ಮೈಮರೆಸಿ ಕಿಸೆಗೆ ಕತ್ತರಿ: ಯುಪಿಐ ಶುಲ್ಕದ ಮೂಲಕ ಜನತೆಗೆ ಮೋದಿ ಸರ್ಕಾರದ ‘ಡಿಜಿಟಲ್ ಶಾಕ್’

Date:

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ‘ಡಿಜಿಟಲ್ ಇಂಡಿಯಾ’ ಎಂಬ ಆಕರ್ಷಕ ಘೋಷಣೆಯಡಿ ದೇಶದ ಜನರನ್ನು ನಗದು ರಹಿತ ವಹಿವಾಟಿನತ್ತ ಸೆಳೆದು, ಇದೀಗ ಆ ಜನಪ್ರಿಯತೆಯನ್ನೇ ಬಂಡವಾಳವಾಗಿಸಿಕೊಂಡು ಜನಸಾಮಾನ್ಯರ ಸುಲಿಗೆಗೆ ಮುಂದಾಗಿದೆ. ನೋಟು ಅಮಾನ್ಯೀಕರಣದಂತಹ ಕಠಿಣ ನಿರ್ಧಾರಗಳ ಮೂಲಕ ಜನರನ್ನು ಬಲವಂತವಾಗಿ ಡಿಜಿಟಲ್ ಪಾವತಿ ವ್ಯವಸ್ಥೆಗೆ ದೂಡಿದ ಸರ್ಕಾರ, ಆರಂಭದಲ್ಲಿ ಯುಪಿಐ ವ್ಯವಸ್ಥೆಯು ಸಂಪೂರ್ಣ ಉಚಿತ ಎಂಬ ಭ್ರಮೆ ಹುಟ್ಟಿಸಿತ್ತು. ಆದರೆ, ಆ ಉಚಿತ ದಿನಗಳಿಗೆ ಇದೀಗ ಅಧಿಕೃತವಾಗಿ ತೆರೆಬಿದ್ದಿದ್ದು, ಮೈಮರೆತಿದ್ದ ಜನರ ಕಿಸೆಗೆ ಕತ್ತರಿ ಹಾಕುವ ಕೇಂದ್ರ ಸರ್ಕಾರದ ಗುಪ್ತ ಅಜೆಂಡಾ ಬಯಲಾಗಿದೆ.

- Advertisement -

ಇತ್ತೀಚೆಗೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಹಾಗೂ ಕೇಂದ್ರ ಹಣಕಾಸು ಇಲಾಖೆಯ ಬೆಂಬಲದೊಂದಿಗೆ ಜಾರಿಗೆ ತಂದಿರುವ ಹೊಸ ನಿಯಮವು ಸರ್ಕಾರದ ಕಾರ್ಪೊರೇಟ್ ಪರ ನೀತಿಯನ್ನು ಸ್ಪಷ್ಟಪಡಿಸುತ್ತದೆ. ಆನ್‌ಲೈನ್ ವಾಲೆಟ್ ಅಥವಾ ಕಾರ್ಡ್‌ಗಳಂತಹ ಪ್ರಿಪೇಯ್ಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್ಸ್ (PPI) ಬಳಸಿ ವ್ಯಾಪಾರಿಗಳಿಗೆ (ಮರ್ಚೆಂಟ್) ಮಾಡುವ 2,000 ರೂಪಾಯಿಗಿಂತ ಮೇಲ್ಪಟ್ಟ ಯುಪಿಐ ವಹಿವಾಟುಗಳ ಮೇಲೆ ಶೇ. 1.1 ರಷ್ಟು ಇಂಟರ್‌ಚೇಂಜ್ ಶುಲ್ಕ ವಿಧಿಸಲು ಆದೇಶಿಸಲಾಗಿದೆ. ಮೇಲ್ನೋಟಕ್ಕೆ ಇದು ಕೇವಲ ವ್ಯಾಪಾರಿಗಳ ಮೇಲಿನ ಶುಲ್ಕದಂತೆ ಬಿಂಬಿತವಾದರೂ, ಇದು ಸಂಪೂರ್ಣ ಡಿಜಿಟಲ್ ವ್ಯವಸ್ಥೆಯನ್ನು ವಾಣಿಜ್ಯೀಕರಣಗೊಳಿಸುವ ಹಾಗೂ ಬ್ಯಾಂಕ್‌ಗಳು ಮತ್ತು ಪೇಮೆಂಟ್ ಆ್ಯಪ್‌ಗಳಿಗೆ ಲಾಭ ಮಾಡಿಕೊಡುವ ಸರ್ಕಾರದ ವ್ಯವಸ್ಥಿತ ಹುನ್ನಾರವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

ಸರ್ಕಾರದ ಈ ನಿರ್ಧಾರದ ನೇರ ಮತ್ತು ಗಂಭೀರ ಪರಿಣಾಮ ಬೀಳಲಿರುವುದು ಮಧ್ಯಮ ವರ್ಗ ಮತ್ತು ಬಡ ಗ್ರಾಹಕರ ಮೇಲೆಯೇ ಹೊರತು ಬೇರಾರ ಮೇಲೂ ಅಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿ ಸಣ್ಣ ವ್ಯಾಪಾರಿಗಳು ಅತ್ಯಂತ ಕಡಿಮೆ ಲಾಭಾಂಶದಲ್ಲಿ ವಹಿವಾಟು ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ 2,000 ರೂ. ಮೇಲ್ಪಟ್ಟ ವಹಿವಾಟಿಗೆ ಶೇ. 1.1 ರಷ್ಟು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿ ಬಂದರೆ, ಆ ಹೊರೆಯನ್ನು ವ್ಯಾಪಾರಿಗಳು ಖಂಡಿತವಾಗಿಯೂ ಗ್ರಾಹಕರ ತಲೆಗೇ ಕಟ್ಟುತ್ತಾರೆ. ದಿನಸಿ ಸಾಮಗ್ರಿಗಳು, ಬಟ್ಟೆ, ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ರೂಪದಲ್ಲಿ ಈ ಗುಪ್ತ ‘ಡಿಜಿಟಲ್ ತೆರಿಗೆ’ಯನ್ನು ಜನಸಾಮಾನ್ಯರೇ ಭರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಡಿಜಿಟಲ್ ಪಾವತಿಯನ್ನು ಸಾರ್ವಜನಿಕ ಸೇವೆ ಎಂದು ಜಗತ್ತಿನೆದುರು ಬೆನ್ನು ತಟ್ಟಿಕೊಂಡಿದ್ದ ಮೋದಿ ಸರ್ಕಾರದ ದ್ವಂದ್ವ ನೀತಿ ಇಲ್ಲಿ ಜಗಜ್ಜಾಹೀರಾಗಿದೆ. ಡಿಜಿಟಲ್ ಮೂಲಸೌಕರ್ಯ ನಿರ್ವಹಣೆಯ ನೆಪವೊಡ್ಡಿ ಶುಲ್ಕ ವಿಧಿಸುತ್ತಿರುವುದು ವಿಪರ್ಯಾಸ. ದೇಶದ ತೆರಿಗೆದಾರರ ಹಣದಲ್ಲೇ ರೂಪಿತವಾದ ಯುಪಿಐ ತಂತ್ರಜ್ಞಾನವನ್ನು ಬಳಸಲು ಮತ್ತೆ ಅದೇ ತೆರಿಗೆದಾರರ ಮೇಲೆ ಶುಲ್ಕದ ಬರೆ ಎಳೆಯುವುದು ಯಾವ ನ್ಯಾಯ? ಇದು ಕೇವಲ ವಾಲೆಟ್ ವಹಿವಾಟುಗಳಿಗೆ ಮಾತ್ರ ಸೀಮಿತ, ಬ್ಯಾಂಕ್ ಖಾತೆಗಳ ನಡುವಿನ ವಹಿವಾಟಿಗೆ ಉಚಿತ ಎಂದು ಸರ್ಕಾರ ಸಬೂಬು ಹೇಳುತ್ತಿದ್ದರೂ, ಇದು ಮುಂಬರುವ ದಿನಗಳಲ್ಲಿ ಎಲ್ಲಾ ರೀತಿಯ ಡಿಜಿಟಲ್ ವಹಿವಾಟುಗಳಿಗೆ ಶುಲ್ಕ ವಿಧಿಸುವ ಮೊದಲ ಹೆಜ್ಜೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಜಿಎಸ್‌ಟಿ ಮತ್ತು ಕೋವಿಡ್ ಮಹಾಮಾರಿಯ ಆಘಾತದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೆ ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ಸರ್ಕಾರದ ಈ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತಾಗಿದೆ. ವ್ಯಾಪಾರದಲ್ಲಿ ನಷ್ಟವಾದರೂ ಚಿಂತೆಯಿಲ್ಲ ಎಂದು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಂಡು ಪಾರದರ್ಶಕ ವಹಿವಾಟು ನಡೆಸುತ್ತಿದ್ದ ಈ ವರ್ಗವು ಈಗ ಶುಲ್ಕದ ಭಯದಿಂದ ಮತ್ತೆ ನಗದು ವಹಿವಾಟಿನತ್ತ ಮುಖ ಮಾಡುವ ಅಪಾಯವಿದೆ. ಇದು ಕಪ್ಪುಹಣ ನಿಯಂತ್ರಣದ ಬಗ್ಗೆ ಭಾಷಣ ಬಿಗಿಯುವ ಸರ್ಕಾರದ ಮೂಲ ಉದ್ದೇಶವನ್ನೇ ಬುಡಮೇಲು ಮಾಡುವಂತಿದೆ.

ಬೃಹತ್ ಕಾರ್ಪೊರೇಟ್ ಕುಳಗಳ ಲಕ್ಷಾಂತರ ಕೋಟಿ ರೂಪಾಯಿಗಳ ಸಾಲವನ್ನು ಮನ್ನಾ ಮಾಡುವ ಹಾಗೂ ಅವರಿಗೆ ಭಾರಿ ತೆರಿಗೆ ವಿನಾಯಿತಿ ನೀಡುವ ಮೋದಿ ಸರ್ಕಾರಕ್ಕೆ, ಜನಸಾಮಾನ್ಯರ ಸಣ್ಣಪುಟ್ಟ ಡಿಜಿಟಲ್ ವಹಿವಾಟುಗಳ ಮೇಲೂ ಕಣ್ಣು ಬಿದ್ದಿರುವುದು ದುರಂತ. ಡಿಜಿಟಲ್ ಪಾವತಿ ವ್ಯವಸ್ಥೆ ನಿರ್ವಹಣೆಗೆ ತಗುಲುವ ವೆಚ್ಚವನ್ನು ಸರ್ಕಾರವೇ ಭರಿಸುವ ಬದಲು, ಬ್ಯಾಂಕ್‌ಗಳು ಮತ್ತು ಪಾವತಿ ಗೇಟ್‌ವೇ ಕಂಪನಿಗಳ ಲಾಭಕೋರತನಕ್ಕೆ ಜನರನ್ನು ಬಲಿಪಶು ಮಾಡಲಾಗುತ್ತಿದೆ. ಇದು ಸರ್ಕಾರದ ಜನವಿರೋಧಿ ಹಾಗೂ ಬಂಡವಾಳಶಾಹಿ ಪರ ನಿಲುವಿಗೆ ಸ್ಪಷ್ಟ ಕನ್ನಡಿ ಹಿಡಿದಿದೆ.

ಆಕರ್ಷಕ ಭರವಸೆಗಳ ಮೂಲಕ ಜನರನ್ನು ಡಿಜಿಟಲ್ ಜಾಲದೊಳಗೆ ಸಿಲುಕಿಸಿ, ಈಗ ಶುಲ್ಕದ ಹೆಸರಿನಲ್ಲಿ ಸುಲಿಗೆ ಮಾಡುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಈ ನಡೆಯು ತೀವ್ರ ಖಂಡನಾರ್ಹವಾಗಿದೆ. ಇಂದು ಕೇವಲ ವಾಣಿಜ್ಯ ಮತ್ತು ವಾಲೆಟ್ ಪಾವತಿಗಳಿಗೆ ಶುಲ್ಕ ನಿಗದಿಪಡಿಸಲಾಗಿದೆ, ನಾಳೆ ಇದು ಸಾಮಾನ್ಯ ವ್ಯಕ್ತಿಗಳ ನಡುವಿನ ಯುಪಿಐ ವಹಿವಾಟುಗಳಿಗೂ ವಿಸ್ತರಣೆಯಾಗುವ ಆತಂಕ ದಟ್ಟವಾಗಿದೆ. ಜನಸಾಮಾನ್ಯರ ಬೆನ್ನೆಲುಬು ಮುರಿಯುವ ಇಂತಹ ಗುಪ್ತ ತೆರಿಗೆಯ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಸಣ್ಣ ಪುಟ್ಟ ಹಣಕಾಸು ವಹಿವಾಟುಗಳಿಗೂ ದಂಡ ತೆರಬೇಕಾದ ದುಸ್ಥಿತಿ ಖಂಡಿತ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಹರಾಜು ರದ್ದು, ಲೀಸ್‌ಗೆ ನೀಡಲು ಸಿಎಂ ಭರವಸೆ : ಶ್ರೀಮಂತ ಬಿರಾದರ್

ಬೀದರ್ ಜಿಲ್ಲೆಯ ರೈತರು‌, ಕಾರ್ಮಿಕರ ಜೀವನಾಡಿಯಾಗಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ...

‘ದೇವರೇ ಈ ದೇಶವನ್ನು ಕಾಪಾಡಬೇಕು’: ರೈಲು ಪ್ರಯಾಣದ ಗದ್ದಲಕ್ಕೆ ಬೇಸತ್ತ ತೇಜಸ್ವಿ ಸೂರ್ಯ ಪತ್ನಿ

ರೈಲು ಪ್ರಯಾಣದ ವೇಳೆ ಸಹಪ್ರಯಾಣಿಕರ ಗದ್ದಲದಿಂದ ತೀವ್ರ ಕಿರಿಕಿರಿ ಅನುಭವಿಸಿರುವುದಾಗಿ ಬಿಜೆಪಿ...

ಬೀದರ್ | ಬರ ಪರಿಸ್ಥಿತಿ : ವಿಶೇಷ ಪ್ಯಾಕೇಜ್ ಘೋಷಿಸಲು ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಬೆಳೆ...