ಹೈಕೋರ್ಟ್ ತೀರ್ಪು ಬರುವವರೆಗೆ ಸೋನಮ್ ವಾಂಗ್‌ಚುಕ್ ಶಾಲೆಯ ಚಟುವಟಿಕೆ ತಡೆಗೆ ಲಡಾಖ್ ಆಡಳಿತ ಆದೇಶ

Date:

ಪರಿಸರ ಹೋರಾಟಗಾರ ಮತ್ತು ಶಿಕ್ಷಣ ತಜ್ಞ ಸೋನಮ್ ವಾಂಗ್‌ಚುಕ್ ಅವರ ‘ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್’ (HIAL) ಸಂಸ್ಥೆಯಡಿ ಕಾರ್ಯಾಚರಿಸುತ್ತಿರುವ ‘ಡೆಸರ್ಟ್ ಫ್ಲವರ್ ಸ್ಕೂಲ್’ ತಕ್ಷಣವೇ ತನ್ನ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು ಎಂದು ಲಡಾಖ್ ಕೇಂದ್ರಾಡಳಿತ ಪ್ರದೇಶದ ಆಡಳಿತವು ನಿರ್ದೇಶನ ನೀಡಿದೆ.

- Advertisement -

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಉಚ್ಚ ನ್ಯಾಯಾಲಯದಲ್ಲಿ ಸಂಸ್ಥೆಗೆ ನೀಡಲಾಗಿದ್ದ ಭೂಮಿ ಹಂಚಿಕೆಗೆ ಸಂಬಂಧಿಸಿದ ಪ್ರಕರಣವು ವಿಚಾರಣೆಯಲ್ಲಿದೆ. ಕೋರ್ಟ್ ಅಂತಿಮ ತೀರ್ಪು ನೀಡುವವರೆಗೆ ಶಾಲೆಯಲ್ಲಿ ಯಾವುದೇ ಹೊಸ ಚಟುವಟಿಕೆಗಳನ್ನು ನಡೆಸದಂತೆ ತಹಶೀಲ್ದಾರ್ ಕಚೇರಿ ಆದೇಶಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಸಿವು, ಹಕ್ಕು ಮತ್ತು ‘ದೇವರ ಹೆಣ’

ಹಸಿದವನಿಗೆ ಮಾಂಸವನ್ನು ನಿರಾಕರಿಸುವುದು ಕೇವಲ ದ್ವೇಷವಲ್ಲ, ಅದು ತನ್ನ ಜಾತಿಯ ಪಾವಿತ್ರ್ಯವನ್ನು ಹಸಿದ ಹೊಟ್ಟೆಯ ಮೇಲೆ ಹೇರುವ ಕ್ರೌರ್ಯ. ಇಂದಿನ ಗೋರಕ್ಷಣೆಯ ರಾಜಕಾರಣ ಹಿನ್ನೆಲೆಯಲ್ಲಿ ಈ 'ದೇವರ ಹೆಣ' ಕಥೆಯ ಒಳನೋಟ ಇನ್ನಷ್ಟು...

ಅಡ್ಡಂಡ ಕಾರ್ಯಪ್ಪನವರ ನಾಟಕದ ವಿವಾದ: ಗೋಡ್ಸೆ ವೈಭವೀಕರಣದ ಹಿಂದೆ...

ಗೋಡ್ಸೆಯನ್ನು ವೈಭವೀಕರಿಸುವ ರಾಜಕೀಯವನ್ನು ಕೇವಲ ಒಬ್ಬ ವ್ಯಕ್ತಿಯ ಅಭಿಮಾನ ಅಥವಾ ಇತಿಹಾಸದ ಪರ್ಯಾಯ ಓದು ಎಂದು ಸೀಮಿತಗೊಳಿಸಲಾಗದು. ಅದರ ಮೂಲಕ ಗಾಂಧೀಜಿಯವರನ್ನು ಸಾರ್ವಜನಿಕ ಸ್ಮೃತಿಯಿಂದ ದೂರಮಾಡಿ, ಅವರ ಹತ್ಯೆಯನ್ನು ಸಮರ್ಥಿಸಬಹುದಾದ ವಾತಾವರಣ ನಿರ್ಮಿಸುವ...

ಗೋಮಾಂಸ ನಿಷೇಧವಿರಲಿ, ‘ಬೀಫ್ ತಿನ್ನಬೇಡಿ’ ಎಂದು ಹೇಳಿಲ್ಲ ಮನುಸ್ಮೃತಿ!

ಗುಜರಾತ್‌ ಕೋರ್ಟ್‌ ಮನುಸ್ಮೃತಿಯನ್ನು ಗೋರಕ್ಷಣೆಯ ಏಕೈಕ ಆಧಾರವೆಂದು ಬಿಂಬಿಸಲು ಹೊರಟಾಗ, ಮನುಸ್ಮೃತಿಯು ತಾನೇ ಸೃಷ್ಟಿಸಿದ ಈ ವೈರುಧ್ಯಗಳನ್ನೂ ನಾವು ಎತ್ತಿ ತೋರಿಸಬೇಕಾಗುತ್ತದೆ. ಮನುಸ್ಮೃತಿ ನೇರವಾಗಿ 'ಬೀಫ್ ತಿನ್ನಬೇಡಿ' ಎಂದೂ ಹೇಳಿಲ್ಲ, 'ತಿನ್ನಿ' ಎಂದೂ...

ಇದನ್ನೂ ಓದಿ: ಸೋನಮ್ ವಾಂಗ್‌ಚುಕ್ ಜೀವ ಅಮೂಲ್ಯ, ರಕ್ಷಣೆಗೆ ಕೇಂದ್ರ, ದೆಹಲಿ ಸರ್ಕಾರಕ್ಕೆ ಹೈಕೋರ್ಟ್ ಆದೇಶ

ನವೆಂಬರ್ 1ರಂದು ಲೇಹ್ ತಹಶೀಲ್ದಾರ್ ಅವರು ಈ ನೋಟಿಸ್‌ ಅನ್ನು ಜಾರಿಗೊಳಿಸಿದ್ದು, HIAL ಸಂಸ್ಥೆಯ ಸಹ-ಸಂಸ್ಥಾಪಕಿ ಮತ್ತು ಸಿಇಒ (ಸೋನಮ್ ವಾಂಗ್‌ಚುಕ್ ಅವರ ಪತ್ನಿ) ಗೀತಾಂಜಲಿ ಜೆ. ಆಂಗ್ಮೊ ಅವರಿಗೆ ತಲುಪಿಸಲಾಗಿದೆ. HIAL ಸಂಸ್ಥೆಗೆ ಭೂಮಿ ಹಂಚಿಕೆ ಮಾಡಿದ್ದನ್ನು ಲಡಾಖ್ ಆಡಳಿತವು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆಯು ಹೈಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣವು ನ್ಯಾಯಾಲಯದಲ್ಲಿದೆ.

ನ್ಯಾಯಾಲಯದ ತೀರ್ಪು ಬರುವ ಮುನ್ನ ಸೂಕ್ತ ಅನುಮತಿಗಳಿಲ್ಲದೆ ಶಾಲೆಯ ಚಟುವಟಿಕೆಗಳನ್ನು ಅಥವಾ ಶಾಲಾ ನಿರ್ವಹಣಾ ಸಮಿತಿಯ ಪ್ರಕ್ರಿಯೆಗಳನ್ನು ನಡೆಸುವುದು ಅನಧಿಕೃತವಾಗುತ್ತದೆ. ಆದ್ದರಿಂದ ಹೈಕೋರ್ಟ್‌ನ ಅಂತಿಮ ತೀರ್ಪು ಬರುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಮತ್ತು ಯಾವುದೇ ಹೊಸ ಚಟುವಟಿಕೆಗಳನ್ನು ಆರಂಭಿಸಬಾರದು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.

ಸದ್ಯಕ್ಕೆ ಈ ನೋಟಿಸ್ ಕುರಿತು ಸೋನಮ್ ವಾಂಗ್‌ಚುಕ್ ಅವರಾಗಲಿ ಅಥವಾ ಸಂಸ್ಥೆಯ ಪದಾಧಿಕಾರಿಗಳಾಗಲಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಕಬ್ಬಿನ ಬೆಲೆ ನಿಗದಿಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ಪ್ರತಿಭಟನೆ

ಕಬ್ಬು ಬೆಲೆ ನಿಗದಿ ವಿಚಾರವಾಗಿ ಕಾರ್ಖಾನೆ ಮಾಲೀಕರು ಮತ್ತು ಕಬ್ಬು ಬೆಳೆಗಾರರ...

ಗ್ಯಾನೇಶ್ ರಾಜೀನಾಮೆಗೆ ಆಗ್ರಹಿಸಿ ನ. 5ರಂದು ಫ್ರೀಡಂ ಪಾರ್ಕ್‌ನಲ್ಲಿ ‘ಇಂಡಿಯಾ’ ಒಕ್ಕೂಟದ ಬೃಹತ್ ಪ್ರತಿಭಟನೆ

ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್...

ಶಿವಮೊಗ್ಗ | SC ST ಮೀಸಲಾತಿ ಹೆಚ್ಚಳ ಅನುಮೋದನೆ ಆಗ್ರಹಿಸಿ ಧರಣಿ

ಇಂದಿನ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರು ಈ ಹಿಂದಿನ...

ಈ ದಿನ ಸಂಪಾದಕೀಯ | ಕಬ್ಬು ಬೆಳೆಗಾರರ ಬಿಕ್ಕಟ್ಟನ್ನು ಬಗೆಹರಿಸಲಿ; ಆಗದಿದ್ದರೆ, ಅಧಿಕಾರ ಬಿಟ್ಟು ತೊಲಗಲಿ

ರೈತರನ್ನು ಎದುರು ಹಾಕಿಕೊಂಡ ಸರ್ಕಾರಗಳು ಉಳಿದ ಉದಾಹರಣೆಗಳಿಲ್ಲ. 1980ರಲ್ಲಿ ರೈತರ ಮೇಲೆ...