ಜಾರ್ಖಂಡ್‌ನಲ್ಲಿ ಸರ್ಕಾರಿ ಉದ್ಯೋಗ ನೇಮಕಾತಿ ಪರೀಕ್ಷೆಗಳ ಅಕ್ರಮ ಖಂಡಿಸಿ ಮತ್ತು ಸಿಬಿಐ ತನಿಖೆಗೆ ಆಗ್ರಹಿಸಿ ವಿದ್ಯಾರ್ಥಿ ಪ್ರತಿಭಟನಾಕಾರರು ಆಗಸ್ಟ್ 10, ರಾಂಚಿಯಲ್ಲಿರುವ ವಿಧಾನಸೌಧಕ್ಕೆ ಬೃಹತ್ ಮುತ್ತಿಗೆ (ಘೇರಾವ್) ಚಳವಳಿ ನಡೆಸಿದ್ದಾರೆ.
17 ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ, ವಿದ್ಯಾರ್ಥಿಗಳು ಪೊಲೀಸ್ ಬ್ಯಾರಿಕೇಡ್‌ಗಳನ್ನು ದಾಟಿ ವಿಧಾನಸೌಧದತ್ತ ಮುನ್ನುಗ್ಗಿದ್ದಾರೆ. ಈ ವೇಳೆ ಪೊಲೀಸರು ಜಲಫಿರಂಗಿ ಬಳಸಿದ್ದಾರೆ ಮತ್ತು ಲಾಠಿಚಾರ್ಜ್ ಮಾಡಿದ್ದಾರೆ.
ಸರ್ಕಾರದ ಜೊತೆಗಿನ ಮಾತುಕತೆಯಲ್ಲಿ ಸಿಬಿಐ ತನಿಖೆಯ ಪ್ರಮುಖ ಬೇಡಿಕೆಗೆ ಸಮ್ಮತಿ ಸಿಗದ ಕಾರಣ, ವಿದ್ಯಾರ್ಥಿ ನಾಯಕ ರವೀಂದ್ರ ಪಾಸ್ವಾನ್ ಅವರ ನೇತೃತ್ವದಲ್ಲಿ ಶಾಂತಿಯುತ “ವಿಧಾನಸಭಾ ಮಾರ್ಚ್” ಮುಂದುವರಿದಿಸಿದ್ದರು. ಈ ನಡುವೆ ವಿಧಾನಸೌಧದ ಸುತ್ತಲೂ 750 ಮೀಟರ್ ವ್ಯಾಪ್ತಿಯಲ್ಲಿ BNS ಸೆಕ್ಷನ್ 163 ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
ಮುಂಜಾಗ್ರತಾ ಕ್ರಮವಾಗಿ ರಾಂಚಿಯಾದ್ಯಂತ ಪೊಲೀಸರು ಬ್ಯಾರಿಕೇಡ್ ಹಾಗೂ ತಂತಿ ಬೇಲಿಗಳನ್ನು ಅಳವಡಿಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ನಿರಂತರವಾಗಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳು ಬ್ಯಾರಿಕೇಡ್‌ಗಳನ್ನು ದಾಟಿ ವಿಧಾನಸೌಧದತ್ತ ಮುನ್ನುಗ್ಗಿದ್ದಾರೆ.




