ಯೆಮೆನ್‌ನಲ್ಲಿ ಹೌತಿ ಕ್ಷಿಪಣಿ ದಾಳಿ: 30 ಸೈನಿಕರ ಸಾವು, ಹಲವರಿಗೆ ಗಾಯ

Date:

ಯೆಮೆನ್‌ನಲ್ಲಿ ಮತ್ತೆ ಸಂಘರ್ಷ ತೀವ್ರಗೊಂಡಿದ್ದು, ಹೌತಿ ಬಂಡುಕೋರರು ನಡೆಸಿದ ಕ್ಷಿಪಣಿ ಮತ್ತು ಡ್ರೋನ್‌ ದಾಳಿಯಲ್ಲಿ ಕನಿಷ್ಠ 30 ಸೈನಿಕರು ಮೃತಪಟ್ಟಿದ್ದಾರೆ. ಸುಮಾರು 15 ಮಂದಿ ಗಾಯಗೊಂಡಿದ್ದಾರೆ ಎಂದು ಯೆಮೆನ್‌ನ ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಅಲ್ ಜಜೀರಾ ವರದಿ ಮಾಡಿದೆ.

- Advertisement -

ದೇಶದ ಅಂತರ್ಯುದ್ಧ ಆರಂಭವಾದ ಬಳಿಕ ಹಲವು ವರ್ಷಗಳ ನಂತರ ನಡೆದ ಅತ್ಯಂತ ಮಾರಣಾಂತಿಕ ದಾಳಿಗಳಲ್ಲಿ ಇದೂ ಒಂದಾಗಿದೆ. ಇತ್ತೀಚಿನ ವಾರಗಳಲ್ಲಿ ಯೆಮೆನ್‌ನಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಈ ದಾಳಿ ನಡೆದಿದೆ. ಹೌತಿ ಮಿಲಿಟರಿ ವಕ್ತಾರ ಯಹ್ಯಾ ಸಾರೀ ಮಾತನಾಡಿ, ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಬಳಸಿಕೊಂಡು ನಡೆಸಿದ ದಾಳಿಯಲ್ಲಿ “ನೂರಾರು ಸಾವುನೋವುಗಳು” ಸಂಭವಿಸಿವೆ ಎಂದು ಹೇಳಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಜರ್ಮನಿಯಲ್ಲಿ ತೀವ್ರಗಾಮಿಗಳ ಅಬ್ಬರ: ದಿಕ್ಕುತಪ್ಪಿದ ಮಧ್ಯಮಾರ್ಗ, ಮರುಜೀವ ಪಡೆಯುತ್ತಿದೆಯೇ...

ಜರ್ಮನಿಯಲ್ಲಿ ತೀವ್ರ ಬಲಪಂಥೀಯರ ಈ ಮಟ್ಟದ ಏರಿಕೆ ಕೇವಲ ರಾಜಕೀಯ ಪೈಪೋಟಿಯಲ್ಲ, ಬದಲಾಗಿ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಜರ್ಮನಿ ಮತ್ತು ಬಲಪಂಥ ಎಂದಾಕ್ಷಣ ಇಡೀ ವಿಶ್ವಕ್ಕೆ ಅಡಾಲ್ಫ್ ಹಿಟ್ಲರ್ ಮತ್ತು ಆತನ ನಾಜಿ...

ಸೌಜನ್ಯಳನ್ನು ಕೊಂದವರು ಯಾರು? ಹೊಸ ತನಿಖೆಯಲ್ಲಿ ಉತ್ತರ ಸಿಗುವ...

14 ವರ್ಷಗಳು... 3 ತನಿಖಾ ಸಂಸ್ಥೆಗಳಾದ ಪೊಲೀಸ್, ಸಿಐಡಿ, ಸಿಬಿಐ ತನಿಖೆಗಳು... ಅಮಾಯಕನಾದ ಒಬ್ಬನೇ ಆರೋಪಿಯ ಸುತ್ತಲಿನ ತನಿಖೆ-... ಕೊನೆಗೆ ಆತ ನಿರಪರಾಧಿ ಎಂದು ಸಾಬೀತು, ಆತನ ಖುಲಾಸೆ. ಹಾಗಾದರೆ 17 ವರ್ಷದ...

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ಯೆಮೆನ್ ಸೇನೆಯೂ ದಾಳಿಯನ್ನು ದೃಢಪಡಿಸಿದ್ದು, ಹೌತಿಗಳ ವಿರುದ್ಧ ತಾವು ನಡೆಸಿದ ಕಾರ್ಯಾಚರಣೆಗಳಿಗೆ ಪ್ರತಿಯಾಗಿ ಈ ದಾಳಿ ನಡೆದಿದೆ ಎಂದು ತಿಳಿಸಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾರಿಬ್‌ನ ಉತ್ತರ ಭಾಗದಲ್ಲಿರುವ ಅಲ್-ಜೌಫ್ ಪ್ರಾಂತ್ಯದಿಂದ ಹೌತಿಗಳು ಎಂಟು ಕ್ಷಿಪಣಿಗಳನ್ನು ಹಾರಿಸಿದ್ದಾರೆ ಎಂದು ಯೆಮೆನ್ ಸೇನಾ ಮೂಲಗಳು ತಿಳಿಸಿವೆ. ಈ ಕ್ಷಿಪಣಿಗಳು ಹದ್ರಮೌತ್‌ನ ಅಲ್-ಥಿನಿಯಾ, ಅಲ್-ಅಬ್ರ್ ಮತ್ತು ಮಾರಿಬ್‌ನ ಅಲ್-ರೌಕ್ ಪ್ರದೇಶಗಳಲ್ಲಿನ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಿದ್ದವು. ಅಲ್-ಜಜೀರಾ ವರದಿ ಪ್ರಕಾರ, ಹದ್ರಮೌತ್‌ನಲ್ಲಿರುವ ಹೋಮ್‌ಲ್ಯಾಂಡ್ ಶೀಲ್ಡ್ ಫೋರ್ಸಸ್, ಎಮರ್ಜೆನ್ಸಿ ಫೋರ್ಸಸ್ ಮತ್ತು ಫಸ್ಟ್ ಮಿಲಿಟರಿ ರೀಜನ್‌ಗೆ ಸೇರಿದ ಶಿಬಿರಗಳು ದಾಳಿಗೆ ಒಳಗಾಗಿವೆ. ಸೈನಿಕರು ಬೆಳಗಿನ ತರಬೇತಿ ಅಭ್ಯಾಸಕ್ಕಾಗಿ ಒಂದೆಡೆ ಸೇರಿದ್ದ ಸಂದರ್ಭದಲ್ಲಿ ದಾಳಿ ನಡೆದಿದ್ದರಿಂದ ಹೆಚ್ಚಿನ ಸಾವುನೋವು ಸಂಭವಿಸಿದೆ ಎಂದು ಫಸ್ಟ್ ಎಮರ್ಜೆನ್ಸಿ ಡಿವಿಷನ್ ಕಮಾಂಡ್ ತಿಳಿಸಿದೆ.

2022ರಲ್ಲಿ ಸೌದಿ ಅರೇಬಿಯಾ ಬೆಂಬಲದೊಂದಿಗೆ ರಚನೆಯಾದ ಹೋಮ್‌ಲ್ಯಾಂಡ್ ಶೀಲ್ಡ್ ಫೋರ್ಸಸ್, ಮಾರಿಬ್–ಹದ್ರಮೌತ್ ಗಡಿ ಪ್ರದೇಶ ಹಾಗೂ ಸೌದಿ ಗಡಿಯ ರಕ್ಷಣೆಯ ಜವಾಬ್ದಾರಿ ಹೊಂದಿದೆ. ಈ ಪಡೆಗಳು ಈ ವರ್ಷದ ಆರಂಭದಲ್ಲಿ ಸದರ್ ಟ್ರಾನ್ಸಿಷನಲ್ ಕೌನ್ಸಿಲ್ (STC) ಪಡೆಗಳ ವಿರುದ್ಧವೂ ಹೋರಾಟ ನಡೆಸಿದ್ದವು. ಇದೇ ವೇಳೆ, 2025ರ ಕೊನೆಯಲ್ಲಿ ಅಧ್ಯಕ್ಷೀಯ ಆದೇಶದ ಮೂಲಕ ರಚಿಸಲಾದ ಎಮರ್ಜೆನ್ಸಿ ಫೋರ್ಸಸ್, ಅಲ್-ಜೌಫ್ ಮತ್ತು ಹದ್ರಮೌತ್‌ನ ಭೂ ಗಡಿಗಳ ರಕ್ಷಣೆಗೆ ನಿಯೋಜಿಸಲಾಗಿದೆ. ಹೌತಿ ವಿರೋಧಿ ಪ್ರದೇಶಗಳ ಭದ್ರತೆ ಇದರ ಪ್ರಮುಖ ಹೊಣೆಗಾರಿಕೆಯಾಗಿದೆ.

ಇದನ್ನೂ ಓದಿ: ಕ್ಷೇತ್ರ ಮರುವಿಂಗಡಣೆ ಮಸೂದೆ | ಸರ್ವಪಕ್ಷ ಸಭೆಗೆ ರಾಹುಲ್ ಒತ್ತಾಯ‌, ಕಾಂಗ್ರೆಸ್ ಬೆಂಬಲಿಸಿದರೆ ಮಾತ್ರ ಸಭೆ ಎಂದ ಕೇಂದ್ರ

ಯೆಮೆನ್‌ನಲ್ಲಿ 2014ರಿಂದ ಗೃಹಯುದ್ಧ (ಒಂದು ದೇಶದೊಳಗಿನ ಎರಡು ಅಥವಾ ಅದಕ್ಕಿಂತ ಹೆಚ್ಚು ಗುಂಪುಗಳ ನಡುವೆ ನಡೆಯುವ ಸಶಸ್ತ್ರ ಸಂಘರ್ಷ.) ನಡೆಯುತ್ತಿದೆ. ಹೌತಿಗಳು ರಾಜಧಾನಿ ಸನಾವನ್ನು ವಶಪಡಿಸಿಕೊಂಡ ಬಳಿಕ, 2015ರಲ್ಲಿ ಸೌದಿ ಅರೇಬಿಯಾ ನೇತೃತ್ವದ ಮೈತ್ರಿಪಡೆ ಯುದ್ಧದಲ್ಲಿ ಮಧ್ಯಪ್ರವೇಶಿಸಿತ್ತು. 2022ರಲ್ಲಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಜಾರಿಯಾದ ಬಳಿಕ ಸಂಘರ್ಷದ ತೀವ್ರತೆ ಕಡಿಮೆಯಾಗಿತ್ತು. ಆದರೆ ಇತ್ತೀಚಿನ ದಾಳಿಗಳು ಮತ್ತೆ ಯೆಮೆನ್‌ನಲ್ಲಿ ಅಸ್ಥಿರತೆ ಹೆಚ್ಚುತ್ತಿರುವ ಸೂಚನೆ ನೀಡಿವೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಬರಗಾಲ ಪ್ಯಾಕೇಜ್ 1000 ಕೋಟಿ ರೂ. ಘೋಷಣೆ ಸೇರಿ ಇತರೆ ಬೇಡಿಕೆ ಈಡೇರಿಕೆಗೆ ಕೆಪಿಆರ್‌ಎಸ್‌ ಆಗ್ರಹ

ರಾಜ್ಯ ಸರ್ಕಾರ ವಿಶೇಷ ಅಧಿವೇಶನದಲ್ಲಿ ಕಲಬುರಗಿ ಸಂಪೂರ್ಣ ಬರ ಪೀಡಿತ ಪ್ರದೇಶವೆಂದು...

ಮರಾಠಾ ಸಮುದಾಯದ ಸಮಗ್ರ ಸಮೀಕ್ಷೆಗೆ ಡಿಜಿಟಲ್ ಆ್ಯಪ್

ಕರ್ನಾಟಕದಲ್ಲಿರುವ ಮರಾಠಾ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಿತಿಗತಿಗಳನ್ನು...

ಬಿಡದಿ ಟೌನ್‌ಶಿಪ್ ವಿರುದ್ಧ ಹೋರಾಟ: ಉಪವಾಸನಿರತ ಮೂವರು ರೈತರು ತೀವ್ರ ಅಸ್ವಸ್ಥ

ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ – ಬಿಡದಿ ಟೌನ್‌ಶಿಪ್‌) ಯೋಜನೆ...

ದೆಹಲಿಯಲ್ಲಿ ನಿಲ್ಲದ ಅತ್ಯಾಚಾರ ಕೃತ್ಯ; ಪೊಲೀಸ್‌ ಹೆಸರಿನಲ್ಲಿ ಬಾಲಕಿ ಮೇಲೆ ಮೂವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು/ಹೆಣ್ಣು ಮಕ್ಕಳ ಮೇಲಿನ ಅಪರಾಧಗಳ ಸರಣಿ ಮುಂದುವರಿದಿದೆ....