ವಿದೇಶಿ ಔಷಧ ಆಮದಿಗೆ ಹೊಸ ನಿಯಮ: ಸಂಪೂರ್ಣ ಆನ್‌ಲೈನ್ ವ್ಯವಸ್ಥೆ ಜಾರಿ

Date:

ವಿದೇಶಗಳಿಂದ ಕಚ್ಚಾ ಔಷಧಗಳು ಮತ್ತು ಸಿದ್ಧಪಡಿಸಿದ ಔಷಧಗಳನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್‌ ವ್ಯವಸ್ಥೆಯಡಿ ತರಲು ಭಾರತದ ಅತ್ಯುನ್ನತ ಔಷಧ ನಿಯಂತ್ರಣ ಪ್ರಾಧಿಕಾರ ಮುಂದಾಗಿದೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ಕಾಗದರಹಿತವಾಗಿಸುವ ಹಾಗೂ ಸರಳಗೊಳಿಸುವ ನಿಟ್ಟಿನಲ್ಲಿ ‘ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ’ (CDSCO) ಹೊಸ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿದೆ ಎಂದು ವರದಿಯಾಗಿದೆ.

- Advertisement -

ಈ ಹೊಸ ನಿಯಮಗಳ ಪ್ರಕಾರ, ಔಷಧಗಳ ಆಮದು ಮತ್ತು ನೋಂದಣಿ ಪ್ರಕ್ರಿಯೆಗಳು ಇನ್ಮುಂದೆ ಕೇಂದ್ರ ಸರ್ಕಾರದ ‘ಸುಗಮ್’ (SUGAM) ಇ-ಆಡಳಿತ ಪೋರ್ಟಲ್ ಮೂಲಕವೇ ಕಡ್ಡಾಯವಾಗಿ ನಡೆಯಲಿವೆ. ಔಷಧೀಯ ಇಲಾಖೆಯ ಮಾಹಿತಿಯಂತೆ, ಪ್ರಸ್ತುತ ಭಾರತದ ಔಷಧ ಮಾರುಕಟ್ಟೆಯು ಒಟ್ಟು 60 ಬಿಲಿಯನ್ ಡಾಲರ್ (ಸುಮಾರು ₹5,00,000 ಕೋಟಿ) ವಹಿವಾಟು ಹೊಂದಿದೆ. ಇದರಲ್ಲಿ ವಿದೇಶಿ ಕಚ್ಚಾ ಔಷಧಗಳ ಮೇಲಿನ ಅವಲಂಬನೆ 5.2 ಬಿಲಿಯನ್ ಡಾಲರ್ (ಸುಮಾರು ₹43,400 ಕೋಟಿ) ನಷ್ಟಿದೆ. ಈ ಬೃಹತ್ ವಹಿವಾಟಿನ ಆಡಳಿತಾತ್ಮಕ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಲು ಹಾಗೂ ಪಾರದರ್ಶಕತೆ ತರಲು ಈ ಡಿಜಿಟಲ್ ಹೆಜ್ಜೆ ಇಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಜರ್ಮನಿಯಲ್ಲಿ ತೀವ್ರಗಾಮಿಗಳ ಅಬ್ಬರ: ದಿಕ್ಕುತಪ್ಪಿದ ಮಧ್ಯಮಾರ್ಗ, ಮರುಜೀವ ಪಡೆಯುತ್ತಿದೆಯೇ...

ಜರ್ಮನಿಯಲ್ಲಿ ತೀವ್ರ ಬಲಪಂಥೀಯರ ಈ ಮಟ್ಟದ ಏರಿಕೆ ಕೇವಲ ರಾಜಕೀಯ ಪೈಪೋಟಿಯಲ್ಲ, ಬದಲಾಗಿ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಜರ್ಮನಿ ಮತ್ತು ಬಲಪಂಥ ಎಂದಾಕ್ಷಣ ಇಡೀ ವಿಶ್ವಕ್ಕೆ ಅಡಾಲ್ಫ್ ಹಿಟ್ಲರ್ ಮತ್ತು ಆತನ ನಾಜಿ...

ಸೌಜನ್ಯಳನ್ನು ಕೊಂದವರು ಯಾರು? ಹೊಸ ತನಿಖೆಯಲ್ಲಿ ಉತ್ತರ ಸಿಗುವ...

14 ವರ್ಷಗಳು... 3 ತನಿಖಾ ಸಂಸ್ಥೆಗಳಾದ ಪೊಲೀಸ್, ಸಿಐಡಿ, ಸಿಬಿಐ ತನಿಖೆಗಳು... ಅಮಾಯಕನಾದ ಒಬ್ಬನೇ ಆರೋಪಿಯ ಸುತ್ತಲಿನ ತನಿಖೆ-... ಕೊನೆಗೆ ಆತ ನಿರಪರಾಧಿ ಎಂದು ಸಾಬೀತು, ಆತನ ಖುಲಾಸೆ. ಹಾಗಾದರೆ 17 ವರ್ಷದ...

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ಆಮದು ಮಾಡಿಕೊಳ್ಳುವ ಔಷಧಗಳು ನಿಗದಿತ ಗುಣಮಟ್ಟ ಹಾಗೂ ಶುದ್ಧತೆಯ ಮಾನದಂಡಗಳನ್ನು ಕಡ್ಡಾಯವಾಗಿ ಪೂರೈಸುವುದು ಈ ಹೊಸ ನಿಯಮದಲ್ಲಿ ಅತ್ಯಗತ್ಯವಾಗಿದೆ. ಅದರಲ್ಲೂ ಶೇಕಡಾ 60ಕ್ಕಿಂತ ಕಡಿಮೆ ಬಳಕೆಯ ಅವಧಿ (ಶೆಲ್ಫ್ ಲೈಫ್) ಉಳಿದಿರುವ ಔಷಧಗಳ ಆಮದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಗುಣಮಟ್ಟವನ್ನು ದೃಢೀಕರಿಸಲು ಭಾರತದ ಕೇಂದ್ರೀಯ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಬೇಕಿದ್ದು, ಇದಕ್ಕಾಗಿ ಉತ್ಪಾದನೆಯ ಮೂರು ವಿಭಿನ್ನ ಬ್ಯಾಚ್‌ಗಳ ಮಾದರಿಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಇದರೊಂದಿಗೆ, ಉತ್ಪನ್ನದ ಲೇಬಲ್‌ಗಳ ಮೇಲೆ ಕ್ಯೂಆರ್ (QR) ಕೋಡ್ ಮತ್ತು ಕಾರ್ಖಾನೆಯ ವಿವರಗಳನ್ನು ಲಗತ್ತಿಸಬೇಕಾಗುತ್ತದೆ ಹಾಗೂ ಹೊಸ ಔಷಧಗಳನ್ನು ತರಿಸಿಕೊಳ್ಳುವ ಮುನ್ನ ಕ್ಲಿನಿಕಲ್ ಟ್ರಯಲ್ ನಿಯಮಗಳ ಅಡಿಯಲ್ಲಿ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.

ಈ ಹೊಸ ನಿಯಮದ ಮತ್ತೊಂದು ಪ್ರಮುಖ ಅಂಶವೆಂದರೆ, ವಿದೇಶಿ ಉತ್ಪಾದಕರು ಆಮದು ಅನುಮೋದನೆಗೆ ನೇರವಾಗಿ ಅರ್ಜಿ ಸಲ್ಲಿಸುವಂತಿಲ್ಲ. ಬದಲಾಗಿ, ಭಾರತದಲ್ಲಿರುವ ತಮ್ಮ ಅಧಿಕೃತ ಏಜೆಂಟ್ ಅಥವಾ ಅಂಗಸಂಸ್ಥೆಯ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಏಜೆಂಟ್ ಭಾರತದಲ್ಲಿ ಮಾನ್ಯತೆ ಪಡೆದ ಔಷಧ ಉತ್ಪಾದನಾ ಅಥವಾ ಸಗಟು ಮಾರಾಟ ಪರವಾನಗಿಯನ್ನು ಹೊಂದಿರಲೇಬೇಕು. ಪ್ರಸ್ತುತ ಇರುವ ನೋಂದಣಿ ಪ್ರಮಾಣಪತ್ರ ಮುಕ್ತಾಯಗೊಳ್ಳುವ 9 ತಿಂಗಳ ಮೊದಲು ಮರು-ನೋಂದಣಿಗೆ ಹಾಗೂ ಆಮದು ಪರವಾನಗಿ ಅವಧಿ ಮುಗಿಯುವ 3 ತಿಂಗಳ ಮೊದಲು ನವೀಕರಣಕ್ಕೆ ಅರ್ಜಿ ಸಲ್ಲಿಸುವುದನ್ನು ಈ ನಿಯಮಗಳು ಕಡ್ಡಾಯಗೊಳಿಸಿವೆ.

ಇದಲ್ಲದೆ, ಹೊಸ ನಿಯಮಾವಳಿಯಲ್ಲಿ ಆನ್‌ಲೈನ್ ನೋಂದಣಿ ಮತ್ತು ತಪಾಸಣಾ ಶುಲ್ಕಗಳನ್ನು ಸ್ಪಷ್ಟವಾಗಿ ನಿಗದಿಪಡಿಸಲಾಗಿದೆ. ಉತ್ಪಾದನಾ ಘಟಕದ (ಸೈಟ್) ನೋಂದಣಿಗೆ 10,000 ಅಮೆರಿಕನ್ ಡಾಲರ್ (ಸುಮಾರು ₹8.35 ಲಕ್ಷ) ಹಾಗೂ ಪ್ರತಿ ಔಷಧದ ನೋಂದಣಿಗೆ 5,000 ಡಾಲರ್ (ಸುಮಾರು ₹4.17 ಲಕ್ಷ) ಶುಲ್ಕ ನಿಗದಿಪಡಿಸಲಾಗಿದೆ. ಒಂದಕ್ಕಿಂತ ಹೆಚ್ಚು ಔಷಧಗಳಿದ್ದರೆ ಪ್ರತಿ ಹೆಚ್ಚುವರಿ ಔಷಧಕ್ಕೂ ತಲಾ 5,000 ಡಾಲರ್ (ಸುಮಾರು ₹4.17 ಲಕ್ಷ) ಪಾವತಿಸಬೇಕು.

ಇದರ ಜೊತೆಗೆ, ಅಧಿಕಾರಿಗಳು ವಿದೇಶಿ ಉತ್ಪಾದನಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ತಗುಲುವ 25,000 ಡಾಲರ್ (ಸುಮಾರು ₹20.87 ಲಕ್ಷ) ಶುಲ್ಕವನ್ನು ಉತ್ಪಾದಕರೆ ಭರಿಸಬೇಕಾಗುತ್ತದೆ. ಒಟ್ಟಾರೆಯಾಗಿ, ಆಮದು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವ ಮೂಲಕ ಮ್ಯಾನ್ಯುಯಲ್ ಕಾಗದಪತ್ರಗಳ ಓಡಾಟವನ್ನು ತಪ್ಪಿಸುವುದು ಹಾಗೂ ವಿಳಂಬವಿಲ್ಲದೆ ತ್ವರಿತವಾಗಿ ಅನುಮೋದನೆ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರ | ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿ ಕಾಲಿಗೆ ಗುಂಡೇಟು; ಸಚಿವನ ವಿಕೃತ ಹೇಳಿಕೆ

ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದ ಅಪ್ರಾಪ್ತ ವಿದ್ಯಾರ್ಥಿನಿ ಮೇಲಿನ ಭೀಕರ ದೌರ್ಜನ್ಯ...

ಹಳ್ಳಿ ಮಕ್ಕಳಿಗೆ ‘ಎಐ’ ತಂತ್ರಜ್ಞಾನ, ಉದ್ಯಮ ಆಧಾರಿತ ಪಠ್ಯಕ್ರಮಕ್ಕೆ ಒತ್ತು: ಡಿ ಕೆ ಶಿವಕುಮಾರ್

ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ‘ಕಿಯೋ’ ಕಂಪ್ಯೂಟರ್‌ಗಳ ಮೂಲಕ ಗ್ರಾಮೀಣ ಭಾಗದ...

ಸೌಜನ್ಯಳನ್ನು ಕೊಂದವರು ಯಾರು? ಹೊಸ ತನಿಖೆಯಲ್ಲಿ ಉತ್ತರ ಸಿಗುವ ನಿರೀಕ್ಷೆ

14 ವರ್ಷಗಳು... 3 ತನಿಖಾ ಸಂಸ್ಥೆಗಳಾದ ಪೊಲೀಸ್, ಸಿಐಡಿ, ಸಿಬಿಐ ತನಿಖೆಗಳು......