ಮೇಲಿಂದ ಪಪ್ಪಾ ಹೆಮ್ಮೆಯಿಂದ ನೋಡುತ್ತಿದ್ದಾರೆ: ಅಮ್ಮನ ಆತ್ಮಕಥನಕ್ಕೆ ರಾಹುಲ್-ಪ್ರಿಯಾಂಕಾ ಭಾವನಾತ್ಮಕ ಬೆಂಬಲ

Date:

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 82ನೇ ಜಯಂತಿಯಂದು (ಆಗಸ್ಟ್ 20), ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಮುಂಬರುವ ಆತ್ಮಕಥನದ ಬಗ್ಗೆ ‘X’ (ಟ್ವಿಟರ್) ತಾಣದಲ್ಲಿ ಅತ್ಯಂತ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

- Advertisement -

ಸೋನಿಯಾ ಗಾಂಧಿ ಅವರ ಆತ್ಮಕಥನ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಆಲ್ಫ್ರೆಡ್ ಎ. ನಾಫ್ ಸಂಸ್ಥೆಯು ಇದನ್ನು ನವೆಂಬರ್ 10ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನ್ಯಾಯಕ್ಕಾಗಿ ಬಿಲ್ಕಿಸ್ ಬಾನೋ 22 ವರ್ಷಗಳ ಅಲೆದಾಟ: ಇಂದಿಗೂ...

2002ರ ಗುಜರಾತ್ ಗಲಭೆಯ ಕರಾಳ ನೆನಪುಗಳನ್ನು ಹೊತ್ತು, ತಮ್ಮವರನ್ನೆಲ್ಲಾ ಕಳೆದುಕೊಂಡು, ಅತ್ಯಾಚಾರದ ಘೋರ ಕ್ರೌರ್ಯಕ್ಕೆ ತುತ್ತಾದ ಬಿಲ್ಕಿಸ್ ಬಾನೋ ಬದುಕು ಇಂದಿಗೂ ನೆಮ್ಮದಿ ಕಂಡಿಲ್ಲ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಇಬ್ಬರು ಅಪರಾಧಿಗಳ ಜೀವಾವಧಿ...

ಡಿಪಿಡಿಪಿ ಕಾಯ್ದೆ: ನಾಗರಿಕರ ಖಾಸಗಿತನದ ರಕ್ಷಣೆಯೋ, ಪತ್ರಿಕಾ ಸ್ವಾತಂತ್ರ್ಯದ...

ಡಿಪಿಡಿಪಿ ಕಾಯ್ದೆ ನಾಗರಿಕರ ಗೌಪ್ಯತೆಯನ್ನು ಕಾಪಾಡುವ ಭರವಸೆ ನೀಡುತ್ತಿದೆ. ಆದರೆ, ಇದೇ ಕಾಯ್ದೆಯು ಪತ್ರಕರ್ತರ ಮೂಲಭೂತ ಹಕ್ಕು ಮತ್ತು ತನಿಖಾ ಪತ್ರಿಕೋದ್ಯಮದ ಮೇಲೆ ಕರಿನೆರಳು ಬೀರಲಿದೆಯೇ? ಆರ್‌ಟಿಐ ದುರ್ಬಲಗೊಳ್ಳುತ್ತಿದೆಯೇ? ಒಂದೆಡೆ ವ್ಯಕ್ತಿಯ ಖಾಸಗಿತನದ...

ಉಳಿತಾಯದ ಪಾಠ ಹೇಳಿದ ಮೋದಿ: ಬೆಲೆ ಏರಿಕೆ, ನಿರುದ್ಯೋಗ;...

ಮಕ್ಕಳ ಶಿಕ್ಷಣ, ಮದುವೆ ಮತ್ತು ಮುಪ್ಪಿನ ಕಾಲಕ್ಕಾಗಿ ಹೊಟ್ಟೆಬಟ್ಟೆ ಕಟ್ಟಿ ಉಳಿತಾಯ ಮಾಡುವುದು ಭಾರತೀಯರ ಸಂಸ್ಕೃತಿಯಲ್ಲೇ ಬಂದಿದೆ. ಅವರಿಗೆ ಉಳಿತಾಯದ ಪಾಠ ಕಲಿಸುವ ಅಗತ್ಯವಿಲ್ಲ; ಬದಲಾಗಿ ಬಡತನದಿಂದ ಹೊರಬಂದ ಕುಟುಂಬಗಳು ಮತ್ತೆ ಸಂಕಷ್ಟಕ್ಕೆ...

ಇದನ್ನೂ ಓದಿ: ನಿಜವಾದ ಭಾರತೀಯ ಯಾರೆಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ನಿರ್ಧರಿಸಬೇಕಾಗಿಲ್ಲ: ರಾಹುಲ್ ಬೆಂಬಲಕ್ಕೆ ನಿಂತ ಪ್ರಿಯಾಂಕಾ

ತಮ್ಮ ತಾಯಿಯನ್ನು ಉದ್ದೇಶಿಸಿ ಬರೆದಿರುವ ರಾಹುಲ್ ಗಾಂಧಿ, “ಅಮ್ಮ, ನಾನು ನಿನ್ನನ್ನು ಮತ್ತು ಪಪ್ಪಾರನ್ನು ಒಟ್ಟಿಗೆ ನೋಡಿ 35 ವರ್ಷಗಳಿಗಿಂತಲೂ ಹೆಚ್ಚು ಕಾಲವಾಯಿತು. ಪಪ್ಪಾ ನಮ್ಮನ್ನು ಅಗಲಿದ ದಿನದಿಂದ, ಜೀವನದಲ್ಲಿ ಎದುರಾದ ಪ್ರತಿಯೊಂದು ಕಷ್ಟವನ್ನೂ ನೀನು ಅಪಾರ ಧೈರ್ಯ ಮತ್ತು ಘನತೆಯಿಂದ ಎದುರಿಸಿದ್ದನ್ನು ನಾನು ನೋಡಿದ್ದೇನೆ. ಪಪ್ಪಾ ಹೋದ ನಂತರ ನಿನ್ನ ಜೀವನ ಎಷ್ಟು ಕಷ್ಟಕರವಾಗಿತ್ತು ಎಂಬುದು ನನಗೂ ಮತ್ತು ಪ್ರಿಯಾಂಕಾಗೆ ಮಾತ್ರ ನಿಜವಾಗಿ ಗೊತ್ತು” ಎಂದು ಬರೆದುಕೊಂಡಿದ್ದಾರೆ.

ಖಾಸಗಿ ಜೀವನವನ್ನು ಗೌಪ್ಯವಾಗಿಡಲು ಬಯಸುವ ಸೋನಿಯಾ ಗಾಂಧಿಯವರು ತಮ್ಮ ಜೀವನದ ಕಥೆಯನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿರುವುದನ್ನು ಮೆಚ್ಚಿದ ರಾಹುಲ್, “ನಿನ್ನ ಜೀವನದ ಸುಂದರ ಕಥೆಯನ್ನು ನಿನ್ನನ್ನು ಪ್ರೀತಿಸುವ ಕೋಟ್ಯಂತರ ಜನರು ಓದಲಿದ್ದಾರೆ ಎಂಬುದನ್ನು ನೆನೆದರೆ ನನಗೆ ಹೆಮ್ಮೆಯಾಗುತ್ತದೆ. ಇಂದು ಪಪ್ಪಾ ಅವರ ಜನ್ಮದಿನದಂದು, ಅವರು ಮೇಲಿಂದ ನಗುತ್ತಾ, ತಮ್ಮ ಸುಂದರ ಸೋನಿಯಾರನ್ನು ಹೆಮ್ಮೆಯಿಂದ ನೋಡುತ್ತಿರುವುದನ್ನು ನಾನು ಕಾಣಬಲ್ಲೆ” ಎಂದು ಭಾವುಕರಾಗಿದ್ದಾರೆ.

ಇನ್ನೊಂದೆಡೆ ಪ್ರಿಯಾಂಕಾ ಗಾಂಧಿ, “ಇಂದು ನನ್ನ ತಂದೆಯ ಹುಟ್ಟುಹಬ್ಬದ ದಿನ. ನನ್ನ ತಾಯಿ ತಮ್ಮ ಜೀವನ ಕಥೆಯನ್ನು ತುಂಬು ಹೃದಯದಿಂದ ಮತ್ತು ಪ್ರಾಮಾಣಿಕತೆಯಿಂದ ಬರೆದಿದ್ದಕ್ಕಾಗಿ ನನ್ನ ತಂದೆ ಖಂಡಿತವಾಗಿಯೂ ಹೆಮ್ಮೆಪಡುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ಪೋಷಕರ ಈ ಪಯಣಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದಕ್ಕೆ ತಾವು ಧನ್ಯತೆ ಅನುಭವಿಸಿರುವುದಾಗಿ ತಿಳಿಸಿದ ಪ್ರಿಯಾಂಕಾ, “ಈ ಪುಸ್ತಕದ ಮೂಲಕ ಪ್ರತಿಯೊಬ್ಬರೂ ನನ್ನ ತಾಯಿಯ ನಿಜವಾದ ವ್ಯಕ್ತಿತ್ವವನ್ನು ತಿಳಿದುಕೊಳ್ಳುತ್ತಾರೆ ಎಂಬುದು ನನಗೆ ಸಂತೋಷ. ಅವರು ಅತ್ಯಂತ ಧೈರ್ಯಶಾಲಿ, ನಿಷ್ಠಾವಂತ ಮತ್ತು ಕರುಣಾಮಯಿ ಮಹಿಳೆ. ಜತೆಗೆ ಅಗತ್ಯವಿದ್ದಾಗ ಅತ್ಯಂತ ದೃಢವಾಗಿ ನಿಲ್ಲಬಲ್ಲ ಹಾಗೂ ತಮಾಷೆಯ ಸ್ವಭಾವದವರಾಗಿದ್ದಾರೆ” ಎಂದು ಹೇಳಿದ್ದಾರೆ.

ತಮ್ಮ ತಾಯಿಯ ಜೀವನವು ಪತಿ ಹಾಗೂ ದೇಶದ ಮೇಲಿನ ಪ್ರೀತಿಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸುತ್ತಾ, “ಲವ್ ಯೂ ಮಾ, ನಿನ್ನ ಬಗ್ಗೆ ನಮಗೆ ಅತ್ಯಂತ ಹೆಮ್ಮೆಯಿದೆ” ಎಂದು ತಮ್ಮ ಪೋಸ್ಟ್ ಅನ್ನು ಮುಕ್ತಾಯಗೊಳಿಸಿದ್ದಾರೆ.

ಈ ಪುಸ್ತಕದಲ್ಲಿ ಸೋನಿಯಾ ಗಾಂಧಿಯವರು ಇಟಲಿಯ ತಮ್ಮ ಬಾಲ್ಯದ ದಿನಗಳು, 1965ರಲ್ಲಿ ಕೇಂಬ್ರಿಡ್ಜ್‌ನಲ್ಲಿ ರಾಜೀವ್ ಗಾಂಧಿಯವರೊಂದಿಗೆ ಆದ ಪ್ರೇಮ, ಭಾರತಕ್ಕೆ ಬಂದು ರಾಜಕೀಯ ಕುಟುಂಬದ ಸೊಸೆಯಾದದ್ದು, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿಯವರ ಹತ್ಯೆಯಂತಹ ವೈಯಕ್ತಿಕ ದುರಂತಗಳು ಮತ್ತು 2004ರಲ್ಲಿ ಪ್ರಧಾನಿ ಹುದ್ದೆಯನ್ನು ನಿರಾಕರಿಸಿದ ಸಂದರ್ಭಗಳ ಕುರಿತು ವಿವರವಾಗಿ ಬರೆದಿದ್ದಾರೆ. ತಮ್ಮ ಖಾಸಗಿ ಬದುಕಿನ ನೋವುಗಳನ್ನು ಬಹಿರಂಗವಾಗಿ ಹಂಚಿಕೊಳ್ಳುವುದು ಸುಲಭವಾಗಿರಲಿಲ್ಲ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೋಹಿಂಗ್ಯಾ ನರಮೇಧಕ್ಕೆ ಮ್ಯಾನ್ಮಾರ್ ಹೊಣೆ ಎಂದ ಐಸಿಜೆ ತೀರ್ಪಿನ ಅರ್ಥವೇನು?

ರೋಹಿಂಗ್ಯಾ ಅಲ್ಪಸಂಖ್ಯಾತ ಸಮುದಾಯದ ನರಮೇಧಕ್ಕೆ ಮ್ಯಾನ್ಮಾರ್ ಹೊಣೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ...

ವಿಜಯಪುರ |ಜನರ ಕೆಲಸಕ್ಕೆ ಅಲೆದಾಡಿಸುವ ಅಧಿಕಾರಿಗಳ ನಿರ್ಲಕ್ಷ್ಯ ಸಹಿಸಲ್ಲ: ಉಪಲೋಕಾಯುಕ್ತ ಫಣೀಂದ್ರ ಎಚ್ಚರಿಕೆ

ಸಾರ್ವಜನಿಕರ ಅಗತ್ಯ ಸೇವೆಗಳನ್ನು ಸಕಾಲದಲ್ಲಿ ಒದಗಿಸದೇ, ಕರ್ತವ್ಯ ನಿರ್ವಹಣೆಯಲ್ಲಿ ವಿಳಂಬ ಮಾಡಿದರೆ...

ನ್ಯೂಜಿಲೆಂಡ್ ವಿರುದ್ಧ ಟೆಸ್ಟ್‌ಗೆ ಸಿರಾಜ್ ಅವರನ್ನು ಕೈಬಿಟ್ಟಿದ್ದಕ್ಕೆ ವ್ಯಾಪಕ ಅಸಮಾಧಾನ

ನಿಮ್ಮ ಅಗ್ರ ನಾಲ್ವರು ಬೌಲರ್‌ಗಳಲ್ಲಿ ಸಿರಾಜ್‌ಗೆ ಸ್ಥಾನವಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ನನಗೆ...