ʼದಿಲ್ಲಿ ಚಲೊʼ ಪ್ರತಿಭಟನೆ | ಮತ್ತೊಬ್ಬ ರೈತ ಸಾವು; 15 ದಿನಗಳಲ್ಲಿ ಆರನೇ ಸಾವು

Date:

ಮಂಗಳವಾರ(ಫೆ.28) ರಾಜಿಂದರ್ ಸರಕಾರಿ ಆಸ್ಪತ್ರೆಯಲ್ಲಿ ಹೃದಯಾಘಾತಕ್ಕೀಡಾಗಿರುವ ಖನೌರಿ ಗಡಿ ಬಳಿ ದಿಲ್ಲಿ ಚಲೊ ಅಂಗವಾಗಿ ಪ್ರತಿಭಟನೆ ನಡೆಸುತ್ತಿದ್ದ ಮತ್ತೊಬ್ಬ ಪಂಜಾಬ್ ರೈತ ಮೃತಪಟ್ಟಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ (ಕ್ರಾಂತಿಕಾರಿ) ಪ್ರತಿನಿಧಿಗಳ ಪ್ರಕಾರ, ಮೃತ ರೈತನನ್ನು ಕರ್ನೈಲ್ ಸಿಂಗ್ (62) ಎಂದು ಗುರುತಿಸಲಾಗಿದೆ. ಅವರು ಪತ್ರಾಣ್ ಬಳಿಯ ಅರ್ನೊ ಖುರ್ದ್ ಗ್ರಾಮದ ನಿವಾಸಿಯಾಗಿದ್ದಾರೆ.

ಕರ್ನೈಲ್ ಸಿಂಗ್ ಸಾವಿನೊಂದಿಗೆ ಇಲ್ಲಿವರೆಗಿನ ದಿಲ್ಲಿ ಚಲೊ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಒಟ್ಟು ಆರು ಮಂದಿ ರೈತರು ಕಳೆದ ಹದಿನೈದು ದಿನಗಳಲ್ಲಿ ಮೃತಪಟ್ಟಂತಾಗಿದೆ. ಭಾರತೀಯ ಕಿಸಾನ್ ಯೂನಿಯನ್ (ಕ್ರಾಂತಿಕಾರಿ) ಸಂಘಟನೆಯ ಅಧ್ಯಕ್ಷ ಸುರ್ಜೀತ್ ಸಿಂಗ್ ಫೂಲ್ ಪ್ರಕಾರ, ಫೆಬ್ರವರಿ 21ರಂದು ಖನೌರಿ ಗಡಿಯ ಬಳಿ ಪೊಲೀಸರು ಅಶ್ರುವಾಯು ಶೆಲ್ ದಾಳಿ ನಡೆಸಿದ್ದರಿಂದ, ಅಶ್ರುವಾಯು ಶೆಲ್ ಹೊಮ್ಮಿಸಿದ ಹೊಗೆಯನ್ನು ಸೇವಿಸಿ ಕರ್ನೈಲ್ ಸಿಂಗ್ ಶ್ವಾಸಕೋಶದ ಸೋಂಕಿಗೆ ತುತ್ತಾಗಿದ್ದರು ಎಂದು ಹೇಳಲಾಗಿದೆ.

ಕರ್ನೈಲ್ ಸಿಂಗ್ ತಮ್ಮ ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಕರ್ನೈಲ್ ಸಿಂಗ್ ಒಂದೂವರೆ ಎಕರೆ ಭೂಮಿ ಹೊಂದಿದ್ದು, ಎಂಟು ಲಕ್ಷ ರೂಪಾಯಿ ಸಾಲಗಾರರಾಗಿದ್ದರು ಎಂದು ಬಿಕೆಯು (ಕ್ರಾಂತಿಕಾರಿ) ಪ್ರತಿನಿಧಿಗಳು ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಪ್ರಸಾದ ಬೇಡ ಬಸ್ ಬೇಕು’ ಎಂದ ಬಾಲಕಿಯ ಮನವಿಯಲ್ಲಿದೆ ಮಹತ್ವದ ಸಂದೇಶ

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನರೇಂದ್ರ ಮೋದಿಯೇ ಭಾರತದ ದೊಡ್ಡ ಸಮಸ್ಯೆ: ಎಂ ಕೆ ಸ್ಟಾಲಿನ್

ಪ್ರಸ್ತುತ ಭಾರತದ ದೊಡ್ಡ ಸಮಸ್ಯೆ ಪ್ರಧಾನಿ ನರೇಂದ್ರ ಮೋದಿ ಅವರೇ ಆಗಿದ್ದಾರೆ...

ಟಿಎಂಸಿ ಚುನಾವಣಾ ಪ್ರಣಾಳಿಕೆ ಬಿಡುಗಡೆ: ಸಿಎಎ, ಏಕರೂಪ ನಾಗರಿಕ ಸಂಹಿತೆ ನಿಷೇಧ

ತೃಣಮೂಲ ಕಾಂಗ್ರೆಸ್ ಪಕ್ಷ(ಟಿಎಂಸಿ) ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಇಂಡಿಯಾ ಒಕ್ಕೂಟ...

ಬಸ್‌ನ ಡ್ಯಾಶ್‌ಬೋರ್ಡ್‌ನಲ್ಲಿ ‘ಫ್ಯಾಮಿಲಿ ಫೋಟೋ’ ಇರಿಸಲು ಯುಪಿ ಚಾಲಕರಿಗೆ ಮನವಿ!

ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಉತ್ತರ ಪ್ರದೇಶ ಸಾರಿಗೆ ಇಲಾಖೆ...

ಭಾರತದ ಯುವಕರದು ವಿರಾಟ್ ಕೊಹ್ಲಿ ರೀತಿಯ ಮನಸ್ಥಿತಿ: ರಘುರಾಂ ರಾಜನ್

ಬೃಹತ್ ಸಂಖ್ಯೆಯ ಭಾರತದ ಯುವಕರು ವಿದೇಶಗಳಿಗೆ ಹೋಗಿ ಅಲ್ಲಿ ತಮ್ಮ ಉದ್ಯಮವನ್ನು...