ಕಿಡ್ನಿ ಕಸಿಗಾಗಿ ಕಾಯುತ್ತಲೇ 2025ರಲ್ಲಿ 200ಕ್ಕೂ ಹೆಚ್ಚು ರೋಗಿಗಳ ಸಾವು: ಕೇಂದ್ರ ಸರ್ಕಾರ

Date:

ದೇಶದಲ್ಲಿ ಮೂತ್ರಪಿಂಡ ಕಸಿಗಾಗಿ ಕಾಯುತ್ತಲ್ಲೇ 2025ರಲ್ಲಿ 200 ಕ್ಕೂ ಹೆಚ್ಚು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಕೇಂದ್ರವು ಶುಕ್ರವಾರ ಲೋಕಸಭೆಗೆ ತಿಳಿಸಿದೆ. ಜುಲೈ 27ರ ವೇಳೆಗೆ ದೇಶದಲ್ಲಿ ಪ್ರಸ್ತುತ 73,646 ರೋಗಿಗಳು ಮೂತ್ರಪಿಂಡ ಕಸಿಗಾಗಿ ಕಾಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಪ್ರತಾಪ್‌ರಾವ್ ಜಾಧವ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

- Advertisement -

2025ರಲ್ಲಿ ದೇಶದಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ದೆಹಲಿಯಲ್ಲಿ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಮೂತ್ರಪಿಂಡ ಕಸಿಯಾಗದೆಯೇ ಸಾವನ್ನಪ್ಪಿದ 200 ಮಂದಿಯಲ್ಲಿ 132 ಮಂದಿ ದೆಹಲಿಯವರಾಗಿದ್ದಾರೆ. ರಾಷ್ಟ್ರೀಯ ನೋಂದಾವಣೆ ಪೋರ್ಟಲ್ ಪ್ರಕಾರ, 2021ರಿಂದ ಮೂತ್ರಪಿಂಡ ಕಸಿಗಾಗಿ ಕಾಯುವ ಪಟ್ಟಿಯಲ್ಲಿರುವ ಮಂದಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿವೆ. 2021 ರಲ್ಲಿ ದೆಹಲಿಯಲ್ಲಿ ಮೂತ್ರಪಿಂಡ ಕಸಿಗಾಗಿ ಕಾಯುತ್ತಿದ್ದ 176 ಮಂದಿ ಮೃತಪಟ್ಟಿದ್ದಾರೆ. 2022ರಲ್ಲಿ 118 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2023ರಲ್ಲಿ 159 ಮಂದಿ ಮೂತ್ರಪಿಂಡ ಕಸಿಯಾಗದೆ ಸಾವನ್ನಪ್ಪಿದ್ದಾರೆ. 2024ರಲ್ಲಿ 148 ಮಂದಿ ಮೃತಪಟ್ಟಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ವಂದೇ ಮಾತರಂ: ರಾಷ್ಟ್ರಗೌರವದ ಸಂಕೇತವೋ, ಚಿತ್ತ ಚದುರಿಸುವ ರಾಜಕೀಯ...

ಭಾರತದ ಯುವಜನತೆಯಲ್ಲಿ ರಾಹುಲ್ ಗಾಂಧಿಯವರ ವರ್ಚಸ್ಸು ಹೆಚ್ಚುತ್ತಿರುವುದನ್ನು ಗಮನಿಸಿ, ಇದೇ ಸಂಸತ್ ಕಲಾಪದಲ್ಲಿ, "ವಂದೇ ಮಾತರಂ" ವಿಷಯವನ್ನು ಮುನ್ನೆಲೆಗೆ ತಂದು, ಯುವಜನತೆಯ ಗಮನವನ್ನು ಬೇರೆಡೆ ಸೆಳೆಯುವ old trick ಮಾಡಲಾಗಿದೆ ಎಂಬುದು ಈ...

ಮುಂಗಾರು ಹಿನ್ನಡೆ, ಹಿಂಗಾರಿಗೆ ಕಂಟಕ: ದೇಶದಲ್ಲಿ 2027ರವರೆಗೆ ಬರಗಾಲದ ಆತಂಕ!

ಪ್ರಕೃತಿಯ ಏರುಪೇರುಗಳನ್ನು ಎದುರಿಸಲು ಸರ್ಕಾರಗಳು ತಕ್ಷಣದ ಆಪತ್ಕಾಲೀನ ಪರಿಹಾರ ಕ್ರಮಗಳಿಗೆ ಸೀಮಿತವಾಗದೆ, ದೀರ್ಘಕಾಲೀನ ಕಾರ್ಯತಂತ್ರಗಳನ್ನು ರೂಪಿಸುವುದು ಅತ್ಯಗತ್ಯ. ಮಣ್ಣಿನ ತೇವಾಂಶ ಸಂರಕ್ಷಣೆ, ನೀರಾವರಿ ವ್ಯಾಪ್ತಿಯ ವೈಜ್ಞಾನಿಕ ವಿಸ್ತರಣೆ, ಹವಾಮಾನ ಬದಲಾವಣೆಗೆ ಸ್ಥಿತಿಸ್ಥಾಪಕತ್ವ ಹೊಂದಿರುವ(Climate-resilient)...

ಕಾಲೇಜು ಕ್ಯಾಂಪಸ್‌ಗಳಲ್ಲಿ ದಲಿತ ವಿದ್ಯಾರ್ಥಿಗಳೇ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ?

‘ದಲಿತ ವಿದ್ಯಾರ್ಥಿಗಳೇ ಏಕೆ ಹೀಗೆ ಸಾಯುತ್ತಿದ್ದಾರೆ?’ — ಇದು ಐಐಟಿ ಬಾಂಬೆಯ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರ ತಾಯಿ ಸೋನಾಲಿ ವಾಕೋಡೆ ಕೇಳಿದ ಪ್ರಶ್ನೆ. ಈ ಪ್ರಶ್ನೆ ಕೇವಲ ಮಗನನ್ನು ಕಳೆದುಕೊಂಡ ತಾಯಿಯ...

ಇದನ್ನೂ ಓದಿ: ‘ಕಿಡ್ನಿ ಕೊಡಿ, ಇಲ್ಲವೇ ಸಾಯಲು ಬಿಡಿ’: ರಾಷ್ಟ್ರಪತಿಗೆ ಪತ್ರ ಬರೆದಿದ್ದ 5 ಬಾಣಂತಿಯರ ಬೆನ್ನಿಗೆ ನಿಂತ ಸರ್ಕಾರ

ದೆಹಲಿಯ ನಂತರದ ಸ್ಥಾನದಲ್ಲಿ (19) ರಾಜಸ್ಥಾನವಿದೆ. ಗೋವಾ (17), ಮಹಾರಾಷ್ಟ್ರ (15), ಮಧ್ಯಪ್ರದೇಶ (11) ಮತ್ತು ಹರಿಯಾಣ (10) ನಂತರದ ಸ್ಥಾನದಲ್ಲಿದೆ. ಗುಜರಾತ್ ಮತ್ತು ಉತ್ತರ ಪ್ರದೇಶ ತಲಾ ಏಳು ಸಾವುಗಳಾಗಿವೆ ಎಂದು ಕೇಂದ್ರ ಸರ್ಕಾರದ ವರದಿ ಹೇಳಿದೆ. ಬಿಹಾರದಲ್ಲಿ ಐವರು, ಪಂಜಾಬ್‌ನಲ್ಲಿ ನಾಲ್ವರು, ತಮಿಳುನಾಡು ಮತ್ತು ಛತ್ತೀಸ್‌ಗಢದಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದರೆ, ಹಿಮಾಚಲ ಪ್ರದೇಶ, ಪುದುಚೇರಿ ಮತ್ತು ಪಶ್ಚಿಮ ಬಂಗಾಳ ತಲಾ ಒಬ್ಬರು 2025ರಲ್ಲಿ ಕಿಡ್ನಿ ಕಸಿಗಾಗಿ ಕಾಯುತ್ತಲೇ ಮೃತಪಟ್ಟಿದ್ದಾರೆ.

ದೆಹಲಿಯಲ್ಲೇ ಅಧಿಕ ಸಾವು ಯಾಕೆ?

ದೇಶದಲ್ಲಿ ಪ್ರತಿ ವರ್ಷ ಸುಮಾರು 1.8 ಲಕ್ಷದಿಂದ 2 ಲಕ್ಷ ಜನರಿಗೆ ಕಿಡ್ನಿ ಕಸಿಯ (Kidney Transplant) ಅಗತ್ಯವಿರುತ್ತದೆ. ಆದರೆ, ದೇಶಾದ್ಯಂತ ವರ್ಷಕ್ಕೆ ಕೇವಲ 10,000 ದಿಂದ 12,000 ಕಿಡ್ನಿ ಕಸಿಗಳು ಮಾತ್ರ ನಡೆಯುತ್ತಿವೆ. ದೆಹಲಿಯು ಉತ್ತರ ಭಾರತದ ಅತಿ ದೊಡ್ಡ ವೈದ್ಯಕೀಯ ಕೇಂದ್ರವಾಗಿರುವುದರಿಂದ ಇಲ್ಲಿ ನೋಂದಾಯಿಸಿಕೊಳ್ಳುವ ರೋಗಿಗಳ ಸಂಖ್ಯೆ ಹೆಚ್ಚಿದ್ದು, ಕಾಯುವಿಕೆಯ ಪಟ್ಟಿ ಸುದೀರ್ಘವಾಗಿದೆ.

ಇನ್ನು ದೆಹಲಿಯಲ್ಲಿ AIIMS, Safdarjung, ಮತ್ತು ಪ್ರಮುಖ ಖಾಸಗಿ ಆಸ್ಪತ್ರೆಗಳಂತಹ ಉನ್ನತ ಮಟ್ಟದ ವೈದ್ಯಕೀಯ ಸೌಲಭ್ಯಗಳಿರುವುದರಿಂದ ದೆಹಲಿಯಷ್ಟೇ ಅಲ್ಲದೆ ಉತ್ತರ ಪ್ರದೇಶ, ಬಿಹಾರ, ಹರಿಯಾಣ, ರಾಜಸ್ಥಾನ ಮತ್ತು ಪಂಜಾಬ್‌ಗಳಿಂದಲೂ ಸಾವಿರಾರು ರೋಗಿಗಳು ಚಿಕಿತ್ಸೆಗೆ ದೆಹಲಿಗೆ ಬರುತ್ತಾರೆ. ಇದರಿಂದಾಗಿ ದೆಹಲಿಯ ನೋಂದಣಿ ಪಟ್ಟಿಯ ಮೇಲೆ ವಿಪರೀತ ಒತ್ತಡ ಉಂಟಾಗುತ್ತದೆ.

ಅಂಗಾಂಗ ಮತ್ತು ಅಂಗಾಂಶ ದಾನವನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರವು ಆಗಸ್ಟ್ 3ರಂದು “ಜುಗ್ ಜುಗ್ ಜೀಯೋ ಅಭಿಯಾನ” ಎಂಬ ದೇಶವ್ಯಾಪಿ ಒಂದು ವರ್ಷದ ಸಾರ್ವಜನಿಕ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಚದುರಿದ ಚಿತ್ರ | ಅಳತೆಗೋಲುಗಳ ನಡುವೆ ಹೆಣ್ಣು

ಇದಲ್ಲದೆ, ಅಂಗಾಂಗ ದಾನ ಮತ್ತು ಕಸಿ ಪ್ರಕ್ರಿಯೆಗಳನ್ನು ಡಿಜಿಟಲೀಕರಣಗೊಳಿಸಲು, ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಅಗತ್ಯವಿರುವ ರೋಗಿಗಳಿಗೆ ಸುಗಮ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ನೋಂದಣಿ ಪೋರ್ಟಲ್ ಅನ್ನು ಮೇಲ್ದರ್ಜೆಗೇರಿಸಿ ‘ಇ-ಪ್ರತ್ಯಾರೋಪಣ’ (e-Pratyaaropan) ಎಂಬ ಡಿಜಿಟಲ್ ವೇದಿಕೆಯಾಗಿ ಚಾಲನೆ ನೀಡಲಾಗಿದೆ.

ಮಾನವ ಅಂಗಾಂಗ ಮತ್ತು ಅಂಗಾಂಶಗಳ ಕಸಿ ಕಾಯ್ದೆ (THOTA), 1994 ಮತ್ತು ಅದರ ಅಡಿಯಲ್ಲಿ ಮಾಡಲಾದ ನಿಯಮಗಳ ನಿಬಂಧನೆಗಳ ಪ್ರಕಾರ, ರಾಷ್ಟ್ರೀಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ನಿರ್ವಹಿಸುವ ರಾಷ್ಟ್ರೀಯ ಅಂಗಾಂಗ ಮತ್ತು ಅಂಗಾಂಶ ಕಸಿ ನೋಂದಣಿ (NOTTR) ಪೋರ್ಟಲ್‌ನಲ್ಲಿ ಕಸಿ ಆಸ್ಪತ್ರೆಗಳು ನೀಡುವ ದತ್ತಾಂಶದ ವರದಿಗೆ ಸಂಬಂಧಿಸಿದಂತೆ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವುದು ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಮಾಹಿತಿಯನ್ನು ಹರಡಲು ಮತ್ತು ವಿವಿಧ ಭಾಗಿದಾರರೊಂದಿಗೆ ತೊಡಗಿಸಿಕೊಳ್ಳುವ ಮೂಲಕ ಅಂಗಾಂಗ ಮತ್ತು ಅಂಗಾಂಶ ದಾನವನ್ನು ಉತ್ತೇಜಿಸಲು NOTTO, ಪ್ರಾದೇಶಿಕ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆಗಳು (ROTTOs) ಹಾಗೂ ರಾಜ್ಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆಗಳ (SOTTOs) ಜೊತೆಗೂಡಿ ದೇಶಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತದೆ ಎಂದೂ ಹೇಳಿದ್ದಾರೆ.

ಪೋಸ್ಟರ್ ತಯಾರಿಕೆ, ಘೋಷಾವಾಕ್ಯ ಬರಹ ಮತ್ತು ವಿಶೇಷ ಪ್ರತಿಜ್ಞಾ ಅಭಿಯಾನಗಳಂತಹ ವಿವಿಧ ಜಾಗೃತಿ ಚಟುವಟಿಕೆಗಳನ್ನು ನಿಯಮಿತವಾಗಿ ಆಯೋಜಿಸಲಾಗುತ್ತದೆ.

ಸಹ, ಮಾಹಿತಿ, ಟೆಲಿ-ಕೌನ್ಸೆಲಿಂಗ್ ಮತ್ತು ಅಂಗಾಂಗ ದಾನಕ್ಕಾಗಿ ಸಮನ್ವಯವನ್ನು ಒದಗಿಸಲು ಉಚಿತ ಸಹಾಯವಾಣಿ ಸಂಖ್ಯೆ (1800114770) ಹೊಂದಿರುವ 24×7 ಕಾಲ್ ಸೆಂಟರ್ ಕಾರ್ಯನಿರ್ವಹಿಸುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ದಿನನಿತ್ಯ ಸಂದೇಶಗಳನ್ನು ಪ್ರಸಾರ ಮಾಡಲಾಗುತ್ತದೆ.

ನಾಗರಿಕರು https://notto.abdm.gov.in ವೆಬ್ ಪೋರ್ಟಲ್ ಮೂಲಕ ಅಂಗಾಂಗ ಮತ್ತು ಅಂಗಾಂಶ ದಾನಕ್ಕಾಗಿ ಪ್ರತಿಜ್ಞೆ ಮಾಡಬಹುದು. ಪ್ರಸ್ತುತ, ಐದು ಲಕ್ಷಕ್ಕೂ ಹೆಚ್ಚು ಆಧಾರ್-ಪರಿಶೀಲಿತ ಪ್ರತಿಜ್ಞೆಗಳು ನೋಂದಾಯಿಸಲ್ಪಟ್ಟಿವೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೆಹರೂ-ಶಾಸ್ತ್ರಿ ಕಾಲದ ಕಟ್ಟಡಗಳಿಗೆ ಮೋದಿ ಬುಲ್ಡೋಝರ್: ಕೃಷಿ ಭವನ, ಶಾಸ್ತ್ರಿ ಭವನ ನೆಲಸಮಕ್ಕೆ ಸಿದ್ಧತೆ!

ಕೇಂದ್ರದ ನರೇಂದ್ರ ಮೋದಿ ಸರ್ಕಾರವು ನವದೆಹಲಿಯ ಲೂಟಿಯನ್ಸ್ ವಲಯದಲ್ಲಿ ಕೈಗೆತ್ತಿಕೊಂಡಿರುವ 'ಸೆಂಟ್ರಲ್...

​’ಮಹಿಳಾ ಮೀಸಲಾತಿ’ಗಾಗಿ ನವರಾತ್ರಿ ವೇಳೆ ಸಂಸತ್ತಿನ ವಿಶೇಷ ಅಧಿವೇಶನ ಸಾಧ್ಯತೆ?

ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಗೆ ವೇಗ ನೀಡುವ ಉದ್ದೇಶದಿಂದ,...

ಲೋಕಾ ರೇಡ್: 33 ಸ್ಥಳಗಳಲ್ಲಿ ಶೋಧ, ರೂ. 29.60 ಕೋಟಿ ಅಕ್ರಮ ಆಸ್ತಿ ಪತ್ತೆ

ಕರ್ನಾಟಕದಾದ್ಯಂತ ಅಕ್ರಮ ಆಸ್ತಿ (ಡಿಎ) ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸೆಪ್ಟೆಂಬರ್...