ಈ ದಿನ ಸಂಪಾದಕೀಯ | ಕಬ್ಬಿನ ನಂತರ ಮೆಕ್ಕೆಜೋಳ, ಬೀದಿಗೆ ಬಂದ ರೈತರ ಬದುಕು

Date:

ಕೇಂದ್ರವೇ ಆಗಲಿ, ರಾಜ್ಯವೇ ಆಗಲಿ 'ನಮ್ಮದು ರೈತಪರ ಸರ್ಕಾರ' ಎನ್ನುವುದನ್ನು ಟ್ರಂಪ್ ಕಾರ್ಡ್‌ನಂತೆ ಬಳಸುವುದನ್ನು ಬಿಟ್ಟಿಲ್ಲ. ತಮಗೆ ಬೇಕಾದ ಬೆಳೆಗಳನ್ನು ಬೆಳೆಯದ ಹೊರತು; ಸ್ಪಂದಿಸುವ ಸರ್ಕಾರಗಳನ್ನು ಚುನಾಯಿಸಿಕೊಳ್ಳದ ಹೊರತು, ರೈತರಿಗೆ ಬೇರೆ ಮಾರ್ಗವಿಲ್ಲ.

ರಾಜ್ಯದಲ್ಲಿ ಈ ಬಾರಿ ಸಮಯಕ್ಕೆ ಸರಿಯಾಗಿ ಮಳೆ ಬಾರದಿರುವುದರಿಂದ ಬೇಸಾಯಗಾರರು ಭಾರೀ ಬಾಧೆಗೆ ಒಳಗಾಗಿದ್ದಾರೆ. ಬದುಕಿಗೆ ಆಸರೆಯಾದ ಕೃಷಿ ಕೈ ಕೊಟ್ಟಿದೆ. ಕಳವಳಕ್ಕೀಡು ಮಾಡಿದೆ. ಕಷ್ಟಕ್ಕೆ ದೂಡಿದೆ. ಕಳೆದ ವಾರ ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನೀಡಿ ಎಂದು ಬೀದಿಗಿಳಿದ ರಾಜ್ಯದ ರೈತರು, ಇಂದು ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಬೇಕು, ಸರ್ಕಾರ ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ.

- Advertisement -

ರೈತರು ಹೀಗೆ ಬೀದಿಗಿಳಿದು ಹೋರಾಟ ಮಾಡಲು ಮುಖ್ಯ ಕಾರಣ, ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ ಯೋಗ್ಯ ಬೆಲೆ ಸಿಗುತ್ತಿಲ್ಲ ಎನ್ನುವುದಾಗಿದೆ. ರೈತ ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಎಂಬುದು ರೈತರಿಗೆ ಬೆಲೆ ಭದ್ರತೆ ಒದಗಿಸುವ ಉದ್ದೇಶದಿಂದ ಸರ್ಕಾರವೇ ರೂಪಿಸಿದ್ದಾಗಿದೆ. ಆದರೆ, ಅದೇ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಘೋಷಿಸದೆ, ಬೆಳೆ ಖರೀದಿಸದೆ, ಕಾಲಕ್ಕೆ ಸರಿಯಾಗಿ ಹಣ ಸಂದಾಯ ಮಾಡದೆ ಸತಾಯಿಸುತ್ತಿದೆ. ಸಾಲದ ಸುಳಿಗೆ ಸಿಕ್ಕ ರೈತರ ಆತ್ಮಹತ್ಯೆಗೂ ಕಾರಣವಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಇದನ್ನು ಓದಿದ್ದೀರಾ?: ಪೆಹ್ಲೂಖಾನ್‌ಗೆ ಬಗೆದ ಅದೇ ದ್ರೋಹ ಕಾದಿದೆಯೇ ಅಖ್ಲಾಕ್‌ಗೆ?

ಕಳೆದ ವರ್ಷ ಮುಕ್ತ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಮೆಕ್ಕೆಜೋಳದ ಬೆಲೆ ರೂ. 3,200ಕ್ಕೂ ಮೀರಿತ್ತು. ಇದು ರೈತರಲ್ಲಿ, ತಮ್ಮ ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತದೆ ಎಂಬ ಆಸೆ ಹುಟ್ಟಿಸಿ, ಬಯಲುಸೀಮೆಯ ರೈತರೆನ್ನದೆ, ಎಲ್ಲರೂ ಮೆಕ್ಕೆಜೋಳ ಬೆಳೆಯಲಾರಂಭಿಸಿದರು. ಚಿತ್ರದುರ್ಗದಲ್ಲಿ ಈರುಳ್ಳಿ, ಹಾಸನದಲ್ಲಿ ಆಲೂಗಡ್ಡೆ, ಮಂಡ್ಯದಲ್ಲಿ ಕಬ್ಬು ಬೆಳೆಯುತ್ತಿದ್ದವರು ಮೆಕ್ಕೆಜೋಳ ಬೆಳೆಯಲು ಶುರು ಮಾಡಿದ್ದರು.

ಇದರ ಫಲವಾಗಿ, ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ರಾಜ್ಯ ಮೆಕ್ಕೆಜೋಳ ಬೆಳೆಯುವುದರಲ್ಲಿ ಮುಂಚೂಣಿಯಲ್ಲಿದೆ, ಎರಡನೇ ಅತಿದೊಡ್ಡ ಉತ್ಪಾದಕ ರಾಜ್ಯವಾಗಿ ಗುರುತಿಸಿಕೊಂಡಿದೆ. ಅದರಲ್ಲೂ ದಾವಣಗೆರೆ ಜಿಲ್ಲೆ ಅತಿ ಹೆಚ್ಚು ಬೆಳೆಯುತ್ತಿದೆ. ರಾಜ್ಯದ ಮೆಕ್ಕೆಜೋಳ ಉತ್ಪಾದನೆಯು ದೇಶದ ಒಟ್ಟು ಉತ್ಪಾದನೆಯ ಶೇ. 15ರಷ್ಟಿದೆ.

ಈ ಮಟ್ಟದಲ್ಲಿ ರೈತರು ಮೆಕ್ಕೆಜೋಳದತ್ತ ಒಲವು ತೋರಲು, ವಲಸೆ ಹೋಗಲು ಹಲವು ಕಾರಣಗಳೂ ಇವೆ. ಅದರಲ್ಲಿ ಮುಖ್ಯವಾಗಿ- ಮೆಕ್ಕೆಜೋಳ ಹೆಚ್ಚು ಶ್ರಮ ಬೇಡುವುದಿಲ್ಲ; ಹೆಚ್ಚಿಗೆ ನೀರು, ಗೊಬ್ಬರ, ಔಷಧಿಯನ್ನೂ ಕೇಳುವುದಿಲ್ಲ. ಜೊತೆಗೆ ನೂರರಿಂದ ನೂರಹತ್ತು ದಿನಗಳಲ್ಲಿ ಒಂದು ಹೆಕ್ಟೇರ್‍‌ಗೆ 60ರಿಂದ 80 ಕ್ವಿಂಟಲ್ ಬೆಳೆಯಬಹುದಾಗಿದೆ.

ಮೆಕ್ಕೆಜೋಳವು ಆಹಾರ, ಪಶುಆಹಾರ, ಎಥನಾಲ್ ಉತ್ಪಾದನೆ ಮತ್ತು ಇತರ ಉದ್ಯಮಗಳಿಗೆ ಬಳಕೆಯಾಗುವುದರಿಂದ ಬೇಡಿಕೆಯೂ ಹೆಚ್ಚಾಗಿದೆ. ಎಳೆಯ ಹಾಲುಳ್ಳ ಮೆಕ್ಕೆಜೋಳ(ಬೇಬಿ ಕಾರ್ನ್) ಹೋಟೆಲ್ ಉದ್ಯಮಕ್ಕೆ ಹಾಗೂ ಹೆಚ್ಚಿನ ಹಾಲು ಇಳುವರಿಗೆ ಪಶು ಆಹಾರಕ್ಕೆ ಬಳಸಲ್ಪಡುತ್ತದೆ. ಇವರೆಡೂ ಬೇಡವೆಂದರೆ, ಒಣ ಮೆಕ್ಕೆಜೋಳ ಮಾರಾಟ ಮಾಡಬಹುದಾಗಿದೆ. ಕೊನೆಗೆ ಉಳಿಯುವ ಜೋಳದ ಕಡ್ಡಿಯೂ ಕೂಡ ಪಶುವಿನ ಆಹಾರವಾಗಿ, ಅದು ಕೂಡ ಹಣ ತರುತ್ತದೆ. ಈ ಎಲ್ಲ ಕಾರಣಗಳಿಂದ ಇಂದು ಹೆಚ್ಚಿನಪಾಲು ರೈತರು ಮೆಕ್ಕೆಜೋಳ ಬೆಳೆಯುತ್ತಿದ್ದಾರೆ.

ಮೆಕ್ಕೆಜೋಳ ಬೆಳೆಯುವುದು ಹೆಚ್ಚಾದಂತೆ, ಬಿತ್ತನೆಬೀಜ, ರಸಗೊಬ್ಬರ, ಕೃಷಿ ಕೂಲಿ ಆಳುಗಳು ಸೇರಿದಂತೆ ಕೃಷಿ ಒಳಸುರಿಗಳ ಬೆಲೆ ಕೂಡ ದುಪ್ಪಟ್ಟಾಗಿದೆ. ಈ ಸಂದರ್ಭದಲ್ಲಿಯೇ, ಸುರಿದ ಅಕಾಲಿಕ ಮಳೆಗೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಬೆಳೆ ನಾಶವಾಗಿದೆ. ಅದರಲ್ಲೂ ಮೆಕ್ಕೆಜೋಳ ತೆನೆಗಟ್ಟುವ ಸಮಯದಲ್ಲಿ ಭಾರೀ ಮಳೆಗೆ ಬಲಿಯಾಗಿ ಬೆಳೆಯ ಇಳುವರಿ ಎಕರೆಗೆ 8ರಿಂದ 10 ಕ್ವಿಂಟಲ್‌ಗೆ ಕುಸಿದಿದೆ, ಗುಣಮಟ್ಟವನ್ನೂ ಕಳೆದುಕೊಂಡಿದೆ. ಅಳಿದುಳಿದ ಬೆಳೆ ಕೈಗೆ ಬಂದರೂ, ಮಾರುಕಟ್ಟೆಯಲ್ಲಿ ಮೆಕ್ಕೆಜೋಳವನ್ನು ಕೇಳುವವರೇ ಇಲ್ಲವಾಗಿದೆ. ಎಕರೆಗೆ 20ರಿಂದ 30 ಸಾವಿರ ಖರ್ಚು ಮಾಡಿದ ರೈತರಿಗೆ, ಈಗ ಕ್ವಿಂಟಲ್‌ಗೆ 1,200 ರೂ. ಕೂಡ ಸಿಗದಾಗಿದೆ. ಹೀಗಾಗಿ ರೈತರು ಬೀದಿಗಿಳಿದಿದ್ದಾರೆ. ಪ್ರತಿಭಟನೆ, ಧರಣಿ ಹಮ್ಮಿಕೊಂಡು ಸರ್ಕಾರ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. 

ದುರದೃಷ್ಟಕರ ಸಂಗತಿ ಎಂದರೆ, ಶೇ. 55ರಷ್ಟು ಕೃಷಿ ಕುಟುಂಬಗಳಿಗೆ ತಾವು ಬೆಳೆದ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ತಿಳಿವಳಿಕೆ ಇಲ್ಲ. ಕನಿಷ್ಠ ಬೆಂಬಲ ಬೆಲೆ ಬಗ್ಗೆ ತಿಳಿದಿರುವ ರೈತರಲ್ಲಿ ಶೇ. 20ರಷ್ಟು ರೈತರು ಖರೀದಿ ಕೇಂದ್ರಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿಲ್ಲ. ಈ ಬಗ್ಗೆ ತೋಟಗಾರಿಕೆ, ಕೃಷಿ ಇಲಾಖೆಗಳು ಕೂಡ ರೈತರಲ್ಲಿ ಜಾಗೃತಿ ಮೂಡಿಸುತ್ತಿಲ್ಲ.

ಹೀಗಾಗಿ ರೈತರು ಪದೇ ಪದೆ ಕಷ್ಟಕ್ಕೀಡಾಗುವುದು, ಬೀದಿಗಿಳಿಯುವುದು, ಸರ್ಕಾರದ ಮೊರೆ ಹೋಗುವುದು ನಡೆದೇ ಇದೆ. ಪ್ರತಿಭಟನಾನಿರತ ಸ್ಥಳಕ್ಕೆ ಆಡಳಿತ ಪಕ್ಷದ ಸಚಿವರು, ವಿರೋಧ ಪಕ್ಷಗಳ ನಾಯಕರು ಧಾವಿಸುವುದು; ಕೇಂದ್ರ-ರಾಜ್ಯ ಸರ್ಕಾರಗಳನ್ನು ದೂರುವುದು ಕೂಡ ಸಾಮಾನ್ಯ ಸಂಗತಿಯೇ ಆಗಿಹೋಗಿದೆ. ಕೃಷಿ ಕುಟುಂಬದಿಂದಲೇ ಬಂದ ಶೋಭಾ ಕರಂದ್ಲಾಜೆಯವರು ಕೇಂದ್ರದಲ್ಲಿ; ಚಲುವರಾಯಸ್ವಾಮಿಯವರು ರಾಜ್ಯದಲ್ಲಿ ಕೃಷಿ ಸಚಿವರಾಗಿದ್ದಾರೆ. ಆದರೆ ಕೃಷಿಕರ ಕಷ್ಟ ಇವರಿಗೆ ಅರ್ಥವೇ ಆಗುತ್ತಿಲ್ಲ.

ಇದನ್ನು ಓದಿದ್ದೀರಾ?: ‘ಐಎಸ್‌ಐ ಜೊತೆ ಹಿಂದೂಗಳೇ ಹೆಚ್ಚು’: ಅಜಿತ್ ದೋವಲ್‌ ಮಾತು ಸತ್ಯಕ್ಕೆ ಹತ್ತಿರ!

ಸರಕಾರಗಳು ಯಾವುದೇ ಇದ್ದರೂ, ಕೃಷಿಕ ಸಮಾಜ ಸದಾ ಕಡೆಗಣನೆಗೆ ಒಳಗಾಗುತ್ತಲೇ ಬಂದಿದೆ. ವೆಚ್ಚ ಆಧರಿತ ಬೆಲೆ ನಿಗದಿಗೆ ಸರ್ಕಾರ ನೇಮಿಸಿದ ಅನೇಕ ಸಮಿತಿಗಳು ಶಿಫಾರಸ್ಸು ಮಾಡಿದರೂ, ಯಾವ ಸರ್ಕಾರವೂ ಅದನ್ನು ಗಂಭೀರವಾಗಿ ಪರಿಗಣಿಸಿದ್ದಿಲ್ಲ. ಜೊತೆಗೆ ನೈಸರ್ಗಿಕ ಪ್ರಕೋಪಗಳ ಸಂದರ್ಭದಲ್ಲಿ ಪರಿಹಾರ ನೀಡುವುದಾಗಲಿ, ಬೆಳೆಗಳಿಗೆ ಬೆಲೆ ನಿಗದಿಪಡಿಸುವ ವಿಚಾರವೇ ಆಗಲಿ, ಕೇಂದ್ರ-ರಾಜ್ಯಗಳ ನಡುವೆ ಪ್ರತಿ‍ಷ್ಠೆಯ ಪ್ರಶ್ನೆಯಾಗಿರುವುದು ಸುಳ್ಳಲ್ಲ. ರೈತ ಪ್ರತಿಯೊಂದಕ್ಕೂ ಬೀದಿಗಿಳಿಯುವುದು ಕೂಡ ನಿಂತಿಲ್ಲ.

ಕುತೂಹಲಕರ ಸಂಗತಿ ಎಂದರೆ, ಕೇಂದ್ರವೇ ಆಗಲಿ, ರಾಜ್ಯವೇ ಆಗಲಿ ‘ನಮ್ಮದು ರೈತಪರ ಸರ್ಕಾರ’ ಎನ್ನುವುದನ್ನು ಟ್ರಂಪ್ ಕಾರ್ಡ್‌ನಂತೆ ಬಳಸುವುದನ್ನು ಬಿಟ್ಟಿಲ್ಲ. ತಮಗೆ ಬೇಕಾದ ಬೆಳೆಗಳನ್ನು ಬೆಳೆಯದ ಹೊರತು; ಸ್ಪಂದಿಸುವ ಸರ್ಕಾರಗಳನ್ನು ಚುನಾಯಿಸಿಕೊಳ್ಳದ ಹೊರತು, ರೈತರಿಗೆ ಬೇರೆ ಮಾರ್ಗವಿಲ್ಲ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಡಿಕೆಶಿ ಪ್ರತಿರೋಧಕ್ಕೆ ಮಣಿದ ಚುನಾವಣಾ ಆಯೋಗ; ಈವರೆಗಿನ ಅಕ್ರಮಗಳಿಗೆ ಹೊಣೆ ಯಾರು?

ಕರ್ನಾಟಕದಲ್ಲಿ ಎಸ್‌ಐಆರ್‌ ಆರಂಭವಾಗುವ ಮೊದಲೇ ನಾಗರಿಕ ಸಂಘಟನೆಗಳು ಕಾಂಗ್ರೆಸ್‌ ಗೆ ಎಸ್‌ಐಆರ್‌...

ಈ ದಿನ ಸಂಪಾದಕೀಯ | ದೇಶಕ್ಕೆ ಆರ್ಥಿಕ ಬಿಕ್ಕಟ್ಟು ಎದುರಾಗಲಿದೆಯೇ, ನಾಯಕರ ಮಾತು ಎಚ್ಚರಿಕೆಯ ಗಂಟೆಯೇ?

ವಿದೇಶಾಂಗ ನೀತಿ ಗೊತ್ತಿಲ್ಲದ ಜೈಶಂಕರ್‌, ಬಡವರು ಹೇಗೆ ಬದುಕುತ್ತಿದ್ದಾರೆ ಎಂದು ಅರಿಯದ...

ಈ ದಿನ ಸಂಪಾದಕೀಯ | ಹೆಣ್ಣುಮಕ್ಕಳ ಹತ್ಯೆ ಅತ್ಯಾಚಾರಗಳ ಬಗ್ಗೆ ನಿಮಗೆ ʼಕಲ್ಚರಲ್ ಶಾಕ್ʼ ಆಗೋದು ಯಾವಾಗ ಮೋದೀಜಿ?

ಜಂತರ್‌ ಮಂತರ್‌ನಲ್ಲಿ ಹದಿಹರೆಯದ ಬಾಲಕಿಯೊಬ್ಬಳ ಮಾತು ಕೇಳಿ ‘ಕಲ್ಚರಲ್ ಶಾಕ್’ ಅನುಭವಿಸುವಷ್ಟು...

ಈ ದಿನ ಸಂಪಾದಕೀಯ | ಬರ, ಸರ್ವಪಕ್ಷ ನಿಯೋಗ ಮತ್ತು ರಾಜಕಾರಣಿಗಳ ಕಪಟ ನಾಟಕ

ಯಾವ ಪಕ್ಷ ಅಧಿಕಾರದಲ್ಲಿದ್ದರೂ, ಯಾರೇ ಮುಖ್ಯಮಂತ್ರಿಗಳಾಗಿದ್ದರೂ ಪ್ರಕೃತಿ ವಿಕೋಪದಿಂದ ಪಾರಾಗುವುದು ಸಾಧ್ಯವಿಲ್ಲ....