ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (IGI) ವಿಮಾನ ನಿಲ್ದಾಣದಲ್ಲಿ ಭಾನುವಾರ ಮುಂಜಾನೆ ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್‌ಗೆ ಹಾರಾಟ ನಡೆಸಬೇಕಿದ್ದ 232 ಪ್ರಯಾಣಿಕರಿದ್ದ ಸ್ವಿಸ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ (SWISS) ವಿಮಾನದ ಲ್ಯಾಂಡಿಂಗ್ ಗೇರ್‌ಗಳಲ್ಲಿ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸ್ವಲ್ಪದರಲ್ಲೇ ಭಾರಿ ದುರಂತ ತಪ್ಪಿದೆ.
ಬೆಂಕಿ ಕಾಣಿಸುತ್ತಿದ್ದಂತೆ ಪ್ರಯಾಣಿಕರನ್ನು ಕೂಡಲೇ ತೆರವುಗೊಳಿಸಲಾಗಿದ್ದು, ಈ ವೇಳೆ ಕನಿಷ್ಠ ಆರು ಮಂದಿ ಗಾಯಗೊಂಡಿದ್ದಾರೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಇದನ್ನು ಓದಿದ್ದೀರಾ? ಗುಜರಾತ್ ವಿಮಾನ ದುರಂತ | ಕಾಡುವ ಹಲವು ಪ್ರಶ್ನೆಗಳು, ತಜ್ಞರೇನು ಹೇಳುತ್ತಾರೆ?
“ಒಂದು ಎಂಜಿನ್‌ನಲ್ಲಿ ಸಮಸ್ಯೆ ಸಂಭವಿಸಿದೆ. ಅದಾದ ಬಳಿಕ ಟೇಕ್‌ಆಫ್ ಅನ್ನು ಸ್ಥಗಿತಗೊಳಿಸಲಾಗಿದೆ. ವಿಮಾನವು ಟೇಕ್‌ಆಫ್‌ಗೆ ಸಿದ್ಧವಾಗುತ್ತಿದ್ದಾಗ ರನ್‌ವೇಯಲ್ಲಿ ಈ ಘಟನೆ ಸಂಭವಿಸಿದೆ” ಎಂದು ಮಾಹಿತಿ ನೀಡಿದೆ.
ಎಡ ಲ್ಯಾಂಡಿಂಗ್ ಗೇರ್‌ನಿಂದ ಇದ್ದಕ್ಕಿದ್ದಂತೆ ಹೊಗೆ ಕಂಡುಬಂದಿದೆ. ಈ ಘಟನೆಯಿಂದಾಗಿ ಬೆಳಗಿನ ಜಾವ 2 ಗಂಟೆ ಸುಮಾರಿಗೆ ವಿಮಾನ ನಿಲ್ದಾಣದಲ್ಲಿ ಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಹಲವಾರು ಅಗ್ನಿಶಾಮಕ ದಳಗಳನ್ನು ಸ್ಥಳಕ್ಕೆ ರವಾನಿಸಲಾಗಿತ್ತು.
ಸದ್ಯ ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಏರ್‌ಬಸ್ 330-343 ಸ್ವಿಸ್ ವಿಮಾನದಲ್ಲಿ 232 ಪ್ರಯಾಣಿಕರು ಮತ್ತು 13 ಸಿಬ್ಬಂದಿ ಇದ್ದರು.




