ವಿಬಿ ಜಿ ರಾಮ್‌ ಜಿ | ಮೋದಿ ಸರ್ಕಾರದ ವೆಚ್ಚ ಸೂತ್ರಕ್ಕೆ ರಾಜ್ಯ ಬಿಜೆಪಿ ಸರ್ಕಾರಗಳಿಂದಲೇ ವಿರೋಧ!

Date:

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ (ಮನರೇಗಾ) ಬದಲಿಯಾಗಿ ಜುಲೈ 1ರಿಂದ ಜಾರಿಗೆ ಬರಲಿರುವ ‘ವಿಕಸಿತ ಭಾರತ–ಉದ್ಯೋಗ ಮತ್ತು ಜೀವನೋಪಾಯ ಖಾತರಿ ಮಿಷನ್ (ಗ್ರಾಮೀಣ)’ (ವಿಬಿ ಜಿ ರಾಮ್‌ ಜಿ) ಯೋಜನೆಗೆ ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರಗಳೂ ಆಕ್ಷೇಪ ವ್ಯಕ್ತಪಡಿಸಿವೆ. ಯೋಜನೆಯಡಿ ಮೋದಿ ಸರ್ಕಾರ ರೂಪಿಸಿರುವ ವೆಚ್ಚ ಹಂಚಿಕೆ ಮಾದರಿಯನ್ನು ಖಂಡಿಸಿವೆ.

- Advertisement -

ಮನರೇಗಾದಲ್ಲಿ ಕೂಲಿ ವೆಚ್ಚವನ್ನು ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಭರಿಸುತ್ತಿತ್ತು, ರಾಜ್ಯಗಳ ಹೊಣೆ ಸಾಮಗ್ರಿ ವೆಚ್ಚಕ್ಕೆ ಸಮೀತವಾಗಿತ್ತು. ಇದು 90:10 ಅನುಪಾತದ ವೆಚ್ಚ ಹಂಚಿಕೆಯನ್ನು ಹೊಂದಿತ್ತು. ಆದರೆ, ಹೊಸ ಯೋಜನೆಯಡಿ ಕೇಂದ್ರ ಮತ್ತು ರಾಜ್ಯಗಳ ನಡುವೆ 60:40 ಅನುಪಾತದಲ್ಲಿ ವೆಚ್ಚ ಹಂಚಿಕೆಯಾಗಲಿದೆ. ಪರಿಣಾಮ, ಬಹುತೇಕ ರಾಜ್ಯಗಳು ಒಟ್ಟು ವೆಚ್ಚದ 40%ರಷ್ಟು ವೆಚ್ಚವನ್ನು ಭರಿಸಬೇಕಾಗುತ್ತದೆ. ಇದು ರಾಜ್ಯಗಳ ಮೇಲೆ ಭಾರೀ ಆರ್ಥಿಕ ಹೊರೆ ಹೇರುತ್ತದೆ. ಆದ್ದರಿಂದ, ದೇಶದ ಹಲವು ರಾಜ್ಯಗಳು ಆರಂಭದಿಂದಲೇ ಹೊಸ ಯೋಜನೆಯನ್ನು ವಿರೋಧಿಸಿದ್ದರು. ಇದೀಗ, ಬಿಜೆಪಿ ಆಡಳಿತದ ರಾಜ್ಯಗಳೂ ಆಕ್ಷೇಪ ವ್ಯಕ್ತಪಡಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಮಾಹಿತಿ ಹಕ್ಕು ಕಾಯ್ದೆಯಡಿ ಲಭಿಸಿದ ದಾಖಲೆಗಳ ಪ್ರಕಾರ, ಬಿಜೆಪಿಯ ನೇರ ಮತ್ತು ಪಾಲುದಾರಿಕೆಯ ಆಡಳಿತವಿರುವ ಬಿಹಾರ, ಮಧ್ಯಪ್ರದೇಶ ಹಾಗೂ ಜಾರ್ಖಂಡ್ ರಾಜ್ಯಗಳು ಈ ಹಣಕಾಸು ಹಂಚಿಕೆ ಮಾದರಿಯನ್ನು ಮರುಪರಿಶೀಲಿಸಬೇಕೆಂದು ಆಗ್ರಹಿಸಿವೆ. ಕೇಂದ್ರಕ್ಕೆ ಮನವಿ ಸಲ್ಲಿಸಿವೆ.

ಹೊಸ ಯೋಜನೆಯ ಅನುಷ್ಠಾನಕ್ಕೆ ಬಿಹಾರಕ್ಕೆ 15,939 ಕೋಟಿ ರೂ., ಮಧ್ಯಪ್ರದೇಶಕ್ಕೆ 20,037 ಕೋಟಿ ರೂ., ಹಾಗೂ ಜಾರ್ಖಂಡ್‌ಗೆ 9,293 ಕೋಟಿ ರೂ. ಖರ್ಚು ಮಾಡಬೇಕಾಗುತ್ತದೆ. ಈ ಪೈಕಿ ರಾಜ್ಯ ಸರ್ಕಾರಗಳೇ 40%ರಷ್ಟು ವೆಚ್ಚ ಭರಿಸಬೇಕಾಗುತ್ತದೆ. ಇದು ತಮ್ಮ ಪಾಲಿಗೆ ಕಷ್ಟಕರ ಎಂದು ಮೂರೂ ರಾಜ್ಯಗಳು ಹೇಳಿಕೊಂಡಿವೆ.

ಈ ಲೇಖನ ಓದಿದ್ದೀರಾ?:

ಈ ಮೂರು ರಾಜ್ಯಗಳಲ್ಲದೆ, ವಿಪಕ್ಷಗಳು ಅಧಿಕಾರದಲ್ಲಿರುವ ಕರ್ನಾಟಕವು 13 ರಾಜ್ಯಗಳು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ತಮ್ಮ ಆಕ್ಷೇಪಗಳನ್ನು ಸಲ್ಲಿಸುವೆ. ಕೂಲಿ ದರ ಪರಿಷ್ಕರಣೆ ಮಾಡಬೇಕು, ಕೃಷಿ ಚಟುವಟಿಕೆಗಳು ಗರಿಷ್ಠ ಮಟ್ಟದಲ್ಲಿರುವ ಅವಧಿಯಲ್ಲಿ 60 ದಿನಗಳ ಕಾಲ ಕೆಲಸ ಸ್ಥಗಿತಗೊಳಿಸುವ ನಿಯಮವನ್ನು ರದ್ದುಗೊಳಿಸಿ, ವರ್ಷವಿಡೀ ಕೆಲಸ ಕೊಡಬೇಕು, ಕೂಲಿ ಮತ್ತು ಸಾಮಗ್ರಿ ಪಾವತಿಗಳಲ್ಲಿ ಆಗುತ್ತಿರುವ ವಿಳಂಬದ ನಿವಾರಿಸಿ ಸಕಾಲಕ್ಕೆ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿವೆ.

90:10 ಅನುಪಾತದ ವಿಶೇಷ ಸವಲತ್ತು ಪಡೆದಿರುವ ಸಿಕ್ಕಿಂ ಮತ್ತು ಉತ್ತರಾಖಂಡ ರಾಜ್ಯಗಳೂ ಕೆಲವು ನಿಯಮಗಳನ್ನು ಮರುಪರಿಶೀಲಿಸುವಂತೆ ಮನವಿ ಮಾಡಿವೆ. ಉತ್ತರಾಖಂಡವು ತನ್ನ ಭೌಗೋಳಿಕ ಸವಾಲುಗಳನ್ನು ಉಲ್ಲೇಖಿಸಿ, ಕೂಲಿ ವೆಚ್ಚವನ್ನು ಹಿಂದಿನಂತೆ ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಭರಿಸಬೇಕು ಎಂದು ಒತ್ತಾಯಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ...

ಬೆಂಗಳೂರು | ಆನೆ ದಾಳಿಗೆ ವಾಕಿಂಗ್ ತೆರಳಿದ್ದ ವ್ಯಕ್ತಿ ಬಲಿ

ಇಂದು ಮುಂಜಾನೆ ವಾಕಿಂಗ್ ತೆರಳಿದ್ದ ವ್ಯಕ್ತಿಯೊಬ್ಬರು ಆನೆ ದಾಳಿಗೆ ಮೃತಪಟ್ಟಿರುವ ಘಟನೆ...

ಅಮೆರಿಕದಲ್ಲಿ ಡೀಸೆಲ್ ರಫ್ತು ನಿಷೇಧದ ಚರ್ಚೆ; ಭಾರತದ ಮೇಲಾಗುವ ಪರಿಣಾಮವೇನು?

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ರಷ್ಯಾ-ಉಕ್ರೇನ್ ನಡುವಿನ ಸಂಘರ್ಷದಿಂದಾಗಿ ಜಾಗತಿಕ...

4 ವರ್ಷದಲ್ಲಿ BJP, NPFಗೆ ಹಾರಿದ 111 ಜನಪ್ರತಿನಿಧಿಗಳು; ಎಡಿಆರ್‌ ವರದಿ

2022ರಿಂದ 2026ರ ಅವಧಿಯಲ್ಲಿ ಚುನಾವಣೆ ಗೆದ್ದ ಬಳಿಕ ಒಟ್ಟು 111 ಹಾಲಿ...