ಬಂಗಾಳ SIR | ವಿಚಾರಣೆಗೆ ಒಳಗಾಗುತ್ತಿರುವ ಮತದಾರರಲ್ಲಿ ಅಲ್ಪಸಂಖ್ಯಾತರೇ ಹೆಚ್ಚು!

Date:

ಎಸ್‌ಐಆರ್‌ನಲ್ಲಿ ಮುಸ್ಲಿಮರೇ ಹೆಚ್ಚು ಗುರಿಯಾಗಿದ್ದಾರೆ ಎಂಬುದು ಬಹರಾಂಪುರದಲ್ಲಿ ಚುನಾವಣಾ ಅಧಿಕಾರಿಗಳ ಎದುರಿದ್ದ ಸರತಿ ಸಾಲು ವಿವರಿಸುತ್ತದೆ. ರಜಾಕ್ ಶೇಖ್ ಸೇರಿದಂತೆ ಹಲವಾರು ಕುಟುಂಬಗಳಿಗೆ ಮತದಾರರ ಪಟ್ಟಿಗೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗುವಂತೆ ಆಯೋಗವು ನೋಟಿಸ್ ನೀಡಿತ್ತು. ಆದ್ದರಿಂದ, ಪರಿಶೀಲನೆಗಾಗಿ ಹಲವು ಕುಟುಂಬಗಳ ಸದಸ್ಯರು ವಿಚಾರಣಾ ಕೇಂದ್ರಗಳ ಎದುರು ಸಾಲುಗಟ್ಟಿವೆ ನಿಂತಿದ್ದಾರೆ.

- Advertisement -

“ನಾನು ಬಿಹಾರದ ಕತಿಹಾರ್‌ನಲ್ಲಿರುವ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನಮಗೆ ವಿಚಾರಣೆಗೆ ಹಾಜರಾಗಲು ನೋಟಿಸ್‌ ಬಂದಿತ್ತು. ಅದಕ್ಕಾಗಿ, ನಾವು ನಮ್ಮ ಇಡೀ ಕುಟುಂಬದೊಂದಿಗೆ ಬಹರಾಂಪುರಕ್ಕೆ ಬಂದಿದ್ದೇವೆ. ಇಲ್ಲಿಗೆ ಬರಲು ರಜೆ ನಾನು ತೆಗೆದುಕೊಳ್ಳಬೇಕಾಯಿತು. ಇಲ್ಲಿ ಬಂದು ನೋಡಿದರೆ, ಸಾಲಿನಲ್ಲಿ ನಿಂತಿರುವವರಲ್ಲಿ ಹೆಚ್ಚಿನವರು ಮುಸ್ಲಿಂ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ” – ಇದು ಮತದಾರ ಪಟ್ಟಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಬಹರಾಂಪುರಕ್ಕೆ ಬಂದಿದ್ದ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಮೆಕ್ಲಿಗಂಜ್ ನಿವಾಸಿ ರಜಾಕ್ ಶೇಖ್ ಅವರ ಮಾತುಗಳು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಚುನಾವಣಾ ವಸ್ತಿಲಿನಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್) ನಡೆಸಿದೆ. ಸುಮಾರು 58 ಲಕ್ಷ ಮತದಾರರನ್ನು ಹೊರಗಿಡಲಾಗಿದೆ. ಅವರಲ್ಲಿ, ಬಹುಸಂಖ್ಯರು ಅಲ್ಪಸಂಖ್ಯಾತ ಸಮುದಾಯದವರು, ಮತ್ತೂ, ದಲಿತ-ಆದಿವಾಸಿ ಸಮುದಾಯಗಳಿಗೆ ಸೇರಿದವರು. ಅಲ್ಪಸಂಖ್ಯಾತರು ಮತ್ತು ತಳ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಪರಿಷ್ಕರಣೆ ನಡೆಸಿ, ಅವರನ್ನೆಲ್ಲ ಹೊರಗಿಡಲಾಗಿದೆ ಎಂದು ವಿಪಕ್ಷಗಳು ಸೇರಿದಂತೆ ಹಲವರು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಚುನಾವಣಾ ಆಯೋಗ ನಿರಾಕರಿಸಿದೆ.

ಆದರೆ, ಎಸ್‌ಐಆರ್‌ನಲ್ಲಿ ಮುಸ್ಲಿಮರೇ ಹೆಚ್ಚು ಗುರಿಯಾಗಿದ್ದಾರೆ ಎಂಬುದು ಬಹರಾಂಪುರದಲ್ಲಿ ಚುನಾವಣಾ ಅಧಿಕಾರಿಗಳ ಎದುರಿದ್ದ ಸರತಿ ಸಾಲು ವಿವರಿಸುತ್ತದೆ. ರಜಾಕ್ ಶೇಖ್ ಸೇರಿದಂತೆ ಹಲವಾರು ಕುಟುಂಬಗಳಿಗೆ ಮತದಾರರ ಪಟ್ಟಿಗೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗುವಂತೆ ಆಯೋಗವು ನೋಟಿಸ್ ನೀಡಿತ್ತು. ಆದ್ದರಿಂದ, ಪರಿಶೀಲನೆಗಾಗಿ ಹಲವು ಕುಟುಂಬಗಳ ಸದಸ್ಯರು ವಿಚಾರಣಾ ಕೇಂದ್ರಗಳ ಎದುರು ಸಾಲುಗಟ್ಟಿವೆ ನಿಂತಿದ್ದಾರೆ.

“ನೋಟಿಸ್‌ ನೀಡಲಾದವರಲ್ಲಿ ಹೆಚ್ಚಿವರ ಪ್ರಕರಣಗಳೂ ಮಕ್ಕಳನ್ನು ಹೊಂದಿರುವುದು, ಪೋಷಕರು ಮತ್ತು ಮಕ್ಕಳ ನಡುವಿನ ವಯಸ್ಸಿನ ಅಸಮಂಜಸ ವ್ಯತ್ಯಾಸ, ಹೆಸರುಗಳಲ್ಲಿನ ಕಾಗುಣಿತ ತಪ್ಪುಗಳಂತಹ ಸಣ್ಣ-ಪುಟ್ಟ ಸಮಸ್ಯೆಗಳನ್ನು ಹೊಂದಿವೆ” ಎಂದು ಬಿಎಲ್‌ಒ ಒಬ್ಬರು ತಿಳಿಸಿದ್ದಾರೆ.

ಈ ಎಸ್‌ಐಆರ್‌ ಪ್ರಕ್ರಿಯೆಯು ವಿಚಾರಣಾ ಕೇಂದ್ರಗಳಲ್ಲಿ ವಿಪರೀತ ಜನದಟ್ಟಣೆಗೆ ಕಾರಣವಾಗಿದೆ. ಪರಿಣಾಮ, ಮತದಾರರು ಮತ್ತು ಅಧಿಕಾರಿಗಳು ಇಬ್ಬರೂ ಸಂಕಷ್ಟಕ್ಕೀಡಾಗಿದ್ದಾರೆ. ಪರಿಶೀಲನೆಗಾಗಿ ರಾಜ್ಯಾದ್ಯಂತ 80,000ಕ್ಕೂ ಹೆಚ್ಚು BLOಗಳನ್ನು ನಿಯೋಜಿಸಲಾಗಿದ್ದು, ಅವರಲ್ಲಿ ಹೆಚ್ಚಿನವರು ಸರ್ಕಾರಿ ಶಾಲಾ ಶಿಕ್ಷಕರಾಗಿದ್ದಾರೆ. ಇವರನ್ನು ದೀರ್ಘಕಾಲದವರೆಗೆ ಶಾಲಾ ಚಟುವಟಿಕೆಗಳಿಂದ ದೂರವಿಟ್ಟು ಈ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಕೂಚ್ ಬೆಹಾರ್ ಜಿಲ್ಲೆಯ ಹಲವು ಭಾಗಗಳಲ್ಲಿನ ಅಂಕಿಅಂಶಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ. “ಸುಮಾರು 700 ಮತದಾರರಿರುವ ಅನೇಕ ಬೂತ್‌ಗಳಲ್ಲಿ, ಚುನಾವಣಾ ಆಯೋಗವು 250ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಕರೆದಿದೆ. ಇವರಲ್ಲಿ 70%ರಷ್ಟು ಜನರು ಅಲ್ಪಸಂಖ್ಯಾತ ಸಮುದಾಯದವರಾಗಿದ್ದಾರೆ,” ಎಂದು ರೈತ ಹೋರಾಟಗಾರ ಅಕೀಕ್ ಹೊಸೈನ್ ಹೇಳಿದ್ದಾರೆ.

ಸಿಟೈನಲ್ಲಿ, 58 ವರ್ಷದ ಅನಿಸಾ ಪರ್ವಿನ್ ತಮ್ಮ ಜೀವನದಲ್ಲಿ ಇದೇ ಮೊದಲ ಬಾರಿಗೆ (ಮತದಾನವನ್ನು ಹೊರತುಪಡಿಸಿ) ಸರ್ಕಾರಿ ಸಾಲಿನಲ್ಲಿ ನಿಂತಿದ್ದಾರೆ. ಮದುವೆಯ ನಂತರದ ಹೆಸರು ಬದಲಾವಣೆಗೆ ದಾಖಲೆಗಳನ್ನು ಸಾಬೀತು ಮಾಡಲು ಮತ್ತು ತಮ್ಮ ಹೆಸರಿಗೆ ‘ಬೀಬಿ’ ಎಂಬ ಪದವನ್ನು ಸೇರಿಸಲು ಅವರು ಬಂದಿದ್ದಾರೆ. ಸಣ್ಣ ತಪ್ಪುಗಳಿಗಾಗಿ ಮತದಾನದ ಹಕ್ಕನ್ನೇ ಕಳೆದುಕೊಳ್ಳುವ ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು, ರಾಜಕೀಯ ನಾಯಕರು ಹೇಳುವಂತೆ ‘ಎಸ್‌ಐಆರ್’ ಪ್ರಕ್ರಿಯೆಯು ಸ್ಪಷ್ಟತೆಗಿಂತ ಹೆಚ್ಚಾಗಿ ಭೀತಿಯನ್ನು ಹುಟ್ಟುಹಾಕಿದೆ. ಕೂಚ್ ಬೆಹಾರ್‌ನ ಟಿಎಂಸಿ ನಾಯಕ ರವೀಂದ್ರನಾಥ ಘೋಷ್ ಅವರು, “ನೆರೆಯ ಅಸ್ಸಾಂನಲ್ಲಿ ನಡೆಯುತ್ತಿರುವುದು ಇಲ್ಲಿಯೂ ಪರಿಣಾಮ ಬೀರಿದೆ. ಬಡವರು, ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟ ಜಾತಿ ಸಮುದಾಯಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ” ಎಂದು ಹೇಳಿದ್ದಾರೆ.

ತಿದ್ದುಪಡಿಗಳನ್ನು ನಡೆಸುವ ವಿಧಾನಗಳ ಬಗ್ಗೆಯೂ ಕಳವಳ ವ್ಯಕ್ತವಾಗುತ್ತಿದೆ. ಸಿಟೈ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ಮಾಡುವ BLO ಒಬ್ಬರು, “ನಾವು ಡೇಟಾವನ್ನು ಅಪ್‌ಲೋಡ್ ಮಾಡಿ ಕಳುಹಿಸಿಸುತ್ತೇವೆ. ಆದರೆ, ಚುನಾವಣಾ ಆಯೋಗದ ಅಧಿಕಾರಿಗಳು AI ತಂತ್ರಜ್ಞಾನವನ್ನು ಬಳಸಿ ಪರಿಶೀಲನೆ ನಡೆಸುತ್ತಿದ್ದಾರಂತೆ. ಹೀಗಾಗಿ ಅಂತಿಮ ಪಟ್ಟಿ ಬಂದಾಗ ಕಾಗುಣಿತ ತಪ್ಪುಗಳಿದ್ದರೆ ನಮ್ಮಂತಹ ಸರ್ಕಾರಿ ನೌಕರರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬಹುದು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮಾಲ್ಡಾ ಜಿಲ್ಲೆಯಲ್ಲೂ ಇಂತಹದ್ದೇ ಅಸಮಾನತೆ ಕಂಡುಬಂದಿದೆ. ಮಾಣಿಕ್ಚಕ್ ವಿಧಾನಸಭಾ ಕ್ಷೇತ್ರದ ಹಿಂದು ಪ್ರಾಬಲ್ಯವಿರುವ ಬೂತ್ ಸಂಖ್ಯೆ 49ರಲ್ಲಿ 1,279 ಮತದಾರರಿದ್ದು, ಕೇವಲ 73 ಜನರನ್ನು ವಿಚಾರಣೆಗೆ ಕರೆಯಲಾಗಿದೆ. ಇದಕ್ಕೆ ವಿರುದ್ಧವಾಗಿ, ಅಲ್ಪಸಂಖ್ಯಾತ ಪ್ರಾಬಲ್ಯದ ನೂರ್‌ಪುರದ ಬೂತ್ ಸಂಖ್ಯೆ 62ರಲ್ಲಿರುವ 1,300 ಮತದಾರರ ಪೈಕಿ ಬರೋಬ್ಬರಿ 1,200 ಜನರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ.

ಮುಸ್ಲಿಂ ಬಹುಸಂಖ್ಯಾತ ಜಿಲ್ಲೆಯಾದ ಮುರ್ಶಿದಾಬಾದ್‌ನಲ್ಲಿ ಎಸ್‌ಐಆರ್ ಪ್ರಕ್ರಿಯೆಯು ಬಹಳ ವಿಸ್ತಾರವಾಗಿದೆ. ಜಿಲ್ಲಾ ಮಟ್ಟದ ಅಂಕಿಅಂಶಗಳ ಪ್ರಕಾರ, ಮುರ್ಶಿದಾಬಾದ್‌ನ ಸುಮಾರು 54 ಲಕ್ಷ ಮತದಾರರಲ್ಲಿ ಸುಮಾರು 27.6%ರಷ್ಟು ಜನರನ್ನು ವಿಚಾರಣೆಗೆ ಕರೆಯಲಾಗಿದೆ.

ಮುರ್ಶಿದಾಬಾದ್ ಕಾಂಗ್ರೆಸ್ ನಾಯಕ ಅಬ್ದುಲ್ಲಾ ಕಾಫಿರ್ ಹೇಳುವಂತೆ, “ಆರ್ಥಿಕ ಸಂಕಷ್ಟ ಮತ್ತು ಶಿಕ್ಷಣದ ಕೊರತೆಯಿಂದಾಗಿ ಈ ಸಮುದಾಯದ ಜನರ ದಾಖಲೆಗಳಲ್ಲಿ ತಪ್ಪುಗಳಾಗುವುದು ಸಾಮಾನ್ಯವಾಗಿದೆ. ಈಗ ಬಡವರಲ್ಲಿ ವದಂತಿ ಹರಡಿದೆ; ‘ಒಂದು ವೇಳೆ ಮತದಾರರ ದಾಖಲೆಯಲ್ಲಿ ಏನಾದರೂ ತಪ್ಪಿದ್ದರೆ, ಬಿಜೆಪಿ ಅವರನ್ನು ಬಾಂಗ್ಲಾದೇಶಕ್ಕೆ ಕಳುಹಿಸುತ್ತದೆ’ ಎಂಬ ಆತಂಕ ಮನೆ ಮಾಡಿದೆ. ಪರಿಣಾಮವಾಗಿ, ದೂರದ ಊರುಗಳಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರು ಕೆಲಸ ಬಿಟ್ಟು ವಿಚಾರಣೆಗಾಗಿ ಊರುಗಳಿಗೆ ಮರಳಿ ಬಂದಿದ್ದಾರೆ. ವಿಚಾರಣಾ ಕೇಂದ್ರಗಳಿಗೆ ಧಾವಿಸಿದ್ದಾರೆ. ಸರತಿಯಲ್ಲಿ ನಿಂತಿದ್ದಾರೆ.”

ಈ ಲೇಖನ ಓದಿದ್ದೀರಾ?: ಪ್ರಾದೇಶಿಕ ಅಸಮಾನತೆ: ಹೊಣೆಗಾರಿಕೆ ಅಧಿಕಾರಸ್ಥರ ಮೇಲಿದೆ

ಉತ್ತರ 24 ಪರಗಣ ಜಿಲ್ಲೆಯ ಸಂದೇಶಖಾಲಿ ವಿಧಾನಸಭಾ ಕ್ಷೇತ್ರದಲ್ಲಿ ವಿಚಾರಣೆ ಆರಂಭವಾಗುವ ಮೊದಲೇ ಆತಂಕ ಉಂಟಾಗಿತ್ತು. ಅಲ್ಪಸಂಖ್ಯಾತ ಮತದಾರರನ್ನು ‘ಮೃತಪಟ್ಟವರು’ ಅಥವಾ ‘ಅನಿವಾಸಿ ಭಾರತೀಯರು’ ಎಂದು ಬಿಂಬಿಸುವ ಪಟ್ಟಿಗಳು ಹರಿದಾಡುತ್ತಿವೆ. ಸಂದೇಶಖಾಲಿಯ ಮಾಜಿ ಸಿಪಿಐ(ಎಂ) ಶಾಸಕ ನಿರಾಪದ್ ಸರ್ದಾರ್, “ನನಗೆ ವೈಯಕ್ತಿಕವಾಗಿ ಪರಿಚಿತರಿರುವ, ಹಲವು ದಶಕಗಳಿಂದ ಇಲ್ಲಿಯೇ ವಾಸಿಸುತ್ತಿರುವ ನಿವಾಸಿಗಳನ್ನು ಮತಪಟ್ಟಿಯಲ್ಲಿ ಸತ್ತಿದ್ದಾರೆ ಎಂದು ತೋರಿಸಲಾಗಿದೆ. ಅಲ್ಪಸಂಖ್ಯಾತ ಮತದಾರರನ್ನು ಹೊರಗಿಡಲು ಯಾವ ಆಟ ನಡೆಯುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಯವರು ವಿಚಾರಣೆ ಮುಗಿಯುವ ಮೊದಲೇ ಮತದಾರರ ಪಟ್ಟಿಯಿಂದ ಎಷ್ಟು ಹೆಸರುಗಳು ಕಡಿತಗೊಳ್ಳಲಿವೆ ಎಂದು ಭವಿಷ್ಯ ನುಡಿದಿರುವುದು ರಾಜಕೀಯ ಸಂಚನ್ನು ಪ್ರತಿಬಿಂಬಿಸುತ್ತದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ. ಆದರೆ, ಈ ಆರೋಪಗಳನ್ನು ತಿರಸ್ಕರಿಸಿದ ಬಿಜೆಪಿ ವಕ್ತಾರ ದೇವೋಜಿತ್ ಸರ್ಕಾರ್, “ಚುನಾವಣಾ ಆಯೋಗವು ಸ್ವತಂತ್ರ ಸಂಸ್ಥೆಯಾಗಿದೆ. ನಮಗೆ ನುಸುಳುಕೋರರು ಮತ್ತು ನಕಲಿ ಮತದಾರರಿಲ್ಲದ ಮತದಾರರ ಪಟ್ಟಿ ಬೇಕು” ಎಂದು ಸಮರ್ಥಿಸಿಕೊಂಡಿದ್ದಾರೆ.

SIR ಪ್ರಕ್ರಿಯೆಯು ಸಾಮಾಜಿಕ ಮತ್ತು ಆರ್ಥಿಕವಾಗಿಯೂ ಭಾರಿ ನಷ್ಟ ಉಂಟುಮಾಡಿದೆ. ಕೋಲ್ಕತ್ತಾ ಮೂಲದ ಸಬರ್ ಇನ್ಸ್ಟಿಟ್ಯೂಟ್ ವರದಿಯ ಪ್ರಕಾರ, ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಂಡಿರುವುದರಿಂದ ಸುಮಾರು 21.78 ಲಕ್ಷ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗಿದೆ. ರಾಜ್ಯದಾದ್ಯಂತ ಸುಮಾರು 1.5 ಕೋಟಿ ನೋಟಿಸ್‌ಗಳನ್ನು ನೀಡಲಾಗಿದ್ದು, ಇದರಿಂದ ಸುಮಾರು 1,000 ಕೋಟಿ ರೂ.ಗಳಿಂದ 4,000 ಕೋಟಿ ರೂ.ವರೆಗೆ ಆರ್ಥಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಪ್ರಯಾಣ, ಆಹಾರ ಹಾಗೂ ದಾಖಲೆಗಳಿಗಾಗಿ ಸಾರ್ವಜನಿಕರು 300 ರಿಂದ 600 ಕೋಟಿ ರೂ.ಗಳನ್ನು ವ್ಯಯಿಸಿದ್ದಾರೆ ಎಂದೂ ವರದಿ ವಿವರಿಸಿದೆ.

WhatsApp Image 2023 06 13 at 1.10.34 PM e1686642227658
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ: ಎಎಪಿ ನಾಯಕ ಸೌರಭ್ ಭಾರದ್ವಾಜ್ ಸೇರಿ ಹಲವು ಮಂದಿ ದೆಹಲಿ ಪೊಲೀಸರ ವಶಕ್ಕೆ

ಚುನಾವಣಾ ಆಯೋಗದ ವಿರುದ್ಧ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಜಂತರ್ ಮಂತರ್‌‌ಗೆ ಆಗಮಿಸಿದ್ದ...

ಸಿಜೆಪಿ ಬೆಂಬಲಕ್ಕೆ ನಿಂತ ಪಾಲ್ಘರ್ ವಕೀಲರ ಸಂಘ: ಕಾರ್ಯಕರ್ತರಿಗೆ ಉಚಿತ ಕಾನೂನು ನೆರವು ಘೋಷಣೆ

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಕೀಲರ ಸಂಘವೊಂದು 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ)...

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ ಆಶ್ರಮ’

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್...

ಅಯೋಧ್ಯೆ ರಾಮಮಂದಿರ ಸಿಬ್ಬಂದಿಗೆ ಶೇ. 100ರಷ್ಟು ಪೊಲೀಸ್ ವೆರಿಫಿಕೇಷನ್; ಹಿನ್ನೆಲೆ ಪರಿಶೀಲನೆ ಕಡ್ಡಾಯ

ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರ ಆಡಳಿತ ಮತ್ತು ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು...