ಮದನಪಲ್ಲಿ ಸಾರ್ವಜನಿಕ ಸಭೆಯಲ್ಲಿ ನಿರ್ಮಲಾ ಸೀತಾರಾಮನ್‌ಗೆ ಮುಜುಗರ; ಭಾಷಣದ ನಡುವೆ ಗದ್ದಲ, ನಾಯ್ಡು ಮಧ್ಯಪ್ರವೇಶ

Date:

ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಭಾಷಣದ ವೇಳೆ ಕೆಲಕಾಲ ಗದ್ದಲ ಉಂಟಾದ ಘಟನೆ ಇದೀಗ ಕಾಂಗ್ರೆಸ್‌ ಮತ್ತು ಎನ್‌ಡಿಎ ನಡುವೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

- Advertisement -

ಅಕ್ಟೋಬರ್‌ 2ರಂದು ನಡೆದ ಕಾರ್ಯಕ್ರಮದ ಸುಮಾರು 30 ಸೆಕೆಂಡ್‌ಗಳ ವಿಡಿಯೋ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ವೈರಲ್‌ ಆಗಿದ್ದು, ಜನರು ಉದ್ಯೋಗಕ್ಕಾಗಿ ಘೋಷಣೆ ಕೂಗಿದ್ದರು ಎಂಬ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಅವರ ಹೇಳಿಕೆಯನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು, ಸೀತಾರಾಮನ್‌ ಹಾಗೂ ಟಿಡಿಪಿ-ಬಿಜೆಪಿ ನಾಯಕರು ತಳ್ಳಿಹಾಕಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಮದನಪಲ್ಲಿಯಲ್ಲಿ ನಡೆದ ‘ಗ್ಲೋಬಲ್‌ ಹಾರ್ಟಿಕಲ್ಚರ್‌ ಹಬ್‌–ರಾಯಲಸೀಮಾ ರೈಸಿಂಗ್‌’ ಯೋಜನೆಯ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಸೀತಾರಾಮನ್‌ ತೆಲುಗಿನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಸಭಿಕರ ಒಂದು ಭಾಗದಿಂದ ಘೋಷಣೆಗಳು ಕೇಳಿಬಂದಿದ್ದು, ವೈರಲ್‌ ಆಗಿರುವ ವಿಡಿಯೋದಲ್ಲಿ ಅವರು ಎರಡು ಬಾರಿ ಒಂದು ನಿಮಿಷ ತಮ್ಮ ಮಾತು ಕೇಳುವಂತೆ ಮನವಿ ಮಾಡುತ್ತಿರುವುದು ಕಾಣಿಸುತ್ತದೆ. ಬಳಿಕ ಅವರು ಕೆಲಕಾಲ ವೇದಿಕೆಯ ಬದಿಗೆ ಸರಿದಿದ್ದಾರೆ.

ಈ ವೇಳೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೈಕ್‌ ಪಡೆದು ಸಭಿಕರನ್ನು ಶಾಂತಗೊಳಿಸಿದ್ದಾರೆ. ಸೀತಾರಾಮನ್‌ ಅವರ ಸಂದೇಶ ರೈತರ ಭವಿಷ್ಯಕ್ಕೆ ಮಹತ್ವದ್ದಾಗಿದೆ ಎಂದು ಹೇಳಿದ ಅವರು, ತಾವು ಹಾಗೂ ಉಪಮುಖ್ಯಮಂತ್ರಿ ಕೆ. ಪವನ್‌ ಕಲ್ಯಾಣ್‌ ಕಾರ್ಯಕ್ರಮದ ಬಳಿಕ ಹೊರಗೆ ಬಂದು ಸಭಿಕರೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ. ಆ ಬಳಿಕ ಸಭಿಕರು ತಮಗೆ ಬೇಕಾದ ಘೋಷಣೆಗಳನ್ನು ಕೂಗಬಹುದು ಎಂದೂ ಹೇಳಿದ್ದಾರೆ. ಸುಮಾರು 70 ಸೆಕೆಂಡ್‌ಗಳ ಬಳಿಕ ಸೀತಾರಾಮನ್‌ ಮತ್ತೆ ಭಾಷಣ ಮುಂದುವರಿಸಿದ್ದಾರೆ.

ವೈರಲ್‌ ವಿಡಿಯೋವನ್ನು ಹಂಚಿಕೊಂಡಿದ್ದ ಸಾಮಾಜಿಕ ಮಾಧ್ಯಮ ಬಳಕೆದಾರರು, ಸಭಿಕರು ‘ಮೊದಲು ಉದ್ಯೋಗ ನೀಡಿ’ ಎಂಬ ಘೋಷಣೆ ಕೂಗಿದ್ದರು ಎಂದು ಹೇಳಿದ್ದರು. ಈ ಪೋಸ್ಟ್‌ ಅನ್ನು ಜೈರಾಮ್‌ ರಮೇಶ್‌ ಮರುಹಂಚಿಕೊಂಡು, ಘಟನೆ ಜನರ ಆಕ್ರೋಶವನ್ನು ತೋರಿಸುತ್ತದೆ ಎಂದು ಹೇಳಿದರು.

ಜೈರಾಮ್‌ ರಮೇಶ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಚಂದ್ರಬಾಬು ನಾಯ್ಡು, ಘಟನೆಗೆ ನೀಡಿರುವ ಅವರ ವ್ಯಾಖ್ಯಾನ ವಾಸ್ತವಕ್ಕೆ ಸಂಪೂರ್ಣ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಜನರ ಉತ್ಸಾಹದಿಂದಾಗಿ ಕಾರ್ಯಕ್ರಮ ಸುಗಮವಾಗಿ ನಡೆಯಲು ತಾವು ಮಧ್ಯಪ್ರವೇಶಿಸಬೇಕಾಯಿತು ಎಂದು ಸಮರ್ಥಿಸಿದ್ದಾರೆ.

ಜನರ ಉತ್ಸಾಹವನ್ನು ಆಕ್ರೋಶವೆಂದು ಅರ್ಥೈಸುವುದು ಆಂಧ್ರಪ್ರದೇಶದ ಜನರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳದಿರುವುದನ್ನು ತೋರಿಸುತ್ತದೆ ಎಂದು ನಾಯ್ಡು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ರಾಜಕೀಯ ಉದ್ದೇಶದಿಂದ ರೂಪಿಸಲಾಗುವ ನಿರೂಪಣೆಗಳು ಜನರು ವ್ಯಕ್ತಪಡಿಸಿದ ನೈಜ ಭಾವನೆಗಳನ್ನು ಬದಲಿಸಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.

ಸೀತಾರಾಮನ್‌ ಕೂಡ ಜೈರಾಮ್‌ ರಮೇಶ್‌ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಟಿಡಿಪಿ ಮತ್ತು ಜನಸೇನಾ ಪಕ್ಷದ ಕಾರ್ಯಕರ್ತರು ನಾಯ್ಡು ಮತ್ತು ಪವನ್‌ ಕಲ್ಯಾಣ್‌ ಅವರೊಂದಿಗೆ ಮಾತನಾಡಲು ಉತ್ಸುಕರಾಗಿದ್ದರು. ಕಾರ್ಯಕ್ರಮದ ಬಳಿಕ ಇಬ್ಬರೂ ಹೊರಗೆ ಬಂದು ಅವರೊಂದಿಗೆ ಮಾತನಾಡುವುದಾಗಿ ನಾಯ್ಡು ತಿಳಿಸಿದ್ದರು. ಅಷ್ಟೇ ನಡೆದಿದ್ದು ಎಂದು ಸೀತಾರಾಮನ್‌ ಸ್ಪಷ್ಟಪಡಿಸಿದ್ದಾರೆ.

ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್‌ ಕೂಡ ಜೈರಾಮ್‌ ರಮೇಶ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉದ್ಯೋಗಕ್ಕಾಗಿ ಯುವಕರು ಪ್ರತಿಭಟಿಸಿ ಸೀತಾರಾಮನ್‌ ಅವರ ಭಾಷಣಕ್ಕೆ ಅಡ್ಡಿಪಡಿಸಿದ್ದಾರೆ ಎಂಬುದು ತಪ್ಪು ಮಾಹಿತಿ ಎಂದು ಅವರು ಹೇಳಿದ್ದಾರೆ. ಉತ್ಸಾಹಭರಿತ ಸಭಿಕರೊಂದಿಗೆ ನಡೆದ ಸಾಮಾನ್ಯ ಸಂವಾದವನ್ನು ಆಯ್ದುಕೊಂಡು ವಿಡಿಯೋವನ್ನು ಕತ್ತರಿಸಿ, ತಪ್ಪು ನಿರೂಪಣೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ವಾಸ್ತವ ಪರಿಶೀಲನೆ ನಡೆಸಿ ಪೋಸ್ಟ್‌ ಅಳಿಸುವಂತೆ ರಮೇಶ್‌ ಅವರನ್ನು ಒತ್ತಾಯಿಸಿದ್ದಾರೆ.

ಆಂಧ್ರಪ್ರದೇಶ ಬಿಜೆಪಿ ಅಧ್ಯಕ್ಷ ಪಿ.ವಿ.ಎನ್‌. ಮಾಧವ್‌ ಕೂಡ ಇದೇ ನಿಲುವು ವ್ಯಕ್ತಪಡಿಸಿದ್ದು, ಸಾಮಾನ್ಯ ಸಭಿಕರ ಸಂವಾದವನ್ನು ಉದ್ಯೋಗದ ಮೇಲಿನ ಸಂಘಟಿತ ಪ್ರತಿಭಟನೆ ಎಂಬಂತೆ ಬಿಂಬಿಸಲಾಗಿದೆ ಎಂದು ಹೇಳಿದ್ದಾರೆ.

ಸೀತಾರಾಮನ್‌ ₹1 ಲಕ್ಷ ಕೋಟಿ ಅಂದಾಜಿನ ಗ್ಲೋಬಲ್‌ ಹಾರ್ಟಿಕಲ್ಚರ್‌ ಹಬ್‌ ಹಾಗೂ ಇಂಡಿಯನ್‌ ಸ್ಕೂಲ್‌ ಆಫ್‌ ಅಗ್ರಿಕಲ್ಚರ್‌ (ISA)ಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಯೋಜನೆಯಡಿ ರಾಯಲಸೀಮಾದಲ್ಲಿ ತೋಟಗಾರಿಕೆ ವಿಸ್ತರಣೆ, ಸಂಸ್ಕರಣೆ, ಮಾರುಕಟ್ಟೆ ಮತ್ತು ರಫ್ತು ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶವಿದೆ. ಸುಮಾರು 201 ಕ್ಲಸ್ಟರ್‌ಗಳ ಮೂಲಕ 5,869 ಗ್ರಾಮಗಳನ್ನು ಒಳಗೊಳ್ಳುವ ಹಾಗೂ ತೋಟಗಾರಿಕೆ ಪ್ರದೇಶವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ.

ರಾಯಲಸೀಮೆ ಭಾಗದ ಆರ್ಥಿಕತೆಯಲ್ಲಿ ಕೃಷಿ ಮತ್ತು ತೋಟಗಾರಿಕೆಗೆ ದೊಡ್ಡ ಪಾತ್ರವಿದ್ದು, ಕೃಷಿಯಿಂದ ಹೆಚ್ಚಿನ ಆದಾಯ, ಸಂಸ್ಕರಣೆ, ಸಂಗ್ರಹಣೆ, ಸಾರಿಗೆ ಮತ್ತು ಮಾರುಕಟ್ಟೆ ಸಂಪರ್ಕ ಸೃಷ್ಟಿಸುವುದು ಉದ್ಯೋಗದ ಸ್ವರೂಪವನ್ನೇ ಬದಲಿಸಬಹುದಾದ ಪ್ರಮುಖ ಅಂಶಗಳಾಗಿವೆ.

ಇದನ್ನೂ ಓದಿ: ಕೇಂದ್ರ ಬಜೆಟ್ | ಬಿಜೆಪಿ ಮಿತ್ರರಾದ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ತಮ್ಮ ರಾಜ್ಯಕ್ಕೆ ಗಳಿಸಿದ್ದೇನು?

ಇದನ್ನೇ ಗುರಿಯಾಗಿಸಿಕೊಂಡಿರುವ ₹1 ಲಕ್ಷ ಕೋಟಿ ಗ್ಲೋಬಲ್‌ ಹಾರ್ಟಿಕಲ್ಚರ್‌ ಹಬ್‌ ಯೋಜನೆ 10 ಜಿಲ್ಲೆಗಳ 303 ಮಂಡಲಗಳ 5,869 ಗ್ರಾಮಗಳನ್ನು 201 ತೋಟಗಾರಿಕಾ ಕ್ಲಸ್ಟರ್‌ಗಳ ಮೂಲಕ ಒಳಗೊಳ್ಳಲಿದೆ. ಯೋಜನೆಯಡಿ ತೋಟಗಾರಿಕಾ ಪ್ರದೇಶವನ್ನು 8.41 ಲಕ್ಷ ಹೆಕ್ಟೇರ್‌ನಿಂದ 14.41 ಲಕ್ಷ ಹೆಕ್ಟೇರ್‌ಗೆ ವಿಸ್ತರಿಸುವ ಹಾಗೂ ಉತ್ಪಾದನೆಯನ್ನು 222 ಲಕ್ಷ ಮೆಟ್ರಿಕ್‌ ಟನ್‌ನಿಂದ 435 ಲಕ್ಷ ಮೆಟ್ರಿಕ್‌ ಟನ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಸುಮಾರು 9.6 ಲಕ್ಷ ರೈತ ಕುಟುಂಬಗಳು ನೇರವಾಗಿ ಪ್ರಯೋಜನ ಪಡೆಯಲಿವೆ ಎಂದು ಸರ್ಕಾರದ ಯೋಜನಾ ವಿವರಗಳು ಹೇಳುತ್ತವೆ. ಆದರೆ “ಯೋಜನೆಯಿಂದ ಎಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ?” ಎಂಬುದೂ ಮುಖ್ಯ. ಯೋಜನೆಯಲ್ಲಿ ಸುಮಾರು ₹40,352 ಕೋಟಿ ಸಾರ್ವಜನಿಕ ಹೂಡಿಕೆ ಮತ್ತು ₹60,000 ಕೋಟಿ ಖಾಸಗಿ ವಲಯದ ಹೂಡಿಕೆಯನ್ನು ನಿರೀಕ್ಷಿಸಲಾಗಿದೆ. ಹಣವು ನೀರಾವರಿ, ತೋಟಗಾರಿಕೆ, ಗ್ರಾಮೀಣ ರಸ್ತೆಗಳು, ಕೋಲ್ಡ್‌ ಚೈನ್‌, ಪ್ಯಾಕ್‌ಹೌಸ್‌ಗಳು, ಸಂಸ್ಕರಣೆ ಮತ್ತು ರಫ್ತು ಮೂಲಸೌಕರ್ಯಕ್ಕೆ ಹರಿಯಲಿದೆ.

ಇಲ್ಲಿಯೇ ರೈತರು ಬೆಳೆಯುವ ಮಾವು, ಬಾಳೆ, ಟೊಮೆಟೊ, ದಾಳಿಂಬೆ ಮತ್ತಿತರ ಉತ್ಪನ್ನಗಳು ಕೇವಲ ಕಚ್ಚಾ ಉತ್ಪನ್ನವಾಗಿ ಮಾರುಕಟ್ಟೆಗೆ ಹೋಗದೆ, ಸ್ಥಳೀಯವಾಗಿಯೇ ಗ್ರೇಡಿಂಗ್‌, ಪ್ಯಾಕೇಜಿಂಗ್‌, ಶೀತಸಂಗ್ರಹ, ಆಹಾರ ಸಂಸ್ಕರಣೆ, ಸಾರಿಗೆ, ರಫ್ತು ಮತ್ತು ಮಾರುಕಟ್ಟೆ ಹಂತಗಳನ್ನು ದಾಟಿದರೆ ಕೃಷಿಯ ಸುತ್ತಲಿನ ಉದ್ಯೋಗಗಳ ಸಂಖ್ಯೆ ಮತ್ತು ಮೌಲ್ಯ ಎರಡೂ ಹೆಚ್ಚುವ ಸಾಧ್ಯತೆ ಇದೆ.

ಆಂಧ್ರಪ್ರದೇಶದ 2024–25ರ ಸಾಮಾಜಿಕ-ಆರ್ಥಿಕ ಸಮೀಕ್ಷೆಯೂ ತೋಟಗಾರಿಕೆಯನ್ನು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವೆಂದು ಗುರುತಿಸಿದ್ದು, ಮುಂದಿನ ವರ್ಷಗಳಲ್ಲಿ ರಾಯಲಸೀಮಾ ಸೇರಿದಂತೆ ರಾಜ್ಯದಲ್ಲಿ ಮೈಕ್ರೋ-ನೀರಾವರಿ ಮತ್ತು ವಾಣಿಜ್ಯ ತೋಟಗಾರಿಕೆಯನ್ನು ವಿಸ್ತರಿಸುವ ಗುರಿ ಹೊಂದಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ | ₹135.95 ಕೋಟಿ ಸಂಸದರ ನಿಧಿಯಲ್ಲಿ ಬಳಕೆಯಾಗಿದ್ದು ಕೇವಲ ಶೇ.18 ಮಾತ್ರ

ಉತ್ತರಾಖಂಡದ ಲೋಕಸಭೆ ಮತ್ತು ರಾಜ್ಯಸಭೆಯ ಹಾಲಿ ಸಂಸದರು ತಮಗೆ ಅಭಿವೃದ್ಧಿ ಕಾಮಗಾರಿಗಳಿಗಾಗಿ...

ಬೀದರ್‌ | ಚಾಕುವಿನಿಂದ ಇರಿದು ಮಾವನನ್ನೆ ಕೊಂದ ಅಳಿಯ

ಹಣ ನೀಡುವ ವಿಚಾರಕ್ಕೆ ಹಲವು ದಿನಗಳಿಂದ ನಡೆಯುತ್ತಿದ್ದ ಗಲಾಟೆ ವಿಕೋಪಕ್ಕೆ ತಿರುಗಿ,...

ಕಲಬುರಗಿ | ₹3 ಸಾವಿರ ಲಂಚ ಸ್ವೀಕಾರ: ಪೊಲೀಸ್ ಕಾನ್‌ಸ್ಟೆಬಲ್ ಲೋಕಾಯುಕ್ತ ಬಲೆಗೆ

ಜಾಮೀನು ಪಡೆದ ವ್ಯಕ್ತಿಯ ಹಾಜರಾತಿ ದಾಖಲಿಸುವ ವಿಚಾರದಲ್ಲಿ ₹3 ಸಾವಿರ ಲಂಚ...