವು ಶ್ರೀಲಂಕಾದ ಕೊಲಂಬೊದಲ್ಲಿರುವ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯದ ಕುರಿತು ಕ್ರಿಕೆಟ್‌ ಪ್ರೇಮಿಗಳು ಮಾತ್ರವಲ್ಲದೆ, ಎರಡೂ ರಾಷ್ಟ್ರಗಳ ಜನರಲ್ಲಿಯೂ ಕುತೂಹಕ ಹೆಚ್ಚಾಗಿದೆ. ಇದೇ ಸಮಯದಲ್ಲಿ, ಎರಡೂ ತಂಡಗಳ ನಾಯಕರು ಮತ್ತು ಆಟಗಾರರು ಪರಸ್ಪರ ಹಸ್ತಲಾಘವ ಮಾಡುವರೇ ಎಂಬ ಚರ್ಚೆಯೂ ಇದೆ. ಈ ಕುರಿತು ಮಾತನಾಡಿರುವ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, “ಅದು ಆಟಗಾರರ ಆಯ್ಕೆ. ಕ್ರಿಕೆಟ್ ಅನ್ನು ಕ್ರಿಕೆಟ್ ಆಗಿಯೇ ನೋಡಬೇಕು” ಎಂದು ಹೇಳಿದ್ದಾರೆ.

- Advertisement -

ಅನಾರೋಗ್ಯದಿಂದ ಚೇತರಿಸಿಕೊಂಡಿರುವ ಸಿಂಗ್, ಭಾರತ-ಪಾಕ್ ಪಂದ್ಯದ ಕುರಿತು ಮಾತನಾಡಿದ್ದಾರೆ. “ಟಾಸ್ ಸಮಯದಲ್ಲಿ ಅಥವಾ ಪಂದ್ಯದ ನಂತರ ಹಸ್ತಲಾಘವ ಮಾಡುವ ಔಪಚಾರಿಕತೆಗಳ ಬಗ್ಗೆ ಜನರು ಅನಗತ್ಯವಾಗಿ ಚಿಂತಿಸಬಾರದು. ಅದು ಸಂಪೂರ್ಣವಾಗಿ ಆಟಗಾರರ ಇಚ್ಛೆ. ಪಂದ್ಯದ ನಂತರ ಹಸ್ತಲಾಘವ ಮಾಡಬೇಕು ಅಥವಾ ತಬ್ಬಿಕೊಳ್ಳಬೇಕು ಅಥವಾ ಅದನ್ನು ಮಾಡಬಾರದು ಎಂದು ಯಾವುದೇ ಪುಸ್ತಕದಲ್ಲಿ ಬರೆದಿಲ್ಲ. ಆಟಗಾರರು ಪರಸ್ಪರ ಅಪ್ಪಿಕೊಳ್ಳಬೇಕು ಎನ್ನಿಸಿದರೆ, ಅವರು ಮಾಡುತ್ತಾರೆ. ಹಾಗಾಗಿ ಪಂದ್ಯವನ್ನು ಆಡುವುದಷ್ಟೇ ಮುಖ್ಯ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಆಟಗಾರರ ಬಗ್ಗೆ ಹೇಳುವುದಾದರೆ, ಅವರು ಪಂದ್ಯದ ನಂತರ ಒಟ್ಟಿಗೆ ಕುಳಿತುಕೊಳ್ಳುತ್ತಾರೆ. ಕ್ರಿಕೆಟ್ ಅನ್ನು ಕ್ರಿಕೆಟ್ ಆಗಿಯೇ ನೋಡಬೇಕು” ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಮೊಳಗಿಸಿದ್ದ ಮತ ಹಕ್ಕಿನ ಕೂಗಿಗೆ...

ಮತದಾನ ಕೇವಲ ಹಕ್ಕಲ್ಲ, ಅದು ಪ್ರಜೆಯೊಬ್ಬನ ಘನತೆ ಹಾಗೂ ಅಸ್ತಿತ್ವದ ಸಂಕೇತ. 131 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಇದೇ ಮತಾಧಿಕಾರಕ್ಕಾಗಿ ಗಾಂಧೀಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. ಆದರೆ, ಇಂದು ಸ್ವತಂತ್ರ ಭಾರತದಲ್ಲಿ...

ಇನ್ನು, ಪಂದ್ಯದ ಕುರಿತು ಮಾತನಾಡಿದ ಸಿಂಗ್, “ಖಂಡಿತವಾಗಿಯೂ, ಈ ಪಂದ್ಯ ನಡೆಯುತ್ತದೆಯೇ ಇಲ್ಲವೋ ಎಂಬ ಬಗ್ಗೆ ಸಾಕಷ್ಟು ಅಡೆತಡೆಗಳಿದ್ದವು. ಆದರೆ ಅದೆಲ್ಲವೂ ಈಗ ಮುಗಿದಿದೆ. ಈಗ ಗಮನವೆಲ್ಲ ಕ್ರಿಕೆಟ್‌ನ ಮೇಲೆ ಇರಬೇಕು, ಅದುವೇ ಮುಖ್ಯ ಭಾಗ. ಭಾರತ ಈ ಪಂದ್ಯದಲ್ಲಿ ಉತ್ತಮವಾಗಿ ಆಡುತ್ತದೆ ಎಂದು ನಾನು ಭಾವಿಸುತ್ತೇನೆ. ಪಾಕಿಸ್ತಾನ ಕೂಡ ಬಲಿಷ್ಠ ತಂಡವಾಗಿದೆ, ವಿಶೇಷವಾಗಿ ಅವರ ಸ್ಪಿನ್ನರ್‌ಗಳು ಈ ಪರಿಸ್ಥಿತಿಯಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಹಾಗಾಗಿ ಇದೊಂದು ಅದ್ಭುತ ಪಂದ್ಯವಾಗಲಿದೆ,” ಎಂದಿದ್ದಾರೆ.

“ಪಾಕ್‌ ತಂಡದ ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರ ಸವಾಲನ್ನು ಎದುರಿಸಲು ಭಾರತ ತಂಡಕ್ಕೆ ಅಭಿಷೇಕ್ ಶರ್ಮಾ ಅವರ ಉಪಸ್ಥಿತಿ ಸಹಕಾರಿಯಾಗಲಿದೆ. ಆಫ್-ಸ್ಪಿನ್ನರ್ ತಾರಿಕ್ ಅವರ ವಿಶಿಷ್ಟ ಬೌಲಿಂಗ್ ಭಾರತೀಯ ಬ್ಯಾಟರ್‌ಗಳಿಗೆ ಭಾರೀ ಸವಾಲಾಗಲಿದೆ” ಎಂದು ಹೇಳಿದ್ದಾರೆ.

Advertisements

“ನಾನು ತಾರಿಕ್ ಅವರು ILT20 ನಲ್ಲಿ ಬೌಲಿಂಗ್ ಮಾಡುವುದನ್ನು ನೋಡಿದ್ದೇನೆ. ಅಲ್ಲಿ ಅವರು ಶ್ರೇಷ್ಠ ಬೌಲರ್ ಆಗಿ ಹೊರಹೊಮ್ಮಿದ್ದರು. ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಅವಕಾಶ ಸಿಕ್ಕಾಗಲೆಲ್ಲ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾರೆ. ಅವರು ಇತರ ಸ್ಪಿನ್ನರ್‌ಗಳಿಗಿಂತ ಭಿನ್ನವಾಗಿದ್ದಾರೆ. ಹಾಗಾಗಿ ನಾನು ಹೇಳುವುದಿಷ್ಟೇ, ‘ನೀವು (ಭಾರತ ತಂಡ) ಹಿಂದೆಂದೂ ಎದುರಿಸದ ಬೌಲರ್ ವಿರುದ್ಧ ಆಡುವಾಗ ಸ್ವಲ್ಪ ಎಚ್ಚರಿಕೆಯಿಂದ ಇರಿ. ಅವರನ್ನು ಟೀಮ್‌ ಇಂಡಿಯಾ ಸಮರ್ಥವಾಗಿ ಎದುರಿಸಬಲ್ಲದು. ಅವರಿಗೆ ಯಾವುದೇ ಪ್ರಮುಖ ವಿಕೆಟ್ ನೀಡಬಾರದು” ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಾಹ್‌ EC! 13 ಕೋಟಿ ಜನರನ್ನ ಹೊರದಬ್ಬಿ, ಈಗ ಮರುನೋಂದಣಿಯ ಕಸರತ್ತು

ರಾಷ್ಟ್ರವ್ಯಾಪಿ 'ವಿಶೇಷ ತೀವ್ರ ಪರಿಷ್ಕರಣೆ' (SIR) ಎನ್ನುವ ಭೀಕರ ಆಪರೇಷನ್ ನಡೆಸಿ,...

ಏಷ್ಯನ್ ಗೇಮ್ಸ್: ಲವ್ಲಿನಾಗೆ ಚಿನ್ನ, ಬಿಲ್ಲುಗಾರಿಕೆಯಲ್ಲಿ ಐತಿಹಾಸಿಕ ಸಾಧನೆ; ಪದಕ ಪಟ್ಟಿಯಲ್ಲಿ ಭಾರತಕ್ಕೆ 6ನೇ ಸ್ಥಾನ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು...

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ: ಎಎಪಿ ನಾಯಕ ಸೌರಭ್ ಭಾರದ್ವಾಜ್ ಸೇರಿ ಹಲವು ಮಂದಿ ದೆಹಲಿ ಪೊಲೀಸರ ವಶಕ್ಕೆ

ಚುನಾವಣಾ ಆಯೋಗದ ವಿರುದ್ಧ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಜಂತರ್ ಮಂತರ್‌‌ಗೆ ಆಗಮಿಸಿದ್ದ...

ಸಿಜೆಪಿ ಬೆಂಬಲಕ್ಕೆ ನಿಂತ ಪಾಲ್ಘರ್ ವಕೀಲರ ಸಂಘ: ಕಾರ್ಯಕರ್ತರಿಗೆ ಉಚಿತ ಕಾನೂನು ನೆರವು ಘೋಷಣೆ

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಕೀಲರ ಸಂಘವೊಂದು 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ)...