ಕಂದಕಕ್ಕೆ ಬಿದ್ದ ಕಾರು; ಯುವತಿ ಸಾವು

Date:

ಇತ್ತೀಚಿಗಷ್ಟೇ ಕಾರು ಓಡಿಸುವುದನ್ನು ಕಲಿತಿದ್ದ ಯುವತಿಯೊಬ್ಬರು ಕಾರು ಚಲಾವಣೆ ಮಾಡುವ ವೇಳೆ, ರಿವರ್ಸ್‌ ಗೇರನಲ್ಲಿದ್ದಾಗ ಏಕಾಏಕಿ ಎಕ್ಸ್‌ಲೇಟರ್ ಒತ್ತಿದ ಪರಿಣಾಮ ಕಾರು ಹಿಮ್ಮುಖವಾಗಿ ಚಲಿಸಿ ಕಂದಕಕ್ಕೆ ಬಿದ್ದು, ಆಕೆ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಛತ್ರಿಪತಿ ಸಂಭಾಜಿನಗರದಲ್ಲಿ ನಡೆದಿದೆ.

ಶ್ವೇತಾ ಸುರ್ವಾಸೆ (23) ಸಾವನ್ನಪ್ಪಿದ ಯುವತಿ. ಸುಲಿಭಂಜನ್ ಪ್ರದೇಶದಲ್ಲಿ ಮಧ್ಯಾಹ್ನ ಈ ಘಟನೆ ನಡೆದಿದೆ.  ಕಾರು ರಿವರ್ಸ್ ಗೇರ್‌ನಲ್ಲಿದ್ದಾಗ ಯುವತಿ ಕ್ಲಚ್ ಬದಲು ಎಕ್ಸಲೇಟರ್ ಒತ್ತಿದ ಪರಿಣಾಮ ಕಾರು ಕ್ರ್ಯಾಶ್​ ಬ್ಯಾರಿಯರ್​ ಅನ್ನು ಮುರಿದು ನೇರವಾಗಿ ಕಂದಕಕ್ಕೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ನೇಹಿತ ಶಿವರಾಜ್ ಇತ್ತೀಚೆಗಷ್ಟೇ ಶ್ವೇತಾಳಿಗೆ ಕಾರು ಓಡಿಸಲು ಕಲಿಸಿದ್ದರು. ಇವರು ಕಾರಿನಲ್ಲಿ ಸಂಭಾಜಿನಗರದಿಂದ ದತ್ ಮಂದಿರ ಪ್ರದೇಶಕ್ಕೆ ಬಂದಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಾರು ಓಡಿಸುವಾಗ ರೀಲ್ಸ್‌ ಮಾಡಬೇಕೆಂಬುದು ಮೃತ ಯುವತಿ ಶ್ವೇತಾಗೆ ಆಸೆ ಇತ್ತು. ಮೊಬೈಲ್‌ ಅನ್ನು ತನ್ನ ಸ್ನೇಹಿತೆ ಶಿವಾರಾಜ್‌ಗೆ ಕೊಟ್ಟು ವಿಡಿಯೋ ಮಾಡಲು ಹೇಳಿದ್ದಳು. ಕಾರು ಆರಂಭ ಮಾಡಿದಾಗ ರಿವರ್ಸ್‌ಗೇರಿನಲ್ಲಿತ್ತು. ಅಲ್ಲದೇ, ಶ್ವೇತಾ ಎಕ್ಸಲೇಟರ್ ಅನ್ನು ಒತ್ತಿದ್ದಾಳೆ. ಇದ್ದಕ್ಕಿದ್ದಂತೆ ಕಾರು ಹಿಂದೆ ಚಲಿಸಲು ಆರಂಭಿಸಿತು. ವಿಡಿಯೋ ಮಾಡುತ್ತಿದ್ದ ಶಿವರಾಜ್​ ‘ಕ್ಲಚ್, ಕ್ಲಚ್’​ ಎಂದು ಎಷ್ಟೇ ಕೂಗಿದರೂ ಆಕೆಗೆ ಕೇಳಿಸೇ ಇಲ್ಲ.

ಈ ಸುದ್ದಿ ಓದಿದ್ದೀರಾ?ದರ್ಶನ್ ಬಂಧನ | ಪೊಲೀಸರ ಪ್ರಾಮಾಣಿಕ ತನಿಖೆ ಮತ್ತು ಕರ್ತವ್ಯ ಪ್ರಜ್ಞೆಯಿಂದ ಘಟನೆ ಬೆಳಕಿಗೆ: ಪೊಲೀಸ್ ಆಯುಕ್ತ ದಯಾನಂದ

ಆ ವೇಳೆಗಾಗಲೇ ಕಾರು ಕಂದಕಕ್ಕೆ ಬಿದ್ದಿದೆ. ಯುವ ತಿಯನ್ನು ರಕ್ಷಣೆ ಮಾಡಲು ಬರುವ ರಕ್ಷಣಾ ಸಿಬ್ಬಂದಿ ಆ ಪ್ರದೇಶವನ್ನು ತಲುಪಲು ಸುಮಾರು ಸಮಯ ತೆಗೆದುಕೊಂಡರು. ಯುವತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಪ್ರಯೋಜನವಾಗಿಲ್ಲ. ಆ ವೇಳೆಗಾಗಲೇ, ಯುವತಿ ಸಾವನ್ನಪ್ಪಿದ್ದಾಳೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ; ‘ಚಾನ್ಸೇ ಇಲ್ಲ’ ಎಂದ ಕೇಂದ್ರ ಸಚಿವ ಮಾಂಝಿ

ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಎನ್‌ಡಿಎ ಸರ್ಕಾರದ ಪಾಲುದಾರ ಜೆಡಿಯು ಕೇಂದ್ರ...

ಅಕ್ರಮವಾಗಿ ‘ಕೆಂಪು ಬೀಕನ್’ ಅಳವಡಿಸಿದ್ದ ಐಎಎಸ್ ಅಧಿಕಾರಿಯ ಆಡಿ ಕಾರು ವಶ

ತಮ್ಮ ಐಷಾರಾಮಿ ಕಾರಿಗೆ ಅಕ್ರಮವಾಗಿ 'ಕೆಂಪು ಬೀಕನ್' ದೀಪವನ್ನು ಅಳವಡಿಸಿದ ಆರೋಪದ...

ತಮಿಳುನಾಡು ಬಿಎಸ್‌ಪಿ ಮುಖ್ಯಸ್ಥ ಆರ್ಮ್‌ಸ್ಟ್ರಾಂಗ್ ಹತ್ಯೆ ಆರೋಪಿ ಎನ್‌ಕೌಂಟರ್‌ಗೆ ಬಲಿ

ತಮಿಳುನಾಡಿನ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥ ಕೆ ಆರ್ಮ್‌ಸ್ಟ್ರಾಂಗ್ ಹತ್ಯೆಯ...

ಟ್ರಂಪ್ ಮೇಲೆ ಗುಂಡಿನ ದಾಳಿ: ಸ್ನೇಹಿತನ ಬಗ್ಗೆ ಕಳವಳಗೊಂಡಿದ್ದೇನೆ ಎಂದ ಮೋದಿಗೆ ನೆಟ್ಟಿಗರ ಪಾಠ

ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್...