ರದ್ದಾದ ಖಾತೆಗಳಿಗೆ ತಡೆ ನೀಡುವ ಕಾಂಗ್ರೆಸ್ ಮನವಿ ನಿರಾಕರಿಸಿದ ಐಟಿ ಮೇಲ್ಮನವಿ ನ್ಯಾಯಮಂಡಳಿ

Date:

ಆದಾಯ ತೆರಿಗೆ ಇಲಾಖೆಯಿಂದ ರದ್ದುಗೊಳಿಸಲಾದ ತಮ್ಮ ಬ್ಯಾಂಕ್‌ ಖಾತೆಗಳಿಗೆ ತಡೆ ನೀಡಬೇಕೆಂದು ಸಲ್ಲಿಸಿದ ಕಾಂಗ್ರೆಸ್ ಮನವಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ವಜಾಗೊಳಿಸಿದೆ.

ಐಟಿ ಇಲಾಖೆ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು 10 ದಿನಗಳ ಕಾಲ ಕಾಲಾವಕಾಶ ನೀಡಬೇಕೆಂದು ಕಾಂಗ್ರೆಸ್ ಮನವಿ ಮಾಡಿಕೊಂಡಿತ್ತು. ಆದಾಗ್ಯೂ ಪೀಠವು ತಮಗೆ ಅಧಿಕಾರವಿಲ್ಲವೆಂದು ಮನವಿಯನ್ನು ತಳ್ಳಿಹಾಕಿದೆ.

ಮೇಲ್ಮನವಿ ನ್ಯಾಯಮಂಡಳಿಯ ಆದೇಶದಿಂದ ಕಾಂಗ್ರೆಸ್ ಪಕ್ಷ 2018-19ರ ಮೌಲ್ಯಮಾಪನ ವರ್ಷದಲ್ಲಿಐಟಿ ಇಲಾಖೆ ಕೈಗೊಂಡಿರುವ ತೆರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಕ್ಕಟ್ಟಿಗೆ ಸಿಲುಕಿದೆ. 2018ರ ವರ್ಷದಲ್ಲಿ ಪಕ್ಷವು 103 ಕೋಟಿ ರೂ. ಐಟಿ ರಿಟರ್ನ್‌ ಸಲ್ಲಿಸಿತ್ತು. ಇದು ನಂತರದಲ್ಲಿ 105 ಕೋಟಿಗೆ ಪರಿಷ್ಕರಿಸಲಾಗಿತ್ತು. ಅನಂತರದಲ್ಲಿ ಬಡ್ಡಿ 130 ಕೋಟಿ  ರೂ. ಸೇರಿದಂತೆ 135 ಕೋಟಿ ರೂ.ಗೆ ಏರಿಕೆಯಾಯಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಾಂಗ್ರೆಸ್ ಬುಧವಾರ(ಮಾ.06) ಆದಾಯ ತೆರಿಗೆ ಇಲಾಖೆ ವಿರುದ್ಧ ಆದಾಯ ತೆರಿಗೆ ಮೇಲ್ಮನವಿ ಮಂಡಳಿಗೆ ವಿವಿಧ ಬ್ಯಾಂಕ್‌ಗಳಲ್ಲಿದ್ದ ತಮ್ಮ ಖಾತೆಯ 65 ಕೋಟಿ ಹಣವನ್ನು ವಾಪಸ್‌ ಪಡೆದಿರುವುದನ್ನು ಪ್ರಜಾಪ್ರಭುತ್ವ ವಿರೋಧಿ ಎಂದು ಮೇಲ್ಮನವಿ ಸಲ್ಲಿಸಿತ್ತು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೋರ್ಡ್ ಪರೀಕ್ಷೆ ರದ್ದು ಸ್ವಾಗತಾರ್ಹ; ಮೇಲ್ಮನವಿಗೆ ಹೋಗದಿರಲಿ ಸರ್ಕಾರ

ಫೆ.16ರಂದು ಕಾಂಗ್ರೆಸ್‌ನ ಮುಖ್ಯ ಕಚೇರಿಯ ಖಾತೆಗಳನ್ನು ರದ್ದುಗೊಳಿಸಲಾಗಿತ್ತು. ನಂತರದಲ್ಲಿ ಆದಾಯ ಇಲಾಖೆ ಮೇಲ್ಮನವಿ ನ್ಯಾಯಮಂಡಳಿಯು ಮುಂದಿನ ವಿಚಾರಣೆಯವರೆಗೂ ಬಾಕಿಯಿರುವ ಇತರ ಖಾತೆಗಳನ್ನು ನಿರ್ವಹಿಸಲು ಅನುಮತಿ ನೀಡಿತ್ತು.

“ನಾವು 100 ವರ್ಷದಿಂದ ನಿರಂತರವಾಗಿ ಐಟಿ ರಿಟರ್ನ್ಸ್‌ಗಳನ್ನು ಸಲ್ಲಿಸುತ್ತಿದ್ದೇವೆ. ಚುನಾವಣೆಯಲ್ಲಿ ಪಾಲ್ಗೊಳ್ಳದಿರುವುದಕ್ಕಾಗಿ ಚುನಾವಣೆಗೂ ಮುನ್ನ ಈ ರೀತಿ ಮಾಡಲಾಗಿದೆ. ಇದರಿಂದ ನಮಗೆ ಉಸಿರು ಕಟ್ಟಿಸುವ ವಾತಾವರಣ ನಿರ್ಮಾಣವಾಗಿದೆ” ಎಂದು ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಕಾಂಗ್ರೆಸ್ ಪರವಾಗಿ ಹಾಜರಾಗಿದ್ದ ವಕೀಲರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ತೆರಿಗೆ ಇಲಾಖೆ ಮೇಲ್ಮನವಿ ನ್ಯಾಯಮಂಡಳಿ, ಮುಂಬರುವ ಲೋಕಸಭಾ ಚುನಾವಣೆಯನ್ನು ಗುರಿ ಮಾಡಿ ಪಕ್ಷವು ಸುಳ್ಳು ಸುದ್ದಿ ಹರಡುತ್ತಿದೆ ಎಂದು ತಿಳಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಜರಾತ್ | ಪೇಟ ಮತ್ತು ಸನ್ ಗ್ಲಾಸ್ ಧರಿಸಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ

ದೇಶಾದ್ಯಂತ ಜಾತಿ ದೌರ್ಜ್ಯನದ ಘಟನೆಗಳು ಹೆಚ್ಚುತ್ತಲೇ ಇವೆ. ಇತ್ತೀಚಿನ ಘಟನೆಯೊಂದರಲ್ಲಿ, ಪೇಟ...

ಬಿಹಾರ, ಆಂಧ್ರ, ಒಡಿಶಾಗೆ ವಿಶೇಷ ಸ್ಥಾನಮಾನಕ್ಕೆ ಜೆಡಿಯು, ವೈಎಸ್ಆರ್‌ಸಿಪಿ, ಬಿಜೆಡಿ ಬೇಡಿಕೆ

ನವದೆಹಲಿಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಬಿಹಾರ ಹಾಗೂ ಆಂಧ್ರ ಪ್ರದೇಶಗಳಿಗೆ ವಿಶೇಷ...

ಸಿಕ್ಕಿಂ ಪ್ರವೇಶಿಸುವ ಪ್ರವಾಸಿ ವಾಹನಗಳು ಕಸದ ಚೀಲ ಹೊತ್ತೊಯ್ಯುವುದು ಕಡ್ಡಾಯ!

ಸಿಕ್ಕಿಂಗೆ ಪ್ರವೇಶಿಸುವ ಎಲ್ಲಾ ಪ್ರವಾಸಿ ವಾಹನಗಳು ಈಗ ಕಡ್ಡಾಯವಾಗಿ ದೊಡ್ಡ ಕಸದ...

ನಿಫಾ ವೈರಸ್‌ನಿಂದ ಕೇರಳದ 14 ವರ್ಷದ ಬಾಲಕ ಸಾವು

ಕೇರಳದಲ್ಲಿ ನಿಫಾ ವೈರಸ್‌ ಸೋಂಕು ಉಂಟಾಗಿ ಚಿಕಿತ್ಸೆ ಪಡೆಯುತ್ತಿದ್ದ 14 ವರ್ಷದ...