‘ಸೂಪರ್‌ಫಾಸ್ಟ್ ರೈಲು’ಗಳ ವೇಗ ತೀರಾ ಕಡಿಮೆ; ಪರಿಶೀಲನೆಗೆ ಶಿಫಾರಸು

Date:

ಭಾರತೀಯ ರೈಲ್ವೆಯ 478 ಸೂಪರ್‌ಫಾಸ್ಟ್ ರೈಲುಗಳಲ್ಲಿ, 123 ರೈಲುಗಳ ವೇಗವು ನಿಗದಿತ ‘ಗಂಟೆಗೆ 55 ಕಿ.ಮೀ.’ ವೇಗಕ್ಕಿಂತ ತೀರಾ ಕಡಿಮೆಯಿದೆ ಎಂದು ಸಂಸದೀಯ ಸಮಿತಿ ಗಮನಸೆಳೆದಿದೆ. ‘ಗರಿಷ್ಠ ಅನುಮತಿಸುವ ವೇಗ’ (ಮ್ಯಾಕ್ಸಿಮಮ್ ಪರ್ಮಿಟಿಂಗ್ ಸ್ಪೀಡ್ – MPS) ರೋಲಿಂಗ್ ಸ್ಟಾಕ್ ಮತ್ತು ವಿಭಾಗೀಯ ವೇಗಗಳನ್ನು ಗಮನದಲ್ಲಿಟ್ಟುಕೊಂಡು ‘ಸೂಪರ್‌ಫಾಸ್ಟ್ ರೈಲು’ಗಳ ಮಾನದಂಡವನ್ನು ಪರಿಶೀಲಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

- Advertisement -

2007ರ ಮೇನಲ್ಲಿ ರಾಷ್ಟ್ರೀಯ ಸಾರಿಗೆ ಸಂಸ್ಥೆಯು ನಿಗದಿ ಮಾಡಿದ ಮಾನದಂಡದಂತೆ ರೈಲಿನ ಸರಾಸರಿ ವೇಗವು ಬ್ರಾಡ್ ಗೇಜ್‌ನಲ್ಲಿ ಗಂಟೆಗೆ ಕನಿಷ್ಠ 55 ಕಿ.ಮೀ. ಮತ್ತು ಮೀಟರ್ ಗೇಜ್‌ನಲ್ಲಿ ಗಂಟೆಗೆ 45 ಕಿ.ಮೀ. ಇದ್ದರೆ, ಅದನ್ನು ಸೂಪರ್‌ಫಾಸ್ಟ್ (SF) ರೈಲು ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಈ ಮಾನದಂಡವನ್ನು 123 ಸೂಪರ್‌ಫಾಸ್ಟ್‌ ರೈಲುಗಳು ಪೂರೈಸುತ್ತಿಲ್ಲ ಎಂಬುದನ್ನು ಸಂಸದೀಯ ಸಮಿತಿ ಗುರುತಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಸಮಿತಿಯು ‘ಭಾರತೀಯ ರೈಲ್ವೆಯ ರೈಲು ಕಾರ್ಯಾಚರಣೆಗಳಲ್ಲಿನ ಸಮಯಪ್ರಜ್ಞೆ ಮತ್ತು ಪ್ರಯಾಣದ ಸಮಯ’ ಶೀರ್ಷಿಕೆಯಲ್ಲಿ ತನ್ನ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿದೆ. “ಕಡಿಮೆ ವೇಗದಲ್ಲಿ ಓಡುತ್ತಿರುವ 123 ಸೂಪರ್‌ಫಾಸ್ಟ್ ರೈಲುಗಳನ್ನು ಹೊಸದಾಗಿ ಪರಿಚಯಿಸಿದಾಗ, ಇವುಗಳ ಪೈಕಿ 47 ರೈಲುಗಳು ಗಂಟೆಗೆ 55 ಕಿ.ಮೀ.ಗಿಂತ ಹೆಚ್ಚಿನ ವೇಗವನ್ನು ಹೊಂದಿವೆ ಎಂಬುದಾಗಿ ಸಚಿವಾಲಯವು ಹೇಳಿತ್ತು. ಆದರೆ, ಈ ರೈಲುಗಳ ವೇಗವೂ 55 ಕಿ.ಮೀ.ಗಿಂತ ಕಡಿಮೆಯೇ ಇದೆ” ಎಂದು ವರದಿ ವಿವರಿಸಿದೆ.

“ಕಾರ್ಯಾಚರಣೆಗಳು ಪ್ರಾರಂಭವಾದ ನಂತರ ಹೆಚ್ಚುವರಿ ನಿಲುಗಡೆಗಳನ್ನು ಸೇರಿಸಿರುವುದು ಹಲವಾರು ರೈಲುಗಳ ಸರಾಸರಿ ವೇಗದ ಮೇಲೆ ಪರಿಣಾಮ ಬೀರಿದೆ. ಕೇವಲ 55 ಕಿ.ಮೀ. ವೇಗದಲ್ಲಿ ಚಲಿಸುವ ರೈಲುಗಳನ್ನು ‘ಸೂಪರ್‌ಫಾಸ್ಟ್’ ಎಂದು ವರ್ಗೀಕರಿಸುವುದು ಕಳವಳಕಾರಿ” ಎಂದಿರುವ ಸಮಿತಿ, ಸಚಿವಾಲಯವೇ ನಿಗದಿಪಡಿಸಿದ ವೇಗ ಮಿತಿಗಳನ್ನು ರೈಲ್ವೆ ಪಾಲಿಸದಿರುವ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದೆ.

ಈ ಲೇಖನ ಓದಿದ್ದೀರಾ?: ಟ್ರಂಪ್–ಮೋದಿ ಒಪ್ಪಂದ | ಇದು ಪರಸ್ಪರ ಸಹಕಾರವೋ ಅಥವಾ ಅಮೆರಿಕದ ಒತ್ತಡದ ಹೇರಿಕೆಯೋ?

“ಸೂಪರ್‌ಫಾಸ್ಟ್ ರೈಲುಗಳೆಂದು ಹೆಸರಿಸುವುದು ಹೆಚ್ಚಿನ ಶುಲ್ಕಗಳನ್ನು ಅನ್ವಯಿಸುವ ಉದ್ದೇಶವನ್ನಷ್ಟೇ ಹೊಂದಿದೆ” ಎಂದು ಸಮಿತಿ ತೀರ್ಮಾನಿಸಿದೆ. “ರೈಲುಗಳ ವೇಗ ಕಡಿಮೆಯಾದಾಗ, ಭಾರತೀಯ ರೈಲ್ವೆ ರೈಲನ್ನು ಸೂಪರ್‌ಫಾಸ್ಟ್ ವರ್ಗದಿಂದ ತೆಗೆದುಹಾಕಿ ದರವನ್ನು ಪರಿಷ್ಕರಿಸಬೇಕಾಗಿತ್ತು” ಎಂದು ಹೇಳಿದೆ.

“ರೈಲ್ವೆ ಸಚಿವಾಲಯವು ರೈಲುಗಳನ್ನು ‘ಸೂಪರ್‌ಫಾಸ್ಟ್’ ಎಂದು ವರ್ಗೀಕರಿಸುವ ಮಾನದಂಡಗಳನ್ನು ಪರಿಶೀಲಿಸಬೇಕು. 55 ಕಿ.ಮೀ. ವೇಗವನ್ನು ಪರಿಗಣಿಸುವ ಸೂಪರ್‌ಫಾಸ್ಟ್ ಮಾನದಂಡವು ಅಕಾಲಿಕವಾಗಿದೆ. ಪ್ರಸ್ತುತ ಸಮಯಕ್ಕೆ ಹೊಂದಿಕೆಯಾಗುವುದಿಲ್ಲ. ವಿಶೇಷವಾಗಿ ಚೀನಾ ಮತ್ತು ಜಪಾನ್‌ನಂತಹ ಪೂರ್ವ ಏಷ್ಯಾದ ಕೆಲವು ದೇಶಗಳು ನಮ್ಮ ವೇಗದ ಮಾನದಂಡಗಳನ್ನು ಮೀರಿದ ವೇಗದಲ್ಲಿ ತಮ್ಮ ರೈಲುಗಳನ್ನು ಓಡಿಸುತ್ತಿವೆ. ಭಾರತೀಯ ಸೂಪರ್‌ಫಾಸ್ಟ್‌ ರೈಲುಗಳ ಮಾನದಂಡವನ್ನು 100 ಕಿ.ಮೀ. ವೇಗವನ್ನು ಅಂದಾಜು ಮಾಡುವ ಜಾಗತಿಕ ಮಾನದಂಡಗಳೊಂದಿಗೆ ಹೊಂದಿಸಬೇಕು” ಎಂದು ಸಮಿತಿ ಹೇಳಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಾಲಾ ಸಮಸ್ಯೆಗಳ ಕುರಿತು ಗ್ರಾಮ ಸಭೆಯಲ್ಲಿ ಧ್ವನಿ ಎತ್ತಿದ ವಿದ್ಯಾರ್ಥಿಗಳು; ಅಧಿಕಾರಿಗಳ ಮೆಚ್ಚುಗೆ-ಭರವಸೆ

ಸರ್ಕಾರಿ ಶಾಲಾ ವಿದ್ಯಾರ್ಥಿಗಳು ‘ವಿಶೇಷ ಗ್ರಾಮ ಸಭೆ’ಗಳಲ್ಲಿ ಪಾಲ್ಗೊಂಡು, ಪಂಚಾಯತ್ ಪ್ರತಿನಿಧಿಗಳು...

ಉತ್ತರಾಖಂಡ SIR ಅಂತಿಮ ಮತದಾರರ ಪಟ್ಟಿ ಪ್ರಕಟ: ಆದರೆ ಮುಗಿದಿಲ್ಲ ನೋಂದಣಿ ಪ್ರಕ್ರಿಯೆ

ಉತ್ತರಾಖಂಡ ರಾಜ್ಯದಲ್ಲಿ ನಡೆದ 'ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್)...

ವಾಹನ ದಟ್ಟಣೆಯ ಸುಳಿಯಲ್ಲಿ ಮನಾಲಿ; ಪ್ರವಾಸೋದ್ಯಮದ ಒತ್ತಡಕ್ಕೆ ನಲುಗುತ್ತಿವೆಯೇ ಬೆಟ್ಟಗಳು?

ಮುಂಗಾರು ಮಳೆ ಕಡಿಮೆಯಾಗುತ್ತಿದ್ದಂತೆ ಹಿಮಾಚಲ ಪ್ರದೇಶದ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಆಗಮನ...