ಪ್ರತಿಭಟನೆಯೂ ಒಂದು ಅರ್ಥವ್ಯವಸ್ಥೆ: ಸುಪ್ರೀಂ ಕೋರ್ಟ್‌!

Date:

ಪ್ರತಿಭಟನೆಗಳು ಎಂದರೆ ಬರೀ ರಸ್ತೆ ತಡೆ, ಘೋಷಣೆಗಳು ಮತ್ತು ವ್ಯಾಪಾರ-ವಹಿವಾಟಿಗೆ ಧಕ್ಕೆ ಎಂಬ ಭಾವನೆ ಸಾಮಾನ್ಯ. ಆದರೆ, “ಪ್ರತಿಭಟನೆಗಳು ಕೇವಲ ವ್ಯಾಪಾರಕ್ಕೆ ವೈರಿಯಲ್ಲ, ಅಲ್ಲಿಯೂ ಸಣ್ಣಪುಟ್ಟ ವ್ಯಾಪಾರಿಗಳ ಹೊಟ್ಟೆಪಾಡು ನಡೆಯುವ ಒಂದು ‘ಪ್ರತಿಭಟನಾ ಅರ್ಥವ್ಯವಸ್ಥೆ’ಯಾಗಿರುತ್ತದೆ” ಎಂಬ ಸ್ವಾರಸ್ಯಕರ ಹಾಗೂ ಮಹತ್ವದ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ನೀಡಿದೆ. 

- Advertisement -

ದೆಹಲಿಯ ದಸರಾ ಹಾಗೂ ದೀಪಾವಳಿಯಂತಹ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಸಾಲು ಸಾಲು ಧರಣಿಗಳಿಂದಾಗಿ ಸ್ಥಳೀಯ ವರ್ತಕರ ವ್ಯಾಪಾರ ನೆಲಕಚ್ಚುತ್ತಿದೆ ಎಂದು ಆರೋಪಿಸಿ ‘ಕಿರಾನ್ ಕಮಿಟಿ ದೆಹಲಿ’ ಹಾಗೂ ‘ನ್ಯೂ ದೆಹಲಿ ಟ್ರೇಡರ್ಸ್ ಅಸೋಸಿಯೇಷನ್’ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಈ ಗಮನಾರ್ಹ ಮಾತುಗಳನ್ನು ಆಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿಗೆ ರಾಹುಲ್‌ ಬಹಿರಂಗ ಸವಾಲು; ಕುತಂತ್ರಗಳಿಗೆ ವಿರುದ್ಧವಾಗಿ ಹೋರಾಟ...

ಭಾರತೀಯ ರಾಜಕಾರಣದಲ್ಲಿ ಕಳೆದ ಒಂದು ದಶಕದಿಂದ ನಿರಂತರವಾಗಿ ಚರ್ಚೆಯಾಗುತ್ತಿರುವ ಪ್ರಮುಖ ಕೇಂದ್ರಬಿಂದು ರಾಹುಲ್ ಗಾಂಧಿ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಧಿಕಾರಾವಧಿಯಲ್ಲಿ ಪ್ರತಿಪಕ್ಷಗಳನ್ನು ದಮನ ಮಾಡಲು, ಹತ್ತಿಕ್ಕಲು ಮತ್ತು ನಾಯಕರ ವ್ಯಕ್ತಿತ್ವವನ್ನು ಹನನ...

ಹಸಿವು, ಹಕ್ಕು ಮತ್ತು ‘ದೇವರ ಹೆಣ’

ಹಸಿದವನಿಗೆ ಮಾಂಸವನ್ನು ನಿರಾಕರಿಸುವುದು ಕೇವಲ ದ್ವೇಷವಲ್ಲ, ಅದು ತನ್ನ ಜಾತಿಯ ಪಾವಿತ್ರ್ಯವನ್ನು ಹಸಿದ ಹೊಟ್ಟೆಯ ಮೇಲೆ ಹೇರುವ ಕ್ರೌರ್ಯ. ಇಂದಿನ ಗೋರಕ್ಷಣೆಯ ರಾಜಕಾರಣ ಹಿನ್ನೆಲೆಯಲ್ಲಿ ಈ 'ದೇವರ ಹೆಣ' ಕಥೆಯ ಒಳನೋಟ ಇನ್ನಷ್ಟು...

ಅಡ್ಡಂಡ ಕಾರ್ಯಪ್ಪನವರ ನಾಟಕದ ವಿವಾದ: ಗೋಡ್ಸೆ ವೈಭವೀಕರಣದ ಹಿಂದೆ...

ಗೋಡ್ಸೆಯನ್ನು ವೈಭವೀಕರಿಸುವ ರಾಜಕೀಯವನ್ನು ಕೇವಲ ಒಬ್ಬ ವ್ಯಕ್ತಿಯ ಅಭಿಮಾನ ಅಥವಾ ಇತಿಹಾಸದ ಪರ್ಯಾಯ ಓದು ಎಂದು ಸೀಮಿತಗೊಳಿಸಲಾಗದು. ಅದರ ಮೂಲಕ ಗಾಂಧೀಜಿಯವರನ್ನು ಸಾರ್ವಜನಿಕ ಸ್ಮೃತಿಯಿಂದ ದೂರಮಾಡಿ, ಅವರ ಹತ್ಯೆಯನ್ನು ಸಮರ್ಥಿಸಬಹುದಾದ ವಾತಾವರಣ ನಿರ್ಮಿಸುವ...

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್‌ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು.

 ವಿಚಾರಣೆ ವೇಳೆ ಪೀಠವು, ಪ್ರತಿಭಟಿಸುವ ಹಕ್ಕು ಹಾಗೂ ವ್ಯಾಪಾರ ಮಾಡುವ ಹಕ್ಕುಗಳೆರಡೂ ಸಂವಿಧಾನಬದ್ಧವಾದವು ಎಂದು ನುಡಿಯಿತು. “ಇಲ್ಲಿ ನಾವು ದೊಡ್ಡ ದೊಡ್ಡ ವಾಣಿಜ್ಯ ಸಂಸ್ಥೆಗಳ ಬಗ್ಗೆ ಹೇಳುತ್ತಿಲ್ಲ. ದಿನಗೂಲಿ ನೌಕರರು, ತರಕಾರಿ ಮಾರಾಟಗಾರರು, ಬೀದಿಬದಿ ವ್ಯಾಪಾರಿಗಳ ಬದುಕಿನ ಮೂಲ ಆಧಾರದ ಬಗ್ಗೆ ಮಾತನಾಡುತ್ತಿದ್ದೇವೆ. ಅವರ ಹೊಟ್ಟೆಪಾಡಿನ ಹಕ್ಕು ಮತ್ತು ಪ್ರತಿಭಟನಾಕಾರರ ಅಭಿವ್ಯಕ್ತಿ ಸ್ವಾತಂತ್ರ್ಯದ ನಡುವೆ ಸಮತೋಲನ ಅಗತ್ಯ” ಎಂದು ಸಿಜೆಐ ಸೂರ್ಯ ಕಾಂತ್ ಹೇಳಿದರು.

ವರ್ತಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, “ಜಂತರ್ ಮಂತರ್ ನಂತರ ನಿಗದಿಪಡಿಸಲಾದ ರಾಮಲೀಲಾ ಮೈದಾನವು ದೆಹಲಿಯ ಪ್ರಮುಖ ವಾಣಿಜ್ಯ ಕೇಂದ್ರವಾದ ಕನ್ನಾಟ್ ಪ್ಲೇಸ್‌ನಿಂದ (CP) ಕೇವಲ ಒಂದು ಮೈಲಿ ದೂರದಲ್ಲಿದೆ. ಮಿಂಟೋ ರೋಡ್ ಮೂಲಕ ರಾಮಲೀಲಾ ಮೈದಾನ ತಲುಪುವುದು ತುಂಬಾ ಹತ್ತಿರ. ಹಬ್ಬದ ಸೀಸನ್‌ನಲ್ಲಿ ವ್ಯಾಪಾರವಿಲ್ಲದೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ. ಸಣ್ಣ ಕಾರ್ಮಿಕರು, ಹೆಲ್ಪರ್‌ಗಳು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಹೀಗಾಗಿ ಹಬ್ಬದ ಮುಂದಿನ ಎರಡು ತಿಂಗಳು ಪ್ರತಿಭಟನೆಗಳಿಗೆ ನಿಷೇಧ ಹೇರಬೇಕು” ಎಂದು ಪೀಠಕ್ಕೆ ಮನವಿ ಮಾಡಿದರು.

ರೋಹಟಗಿ ಅವರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಜೋಯ್‌ಮಾಲ್ಯ ಬಾಗ್ಚಿ, “ಪ್ರತಿಭಟನಾ ಸ್ಥಳಗಳಲ್ಲಿ ಕೇವಲ ನಷ್ಟವಷ್ಟೇ ಆಗುವುದಿಲ್ಲ. ಅಲ್ಲಿಗೆ ಬರುವ ಜನರಿಗೆ ನೀರು, ತಿಂಡಿ-ತಿನಿಸು ಪೂರೈಸುವ ಸಣ್ಣ ತಳ್ಳುವ ಬಂಡಿ ವ್ಯಾಪಾರಿಗಳಿಗೆ, ಬೀದಿಬದಿ ಮಾರಾಟಗಾರರಿಗೆ ವ್ಯಾಪಾರವಾಗುತ್ತದೆ. ಜಾತ್ರೆಗಳಲ್ಲಿ ‘ಜಾತ್ರೆ ಅರ್ಥವ್ಯವಸ್ಥೆ’ ಇರುವಂತೆ ಪ್ರತಿಭಟನೆಗಳ ಸುತ್ತಲೂ ಒಂದು ಚಟುವಟಿಕೆ ನಡೆಯುತ್ತದೆ” ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಜುಲೈನಲ್ಲಿ ನೀಟ್ ಪರೀಕ್ಷೆ ಅಕ್ರಮದ ವಿರುದ್ಧ ‘ಕಾಕ್ರೋಚ್ ಜನತಾ ಪಾರ್ಟಿ’ ನಡೆಸಿದ ಪ್ರತಿಭಟನೆಯನ್ನು ನೆನಪಿಸಿದರು. “ಅವರು ಒಂದು ದಿನದ ಶಾಂತಿಯುತ ಪ್ರತಿಭಟನೆಗೆ ಅನುಮತಿ ಪಡೆದು, ನಂತರ ಅಲ್ಲಿಂದ ಕದಲುವುದಕ್ಕೆ ಒಪ್ಪಲಿಲ್ಲ. ಅನುಮತಿಯೇ ಇಲ್ಲದೆ ‘ಸಂಸದ್ ಚಲೋ’ ಮೆರವಣಿಗೆ ನಡೆಸಿ ಹಿಂಸಾಚಾರಕ್ಕೆ ಕಾರಣರಾದರು. ಪ್ರತಿಭಟನಾಕಾರರು ಸಾರ್ವಜನಿಕರಿಗೆ ಮಾಡುವ ನಷ್ಟಕ್ಕೆ ಹೊಣೆ ಹೊರಬೇಕು” ಎಂದರು.

ಇದಕ್ಕೆ ಸಿಜೆಐ ಸೂರ್ಯ ಕಾಂತ್, “ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ, ಆದರೆ ನೀಡಿದ ಅನುಮತಿಯ ನಿಯಮಗಳನ್ನು ಪಾಲಿಸಲೇಬೇಕು. ಯಾವುದೇ ಸ್ಥಳವನ್ನು ಅನಿರ್ದಿಷ್ಟಾವಧಿಗೆ ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ. ಬೇರೆ ಪ್ರತಿಭಟನಾಕಾರರೂ ಇರುತ್ತಾರೆ, ಅವರೆಲ್ಲ ಎಲ್ಲಿಗೆ ಹೋಗಬೇಕು?” ಎಂದು ಪ್ರಶ್ನಿಸಿದರು.

ಇದೇ ವೇಳೆ ಸಿಪಿಐ(ಎಂ) ನಾಯಕ ಎಂ.ಎ. ಬೇಬಿ ಅವರ ಪರ ಹಾಜರಿದ್ದ ಹಿರಿಯ ವಕೀಲ ಎನ್. ಹರಿಹರನ್ ಹಾಗೂ ಕೇರಳ ಪತ್ರಕರ್ತರ ಯೂನಿಯನ್ ಪರ ಹಾಜರಿದ್ದ ಪಿ.ವಿ. ದಿನೇಶ್, “ರಾಮಲೀಲಾ ಮೈದಾನ ಧರಣಿಗೆ ನಿಗದಿಯಾದ ಜಾಗ. ಈಗ ಅದಕ್ಕೂ ಆಕ್ಷೇಪ ಎತ್ತಿದರೆ ನಾಗರಿಕರು ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವುದಾದರೂ ಎಲ್ಲಿ?” ಎಂದು ಪ್ರಶ್ನಿಸಿದರು.

ಪ್ರತಿಭಟನಾ ಸ್ಥಳಗಳಲ್ಲಿ ದೆಹಲಿ ಪೊಲೀಸರು ಮುಖ ಗುರುತಿಸುವ ತಂತ್ರಜ್ಞಾನ  ಹಾಗೂ ಸಿಸಿಟಿವಿ ಕಣ್ಗಾವಲು ಬಳಸುತ್ತಿರುವುದಕ್ಕೆ ಧರಣಿ ನಿರತ ಪತ್ರಕರ್ತರು ಮತ್ತು ವಿದ್ಯಾರ್ಥಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ, “ಅಕ್ರಮ ಬಂಧನಗಳು ನಡೆಯುತ್ತಿವೆ” ಎಂದರೆ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಅದು ಬಂಧನವಲ್ಲ, ಜಾಗ ತೆರವು. ಸಾರ್ವಜನಿಕ ಸ್ಥಳದಲ್ಲಿ ಪ್ರತಿಭಟಿಸುವಾಗ ಖಾಸಗಿತನದ ಹಕ್ಕು ಎನ್ನಲಾಗುವುದಿಲ್ಲ” ಎಂದು ವಾದಿಸಿದರು.

ಖಾಸಗಿತನದ ಕುರಿತು ಉತ್ತರಿಸಿದ ನ್ಯಾಯಮೂರ್ತಿ ಬಾಗ್ಚಿ, “ಸಾರ್ವಜನಿಕ ಸ್ಥಳದಲ್ಲೂ ‘ನ್ಯಾಯಯುತ ಖಾಸಗಿತನದ ನಿರೀಕ್ಷೆ’ ಇರುತ್ತದೆ. ಅಪರಾಧಿಗಳನ್ನು ಪತ್ತೆಹಚ್ಚುವ ತಂತ್ರಜ್ಞಾನವನ್ನು ಸಾಮಾನ್ಯ ಪ್ರತಿಭಟನಾಕಾರರ ವಿರುದ್ಧ ಬಳಸುವುದು ಎಷ್ಟರಮಟ್ಟಿಗೆ ಸಮಂಜಸ ಎಂಬುದು ಪರಿಶೀಲಿಸಬೇಕಾದ ವಿಷಯ” ಎಂದರು.

ಅಂತಿಮವಾಗಿ, ಪ್ರತಿಭಟನೆ ಆಯೋಜಿಸಿದ ಸಂಘಟನೆಗಳನ್ನು ಪ್ರಕರಣದಲ್ಲಿ ಪಾರ್ಟಿಯನ್ನಾಗಿ ಮಾಡದೆ ಯಾವುದೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್, ವರ್ತಕರ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೋಮಾಂಸ ನಿಷೇಧವಿರಲಿ, ‘ಬೀಫ್ ತಿನ್ನಬೇಡಿ’ ಎಂದು ಹೇಳಿಲ್ಲ ಮನುಸ್ಮೃತಿ!

ಗುಜರಾತ್‌ ಕೋರ್ಟ್‌ ಮನುಸ್ಮೃತಿಯನ್ನು ಗೋರಕ್ಷಣೆಯ ಏಕೈಕ ಆಧಾರವೆಂದು ಬಿಂಬಿಸಲು ಹೊರಟಾಗ, ಮನುಸ್ಮೃತಿಯು...

ಇಸ್ರೇಲ್ ರಾಜಕೀಯದ ಚದುರಂಗದಾಟ: ಅತಂತ್ರ ಬಿಕ್ಕಟ್ಟಿನಿಂದ ಹೊರಬರಲು ಇರುವ ‘ಸಾಂವಿಧಾನಿಕ ಮಾರ್ಗ’ಗಳೇನು?

ಇಸ್ರೇಲ್‌ನ ರಾಜಕೀಯ ಮತ್ತು ಚುನಾವಣಾ ವ್ಯವಸ್ಥೆ ಸಂಪೂರ್ಣವಾಗಿ ಭಿನ್ನವಾಗಿದೆ ಹಾಗೂ ಹೆಚ್ಚು...

ಶಿವಮೊಗ್ಗ | ಕಬ್ಬಿನ ಬೆಲೆ ನಿಗದಿಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ಪ್ರತಿಭಟನೆ

ಕಬ್ಬು ಬೆಲೆ ನಿಗದಿ ವಿಚಾರವಾಗಿ ಕಾರ್ಖಾನೆ ಮಾಲೀಕರು ಮತ್ತು ಕಬ್ಬು ಬೆಳೆಗಾರರ...

ಗ್ಯಾನೇಶ್ ರಾಜೀನಾಮೆಗೆ ಆಗ್ರಹಿಸಿ ನ. 5ರಂದು ಫ್ರೀಡಂ ಪಾರ್ಕ್‌ನಲ್ಲಿ ‘ಇಂಡಿಯಾ’ ಒಕ್ಕೂಟದ ಬೃಹತ್ ಪ್ರತಿಭಟನೆ

ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್...