‘ಭಾರತಕ್ಕಿಂತ ಮೋದಿ ದೊಡ್ಡವರೆ?’: ಸರ್ಕಾರದ ಪ್ರಚಾರ ರಥಯಾತ್ರೆ ತಡೆದು ಪ್ರಶ್ನಿಸಿದ ಯುವಕ, ವಿಡಿಯೋ ವೈರಲ್

Date:

ಕೇಂದ್ರದ ಯೋಜನೆಗಳ ಕಾರ್ಯಕ್ರಮಗಳನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಮೋದಿ ಹೆಸರಿನಲ್ಲಿ ‘ವಿಕಾಸ ಭಾರತ ಸಂಕಲ್ಪ ಯಾತ್ರಾ’ ರಥಯಾತ್ರೆ ಕಾರ್ಯಕ್ರಮವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ. ಈ ಯೋಜನಾ ರಥಯಾತ್ರೆಯನ್ನು ಪ್ರಶ್ನಿಸಿ ಯುವಕನೊಬ್ಬ ತಡೆದು ನಿಲ್ಲಿಸಿರುವ ಘಟನೆ ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ನಡೆದಿದೆ.

ಕೊಲ್ಹಾಪುರ ಜಿಲ್ಲೆಯ ಗ್ರಾಮವೊಂದರ ಇಂಜಿನಿಯರಿಂಗ್ ಪದವೀಧರನಾದ ಯುವಕ ರಾಜ್‌ವೈಭವ್‌ ಸೋಬಾ ರಾಮಚಂದ್ರ ಅವರು ‘ವಿಕಾಸ ಭಾರತ ಸಂಕಲ್ಪ ಯಾತ್ರಾ’ ರಥಯಾತ್ರೆಯನ್ನು ತಡೆದು ನಿಲ್ಲಿಸಿದ್ದಾರೆ. ಸಂಕಲ್ಪ ಯಾತ್ರೆಯಲ್ಲಿ ‘ಮೋದಿ ಗ್ಯಾರಂಟಿ ಯೋಜನೆಗಳು’ ಎಂದು ಅಡಿಬರಹ ಬಳಸಲಾಗಿದ್ದು, ಇದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಪ್ರಶ್ನಿಸಿದ್ದಾರೆ.

ಘಟನೆಯು ಡಿಸೆಂಬರ್‌ 13ರಂದು ನಡೆದಿದ್ದು, ಇಂಜಿಯರಿಂಗ್ ಪದವೀಧರರಾದ 30 ವರ್ಷದ ರಾಮಚಂದ್ರ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕೊಲ್ಹಾಪುರ ಜಿಲ್ಲೆಯ ರಾಧಾನಗರಿ ತಾಲೂಕಿನ ಯುವಕನ ಸ್ವಗ್ರಾಮ ಸೋನ್ಯಾಚಿ ಶಿರೋಳಿ ಗ್ರಾಮದಲ್ಲಿ ಸಂಕಲ್ಪ ಯಾತ್ರೆ ಬರುತ್ತಿದ್ದ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಯುವಕ ಪ್ರಶ್ನಿಸಿರುವ ವಿಡಿಯೋ ಮಹಾರಾಷ್ಟ್ರದ ವಿವಿಧ ಭಾಗಗಳ ಗ್ರಾಮದಲ್ಲಿ ವೈರಲ್‌ ಆಗಿದ್ದು, ಆತನಿಂದ ಪ್ರೇರೇಪಣೆ ಪಡೆದ ಅನೇಕರು ತಮ್ಮ ಗ್ರಾಮಗಳಲ್ಲಿ ವಿಕಾಸ್ ಭಾರತ್‌ ರಥಯಾತ್ರೆ ವಾಹನವನ್ನು ತಡೆದಿದ್ದಾರೆ. ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಸಾರ್ವಜನಿಕರ ಹಣವನ್ನು ಆಡಳಿತ ಪಕ್ಷ ಬಿಜೆಪಿ ಪೋಲು ಮಾಡುತ್ತಿದೆ ಎಂದು ಆಗ್ರಹಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿನ ಈ ಕಚ್ಚಾಟ, ‘ಆತ್ಮಹತ್ಯೆ’ಯ ಹುಚ್ಚಾಟ

“ರಾಜಕೀಯ ಪಕ್ಷಗಳು ಮತ್ತು ಕೇಂದ್ರ ಸರ್ಕಾರದ ನಡುವಿನ ವ್ಯತ್ಯಾಸ ಹಾಗೂ ಸಾಂವಿಧಾನಿಕ ಮೌಲ್ಯಗಳ ಬಗ್ಗೆ ನನಗೆ ಅರಿವಿದೆ. ನಾನು ಕೆಲವೊಂದನ್ನು ಗಮನಿಸಿ ಅವರನ್ನು ಪ್ರಶ್ನಿಸಿದೆ. ಮೊದಲನೆಯದಾಗಿ, ಸರ್ಕಾರವೇ ತನ್ನ ಕೆಲಸವನ್ನು ನಿರ್ವಹಿಸುತ್ತಿರುವಾಗ ಇಷ್ಟು ದೊಡ್ಡ ಮಟ್ಟದ ಪ್ರಚಾರ ಏಕೆ ಮಾಡುತ್ತಿದೆ? ಸರ್ಕಾರಿ ಕಾರ್ಯಕ್ರಮಗಳ ಗ್ಯಾರಂಟಿಗಳನ್ನು ಮೋದಿ ಗ್ಯಾರಂಟಿ ಎಂದು ಏಕೆ ಘೋಷಿಸುತ್ತಿದ್ದಾರೆ” ಎಂದು ರಾಮಚಂದ್ರ ಪ್ರಶ್ನಿಸಿದ್ದಾರೆ.

“ಇದು ಸರ್ಕಾರಿ ಕಾರ್ಯಕ್ರಮ ಎಂದು ಪ್ರಚಾರದಲ್ಲಿ ತೊಡಗಿದ್ದ ಅಧಿಕಾರಿಗಳೆ ನಮಗೆ ತಿಳಿಸಿದ್ದಾರೆ. ನನ್ನ ಸರಳ ಪ್ರಶ್ನೆ ಎಂದರೆ, ಒಂದು ನಿರ್ದಿಷ್ಟ ಆಡಳಿತ ಪಕ್ಷಕ್ಕಾಗಿ ಪ್ರಚಾರ ನಡೆಸಲು ಸಾರ್ವಜನಿಕ ಹಣವನ್ನು ದೊಡ್ಡ ಮಟ್ಟದಲ್ಲಿ ಏಕೆ ವೆಚ್ಚ ಮಾಡಲಾಗುತ್ತಿದೆ. ಮೋದಿ ಭಾರತಕ್ಕಿಂತ ದೊಡ್ಡವರೆ? ರಾಷ್ಟ್ರ ಲಾಂಛನವನ್ನು ಒಬ್ಬ ವ್ಯಕ್ತಿಯ ಹಾಗೂ ಒಂದು ಪಕ್ಷದ ಪರವಾಗಿ ಬಳಸಲಾಗುತ್ತದೆ. ಇದನ್ನು ಹೇಗೆ ಅನುಮತಿಸಲಾಗಿದೆ? ಭಾರತದ ಧ್ವಜವನ್ನು ಕೂಡ ರಥಯಾತ್ರೆಯಲ್ಲಿ ಬಿಜೆಪಿ ಧ್ವಜದಂತೆ ಮಾರ್ಪಡಿಸಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಮೋದಿ ಹೆಸರನ್ನು ಪ್ರಶ್ನಿಸಿರುವುದಕ್ಕೆ ಕೋಪಗೊಂಡಿರುವ ಸ್ಥಳೀಯ ಬಿಜೆಪಿ ನಾಯಕರು ಪೊಲೀಸ್ ದೂರು ನೀಡುವುದಾಗಿ ರಾಮಚಂದ್ರನಿಗೆ ಬೆದರಿಕೆಯೊಡ್ಡಿದ್ದಾರೆ. ಆದರೆ ತಾವು ಇದ್ಯಾವುದಕ್ಕೂ ಜಗ್ಗುವುದಿಲ್ಲ. ಅಗತ್ಯ ದಾಖಲೆಗಳೊಂದಿಗೆ ಪೊಲೀಸ್ ದೂರು ನೀಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ತಿಳಿಸಿರುವುದಾಗಿ ರಾಮಚಂದ್ರ ಹೇಳಿದ್ದಾರೆ.

ರಾಮಚಂದ್ರನಿಂದ ಸ್ಪೂರ್ತಿ ಪಡೆದ ಹಲವು ಯುವಕರು ಮಹಾರಾಷ್ಟ್ರದ ವಿವಿಧ ಜಿಲ್ಲೆಗಳ 60 ಕಡೆ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆಯನ್ನು ಶಾಂತಿಯುತವಾಗಿ ಕೈಗೊಳ್ಳಿ ಯಾವುದೇ ಕಾರಣಕ್ಕೂ ಗಲಭೆ, ಹಾನಿ ಮಾಡಬೇಡಿ ಎಂದು ಸಾಮಾಜಿಕ ಮಾಧ್ಯಮಗಳ ಮೂಲಕ ರಾಮಚಂದ್ರ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಇಂಥಾ ಯುವಕರ ಸಂಖ್ಯೆ ಬೆಳೆಯಬೇಕು,,, ಯುವಕರು ಮಬ್ಭಕ್ತರಾಗಬಾರದು,,,ಹಾಗಾದಾಗಲೇ ಈ ರಾಜಕಾರಣ ಇಂಥಾ ಕೆಳ ಮಟ್ಟಕ್ಕೆ ಇಳಿಯುವುದು,,, ಕರ್ನಾಟಕದಲ್ಲಿ ಗ್ಯಾರಂಟಿಗಳನು ಬಿಟ್ಟಿ ಭಾಗ್ಯವೆಂದು ಅಪಪ್ರಚಾರ ಮಾಡುವ ಅರೆಬೆಂದ ಭಕ್ತರು, ಕೋಮುವ್ಯಾಧಿ ಪುರೋಹಿತಶಾಹಿ ಮೋಧ್ಯಮಗಳು,,,ಇಲ್ಲಿ ಮಾತ್ರ ಮೋದಿ ಗ್ಯಾರಂಟಿ ಅಂದ್ರೆ ಪರವಾಗಿಲ್ಲ,,,ಎಡಬಿಡಂಗಿತನ

  2. ಯಾವುದೇ ವಿಷಯವಿರಲಿ , ಪರ – ವಿರೋಧ ಇದ್ದೇ ಇರುತ್ತದೆ. ಕೊಲ್ಹಾಪುರದ ರಾಮಚಂದ್ರ ‘ ಮೋದಿ ಗ್ಯಾರಂಟಿ ‘ ಯನ್ನು ಪ್ರಚಾರಕ್ಕೆ ಬಳಸುವ ರೀತಿಯನ್ನು ಪ್ರಶ್ನಿಸಿದ್ದಾರೆ. ಪ್ರಶ್ನಿಸುವ ಹಕ್ಕನ್ನು ಸಂವಿಧಾನವೇ ನಮಗೆ ಕೊಟ್ಟಿದೆ.

    ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಅಲ್ಲೂ ಪರ – ವಿರೋಧ ಚರ್ಚೆಗಳು ನಡೆಯುತ್ತಿವೆ. ಚರ್ಚೆಗಳು ನಡೆಯಬೇಕು. ಚರ್ಚೆ – ವಿಮರ್ಶೆಗಳು ನಡೆದಾಗ ಇನ್ನಷ್ಟು ವಿಷಯಗಳು ಹೊರ ಬಂದು ಮತ್ತಷ್ಟು ಚರ್ಚೆಗಳು ನಡೆಯುತ್ತದೆ.

    ಚರ್ಚೆಗಳು ನಡೆಯಬಾರದು. ನಮ್ಮನ್ನು ಯಾರೂ ಪ್ರಶ್ನಿಸಬಾರದು. ನಾವು ಮಾಡಿದುದೆಲ್ಲವೂ ಸರಿ ಎಂಬ ಮನೋಭಾವನೆ ಎಂದೂ , ಯಾರಲ್ಲೂ ಇರಬಾರದು. ‘ ಮನ್ ಕೀ ಬಾತ್ ‘ ನ್ನು ಕೇಳುವ ಜನರು ‘ ಜನ್ ಕೀ ಬಾತ್ ‘ ನ್ನೂ ಕೇಳಲು ಸಿದ್ಧರಿರಬೇಕು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂಪೂರ್ಣ ನಿಷ್ಕ್ರಿಯತೆಯಿಂದ ಮೇಕ್ ಇನ್ ಇಂಡಿಯಾ ಅನುಷ್ಠಾನಗೊಳಿಸಲು ಕೇಂದ್ರ ವಿಫಲ: ಖರ್ಗೆ

ಉದ್ಯೋಗ ಸೃಷ್ಟಿ ಹಾಗೂ ಅನುದಾನ ಬಳಕೆಯಲ್ಲಿನ ಸಂಪೂರ್ಣ ನಿಷ್ಕ್ರಿಯತೆಯಿಂದ ಮೇಕ್‌ ಇನ್‌...

ಗೌತಮ್ ಗಂಭೀರ್ ನಂತರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದ ಮತ್ತೊಬ್ಬ ಬಿಜೆಪಿ ಸಂಸದ ಜಯಂತ್ ಸಿನ್ಹಾ

ಬಿಜೆಪಿಯ ಎಲ್ಲ ಕೆಲಸಗಳಿಂದ ತಮ್ಮನ್ನ ಮುಕ್ತಗೊಳಿಸುವಂತೆ ಬಿಜೆಪಿ ಸಂಸದ ಗೌತಮ್ ಗಂಭೀರ್...

ಜಾರ್ಖಂಡ್ | ಪ್ರವಾಸಕ್ಕೆಂದು ಬಂದಿದ್ದ ಸ್ಪೇನ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಸ್ಪೇನ್‌ ದೇಶದಿಂದ ಪ್ರವಾಸಕ್ಕೆಂದು ಬಂದಿದ್ದ ಮಹಿಳೆಯೊಬ್ಬರ ಮೇಲೆ ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ...

ಸುದ್ದಿ ವಿವರ | ಜಸ್ಟೀಸ್ ಖಾನ್ವಿಲ್ಕರ್‌ಗೆ ಲೋಕಪಾಲ ಹುದ್ದೆ; ಮೋದಿ ಸರ್ಕಾರದ ಗಿಫ್ಟ್?

ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಎ.ಎಂ ಖಾನ್ವಿಲ್ಕರ್‌ರನ್ನು ಭಾರತದ ನೂತನ ಲೋಕಪಾಲರಾಗಿ...