ತಮಿಳುನಾಡು ಚುನಾವಣೆ | ಜಾತ್ಯತೀತ ಕೂಟದಲ್ಲಿ ಬಿರುಕು: ಏಕಾಂಗಿಯಾಗಿ ಸ್ಪರ್ಧಿಸುತ್ತಾ ಸಿಪಿಎಂ?

Date:

ತಮಿಳುನಾಡು ಚುನಾವಣೆ ಹತ್ತಿರಕ್ಕೆ ಬಂದಂತೆ ಮೈತ್ರಿಯ ಸೀಟು ಹಂಚಿಕೆಯ ಲೆಕ್ಕಚಾರ ಜೋರಾಗಿ ನಡೆಯುತ್ತಿದೆ. ಡಿಎಂಕೆ ನೇತೃತ್ವದ ಜಾತ್ಯತೀತ ಕೂಟದ ಭಾಗವಾಗಿರುವ ಸಿಪಿಎಂ ಪಕ್ಷ ಈಗ ಸೀಟು ಹಂಚಿಕೆ ವಿಚಾರದಲ್ಲಿ ಆಕ್ಷೇಪವನ್ನು ವ್ಯಕ್ತಪಡಿಸಿದೆ.

ಬುಧವಾರ(ಮಾ.18) ಸಿಪಿಐ ಪಕ್ಷಕ್ಕೆ 5 ಕ್ಷೇತ್ರಗಳನ್ನು ಡಿಎಂಕೆ ಬಿಟ್ಟು ಕೊಟ್ಟಿತ್ತು. ಬಳಿಕ ಸಿಪಿಎಂ ನಾಯಕರೊಂದಿಗೆ ಡಿಎಂಕೆ ಸೀಟು ಹಂಚಿಕೆಯ ಮಾತುಕತೆಯನ್ನು ನಡೆಸಿದೆ ಎನ್ನುವ ವರದಿಗಳಿವೆ. ಸಿಪಿಎಂ ಪಕ್ಷಕ್ಕೂ 5 ಕ್ಷೇತ್ರಗಳನ್ನು ಬಿಟ್ಟುಕೊಡಲು ಡಿಎಂಕೆ ನಿರ್ಧರಿಸಿದ್ದು, ಆದರೆ ಸಿಪಿಎಂ ಈ ಬಗ್ಗೆ ಆಕ್ಷೇಪ ಹೊರಹಾಕಿದೆ. ಡಿಎಂಕೆ ಮುಂದೆ ಇನ್ನೂ ಹೆಚ್ಚು ಕ್ಷೇತ್ರಗಳ ಬೇಡಿಕೆಯನ್ನು ಮುಂದಿಟ್ಟಿದೆ. ಡಿಎಂಕೆ ಹೆಚ್ಚಿನ ಕ್ಷೇತ್ರಗಳನ್ನು ಬಿಟ್ಟುಕೊಡುವುದಕ್ಕೆ ಮುಂದಾಗಿಲ್ಲ ಎಂದಾದಲ್ಲಿ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಕ್ಕೆ ಸಿಪಿಎಂ ಮುಂದಾಗಲಿದೆ ಎನ್ನುವ ಮಾಹಿತಿ ಪಕ್ಷದ ಉನ್ನತ ಮೂಲಗಳು ಬಿಟ್ಟುಕೊಟ್ಟಿವೆ.

ಇದನ್ನೂ ಓದಿ : ದಾವಣಗೆರೆ | ಚುನಾವಣಾ ಆಯ್ಕೆ ಸಭೆಯಲ್ಲಿ ಅಹಿಂದಕ್ಕೆ ಪ್ರತಿಯಾಗಿ ‘ಐನೂರು ಸಾವಿರ’ ಘೋಷಣೆ: ಮುಸ್ಲಿಂರ ಆಕ್ರೋಶ

ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಜೊತೆಗೆ ಮಾತನಾಡಿದ ಹಿರಿಯ ಸಿಪಿಎಂನ ನಾಯಕರೊಬ್ಬರು, ಮೈತ್ರಿಯಾಗಿ ಚುನಾವಣೆಯನ್ನು ಎದುರಿಸುವುದು, ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಇದು ರಾಜಕೀಯದಲ್ಲಿ ಸಾಮಾನ್ಯ ಸಂಗತಿ. 1998ರ ಲೋಕಸಭಾ ಚುನಾವಣೆಯಲ್ಲಿ ನಾವು ಕೇವಲ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 37 ಕ್ಷೇತ್ರಗಳಲ್ಲಿ ಡಿಎಂಕೆ ಪಕ್ಷಕ್ಕೆ ಬೆಂಬಲಿಸಿದ್ದೇವು. ಈಗ ನಾವು ಡಬಲ್‌ ಡಿಜಿಟ್‌ ಕ್ಷೇತ್ರಗಳನ್ನು ಕೇಳಿದ್ದೇವೆ. ಕೊನೆಯ ಪಕ್ಷ ಏಳು ಕ್ಷೇತ್ರಗಳನ್ನಾದರೂ ಡಿಎಂಕೆ ನಮಗೆ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದೇವೆ. ಇಲ್ಲವಾದಲ್ಲಿ ಮುಂದಿನ ನಿರ್ಧಾರವನ್ನು ಪಕ್ಷ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬಳಿಕ ಬಂಧನವಾಗಿದ್ದ ಕಾಂಗ್ರೆಸ್‌ ಅಭ್ಯರ್ಥಿ ಪ್ರಧಾನ್‌ಗೆ ಮಧ್ಯಂತರ ಜಾಮೀನು

2007ರ ನಂದಿಗ್ರಾಮ್ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಸಂಬಂಧಿಸಿದ ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿ...

1929ರ ಸೈಮನ್ ವಿರುದ್ಧದ ಹೋರಾಟದಂತೆ ‘SIR ಗೋ ಬ್ಯಾಕ್’ ಆಂದೋಲನ ನಡೆಯಬೇಕು: ಸಿಎಂ ರೇವಂತ್ ರೆಡ್ಡಿ ಕರೆ

ಮತದಾರರ ಪಟ್ಟಿಯ ಮೇಲೆ ಮೋದಿ-ಶಾ ಜೋಡಿ ಮತ್ತು ಗ್ಯಾನೇಶ್‌ ಕುಮಾರ್‌ ನಡೆಸುತ್ತಿರುವ...

‘ನಥಿಂಗ್ ನೈಸ್’: ಸಿಎಂ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಭೂಕಬಳಿಕೆ ಆರೋಪ

ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ...

ಅಮೇಥಿ ಸೋಲಿನ ಬಳಿಕ ಯುಪಿ ರಾಜ್ಯಸಭೆ ರೇಸ್‌ನಲ್ಲಿ ಸ್ಮೃತಿ ಇರಾನಿ; ಸಂಭಾವ್ಯ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ?

ಉತ್ತರ ಪ್ರದೇಶದಿಂದ ಅಕ್ಟೋಬರ್ 16ರಂದು ನಡೆಯಲಿರುವ 10 ರಾಜ್ಯಸಭಾ ಸ್ಥಾನಗಳ ಚುನಾವಣೆಗೆ...