“ಎಪ್‌ಸ್ಟೀನ್‌ನೊಂದಿಗೆ ಹರ್ದೀಪ್‌ ಸಿಂಗ್‌ ಪುರಿ ಸಲಹೆ ಕೇಳಿದ್ದೇಕೆ?”: 6 ಪ್ರಶ್ನೆಗಳೊಂದಿಗೆ ಕಾಂಗ್ರೆಸ್ ವಾಗ್ದಾಳಿ

Date:

ಜೆಫ್ರಿ ಎಪ್‌ಸ್ಟೀನ್‌ ನೊಂದಿಗೆ ತಮ್ಮ ಸಂಪರ್ಕಗಳ ಕುರಿತು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ನೀಡಿದ ಹೇಳಿಕೆಯ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವು ತೀವ್ರ ವಾಗ್ದಾಳಿ ನಡೆಸಿದೆ. ಪಕ್ಷದ ನಾಯಕ ಪವನ್ ಖೇರಾ ಅವರು ಆರು ತೀಕ್ಷ್ಣ ಪ್ರಶ್ನೆಗಳನ್ನು ಕೇಳಿದ್ದು, ಸಚಿವ ಹರ್ದೀಪ್‌ ಸಿಂಗ್ ಪುರಿ ಎಪ್‌ಸ್ಟೀನ್‌ ಅವರ ಅಪರಾಧಗಳ ಗಂಭೀರತೆಯನ್ನು ಕಡಿಮೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

- Advertisement -

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಪ್ರತಿಕ್ರಿಯೆ ನೀಡಿದ ಪುರಿ, ಕಳೆದ ಎಂಟು ವರ್ಷಗಳಲ್ಲಿ ಎಪ್‌ಸ್ಟೀನ್‌ ನನ್ನು ಮೂರು ಅಥವಾ ನಾಲ್ಕು ಬಾರಿ ಮಾತ್ರ ಭೇಟಿಯಾಗಿದ್ದೇನೆ ಎಂದು ಹೇಳಿದ್ದಾರೆ. ಮೂರು ಮಿಲಿಯನ್ ಇಮೇಲ್‌ಗಳು ಬಿಡುಗಡೆಯಾದ ನಂತರ ಅದರ ವಿವರಗಳು ಈಗಾಗಲೇ ಸಾರ್ವಜನಿಕ ವಲಯದಲ್ಲಿವೆ ಎಂದು ಅವರು ಹೇಳಿದ ಬಳಿಕ ವಿವಾದ ಮತ್ತಷ್ಟು ಉಲ್ಬಣಗೊಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಪವನ್ ಖೇರಾ ಅವರು, 2014ರ ಅಕ್ಟೋಬರ್ 4ರಂದು ನಡೆದ ಇಮೇಲ್ ವಿನಿಮಯಗಳನ್ನು ಉಲ್ಲೇಖಿಸಿದ್ದಾರೆ. ಇದು ಅಮೆರಿಕದ ನ್ಯಾಯ ಇಲಾಖೆಯು ಬಿಡುಗಡೆ ಮಾಡಿದ ಎಪ್‌ಸ್ಟೀನ್‌ ಫೈಲ್ ನ ಭಾಗವಾಗಿದೆ. ಅದನ್ನು ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್ ಮಾಡಿರುವ ಅವರು, “ಪುರಿ ತಮ್ಮ ‘ಸಂಪರ್ಕಗಳು’ ಅವರನ್ನು ರೀಡ್ ಹಾಫ್‌ಮನ್‌ಗೆ ಪರಿಚಯಿಸಿವೆ ಎಂದು ಹೇಳುತ್ತಾರೆ. ಆದರೆ ಅವರು ಹೇಳದಿರುವುದು ಇನ್ನಷ್ಟು ಮುಖ್ಯ. ಅಕ್ಟೋಬರ್ 4, 2014ರಂದು ಎಪ್ಸ್ಟೀನ್, ಪುರಿಗೆ ‘ರೀಡ್ ಅವರನ್ನು ಭೇಟಿಯಾಗಿದ್ದೀರಾ?’ ಎಂದು ಇಮೇಲ್ ಮಾಡಿದರು. ಕೆಲವೇ ಗಂಟೆಗಳಲ್ಲಿ ಪುರಿ ಉತ್ತರಿಸಿ, ‘ನಾನು ಇಂದು ಮಧ್ಯಾಹ್ನದ ಸಭೆಗೆ SFನಲ್ಲಿದ್ದೇನೆ. ನನ್ನ ಸ್ನೇಹಿತ, ನೀವು. ಯಾವುದೇ ವಿಷಯಗಳನ್ನೂ ಸಾಧ್ಯವಾಗುವಂತೆ ಮಾಡಬಲ್ಲವರು. ಏನಾದರೂ ಸಲಹೆ ನೀಡುತ್ತೀರಾ?’ ಎಂದು ಕೇಳಿದ್ದರು. ಇದಕ್ಕೆ ಎಪ್‌ಸ್ಟೀನ್‌, ‘ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ದಿಗ್ಗಜರು ಹಾಗೂ ಸಾಮಾಜಿಕ ಜಾಲತಾಣದ ಪ್ರಭಾವಿಗಳನ್ನು ಭೇಟಿ ಮಾಡಿಸಲು ಅವರಿಗೆ ಭಾರತ ಪ್ರವಾಸವನ್ನು ಆಯೋಜಿಸುತ್ತೀರಿ ಎಂದು ಹೇಳಿ’ ಎಂದು ಸಲಹೆ ನೀಡಿ ಪ್ರತಿಕ್ರಿಯಿಸಿದರು” ಎಂದು ಬರೆದಿದ್ದಾರೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಂದೇ ಮಾತರಂ ಕಡ್ಡಾಯದ ಹಿಂದಿರುವುದು ದೇಶಭಕ್ತಿಯಲ್ಲ, ಪಶ್ಚಿಮ ಬಂಗಾಳ ಗೆಲ್ಲುವುದು!

ಈ ಇಮೇಲ್ ನ ಹಿನ್ನೆಲೆಯಲ್ಲಿ ಪವನ್ ಖೇರಾ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರಿಗೆ ಆರು ಪ್ರಶ್ನೆಗಳನ್ನು ಕೇಳಿದ್ದಾರೆ.

  1. ರೀಡ್ ಹಾಫ್‌ಮನ್ ಭೇಟಿಯ ಬಗ್ಗೆ ಅದು ನಡೆಯುವ ಮುನ್ನವೇ ಎಪ್‌ಸ್ಟೀನ್‌ ಗೆ ಅದು ಹೇಗೆ ತಿಳಿದಿತ್ತು?
  2. ಆ ಭೇಟಿಯನ್ನು ಏರ್ಪಡಿಸಿದ ‘ಸಂಪರ್ಕ’ ಎಪ್‌ಸ್ಟೀನ್‌ ಆಗಿದ್ದನೇ?
  3. ಸಭೆಯ ವಿವರಗಳನ್ನು‌ ಹರ್ದೀಪ್ ಎಪ್‌ಸ್ಟೀನ್‌ ಜೊತೆ ಏಕೆ ಚರ್ಚಿಸುತ್ತಿದ್ದರು?
  4. ಎಪ್‌ಸ್ಟೀನ್‌ ನನ್ನು ‘ಸ್ನೇಹಿತ’ ಎಂದು ಏಕೆ ಕರೆಯಲಾಗುತ್ತಿತ್ತು?
  5. ಎಪ್‌ಸ್ಟೀನ್‌ ಹರ್ದೀಪ್ ಪುರಿಗೆ ಏನನ್ನು ಸಾಧ್ಯವಾಗಿಸುತ್ತಿದ್ದ?
  6. ಸಂಬಂಧ ಆಕಸ್ಮಿಕವಾಗಿದ್ದರೆ ಹರ್ದೀಪ್‌ ಸಿಂಗ್‌ ಅವರು ಎಪ್‌ಸ್ಟೀನ್‌ ‘ಸಲಹೆ’ ಪಡೆಯಲು ಏಕೆ ಪ್ರಯತ್ನಿಸಿದರು?

ಪವನ್ ಖೇರಾ ಅವರು ಈ ಪೋಸ್ಟ್ ನ ಶೀರ್ಷಿಕೆಯಲ್ಲಿ, “ಪುರಿ ತಮ್ಮ ಹಿಡಿತ ಕಳೆದುಕೊಂಡಂತೆ ಕಾಣುತ್ತಾರೆ. ಒಮ್ಮೆ ಭಾರತವನ್ನು ರಾಜತಾಂತ್ರಿಕನಾಗಿ ಪ್ರತಿನಿಧಿಸಿದ್ದ ಅದೇ ವ್ಯಕ್ತಿ ಇವರೇನಾ ಎಂಬುದು ನಂಬಲು ಕಷ್ಟ. ಒಂದು ರೀತಿಯ ನಾಟಕೀಯತೆ ಕಂಡುಬರುತ್ತಿದೆ” ಎಂದು ಟೀಕಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಇಸಿ ಗ್ಯಾನೇಶ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ: ಅನುಮತಿ ನಿರಾಕರಣೆ; ಜಂತರ್ ಮಂತರ್‌ನಲ್ಲಿ ಬಿಗಿ ಭದ್ರತೆ

ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...

ಉತ್ತರ ಪ್ರದೇಶ: ಪ್ರಜಾಪ್ರಭುತ್ವ ಹೋರಾಟಗಾರರಿಗೆ ಅಖಿಲೇಶ್ ಮಾಸಿಕ ₹51,000 ಪಿಂಚಣಿ ಭರವಸೆ

ಉತ್ತರ ಪ್ರದೇಶದಲ್ಲಿ 2027ರಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಸರ್ಕಾರ ರಚಿಸಿದರೆ, 1975ರ...

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರು, ಗೋವಾ, ಕೋಲ್ಕತ್ತದಲ್ಲಿ ಸಿಜೆಪಿ ‘ಮೋರ್ಚಾ’

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌: ಯಾಕೀ ವಿವಾದ?

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ....