‘ಅಟ್ಟರ್ಲಿ ಬಟ್ಟರ್ಲಿ’ ಖ್ಯಾತಿಯ ‘ಅಮುಲ್‌ ಗರ್ಲ್’ ನಿರ್ಮಾತೃ ಸಿಲ್ವೆಸ್ಟರ್‌ ಡ ಕುನ್ಹಾ ನಿಧನ

Date:

  • ಅಟ್ಟರ್ಲಿ ಬಟ್ಟರ್ಲಿ ಅಡಿಬರಹ ನೀಡಿದ ಸಿಲ್ವೆಸ್ಟರ್‌ ಡ ಕುನ್ಹಾ ಪತ್ನಿ ನಿಶಾ
  • ಶ್ವೇತ ಕ್ರಾಂತಿಯ ಪಿತಾಮಹ ಡಾ. ವರ್ಗೀಸ್ ಕುರಿಯನ್ ಜತೆ ಸಿಲ್ವೆಸ್ಟರ್‌ ಕೆಲಸ

ಜಾಹೀರಾತು ಉದ್ಯಮದ ದಿಗ್ಗಜ, ಪ್ರಸಿದ್ಧ ಅಮುಲ್ ಗರ್ಲ್ ಚಿತ್ರದ ರಚನೆಕಾರ ಸಿಲ್ವೆಸ್ಟರ್ ಡ ಕುನ್ಹಾ ಅವರು ಮಂಗಳವಾರ (ಜೂನ್ 21) ರಾತ್ರಿ ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ ಪತ್ನಿ ನಿಶಾ ಮತ್ತು ಪುತ್ರ ರಾಹುಲ್‌ ಡ ಕುನ್ಹಾ ಇದ್ದಾರೆ.

ಸಿಲ್ವೆಸ್ಟರ್‌ ಅವರು ನಿರ್ಮಿಸಿದ ಅಮುಲ್ ಗರ್ಲ್ ಚಿತ್ರ ಹಾಗೂ ‘ಅಟ್ಟರ್ಲಿ ಬಟ್ಟರ್ಲಿ ಡಿಲೀಷಿಯಸ್’ ಎನ್ನುವ ಅಡಿಬರಹ ಭಾರೀ ಪ್ರಸಿದ್ಧಿ ಪಡೆದಿತ್ತು. ಸಿಲ್ವೆಸ್ಟರ್‌ ಡ ಕುನ್ಹಾ ಅವರು 60ರ ದಶಕದಲ್ಲಿ ರಚಿಸಿದ್ದ ಅಮುಲ್ ಗರ್ಲ್ ಕ್ಯಾರಿಕೇಚರ್ ಈಗ ದೇಶದ ಹೈನು ಉದ್ಯಮದ ಗುರುತಾಗಿ ಮಾರ್ಪಟ್ಟಿದೆ.

ಸಿಲ್ವೆಸ್ಟರ್‌ ಅವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಸಿಲ್ವೆಸ್ಟರ್ ಡ ಕುನ್ಹಾ ಅವರ ಸಾವು ಅಮುಲ್ ಗರ್ಲ್‌ಗೆ ದೊಡ್ಡ ನಷ್ಟ ಉಂಟು ಮಾಡಿದೆ. ಕೇವಲ ಅಮುಲ್‌ಗೆ ಮಾತ್ರವಲ್ಲ ಇಡೀ ಜಾಹೀರಾತು ಉದ್ಯಮಕ್ಕೆ ಅವರ ಕೊಡುಗೆ ದೊಡ್ಡದು” ಎಂದು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟದ ನಿರ್ದೇಶ ಜಯೆನ್ ಮೆಹ್ರಾ ಅವರು ಹೇಳಿದ್ದಾರೆ.

ಅಮುಲ್‌ ಸಂಸ್ಥೆಯ ಮಾಜಿ ಮುಖ್ಯಸ್ಥ ಆರ್‌.ಎಸ್‌.ಸೋಧಿ ಅವರು ಸಿಲ್ವೆಸ್ಟರ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ತನ್ನ ರಚನೆಕಾರ ಸಿಲ್ವೆಸ್ಟರ್‌ ಅವರ ಸಾವಿಗೆ ಕಂಬನಿ ಮಿಡಿಯುತ್ತಿರುವ ಅಮುಲ್‌ ಗರ್ಲ್‌ನ ಚಿತ್ರವೊಂದನ್ನು ಸೋಧಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಭಾರತದ ಶ್ವೇತ ಕ್ರಾಂತಿಯ ಪಿತಾಮಹ ಡಾ. ವರ್ಗೀಸ್ ಕುರಿಯನ್ ಅವರ ಜತೆ ಸಿಲ್ವೆಸ್ಟರ್ ಅವರು ಕೆಲಸ ಮಾಡಿದ್ದರು. ಈ ವೇಳೆ ಸಿಲ್ವೆಸ್ಟರ್‌ ಅವರು ಅಮುಲ್‌ ಸಂಸ್ಥೆಗೆ ಶುಭದಾಯಕವಾದ ಒಂದು ಹುಡುಗಿಯ ಚಿತ್ರದ ಗುರುತು ನೀಡುವ ಕಲ್ಪನೆಯನ್ನು ಪ್ರಸ್ತಾಪಿಸಿದರು. ಇದಕ್ಕೆ ದಿವಂಗತ ಚಿತ್ರಕಾರ ಹಾಗೂ ಕಲಾ ನಿರ್ದೇಶಕ ಯುಸ್ಟೇಸ್‌ ಫರ್ನಾಂಡಿಸ್‌ ಜೀವ ತುಂಬಿದರು.

ಈ ಸುದ್ದಿ ಓದಿದ್ದೀರಾ? ಮೋದಿಯನ್ನು ಹೊಗಳುವ ಅಮೆರಿಕ ಅಧ್ಯಕ್ಷರ ಅಸಲಿಯತ್ತೇನು? ಇಲ್ಲಿದೆ ನೋಡಿ…

ಅಮುಲ್‌ಗೆ ಕೆಂಪು ಚುಕ್ಕೆಗಳನ್ನು ಹೊಂದಿದ ಉಡುಪು, ಅದಕ್ಕೆ ಹೊಂದಿಕೆಯಾಗುವ ರಿಬ್ಬನ್‌ ಧರಿಸಿದ ದೊಡ್ಡ ಕಣ್ಣುಗಳ ಹುಡುಗಿಯ ಚಿತ್ರ ಗುರುತಾಯಿತು. ಇದು ಅಮುಲ್‌ ಗರ್ಲ್‌ ಎಂತಲೇ ಪ್ರಸಿದ್ಧಿ ಪಡೆದಿದೆ.

ಸಿಲ್ವೆಸ್ಟರ್‌ ಡ ಕುನ್ಹಾ ಅವರ ಪತ್ನಿ ನಿಶಾ ಅವರು ಅಮುಲ್ ಗರ್ಲ್‌ನ ಅಡಿಬರಹ ‘ಅಟ್ಟರ್ಲಿ ಬಟ್ಟರ್ಲಿ ಡೆಲೀಷಿಯಸ್’ (ಸಂಪೂರ್ಣ ರುಚಿಕರ ಬೆಣ್ಣೆ) ಅಡಿಬರಹ ನೀಡಿರುವುದು ವಿಶೇಷ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರೀ ಮಳೆ | ತಾಪ ಏರಿಕೆಯಿಂದ ದೆಹಲಿಗೆ ಮುಕ್ತಿ, ಮುಂಬೈನಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಶನಿವಾರ ಮುಂಜಾನೆ ದೆಹಲಿಯ ಕೆಲವು ಭಾಗಗಳಲ್ಲಿ ಮಳೆಯು ಜನರಿಗೆ ಬಿಸಿಲಿನ ತಾಪದಿಂದ...

ಜಮ್ಮು-ಕಾಶ್ಮೀರ | ‘ಹುತಾತ್ಮರ ದಿನ’ ಆಚರಣೆಗೆ ತಡೆ; ಹಲವು ನಾಯಕರಿಗೆ ಗೃಹಬಂಧನ

'ಹುತಾತ್ಮರ ದಿನಾಚರಣೆ' ಆಚರಿಸಲು ಶ್ರೀನಗರದ ಡೌನ್‌ಟೌನ್‌ಲ್ಲಿರುವ ಹುತಾತ್ಮರ ಸ್ಮಶಾಕಕ್ಕೆ ತೆರಳಲು ನಮಗೆ...

ಗುಜರಾತ್ | ನಾಲ್ವರು ಮಕ್ಕಳ ಸಾವು; ಚಂಡೀಪುರ ವೈರಸ್ ಸೋಂಕು ಶಂಕೆ

ಗುಜರಾತ್‌ನ ಸಬರ್‌ಕಾಂತ ಜಿಲ್ಲೆಯಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದು ಚಂಡೀಪುರ ವೈರಸ್ ಸೋಂಕು...