10ನೇ ಬಾರಿಗೆ ಬಿಹಾರ ಸಿಎಂ ಆದ ನಿತೀಶ್‌ ಕುಮಾರ್‌; ಸಂಪುಟದಲ್ಲಿ 26 ಮಂದಿ ಸಚಿವರು

Date:

ಹತ್ತನೆಯ ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್ ಅವರ ನೂತನ ಸಂಪುಟದಲ್ಲಿ ಜಾತಿವಾರು ಪ್ರಾತಿನಿಧ್ಯ ನೀಡಲಾಗಿದೆ.ಹಿಂದಿನ ಸಂಪುಟದಲ್ಲಿದ್ದ ಏಕೈಕ ಮುಸ್ಲಿಂ ಸಚಿವರನ್ನು ಮತ್ತೆ ಪರಿಗಣಿಸಲಾಗಿದೆ.

- Advertisement -

ಸಂಪುಟದಲ್ಲಿ ಮೇಲ್ವರ್ಗದ 8 ಮಂದಿಗೆ ಅವಕಾಶ ನೀಡಲಾಗಿದೆ ಭೂಮಿಹಾರ್‌ ಸಮುದಾಯದ ಇಬ್ಬರಿಗೆ ಅವಕಾಶ ನೀಡಲಾಗಿದ್ದು, ವಿಜಯ್ ಕುಮಾರ್ ಸಿನ್ಹಾ, ವಿಜಯ್ ಕುಮಾರ್ ಚೌಧರಿ ಸಂಪುಟ ಸೇರಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

ರಜಪೂತ ಸಮುದಾಯದ 4 ಮಂದಿ ಸಂಜಯ್ ಸಿಂಗ್ ಟೈಗರ್, ಶ್ರೇಯಸಿ ಸಿಂಗ್, ಸಂಜಯ್ ಕುಮಾರ್ ಸಿಂಗ್ ಸಚಿವರಾಗಿದ್ದಾರೆ. ಬ್ರಾಹ್ಮಣ ಸಮುದಾಯದ ಮಂಗಲ್ ಪಾಂಡೆ ಮತ್ತು ಕಾಯಸ್ಥ ಸಮುದಾಯದ ನಿತಿನ್ ನವೀನ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ದಲಿತ ಸಮುದಾಯದ 5 ಮಂದಿ ಸಚಿವರಾಗಿದ್ದು ಅಶೋಕ್ ಚೌಧರಿ (ಪಾಸಿ), ಸಂತೋಷ್ ಕುಮಾರ್ ಸುಮನ್ (ಮುಷಾರ್), ಸುನಿಲ್ ಕುಮಾರ್, ಸಂಜಯ್ ಕುಮಾರ್ (ಪಾಸ್ವಾನ್), ಮತ್ತು ಲಖೇಂದ್ರ ಕುಮಾರ್ ರೋಷನ್ (ಪಾಸ್ವಾನ್) ಅವರನ್ನು ಪರಿಗಣಿಸಲಾಗಿದೆ.

ಹಿಂದುಳಿದ ವರ್ಗಕ್ಕೂ ಸಹ 8 ಸ್ಥಾನ ನೀಡಲಾಗಿದ್ದು ಇದರಲ್ಲಿ 2 ಕುಶ್ವಾಹರು ಸಾಮ್ರಾಟ್ ಚೌಧರಿ, ದೀಪಕ್ ಪ್ರಕಾಶ್ ಸಚಿವರಾಗಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕೃಷಿಕ ಕುರ್ಮಿ ಸಮುದಾಯದ ಶ್ರವಣ್ ಕುಮಾರ್ ಸಚಿವರಾಗಿದ್ದಾರೆ. ಯಾದವ ಸಮುದಾಯದ ಇಬ್ಬರನ್ನು ಪರಿಗಣಿಸಲಾಗಿದ್ದು ವಿಜೇಂದ್ರ ಪ್ರಸಾದ್ ಯಾದವ್, ರಾಮಕೃಪಾಲ್ ಯಾದವ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ವೈಶ್ಯ ಸಮುದಾಯದ ದಿಲೀಪ್ ಜೈಸ್ವಾಲ್, ಅರುಣ್ ಶಂಕರ್ ಪ್ರಸಾದ್, ನಾರಾಯಣ ಪ್ರಸಾದ್ ಸಚಿವರಾಗಿದ್ದು ಮೂವರಿಗೆ ಪ್ರಾತಿನಿಧ್ಯ ನೀಡಿದಂತಾಗಿದೆ.

ಏಕೈಕ ಮುಸ್ಲಿಂ ಪ್ರತಿನಿಧಿ ಮೊಹಮ್ಮದ್ ಜಾಮಾ ಖಾನ್ ಸಂಪುಟ ಸೇರಿದ್ದು ಈ ಹಿಂದೆಯೂ ಸಚಿವರಾಗಿದ್ದು ಅವರನ್ನು ಮತ್ತೆ ಪರಿಗಣಿಸಲಾಗಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕಬ್ಬಿನ ನಂತರ ಮೆಕ್ಕೆಜೋಳ, ಬೀದಿಗೆ ಬಂದ ರೈತರ ಬದುಕು

ಅತ್ಯಂತ ಹಿಂದುಳಿದ ಜಾತಿಗಳ ಪ್ರತಿನಿಧಿಗಳಾಗಿ ನಾಲ್ವರು ಸಚಿವರಾಗಿದ್ದಾರೆ. ಸಹಾನಿ/ನಿಶಾದ್ ನಾಯಕರಾದ ಮದನ್ ಸಾಹ್ನಿ ಮತ್ತು ರಾಮ ನಿಶಾದ್, ಚಂದ್ರವಂಶಿ ಪ್ರತಿನಿಧಿ ಡಾ.ಪ್ರಮೋದ್ ಕುಮಾರ್ ಮತ್ತು ಧನುಕ್ ನಾಯಕ ಸುರೇಂದ್ರ ಮೆಹ್ತಾ ಸಚಿವರಾಗಿದ್ದಾರೆ.

26 ಮಂದಿ ಸಚಿವರ ಪಟ್ಟಿ ಇಂತಿದೆ

ಡಿಸಿಎಂ ಸಾಮ್ರಾಟ್ ಚೌಧರಿ (ಬಿಜೆಪಿ)

ಡಿಸಿಎಂ ವಿಜಯ್ ಕುಮಾರ್ ಸಿನ್ಹಾ (ಬಿಜೆಪಿ)

ದಿಲೀಪ್ ಜೈಸ್ವಾಲ್ (ಬಿಜೆಪಿ)

ಮಂಗಲ್ ಪಾಂಡೆ (ಬಿಜೆಪಿ)

ವಿಜಯ್ ಕುಮಾರ್ ಚೌಧರಿ (ಜೆಡಿಯು)

ಬಿಜೇಂದ್ರ ಪ್ರಸಾದ್ ಯಾದವ್ (ಜೆಡಿಯು)

ಶ್ರವಣ್ ಕುಮಾರ್ (ಜೆಡಿಯು)

ಅಶೋಕ್ ಚೌಧರಿ (ಜೆಡಿಯು)

ಲೇಶಿ ಸಿಂಗ್ (ಜೆಡಿಯು)

ಮದನ್ ಸಾಹ್ನಿ (ಜೆಡಿಯು)

ಸುನೀಲ್ ಕುಮಾರ್ (ಜೆಡಿಯು)

ರಾಮ್ ಕೃಪಾಲ್ ಯಾದವ್ (ಬಿಜೆಪಿ)

ಸಂತೋಷ್ ಸುಮನ್ (ಬಿಜೆಪಿ)

ನಿತಿನ್ ನಬಿನ್ (ಬಿಜೆಪಿ)

ಮೊಹಮ್ಮದ್ ಜಮಾ ಖಾನ್ (ಜೆಡಿಯು)

ಸಂಜಯ್ ಸಿಂಗ್ ಟೈಗರ್ (ಬಿಜೆಪಿ)

ಅರುಣ್ ಶಂಕರ್ ಪ್ರಸಾದ್ (ಬಿಜೆಪಿ)

ಸುರೇಂದ್ರ ಮೆಹ್ತಾ (ಬಿಜೆಪಿ)

ನಾರಾಯಣ ಪ್ರಸಾದ್ (ಬಿಜೆಪಿ)

ರಾಮ ನಿಶಾದ್ (ಬಿಜೆಪಿ)

ಲಖೇಂದ್ರ ಕುಮಾರ್ ರೋಷನ್ (ಬಿಜೆಪಿ)

ಪ್ರಮೋದ್ ಕುಮಾರ್ (ಬಿಜೆಪಿ)

ಸಂಜಯ್ ಕುಮಾರ್ ಸಿಂಗ್ (ಬಿಜೆಪಿ)

ದೀಪಕ್ ಪ್ರಕಾಶ್ (ಬಿಜೆಪಿ)

ಸಂಜಯ್ ಕುಮಾರ್ (ಬಿಜೆಪಿ)

ಶ್ರೇಯಸಿ ಸಿಂಗ್ (ಬಿಜೆಪಿ)

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಂಗಾಳವನ್ನು BJPಗೆ ಕೊಟ್ಟ ಗ್ಯಾನೇಶ್‌ ಕುಮಾರ್‌ಗೆ ‘ಭಾರತ ರತ್ನ’ ಕೊಡಿ: ಜೆಕೆ ಸಿಎಂ ಒಮರ್ ಅಬ್ದುಲ್ಲಾ

ಇಡೀ ಪಶ್ಚಿಮ ಬಂಗಾಳವನ್ನೇ ಬಿಜೆಪಿಗೆ ಒಪ್ಪಿಸಿರುವ ಕೇಂದ್ರ ಚುನಾವಣಾ ಆಯೋಗದ (ECI)...

ನಾವು ‘ಇಂಡಿಯಾ’ ಒಕ್ಕೂಟದ ಭಾಗವಲ್ಲ, ಸಭೆಗೆ ಹಾಜರಾಗಲ್ಲ: ಎಎಪಿ ನಾಯಕ ಸಂಜಯ್ ಸಿಂಗ್

ವಿಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ಪ್ರಮುಖ ಸಭೆಯಿಂದ ಆಮ್ ಆದ್ಮಿ ಪಾರ್ಟಿ (ಎಎಪಿ)...

SIR | ಫಾರ್ಮ್-6 ಹೆಚ್ಚುವರಿ ನಿಯಮ ಹಿಂಪಡೆದ ಚುನಾವಣಾ ಆಯೋಗ; ಆದರೆ, ಪೂರ್ಣ ವಿನಾಯಿತಿಯಲ್ಲ

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಹೊಸ ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ಸಂಕೀರ್ಣ ಕಾಗದಪತ್ರಗಳ ಕಟ್ಟುನಿಟ್ಟಿನ...

​’ಇದು ಶತಮಾನದ ಅತಿ ದೊಡ್ಡ ನಾಟಕ’: ನಿರ್ಮಲಾ ಸೀತಾರಾಮನ್ ಸಿಟಿ ಬಸ್ ಪ್ರಯಾಣಕ್ಕೆ ನೆಟ್ಟಿಗರ ಕಟು ಟೀಕೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ...