ಪರಿಶಿಷ್ಟ ಜಾತಿ, ಪಂಗಡದ‌ ಕಲ್ಯಾಣಕ್ಕೆ ಕಾಂಗ್ರೆಸ್ ಯಾವುದೇ ಕ್ರಮಕೈಗೊಂಡಿಲ್ಲ: ಪ್ರಲ್ಹಾದ್‌ ಜೋಶಿ

Date:

ಎಲ್ಲ ಜನರನ್ನು ಗುರುತಿಸಿ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಎಸ್​ಟಿ ಪಂಗಡಕ್ಕೆ ಸೇರಿದ ಹಿಂದುಳಿದ ಪ್ರದೇಶದಲ್ಲಿದ್ದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದೇವೆ. ಪರಿಶಿಷ್ಟ ಜಾತಿ ಪಂಗಡದ‌ ಕಲ್ಯಾಣಕ್ಕೆ ಕಾಂಗ್ರೆಸ್ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಬಂದ ಮೇಲೆ ಇದೆಲ್ಲ ಸಾಧ್ಯವಾಯಿತು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಭಾರತೀಯ ಜನತಾ ಪಕ್ಷ ಕರ್ನಾಟಕದ ಪರಿಶಿಷ್ಟ ಪಂಗಡಗಳ ಮಹಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಬಸವರಾಜ ಬೊಮ್ಮಾಯಿ ಸರ್ಕಾರ ಇದ್ದಾಗ ಯಡಿಯೂರಪ್ಪ ಅವರ ಆಶೀರ್ವಾದದಿಂದ ಎಸ್ಟಿ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಏರಿಸಿದ್ದೇವೆ” ಎಂದರು.

“ಬಿರ್ಸಾ ಮುಂಡಾ ಯಾರು ಅಂತಾ ಮರೆತೇ ಹೋಗಿತ್ತು. ಅವರನ್ನು ಮರೆತು ಹೋಗುವಂತೆ ಮಾಡಿದ್ದ ನೀಚ ಪಾರ್ಟಿ ಕಾಂಗ್ರೆಸ್. ಎಲ್ಲಿ ತಪ್ಪಿದೆ ಅದನ್ನ ಸರಿಪಡಿಸಿಕೊಂಡು ಜನರಿಗೆ ಮಾಹಿತಿ ಕೊಡಲು ನಾವು ಇಲ್ಲಿ ಸೇರಿದ್ದೇವೆ. ಭಗವಾನ್ ಬಿರ್ಸಾ ಮುಂಡಾ ಅವರು ಬ್ರಿಟಿಷರ ನಿದ್ದೆಗೆಡಿಸಿದ್ದ ಪರಿಶಿಷ್ಟ ಪಂಗಡದವರು, ಆದಿವಾಸಿಗಳ ನೇತೃತ್ವ ವಹಿಸಿದ್ದರು” ಎಂದು ಸ್ಮರಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿನ ಈ ಕಚ್ಚಾಟ, ‘ಆತ್ಮಹತ್ಯೆ’ಯ ಹುಚ್ಚಾಟ

“ಎಲ್ಲಿ ತಪ್ಪಾಗಿದೆ ಅಂತಾ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಪಕ್ಷದಲ್ಲಿ ಎಸ್​ಟಿ ಸಮುದಾಯದವರು ಯಾರು ಗೆದ್ದಿಲ್ಲ. ಪರಿಶಿಷ್ಟ ಪಂಗಡದ ಆಕ್ಷನ್ ಕಮಿಟಿಗೆ 1.8 ಲಕ್ಷ ಭೂಮಿಯನ್ನು ವಿತರಿಸಿದ್ದೇವೆ. ಮುದ್ರಾ ಯೋಜನೆಯಡಿ ಎಸ್​ಟಿ ಎಸ್​ಸಿ ಸಮುದಾಯದವರಿಗೆ ಶೇ.50ರಷ್ಟು ಸಾಲ ಸಿಕ್ಕಿದೆ. ಏಕಲವ್ಯ ಶಾಲೆಯನ್ನ ನಿರ್ಲಕ್ಷ್ಯ ಮಾಡಲಾಗಿತ್ತು. 38 ಸಾವಿರ ಶಿಕ್ಷಕರನ್ನು ನೇಮಿಸಿದ್ದು ನರೇಂದ್ರ ಮೋದಿ ಸರ್ಕಾರ” ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಿದ ವಿಚಾರವಾಗಿ ಮಾತನಾಡಿದ ಜೋಶಿ, “ಕಾನೂನು ಸಂವಿಧಾನ‌ ಪ್ರಕಾರವಾಗಿ ಬೊಮ್ಮಾಯಿ ಸರ್ಕಾರ ಏನು ಮಾಡಬೇಕೋ ಅದನ್ನು ಮಾಡಿದೆ. ಮುಂದೆ ಏನಾದರೂ ನಮ್ಮದು ಜವಾಬ್ದಾರಿ ಇದ್ದರೆ ಮಾಡುತ್ತೇವೆ. ಸರ್ಕಾರ ಏನು ಪ್ರಸ್ತಾವನೆ ಕೊಟ್ಟಿದೆ ಎಂದು ಪರಿಶೀಲಿಸಿ ತೀರ್ಮಾನ ಮಾಡುತ್ತೇವೆ” ಎಂದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಮಂತ್ರಿ ಮಹೋದಯರು,, ತಾವು ಹಾಗೂ ತಮ್ಮ ಸಂಘದ ಪರಂಪರೆ ಈ ವರ್ಗಗಳಿಗೆ ಮಾಡಿದ ಪರೋಪಕಾರಿ ಕೆಲಸಗಳು ಯಾವವು,,,ಈ ವರ್ಗಗಳನ್ನು ನಿಮ್ಮ ವರ್ಗಗಳ ಸರಿಸಮವಾಗಿ ಉಡುಪಿ ಮತ್ತು ರಾಘವೇಂದ್ರ ಮಠಗಳಲ್ಲಿ ಅವಕಾಶ ನೀಡುವಿರಾ,,ಈ ಪ್ರಶ್ನೆಯನ್ನು ಕಾಂಗ್ರೆಸ್ ಪಕ್ಷವನ್ನೂ ಕೇಳುವೆವು,, ಆಶ್ಚರ್ಯವೆಂದರೆ ನಿಮ್ಮ ಸಂಘಟನಾ ಕಾರ್ಯದರ್ಶಿ ಒಂದು ಹೇಳಿಕೆ ನೀಡಿದ್ದಾರೆ,, ದಲಿತರು ಹಿಂದುಳಿದವರು ಅಸ್ಪ್ರಶ್ಯರು ಈ ದೇಶದ ಮೂಲನಿವಾಸಿಗಳು ಅಲ್ವಂತೆ,,, ಹಾಗಾದ್ರೆ ಯುರೇಷಿಯಾದಿಂದ ಬಂದ ಆರ್ಯ ಆಕ್ರಮಣಕಾರರು ದೇಶಿ ಭಾರತೀಯರು ಹೇಗಾಗುವರು,, ಅವರೊಂದಿಗೆ ಸಮಾಲೋಚನೆ ನಡೆಸಿ ನಂತರ ಜನಸಾಮಾನ್ಯರಿಗೆ ಸಮಾಜಾಯಿಸಿ ಕೊಡಿವಿರೆಂದು,,ನಂಬೋಣವೆ,,,

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸದಾಗಿ GTDC ಗಳ ಸ್ಥಾಪನೆ: ಸಿ ಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ

ಹೊಸ ಹೊಸ ಉದ್ಯೋಗ ಸೃಷ್ಟಿ ಮತ್ತು ತರಬೇತಿಗಾಗಿ ಈಗಿರುವ GTDC ಗಳ...

ಸಿದ್ದರಾಮಯ್ಯ ಅವರಷ್ಟು ನೀಚತನಕ್ಕೆ ನಾವು ಇಳಿಯುವುದಿಲ್ಲ: ಪ್ರಲ್ಹಾದ ಜೋಶಿ ಕಿಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಂತೂ ಮಾನ, ಮರ್ಯಾದೆ ಇಲ್ಲ. ಹಾಗಂತ ಬೇರೆಯವರಿಗೂ ಇಲ್ಲ...