ಈ ದಿನ ಸಂಪಾದಕೀಯ | ವಂದೇ ಮಾತರಂ ಕಡ್ಡಾಯದ ಹಿಂದಿರುವುದು ದೇಶಭಕ್ತಿಯಲ್ಲ, ಪಶ್ಚಿಮ ಬಂಗಾಳ ಗೆಲ್ಲುವುದು!

Date:

ಕೇಂದ್ರ ಸರ್ಕಾರ ವಂದೇ ಮಾತರಂ ಗೀತೆ ಕಡ್ಡಾಯ ಮಾಡಿರುವುದರ ಹಿಂದೆ, ಭಾರತವು ಮುಸ್ಲಿಂ ದ್ವೇಷಿ ಹಿಂದೂ ರಾಷ್ಟ್ರವಾಗಬೇಕೆಂಬ ಇರಾದೆ ಇದೆ. ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ನುಣುಚಿಕೊಳ್ಳುವ, ದೇಶದ ಜನರ ದಿಕ್ಕು ತಪ್ಪಿಸುವ ಹುನ್ನಾರವಿದೆ. ಮುಖ್ಯವಾಗಿ ಬರಲಿರುವ ಪಶ್ಚಿಮ ಬಂಗಾಳ ಚುನಾವಣೆ ಗೆಲ್ಲಬೇಕಿದೆ.

ರಾಷ್ಟ್ರಗೀತೆ ‘ಜನಗಣಮನ’ದಂತೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಬಂಕಿಮಚಂದ್ರ ಚಟರ್ಜಿ ಅವರು 1874ರಲ್ಲಿ ರಚಿಸಿದ ‘ವಂದೇ ಮಾತರಂ’ ಗೀತೆಯನ್ನು ಹಾಡುವುದು ಕಡ್ಡಾಯಗೊಳಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

- Advertisement -

ಆದೇಶದಲ್ಲಿ, ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂನ 6 ಚರಣಗಳನ್ನು ಹಾಡಬೇಕು. ಹಾಡುವಾಗ ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಬೇಕು. ರಾಷ್ಟ್ರಗೀತೆಗೆ ಅಡ್ಡಿಪಡಿಸುವ ಅಥವಾ ಇತರರು ಗೌರವಿಸುವುದನ್ನು ತಡೆಯುವ ಯಾವುದೇ ವ್ಯಕ್ತಿಗೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ವಂದೇ ಮಾತರಂ ಗೀತೆ ಕಡ್ಡಾಯ ಆದೇಶ ಸಹಜವಾಗಿ ಜನರಲ್ಲಿ ರೋಮಾಂಚನ ಉಂಟು ಮಾಡುತ್ತದೆ. ಸ್ವಾತಂತ್ರ್ಯ ಹೋರಾಟದ ಹಾಡಾಗಿರುವ ಕಾರಣ, ದೇಶಭಕ್ತಿ, ರಾಷ್ಟ್ರೀಯತೆ ಮತ್ತು ಭಾರತೀಯ ಸಂಸ್ಕೃತಿಯನ್ನು ಧ್ವನಿಸುತ್ತದೆ. ಹೊಗಳಿಕೆಗೆ ಪಾತ್ರವಾಗುತ್ತದೆ.

ಅಲ್ಲಿಗೆ ಸಂಘ ಪರಿವಾರ ಮತ್ತು ಭಾರತೀಯ ಜನತಾ ಪಕ್ಷದ ಹಿತಾಸಕ್ತಿ ಈಡೇರಿದಂತಾಗುತ್ತದೆ.

ಇದನ್ನು ಓದಿದ್ದೀರಾ?: ನೀವು ದೇಶವನ್ನು ಮಾರಿದ್ದೀರಿ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಅಸಲಿಗೆ, ಸ್ವಾತಂತ್ರ್ಯ ಹೋರಾಟದಲ್ಲಿ ಬಂಗಾಳದ ಹಿಂದೂ ರಾಷ್ಟ್ರವಾದಿ ಕವಿ-ಸಾಹಿತಿ ಬಂಕಿಮಚಂದ್ರರ ವಂದೇ ಮಾತರಂ ದೇಶಭಕ್ತರ ಘೋಷಣೆಯೇ ಆಗಿದ್ದರೂ, ಹಾಡಿನ ಪೂರ್ಣ ಪಠ್ಯವಿರುವ ‘ಆನಂದ ಮಠ’ ಕಾದಂಬರಿ ಮುಸ್ಲಿಮರನ್ನು ದ್ವೇಷಿಸುವ ಮತ್ತು ಬ್ರಿಟಿಷರ ಪರವಿರುವ ಕಥನವಾಗಿತ್ತು.

ಸರ್ವಜನಹಿತವೇ ಮುಖ್ಯ ಎಂದು ನಂಬಿದ್ದ ಮಹಾತ್ಮ ಗಾಂಧಿಯವರು, 1937ರಲ್ಲಿಯೇ, ‘ಹಿಂದೂಗಳು ಮತ್ತು ಮುಸ್ಲಿಮರು ಒಂದೇ ಸ್ಥಳದಲ್ಲಿ ಸೇರಿದಾಗ, ವಂದೇ ಮಾತರಂ ಹಾಡುವ ಕುರಿತಾಗಿ ಅವರಲ್ಲಿ ಜಗಳ ಉಂಟಾದರೆ ನಾನು ಸಹಿಸುವುದಿಲ್ಲ. ಹೀಗಾಗಿ, ಸಾರ್ವಜನಿಕ ಸ್ಥಳಗಳಲ್ಲಿ ವಂದೇ ಮಾತರಂನ್ನು ಹಾಡಬಾರದು’ ಎಂದು ನೆಹರೂಗೆ ಸಲಹೆ ನೀಡಿದ್ದರು.

ಹೀಗಾಗಿ ಆ ಹಾಡಿನ ಮೊದಲೆರಡು ಚರಣಗಳನ್ನು ಮಾತ್ರ ಹಾಡಬೇಕೆಂದು ಜವಾಹರಲಾಲ್‌ ನೆಹರೂ, ವಲ್ಲಭಭಾಯ್‌ ಪಟೇಲ್, ಸುಭಾಷ್‌ ಚಂದ್ರ ಬೋಸ್ ಹಾಗೂ ಇನ್ನಿತರ ಕಾಂಗ್ರೆಸ್ ನಾಯಕರನ್ನೊಳಗೊಂಡ ಸಮಿತಿ ತೀರ್ಮಾನಿಸಿತ್ತು. ಅದನ್ನು 1950ರ ನವಂಬರ್ 24ರಂದು ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದ ಬಾಬು ರಾಜೇಂದ್ರ ಪ್ರಸಾದರು ಅಧ್ಯಕ್ಷೀಯ ಹೇಳಿಕೆಯಾಗಿ ಘೋಷಿಸಿದ್ದರು. ಸಂವಿಧಾನ ಸಭೆ ಒಕ್ಕೊರಲಿನಿಂದ ಮಾನವತಾವಾದಿ-ರಾಷ್ಟ್ರವಾದಿ ರವೀಂದ್ರನಾಥ್ ಠಾಗೂರ್ ವಿರಚಿತ ಜನಗಣಮನವನ್ನು ರಾಷ್ಟ್ರಗೀತೆಯನ್ನಾಗಿ ಘೋಷಿಸಿತ್ತು.

ದೇಶದ ಇತಿಹಾಸ ಗೊತ್ತಿರುವ ಸಂಘ ಪರಿವಾರ ಮತ್ತದರ ಬಿಜೆಪಿ, ಇಷ್ಟು ದಿನ ಸುಮ್ಮನಿದ್ದು ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವಾಗ, ಕಳೆದ ಡಿಸೆಂಬರ್‌ನಲ್ಲಿ, ‘ವಂದೇ ಮಾತರಂ’ ಗೀತೆಗೆ 150 ವರ್ಷ ತುಂಬಿದ ಸಂದರ್ಭವನ್ನು ನೆಪ ಮಾಡಿಕೊಂಡು ಮುನ್ನಲೆಗೆ ತಂದಿದೆ. ಸಾಲದು ಎಂದು ಮುಸ್ಲಿಮರ ಕಾರಣಕ್ಕೆ ಕೈ ಬಿಡಲಾಗಿದ್ದ 4 ಚರಣಗಳನ್ನು ಬೇಕೆಂದೇ ಸೇರ್ಪಡೆಗೊಳಿಸಿದೆ. ಭಾರತವನ್ನು ಬ್ರಾಹ್ಮಣೀಯ ಹಿಂದೂ ರಾಷ್ಟ್ರ ಮಾಡುವ ಬೃಹತ್ ಹುನ್ನಾರದ ಭಾಗವಾಗಿ ವಂದೇ ಮಾತರಂನ 150ನೇ ವರ್ಷವನ್ನು ದುರುದ್ದೇಶದಿಂದ ಸಂಭ್ರಮಿಸುತ್ತಿದೆ. ಅದಕ್ಕೆ ತಕ್ಕಂತೆ ಪ್ರಧಾನಿ ನರೇಂದ್ರ ಮೋದಿಯವರು, ‘ವಂದೇ ಮಾತರಂ ಗೀತೆಯ ಕೆಲ ಪ್ರಮುಖ ಸಾಲುಗಳನ್ನು 1937ರಲ್ಲಿ ಕಾಂಗ್ರೆಸ್ ಕೈಬಿಟ್ಟಿದೆ. ಇದು ದೇಶ ವಿಭಜನೆಯ ಬೀಜ ಬಿತ್ತಲು ಕಾರಣವಾಯಿತು’ ಎಂದು ಹಿಂದೂ-ಮುಸ್ಲಿಂ ದ್ವೇಷದ ಬೀಜ ಬಿತ್ತಿದ್ದರು.

ಪ್ರಧಾನಿಗಳ ಮಾತಿಗೆ ಉತ್ತರ ಕೊಟ್ಟಿದ್ದ ಆಪ್‌ ಸಂಸದ ಸಂಜಯ್‌ ಸಿಂಗ್‌, ‘ವಂದೇ ಮಾತರಂ ಎಂದರೆ ಮಾತೃಭೂಮಿಗೆ ವಂದನೆ ಸಲ್ಲಿಸುವುದು ಎಂದರ್ಥ. ಆದರೆ, ನೀವು- ಬಿಜೆಪಿಯವರು ಮಾತೃಭೂಮಿಯನ್ನು ಮಾರಾಟ ಮಾಡುವ ಜನರಾಗಿದ್ದೀರಿ, ಮಾತೃಭೂಮಿಗೆ ವಂದನೆ ಸಲ್ಲಿಸುವವರಲ್ಲ’ ಎಂದು ನಿಜ ನುಡಿದಿದ್ದರು.

ಮುಂದುವರೆದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ‘ಸುಜಲಾ, ಸುಫಲಾಮ್, ಮಲಯಜ ಶೀತಲಾಮ್, ಸಸ್ಯ ಶಾಮಲಾಮ್ ಅಂದರೆ, ನಮ್ಮ ಜಲ ಶುದ್ಧವಾಗಿರಬೇಕು. ನೆಲ ಹಸಿರಿನಿಂದ ಕಂಗೊಳಿಸಬೇಕು. ಪರ್ವತ ಶ್ರೇಣಿಗಳು ತಣ್ಣನೆಯ ಗಾಳಿ ಬೀಸಬೇಕು ಎಂಬುದು ಕವಿಗಳ ಆಶಯವಾಗಿತ್ತು. ಆದರೆ, ಬಿಜೆಪಿ ಆಡಳಿತದಲ್ಲಿ ಎಲ್ಲವೂ ಕಲುಷಿತಗೊಂಡಿದೆ. ಮಾರಾಟವಾಗುತ್ತಿದೆ. ಆದರೆ ಆಡಲಿಕ್ಕೆ, ಜನರನ್ನು ಮರುಳು ಮಾಡಲಿಕ್ಕೆ ಮಾತೃಭೂಮಿ ಬೇಕಾಗಿದೆ, ಬಳಕೆಯಾಗುತ್ತಿದೆ’ ಎಂದು ವ್ಯಂಗ್ಯವಾಡಿದ್ದರು.

ಅಸಲಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಭಾಗವಹಿಸದ, ಬದಲಿಗೆ ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದು ಬ್ರಿಟಿಷರಿಗೆ ನೆರವಾದ ಪರಂಪರೆಯುಳ್ಳ ಸಂಘ ಪರಿವಾರ ಮತ್ತು ಅದರ ನೆರವಿನಿಂದ ರಚಿಸಲ್ಪಟ್ಟ ಮೋದಿ ಸರ್ಕಾರ, ಈಗ ವಂದೇ ಮಾತರಂ ಗೀತೆಯನ್ನು ಕಡ್ಡಾಯ ಮಾಡಿರುವುದರ ಹಿಂದೆ, ಹಿಡನ್‌ ಅಜೆಂಡಾ ಇದೆ. ವಿರೋಧ ಪಕ್ಷಗಳು ಎತ್ತುತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ನುಣುಚಿಕೊಳ್ಳುವ, ದೇಶದ ಜನರ ದಿಕ್ಕು ತಪ್ಪಿಸುವ ಹುನ್ನಾರವಿದೆ. ತನ್ನ ಎಲ್ಲಾ ವೈಫಲ್ಯಗಳಿಗೆ ದೇಶಪ್ರೇಮದ ವೇಷ ತೊಡಿಸುವ ಆಟವಿದೆ.

ಇದನ್ನು ಓದಿದ್ದೀರಾ?: ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಸಹಬಾಳ್ವೆಯ ಕಥನ- ಮಾದರಿಯಾದ ಹುಕ್ಕೇರಿಯ ಮುಸ್ಲಿಂ ದಂಪತಿ

ಅದಕ್ಕಿಂತಲೂ ಮುಖ್ಯವಾಗಿ ಬರಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿದೆ. ಆ ಕಾರಣದಿಂದಾಗಿಯೇ ಮುಸ್ಲಿಂ ದ್ವೇಷವನ್ನು ಮುನ್ನಲೆಗೆ ತಂದಿದೆ. ಬಂಗಾಲದವರೇ ಆದ ಬಂಕಿಮಚಂದ್ರ-ಠಾಗೂರ್‌ ಅವರ ಕುರಿತು ಪರಸ್ಪರ ಕಚ್ಚಾಡುವಂತೆ, ಇಬ್ಭಾಗವಾಗುವಂತೆ ಮಾಡಿದೆ. ಅದು ವೋಟು ಧ್ರುವೀಕರಣಕ್ಕೆ ಅನುಕೂಲವಾಗುತ್ತದೆಂದು ಭಾವಿಸಿದೆ. ಐದು ವರ್ಷಗಳ ಹಿಂದೆ, ಇದೇ ಪಶ್ಚಿಮ ಬಂಗಾಳದ ಚುನಾವಣೆಗೆ ಮೋದಿಯವರು ಮಾನವತಾವಾದಿ ರವೀಂದ್ರನಾಥ ಠಾಗೂರ್‌ ಅವರಂತೆ ಗಡ್ಡ ಬಿಟ್ಟು, ಶಾಲು ಹೊದ್ದು ಪೋಸು ಕೊಟ್ಟಿದ್ದರು. ಅದು ವರ್ಕೌಟ್‌ ಆಗಿರಲಿಲ್ಲ. ಆದಕಾರಣ ಈ ಚುನಾವಣೆಗೆ ಹಿಂದೂವಾದಿ ಬಂಕಿಮಚಂದ್ರದ ಮೊರೆ ಹೋಗಿದ್ದಾರೆ. ವಂದೇ ಮಾತರಂ ಎಂಬ ದೇಶಭಕ್ತಿಯ ಘೋಷಣೆಗೆ ಜೋತುಬಿದ್ದಿದ್ದಾರೆ. ಬಿಹಾರ ಚುನಾವಣೆಗೂ ಮುಂಚೆ ಹಿಂದುಳಿದ ನಾಯಕ ಕರ್ಪೂರಿ ಠಾಕೂರ್‌ಗೆ ಭಾರತರತ್ನ ನೀಡಿದ್ದನ್ನು, ಬಿಹಾರ ಗೆದ್ದಿದ್ದನ್ನು ನೆನಪು ಮಾಡಿಕೊಂಡರೆ, ಮೋದಿಯವರ ಈಗಿನ ಆಟ ಅರ್ಥವಾಗಬಹುದು.

ಹಾಗಾಗಿ ದೇಶದ ಜನತೆಯ ಮುಂದೆ ಜನಗಣಮನ ಅಥವಾ ವಂದೇ ಮಾತರಂ ಎಂಬ ಆಯ್ಕೆ ಎದುರಾದರೆ, ಭಾರತವು ಮುಸ್ಲಿಂ ದ್ವೇಷಿ ಹಿಂದೂ ರಾಷ್ಟ್ರವಾಗಬೇಕೋ ಅಥವಾ ಸರ್ವಜನಾಂಗದ ಶಾಂತಿಯ ತೋಟವಾಗಬೇಕೋ ಎಂಬ ರಾಜಕೀಯ ಆಯ್ಕೆಯಲ್ಲಿ ಬಹುತ್ವ ಭಾರತದ ಪರ ನಿಲ್ಲಬೇಕಾಗಿದೆ. ಭಾರತ ರಾಷ್ಟ್ರೀಯತೆ ಎಂದರೆ ಹಿಂದೂ ರಾಷ್ಟ್ರೀಯತೆ ಎಂಬ ಸಂಘ ಪರಿವಾರದ- ಬಿಜೆಪಿಯ ಸುಳ್ಳಿನ ನರೇಶನ್‌ ಗೆ ವಂದೇ ಮಾತರಂ ಬಳಸಿಕೊಳ್ಳುತ್ತಿರುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ನೈಜ ದೇಶಭಕ್ತರು ಮೋದಿ ಸರ್ಕಾರದ ಈ ದೇಶದ್ರೋಹಿ, ಜನದ್ರೋಹಿ ಹುನ್ನಾರಗಳಿಗೆ ಬಲಿಯಾಗದೆ, ಎಚ್ಚೆತ್ತುಕೊಳ್ಳಬೇಕಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಖರೀದಿ ಮೇಲೆ ತೆರಿಗೆ, ಖರೀದಿ ಹಣಕ್ಕೆ ಶುಲ್ಕ… ಇದು ಮೋದಿ ಡಿಜಿಟಲ್ ದರೋಡೆ!

ನಾವು ಒಂದು ವಸ್ತುವನ್ನು ಯುಪಿಐ ಮೂಲಕ ಖರೀದಿಸಿದರೆ, ಅದಕ್ಕೆ ತೆರಿಗೆ ತೆರಬೇಕು....

ಈ ದಿನ ಸಂಪಾದಕೀಯ | ಹಬ್ಬ-ಆಚರಣೆಗಳೇ ಬಿಜೆಪಿಯ ದ್ವೇಷದ ಅಸ್ತ್ರ; ಜನತೆ ಎಚ್ಚೆತ್ತುಕೊಳ್ಳಲಿ!

ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಧಾರ್ಮಿಕ ಆಚರಣೆಗಳ ಪಾವಿತ್ರ್ಯವನ್ನು ಹಾಳುಗೆಡವುವ, ಹಬ್ಬಗಳನ್ನು...

ಈ ದಿನ ಸಂಪಾದಕೀಯ | ಪ್ರಜಾ ಸೇವೆ ಪ್ರಚಾರವೂ ಇರಲಿ, ಪ್ರಜೆಗಳ ಬದುಕಿನಲ್ಲಿ ಬದಲಾವಣೆಯನ್ನೂ ತರಲಿ

ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಜನರಿಗೆ ತಲುಪಲು ಪ್ರಚಾರ ಮುಖ್ಯ; ಅದಕ್ಕಿಂತ ಸಾಮಾನ್ಯರ...

ಈ ದಿನ ಸಂಪಾದಕೀಯ | ಭಿನ್ನಮತಗಳ ನಡುವೆ BRICS ಶೃಂಗಸಭೆ; ಒಮ್ಮತ ಸಾಧಿಸುವುದೇ ಸವಾಲು!

ಇರಾನ್-ಯುಎಇ ಉದ್ವಿಗ್ನತೆ, ರಷ್ಯಾ-ಪಶ್ಚಿಮ ರಾಷ್ಟ್ರಗಳ ಸಂಘರ್ಷ, ಏಷ್ಯಾ ದೈತ್ಯರ ಆಂತರಿಕ ತಿಕ್ಕಾಟಗಳು...