ಪೂರ್ಣ ಹಣ ಪಾವತಿಯಾಗದಿದ್ದರೂ ‘ಸೇಲ್ ಡೀಡ್’ ಮಾನ್ಯ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Date:

ಆಸ್ತಿ ಮಾರಾಟದ ಕ್ರಯಪತ್ರ (ಸೇಲ್ ಡೀಡ್) ನೋಂದಣಿ ಮಾಡುವಾಗ ಆಸ್ತಿಯ ಸಂಪೂರ್ಣ ಹಣ ಪಾವತಿಯಾಗಿಲ್ಲ ಎಂಬ ಕಾರಣಕ್ಕೆ, ಆ ಕ್ರಯಪತ್ರವನ್ನು ಅಮಾನ್ಯ ಅಥವಾ ರದ್ದು ಎಂದು ಪರಿಗಣಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

- Advertisement -

​ಆಸ್ತಿ ಮಾರಾಟ ಮಾಡಲು ಉಭಯ ಪಕ್ಷಗಾರರು ಸಮ್ಮತಿಸಿ, ಕ್ರಯಪತ್ರಕ್ಕೆ ಸಹಿ ಹಾಕಿ ನೋಂದಣಿ ಮಾಡಿದ ಕೂಡಲೇ ಆಸ್ತಿಯ ಮಾಲೀಕತ್ವದ ವರ್ಗಾವಣೆ ಪೂರ್ಣಗೊಳ್ಳುತ್ತದೆ. ನಿಗದಿತ ಮೊತ್ತದಲ್ಲಿ ಒಂದು ಭಾಗದಷ್ಟು ಹಣ ಪಾವತಿಯಾಗುವುದು ಬಾಕಿಯಿದ್ದರೂ ಆಸ್ತಿ ಮಾಲೀಕತ್ವದ ವರ್ಗಾವಣೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ವಂದೇ ಮಾತರಂ: ರಾಷ್ಟ್ರಗೌರವದ ಸಂಕೇತವೋ, ಚಿತ್ತ ಚದುರಿಸುವ ರಾಜಕೀಯ...

ಭಾರತದ ಯುವಜನತೆಯಲ್ಲಿ ರಾಹುಲ್ ಗಾಂಧಿಯವರ ವರ್ಚಸ್ಸು ಹೆಚ್ಚುತ್ತಿರುವುದನ್ನು ಗಮನಿಸಿ, ಇದೇ ಸಂಸತ್ ಕಲಾಪದಲ್ಲಿ, "ವಂದೇ ಮಾತರಂ" ವಿಷಯವನ್ನು ಮುನ್ನೆಲೆಗೆ ತಂದು, ಯುವಜನತೆಯ ಗಮನವನ್ನು ಬೇರೆಡೆ ಸೆಳೆಯುವ old trick ಮಾಡಲಾಗಿದೆ ಎಂಬುದು ಈ...

ಮುಂಗಾರು ಹಿನ್ನಡೆ, ಹಿಂಗಾರಿಗೆ ಕಂಟಕ: ದೇಶದಲ್ಲಿ 2027ರವರೆಗೆ ಬರಗಾಲದ ಆತಂಕ!

ಪ್ರಕೃತಿಯ ಏರುಪೇರುಗಳನ್ನು ಎದುರಿಸಲು ಸರ್ಕಾರಗಳು ತಕ್ಷಣದ ಆಪತ್ಕಾಲೀನ ಪರಿಹಾರ ಕ್ರಮಗಳಿಗೆ ಸೀಮಿತವಾಗದೆ, ದೀರ್ಘಕಾಲೀನ ಕಾರ್ಯತಂತ್ರಗಳನ್ನು ರೂಪಿಸುವುದು ಅತ್ಯಗತ್ಯ. ಮಣ್ಣಿನ ತೇವಾಂಶ ಸಂರಕ್ಷಣೆ, ನೀರಾವರಿ ವ್ಯಾಪ್ತಿಯ ವೈಜ್ಞಾನಿಕ ವಿಸ್ತರಣೆ, ಹವಾಮಾನ ಬದಲಾವಣೆಗೆ ಸ್ಥಿತಿಸ್ಥಾಪಕತ್ವ ಹೊಂದಿರುವ(Climate-resilient)...

ಕಾಲೇಜು ಕ್ಯಾಂಪಸ್‌ಗಳಲ್ಲಿ ದಲಿತ ವಿದ್ಯಾರ್ಥಿಗಳೇ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ?

‘ದಲಿತ ವಿದ್ಯಾರ್ಥಿಗಳೇ ಏಕೆ ಹೀಗೆ ಸಾಯುತ್ತಿದ್ದಾರೆ?’ — ಇದು ಐಐಟಿ ಬಾಂಬೆಯ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರ ತಾಯಿ ಸೋನಾಲಿ ವಾಕೋಡೆ ಕೇಳಿದ ಪ್ರಶ್ನೆ. ಈ ಪ್ರಶ್ನೆ ಕೇವಲ ಮಗನನ್ನು ಕಳೆದುಕೊಂಡ ತಾಯಿಯ...

​ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು ಈ ತೀರ್ಪು ನೀಡಿದೆ. “ಉಳಿಕೆ ಹಣ ಪಾವತಿಯಾಗಿಲ್ಲ ಎಂಬ ಕಾರಣಕ್ಕೆ ನೋಂದಾಯಿತ ಕ್ರಯಪತ್ರವು ಅಸಿಂಧುವಾಗುವುದಿಲ್ಲ. ಇಂತಹ ಪ್ರಕರಣಗಳಲ್ಲಿ, ಆಸ್ತಿ ಮಾರಾಟ ಮಾಡಿದವರು ಬಾಕಿ ಹಣ ವಸೂಲಾತಿಗಾಗಿ ಸಿವಿಲ್ ದಾವೆ ಹೂಡಬಹುದೇ ಹೊರತು, ಕ್ರಯಪತ್ರವನ್ನೇ ರದ್ದುಗೊಳಿಸುವಂತೆ ಕೋರಲು ಬರುವುದಿಲ್ಲ” ಎಂದು ಪೀಠ ತಿಳಿಸಿದೆ.

ಆಸ್ತಿಯೊಂದರ ಮಾರಾಟಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಎರಡು ಕ್ರಯಪತ್ರಗಳನ್ನು ರದ್ದುಗೊಳಿಸಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಜಿಯಾ ಬೇಗಂ ಮತ್ತು ಇತರರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಆಗಸ್ಟ್ 7, 2026ರಂದು ಈ ತೀರ್ಪು ನೀಡಿದೆ. ಹೈಕೋರ್ಟ್ ಆದೇಶವನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ವಿಚಾರಣಾ ನ್ಯಾಯಾಲಯ ಹಾಗೂ ಮೊದಲ ಮೇಲ್ಮನವಿ ನ್ಯಾಯಾಲಯದ (First appellate court) ತೀರ್ಪನ್ನು ಎತ್ತಿಹಿಡಿದಿದೆ.

​ಈ ವಿವಾದವು 1975ರ ಮಾರ್ಚ್ 10ರಂದು ನೋಂದಣಿಯಾದ ಎರಡು ಕ್ರಯಪತ್ರಗಳಿಗೆ ಸಂಬಂಧಿಸಿದ್ದಾಗಿತ್ತು. ಆರ್ಥಿಕ ಸಂಕಷ್ಟದಲ್ಲಿದ್ದ ಅರ್ಜಿದಾರರು, ತಲಾ 7,000 ರೂ.ಗೆ ಆಸ್ತಿಯನ್ನು ಮಾರಾಟ ಮಾಡಿದ್ದರು. ಈ ಪೈಕಿ 2,500 ರೂ.ಗಳನ್ನು ಮುಂಗಡವಾಗಿ ಪಡೆದುಕೊಂಡು, ಉಳಿದ 4,500 ರೂ.ಗಳನ್ನು ಅರ್ಜಿದಾರರ ಸಾಲ ತೀರಿಸಲು ಪ್ರತಿವಾದಿ (ಖರೀದಿದಾರ) ತನ್ನ ಬಳಿಯೇ ಉಳಿಸಿಕೊಂಡಿದ್ದ. ಆದರೆ ಆತ ಸಾಲ ತೀರಿಸಿರಲಿಲ್ಲ. ಹೀಗಾಗಿ ಕ್ರಯಪತ್ರ ರದ್ದುಗೊಳಿಸಲು ಕೋರಿ ಮೂಲ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರು.

​ಈ ಪ್ರಕರಣಕ್ಕೆ ‘1882ರ ಆಸ್ತಿ ವರ್ಗಾವಣೆ ಕಾಯ್ದೆ’ಯ ಸೆಕ್ಷನ್ 54 ಸ್ಪಷ್ಟವಾಗಿ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ​”ಭಾಗಶಃ ಹಣ ಪಾವತಿಯಾಗಿರುವ ಸಂಪೂರ್ಣ ಅರಿವಿನೊಂದಿಗೇ ಕ್ರಯಪತ್ರವನ್ನು ಮಾಡಿಕೊಡಲಾಗಿದೆ. ಹೀಗಿರುವಾಗ, ಕೇವಲ ಉಳಿಕೆ ಹಣ ಪಾವತಿಸಿಲ್ಲ ಎಂಬ ಕಾರಣಕ್ಕೆ ನೋಂದಾಯಿತ ಕ್ರಯಪತ್ರವನ್ನು ಶೂನ್ಯ ಅಥವಾ ಅಮಾನ್ಯ ಮಾಡಲು ಸಾಧ್ಯವಿಲ್ಲ. ಫಿರ್ಯಾದಿದಾರರು ಬಾಕಿ ಹಣ ವಸೂಲಿಗೆ ದಾವೆ ಹೂಡಬೇಕಿತ್ತೇ ವಿನಃ, ಕ್ರಯಪತ್ರ ರದ್ದತಿಗೆ ಅಲ್ಲ. ಅಲ್ಲದೆ, 1984ರಲ್ಲಿ ದಾವೆ ಹೂಡಿರುವುದರಿಂದ ಇಲ್ಲಿ ಕಾಲಮಿತಿಯ ಪ್ರಶ್ನೆಯೂ ಉದ್ಭವಿಸುತ್ತದೆ” ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಲೇಜು ಕ್ಯಾಂಪಸ್‌ಗಳಲ್ಲಿ ದಲಿತ ವಿದ್ಯಾರ್ಥಿಗಳೇ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ?

‘ದಲಿತ ವಿದ್ಯಾರ್ಥಿಗಳೇ ಏಕೆ ಹೀಗೆ ಸಾಯುತ್ತಿದ್ದಾರೆ?’ — ಇದು ಐಐಟಿ ಬಾಂಬೆಯ...

ನೆಹರೂ-ಶಾಸ್ತ್ರಿ ಕಾಲದ ಕಟ್ಟಡಗಳಿಗೆ ಮೋದಿ ಬುಲ್ಡೋಝರ್: ಕೃಷಿ ಭವನ, ಶಾಸ್ತ್ರಿ ಭವನ ನೆಲಸಮಕ್ಕೆ ಸಿದ್ಧತೆ!

ಕೇಂದ್ರದ ನರೇಂದ್ರ ಮೋದಿ ಸರ್ಕಾರವು ನವದೆಹಲಿಯ ಲೂಟಿಯನ್ಸ್ ವಲಯದಲ್ಲಿ ಕೈಗೆತ್ತಿಕೊಂಡಿರುವ 'ಸೆಂಟ್ರಲ್...

​’ಮಹಿಳಾ ಮೀಸಲಾತಿ’ಗಾಗಿ ನವರಾತ್ರಿ ವೇಳೆ ಸಂಸತ್ತಿನ ವಿಶೇಷ ಅಧಿವೇಶನ ಸಾಧ್ಯತೆ?

ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಗೆ ವೇಗ ನೀಡುವ ಉದ್ದೇಶದಿಂದ,...