ಗಂಗಾ ನದಿಯ ಮೇಲೆ ಮಾಂಸ ತಿನ್ನುವುದನ್ನು ನಿಷೇಧಿಸುವ ಯಾವುದೇ ಕಾನೂನು ಇಲ್ಲ: ನ್ಯಾ. ಉಜ್ಜಲ್ ಭುಯಾನ್

Date:

ಭಾರತದಲ್ಲಿ ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಅವಕಾಶಗಳು ನಿರಂತರವಾಗಿ ಕುಗ್ಗುತ್ತಿವೆ. ತಮ್ಮ ಮೂಲಭೂತ ಹಕ್ಕುಗಳಾದ ಪ್ರತಿಭಟನೆ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ಚಲಾಯಿಸುತ್ತಿರುವ ವಿದ್ಯಾರ್ಥಿಗಳು, ಹೋರಾಟಗಾರರು ಮತ್ತು ಸಾಮಾನ್ಯ ನಾಗರಿಕರನ್ನು ಅಪರಾಧಿಗಳಂತೆ ಬಿಂಬಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ ವ್ಯಕ್ತಪಡಿಸಿದ್ದಾರೆ. ಗಂಗಾ ನದಿ ಮೇಲೆ ಇಫ್ತಾರ್ ಮಾಡಿದ್ದಕ್ಕಾಗಿ ಯುವಜನರ ಬಂಧನವನ್ನು ಖಂಡಿಸಿರುವ ಅವರು, ‘ಗಂಗಾ ನದಿಯ ಮೇಲೆ ಮಾಂಸ ತಿನ್ನುವುದನ್ನು ನಿಷೇಧಿಸುವ ಯಾವುದೇ ಕಾನೂನು ಇಲ್ಲ’ ಎಂದಿದ್ದಾರೆ.

- Advertisement -

ಭೋಪಾಲ್‌ನ ನ್ಯಾಷನಲ್ ಲಾ ಇನ್‌ಸ್ಟಿಟ್ಯೂಟ್ ಯೂನಿವರ್ಸಿಟಿಯಲ್ಲಿ (NLIU) ನಡೆದ 5ನೇ ‘ನ್ಯಾಯಮೂರ್ತಿ ಜಿ.ಪಿ. ಸಿಂಗ್ ಸ್ಮಾರಕ ಉಪನ್ಯಾಸ’ದಲ್ಲಿ ಅವರು ಮಾತನಾಡಿದರು. “ಶಾಂತಿಯುತ ಚರ್ಚೆ ಮತ್ತು ಭಿನ್ನಾಭಿಪ್ರಾಯವೇ ಪ್ರಜಾಪ್ರಭುತ್ವದ ಜೀವಕೋಶ. ಆದರೆ, ಇತ್ತೀಚೆಗೆ ಅವುಗಳಿಗೆ ಬಂಧನ, ಸುದೀರ್ಘ ಜೈಲು ವಾಸ ಹಾಗೂ ಕಠಿಣ ಜಾಮೀನು ಷರತ್ತುಗಳ ಮೂಲಕ ಕಟ್ಟುಪಾಡು ವಿಧಿಸಲಾಗುತ್ತಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪ್ರಜಾಪ್ರಭುತ್ವದ ಕಗ್ಗೊಲೆ: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

“ಸೇನಾ ಅಧಿಕಾರಿಯೊಬ್ಬರ ಮಗಳನ್ನು ‘ಭಯೋತ್ಪಾದಕಿಯ ಮಗಳು’ ಎಂದು ಕರೆದ ಸಚಿವರೊಬ್ಬರ ನಡೆಗೆ ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿದ್ದಕ್ಕೆ ಎಫ್‌ಐಆರ್‌ ದಾಖಲಿಸಲಾಗಿತ್ತು. ಆ ವ್ಯಕ್ತಿ ನಿರೀಕ್ಷಣಾ ಜಾಮೀನು ಕೋರಬೇಕಾಯಿತು. ಜಾಮೀನು ನೀಡುವಾಗ ಕೋರ್ಟ್ ಏನು ಮಾಡುತ್ತದೆ? ಅವರು ದೇಶ ಬಿಟ್ಟು ಓಡಿಹೋಗುವ ಅಪಾಯವಿಲ್ಲದಿದ್ದರೂ ‘ಪಾಸ್‌ಪೋರ್ಟ್ ಜಮೆ ಮಾಡಿ’ ಎನ್ನುತ್ತದೆ. ತದನಂತರ ‘ಫೇಸ್‌ಬುಕ್‌ನಲ್ಲಿ ಏನನ್ನೂ ಪೋಸ್ಟ್ ಮಾಡಬೇಡಿ’ ಎಂಬ ಷರತ್ತು ವಿಧಿಸುತ್ತದೆ!” ಎಂದು ನ್ಯಾಯಾಂಗದ ಧೋರಣೆಯನ್ನು ಅವರು ಉದಾಹರಿಸಿದರು.

ಕ್ಯಾಂಪಸ್‌ಗಳಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳಿಗೆ ಸುದೀರ್ಘ ಅವಧಿಗೆ ಜಾಮೀನು ನಿರಾಕರಿಸಿದ ಘಟನೆಗಳಿವೆ.  ಅವರು ಪ್ರಶ್ನಿಸಿದರು. ಅಂತೆಯೇ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವಂತಹ ಜಾಮೀನು ಷರತ್ತುಗಳನ್ನು ವಿಧಿಸುವ ನ್ಯಾಯಾಲಯಗಳ ನಡವಳಿಕೆಯನ್ನು ಟೀಕಿಸಿದರು.

ಗಂಗಾ ನದಿಯಲ್ಲಿ ದೋಣಿಯೊಂದರ ಮೇಲೆ ಇಫ್ತಾರ್‌ಗಾಗಿ ಸಸ್ಯಾಹಾರ/ಮಾಂಸಾಹಾರ ಸೇವಿಸಲು ಒಟ್ಟುಗೂಡಿದ್ದ ಯುವಕರ ಪ್ರಕರಣವನ್ನು ಉಲ್ಲೇಖಿಸಿದ ಅವರು, “ಗಂಗಾ ನದಿಯ ಮೇಲೆ ಕೋಳಿಮಾಂಸ ಸೇವಿಸುವುದನ್ನು ನಿಷೇಧಿಸುವ ಯಾವುದೇ ಕಾನೂನು ನಮ್ಮಲ್ಲಿಲ್ಲ. ಆದರೂ ಅವರನ್ನು ಅದೇ ಕಾರಣಕ್ಕೆ ಬಂಧಿಸಿ, 3 ತಿಂಗಳು ಜೈಲಿನಲ್ಲಿಡಲಾಯಿತು. ಇಂತಹ ಕೃತ್ಯಕ್ಕೆ ಜನರನ್ನು ಬಂಧಿಸಿ 3 ತಿಂಗಳು ಜಾಮೀನು ನಿರಾಕರಿಸಲು ಸಾಧ್ಯವೇ? ಎಂದು ನಾನು ನನ್ನನ್ನೇ ಕೇಳಿಕೊಳ್ಳುತ್ತೇನೆ! ನಾಗರಿಕರು ಮತ್ತು ದೇಶದ ಜನತೆ ಇದೆಲ್ಲವನ್ನೂ ಗಮನಿಸುತ್ತಿದ್ದಾರೆ” ಎಂದರು.

ಮುಂಬೈನಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದನ್ನು ಟೀಕಿಸಿದ ನ್ಯಾಯಮೂರ್ತಿಗಳು, “ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನು ಶಿಕ್ಷಿಸುವ ಸ್ಥಳಗಳಾಗದೆ, ವಿಮರ್ಶಾತ್ಮಕ ಚಿಂತನೆ ಮತ್ತು ಚರ್ಚೆಗಳನ್ನು ಪ್ರೋತ್ಸಾಹಿಸುವ ತಾಣಗಳಾಗಿ ಉಳಿಯಬೇಕು” ಎಂದರು.

“ಭಾರತವು ಪ್ಯಾಲೆಸ್ತೀನ್‌ಅನ್ನು ಅಧಿಕೃತವಾಗಿ ಗುರುತಿಸಿದೆ; ಭಾರತದಲ್ಲಿ ಪ್ಯಾಲೆಸ್ತೀನ್ ರಾಯಭಾರಿ ಕಚೇರಿಯಿದೆ. ಸಾಂಪ್ರದಾಯಿಕವಾಗಿ ಭಾರತ ಯಾವಾಗಲೂ ಪ್ಯಾಲೆಸ್ತೀನ್‌ಅನ್ನು ಬೆಂಬಲಿಸುತ್ತಾ ಬಂದಿದೆ… ಗಾಜಾದಲ್ಲಿ ನಡೆಯುತ್ತಿರುವುದು ಜನಾಂಗೀಯ ಹತ್ಯೆ ಎಂದು ಘೋಷಿಸುವಂತೆ ಕೋರಿ ಆಫ್ರಿಕಾ ಅಂತರರಾಷ್ಟ್ರೀಯ ನ್ಯಾಯಾಲಯದ (ICJ) ಬಾಗಿಲು ತಟ್ಟಿತು. ವಿಶ್ವಸಂಸ್ಥೆಯು ಗಾಜಾ ಹಿಂಸಾಚಾರದ ತನಿಖೆಗೆ ಒರಿಸ್ಸಾ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಮುರಳೀಧರ್ ಅವರನ್ನು ನೇಮಿಸಿತು. ಅಲ್ಲಿನ ಮಕ್ಕಳು, ಮಹಿಳೆಯರು ಹಾಗೂ ವೃದ್ಧರ ಮೇಲೆ ಇಸ್ರೇಲ್ ಎಸಗಿದ ಹಿಂಸಾಚಾರದ ಕುರಿತು ಮುರಳೀಧರ್ ನೀಡಿದ ವರದಿಯನ್ನು ವಿಶ್ವಸಂಸ್ಥೆ ಅಂಗೀಕರಿಸಿತು. ಅದು ಈಗ ಸಾರ್ವಜನಿಕ ಡೊಮೇನ್‌ನಲ್ಲಿದೆ,” ಎಂದು ಅವರು ವಿವರಿಸಿದರು.

“ಗಾಜಾ ವಿಷಯಕ್ಕೆ ಸಂಬಂಧಿಸಿದಂತೆ, ಭಾರತದ ಹೊರಗಿನ ಘಟನೆಗಳ ಬಗ್ಗೆ ಜನರು ಏಕೆ ಪ್ರತಿಭಟಿಸಲು ಬಯಸುತ್ತಾರೆ ಎಂಬಂತಹ ನ್ಯಾಯಾಧೀಶರೊಬ್ಬರ ಪ್ರಶ್ನೆಯನ್ನು ಕಂಡು ನನಗೆಬಹಳ ಆಶ್ಚರ್ಯವಾಯಿತು” ಎಂದು ಅವರು ಹೇಳಿದರು.

ಅಧಿಕಾರ ವಿಭಜನೆಯ ಸಿದ್ಧಾಂತದ ಕುರಿತು ಮಾತನಾಡಿದ ನ್ಯಾಯಮೂರ್ತಿ ಭುಯಾನ್, “ನಿವೃತ್ತರಾದ ತಕ್ಷಣವೇ ರಾಜಕೀಯ ಪ್ರವೇಶಿಸುವ ನ್ಯಾಯಾಧೀಶರ ನಡೆ ತರವಲ್ಲ. ಇಂತಹ ನಡವಳಿಕೆಯು ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಸಾಂವಿಧಾನಿಕ ರೇಖೆಯನ್ನು ಮಸುಕುಗೊಳಿಸುತ್ತದೆ” ಎಂದು ವಾದಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನ.1ರಂದು ಸಚಿವ ಈಶ್ವರ ಖಂಡ್ರೆಗೆ ಅಭಿನಂದನಾ ಸಮಾರಂಭ

ಬೀದರ್‌ ತಾಲ್ಲೂಕಿನ ಅತಿವಾಳ ಸಮೀಪ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು...

ಬೀದರ್‌ | ವಾಲ್ಮೀಕಿ ರಾಮಾಯಣ ಮಾನವ ಸಂಬಂಧಗಳ ಮೌಲ್ಯ ಸಾರುತ್ತದೆ: ನಾ.ಗೀತಾಚಾರ್ಯ

ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣವು ಮಾನವ ಸಂಬಂಧಗಳ ಮಹತ್ವ, ಕುಟುಂಬದ ಜವಾಬ್ದಾರಿ,...

ಔಷಧ ಮಾರಾಟದಲ್ಲಿ ಲೂಟಿ! MRP-ಮಾರಾಟ ದರದ ನಡುವೆ ಇಷ್ಟೊಂದು ಅಂತರವೇಕೆ?: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ಭಾರತದಲ್ಲಿ ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆ (MRP) ಮತ್ತು ಚಿಲ್ಲರೆ ವ್ಯಾಪಾರಿಗಳು...

ಅಂತಿಮ ಮತದಾರರ ಪಟ್ಟಿ ಪ್ರಕಟ: ಧಾರವಾಡ ಜಿಲ್ಲೆಯಲ್ಲಿ 13.78 ಲಕ್ಷ ಮತದಾರರು

15,151 ಯುವ ಮತದಾರರ ಮೊದಲ ಬಾರಿ ನೋಂದಣಿ, 6,305 ಹೆಸರು ಡಿಲೀಟ್,...