ಪಂಜಾಬ್‌ನಲ್ಲಿ ಮತ್ತೆ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲಿದೆಯೇ ಅಕಾಲಿದಳ?

Date:

ಪಂಜಾಬ್ ರಾಜಕಾರಣದಲ್ಲಿ ದಶಕಗಳ ಕಾಲ ಒಂದಾಗಿದ್ದು, ನಂತರ ಸಿದ್ಧಾಂತ ಮತ್ತು ರೈತರ ಹೋರಾಟದ ಹಿನ್ನೆಲೆಯಲ್ಲಿ ಹಾದಿ ಬದಲಿಸಿಕೊಂಡಿದ್ದ ಶಿರೋಮಣಿ ಅಕಾಲಿದಳ (SAD) ಮತ್ತು ಬಿಜೆಪಿ ಮತ್ತೆ ಮುಂಬರುವ ಚುನಾವಣೆಯ ಹೊಸ್ತಿಲಿನಲ್ಲಿ ಒಂದಾಗುವ ಸುಳಿವು ಸಿಕ್ಕಿದೆ. ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ನೀಡಿದ “ಇನ್ನೊಂದೆರಡು ದಿನಗಳಲ್ಲಿ ನಿಮಗೇ ಎಲ್ಲವೂ ತಿಳಿಯಲಿದೆ” ಎಂಬ ಹೇಳಿಕೆ ನೀಡಿದ್ದು, ಸದ್ಯ ರಾಜ್ಯ ರಾಜಕಾರಣದಲ್ಲಿ ಕಾವು ಹೆಚ್ಚಾಗಿದೆ.

- Advertisement -

1996ರ ಮೋಗಾ ಸಮಾವೇಶದ ನಂತರ, ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮತ್ತು ಬಿಜೆಪಿಯ ಹಿರಿಯ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಈ ಮೈತ್ರಿ ಗಟ್ಟಿಯಾಯಿತು. ಪಂಜಾಬ್‌ನಲ್ಲಿ ಅಕಾಲಿದಳವು ಗ್ರಾಮೀಣ ಸಿಖ್ ಮತದಾರರನ್ನು ಪ್ರತಿನಿಧಿಸಿದರೆ, ಬಿಜೆಪಿ ನಗರ ಪ್ರದೇಶದ ಹಿಂದೂ ಮತದಾರರನ್ನು ಪ್ರತಿನಿಧಿಸುತ್ತಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಮನಿಗೆ ₹150 ಕೋಟಿ, ಸೀತೆಗೆ ₹12 ಕೋಟಿ! ಬಿಗ್...

₹4,000 ಕೋಟಿಯ ಬೃಹತ್ ಬಜೆಟ್‌ನ 'ರಾಮಾಯಣ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹೊತ್ತಿನಲ್ಲಿ ಚಿತ್ರರಂಗದ ಅದೇ ಹಳೆ ಹಣೆಬರಹವೊಂದು ಚರ್ಚೆಗೆ ಸಿಕ್ಕಿದೆ. ರಾಮನ ಪಾತ್ರಕ್ಕೆ ₹150 ಕೋಟಿ, ರಾವಣನಿಗೆ ₹100 ಕೋಟಿ ಸಂಭಾವನೆ!...

ರಾಮಲೀಲಾ ಮೈದಾನದಲ್ಲಿ ವಿಪಕ್ಷಗಳ ಬಲಪ್ರದರ್ಶನ; ಬೀದಿ ಹೋರಾಟ ಬೇರುಮಟ್ಟದ...

ನವಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಸಮಾವೇಶವು ಭಾರತೀಯ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ರಾಜಕೀಯ ಮೈಲಿಗಲ್ಲಾಗಿ ದಾಖಲಾಗಿದೆ. ಚುನಾವಣಾ ಆಕ್ರಮ, ಎಸ್‌ಐಆರ್ ಷಡ್ಯಂತ್ರದ ವಿರುದ್ಧ ಮತ್ತು ಮುಖ್ಯ ಚುನಾವಣಾ...

ಮಣಿಪುರವನ್ನು ಜನಾಂಗೀಯ ಘರ್ಷಣೆಯ ದಳ್ಳುರಿಗೆ ತಳ್ಳಿ ಕೈಚೆಲ್ಲಿದೆ ಮೋ-ಶಾ...

ಮ್ಯಾನ್ಮಾರ್‌ನೊಂದಿಗೆ ಸುಮಾರು 400 ಕಿಲೋಮೀಟರ್ ಗಡಿ ಹಂಚಿಕೊಳ್ಳುವ ಈಶಾನ್ಯ ಭಾರತದ ಗಡಿ ರಾಜ್ಯ ಮಣಿಪುರದಲ್ಲಿ ಶತಮಾನಗಳಿಂದ ಬೆಳೆದು ಬಂದಿದ್ದ ಸೌಹಾರ್ದತೆಯ ಬೇರುಗಳನ್ನು ಸಂಪೂರ್ಣವಾಗಿ ಕೊಳೆತು ಹೋಗಲು ಕೇಂದ್ರ ಸರ್ಕಾರ ಬಿಟ್ಟಂತಿದೆ. 2023ರಿಂದ ನಡೆಯುತ್ತಿರುವ...

ಇದನ್ನೂ ಓದಿ: ಪಂಜಾಬ್ ಚುನಾವಣೆಗೆ ಬಿಜೆಪಿ ‘3 ಸಿ’ ಗೇಮ್‌ ಪ್ಲಾನ್‌

1980ರ ದಶಕದ ನಂತರ, ರಾಜ್ಯದಲ್ಲಿ ಸಿಖ್ ಮತ್ತು ಹಿಂದೂ ಸಹೋದರತ್ವವನ್ನು (ಭಾಯಿಚಾರ್) ಕಾಪಾಡಲು ಈ ಮೈತ್ರಿಯನ್ನು “ಶಾಂತಿಯ ಸೇತುವೆ” ಎಂದೇ ಬಣ್ಣಿಸಲಾಗುತ್ತಿತ್ತು. 1997, 2007 ಮತ್ತು 2012ರಲ್ಲಿ ಈ ಮೈತ್ರಿಕೂಟ ಪಂಜಾಬ್‌ನಲ್ಲಿ ಸರ್ಕಾರ ರಚಿಸಿತು.

23 ವರ್ಷಗಳ ಮೈತ್ರಿ ಮುರಿಯಲು ಕಾರಣವೇನು?

ಸುಮಾರು 23 ವರ್ಷಗಳ ಕಾಲ ಎನ್‌ಡಿಎ ಮೈತ್ರಿಕೂಟದ ಅತ್ಯಂತ ಹಳೆಯ ಮತ್ತು ನಿಕಟ ಪಾಲುದಾರ ಪಕ್ಷವಾಗಿದ್ದ ಅಕಾಲಿದಳವು 2020ರ ಸೆಪ್ಟೆಂಬರ್‌ನಲ್ಲಿ ಅಧಿಕೃತವಾಗಿ ಮೈತ್ರಿಯಿಂದ ಹೊರಬಂದಿದೆ. ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತಂದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್‌ನಲ್ಲಿ ರೈತರು ತೀವ್ರ ಪ್ರತಿಭಟನೆ ಆರಂಭಿಸಿದರು. ರೈತರ ಹಿತಾಸಕ್ತಿಗೆ ಧಕ್ಕೆಯಾಗುತ್ತಿದೆ ಎಂದು ಅಕಾಲಿದಳ ಈ ಕಾಯ್ದೆಗಳನ್ನು ತೀವ್ರವಾಗಿ ವಿರೋಧಿಸಿತು.

ಕೃಷಿ ಮಸೂದೆ ಪ್ರತಿಭಟನೆಯ ಭಾಗವಾಗಿ ಕೇಂದ್ರ ಸಂಪುಟದಲ್ಲಿದ್ದ ಸುಖ್‌ಬೀರ್ ಸಿಂಗ್ ಬಾದಲ್ ಅವರ ಪತ್ನಿ ಮತ್ತು ಹಿರಿಯ ನಾಯಕಿ ಹರ್‌ಸಿಮ್ರತ್ ಕೌರ್ ಬಾದಲ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕಾಯ್ದೆ ಹಿಂಪಡೆಯುವಂತೆ ಬಿಜೆಪಿ ಹೈಕಮಾಂಡ್‌ಗೆ ಮನವರಿಕೆ ಮಾಡಲು ಅಕಾಲಿದಳ ಪ್ರಯತ್ನಿಸಿತಾದರೂ, ಕೇಂದ್ರ ಸಮ್ಮತಿಸದ ಕಾರಣ ರೈತರ ಪರವಾಗಿ ನಿಲ್ಲಲು ಅಕಾಲಿದಳ ಎನ್‌ಡಿಎಯಿಂದ ಹೊರಬರಬೇಕಾಯಿತು. 2021ರಲ್ಲಿ ತೀವ್ರ ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯಿತಾದರೂ, ಅಷ್ಟರಲ್ಲಾಗಲೇ ಮೈತ್ರಿಯಲ್ಲಿ ದೊಡ್ಡ ಬಿರುಕು ಉಂಟಾಗಿತ್ತು.

ಇದನ್ನೂ ಓದಿ: ದೆಹಲಿಯಲ್ಲಿ ಬಾದಲ್-ಮೋದಿ ಮಾತುಕತೆ: ಪಂಜಾಬ್‌ನಲ್ಲಿ ಮತ್ತೆ ಒಂದಾಗುತ್ತವಾ ಬಿಜೆಪಿ-ಅಕಾಲಿದಳ?

ಇದೀಗ ಮತ್ತೆ ಮೈತ್ರಿಯ ಸುಳಿವು

2022ರ ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ (ಎಎಪಿ) ಅಭೂತಪೂರ್ವ ಗೆಲುವು ಸಾಧಿಸಿದ ನಂತರ, ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಬಿಜೆಪಿ ಮತ್ತು ಅಕಾಲಿದಳ ಎರಡೂ ಪಕ್ಷಗಳೂ ತೀವ್ರ ಹಿನ್ನಡೆ ಅನುಭವಿಸಿದವು. ಇದೀಗ ಮುಂದಿನ ಚುನಾವಣೆ ವೇಳೆ ಮತ್ತೆ ಮೈತ್ರಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ನಡುವೆ ಚಂಡೀಗಢದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸುಖ್‌ಬೀರ್ ಸಿಂಗ್ ಬಾದಲ್, “ನಾನೇನು ಜ್ಯೋತಿಷಿಯಲ್ಲ, ಇನ್ನೆರಡು ದಿನಗಳಲ್ಲಿ ಎಲ್ಲವೂ ನಿಮಗೇ ತಿಳಿಯಲಿದೆ” ಎಂದು ಮಾರ್ಮಿಕವಾಗಿ ಉತ್ತರಿಸಿ ಮೈತ್ರಿ ಮರುಸ್ಥಾಪನೆಯ ಮುನ್ಸೂಚನೆ ನೀಡಿದ್ದಾರೆ.

ಎಎಪಿ ಮತ್ತು ಕಾಂಗ್ರೆಸ್ ಪಂಜಾಬ್‌ನ ಅಭಿವೃದ್ಧಿಗೆ ಮಾರಕ ಎಂದು ಬಣ್ಣಿಸಿರುವ ಅಕಾಲಿದಳ, ಈ ಎರಡು ಪಕ್ಷಗಳನ್ನು ಸೋಲಿಸಲು ಬಿಜೆಪಿ ಸೇರಿದಂತೆ ಸಮಾನ ಮನಸ್ಕ ಪಕ್ಷಗಳ ಮೈತ್ರಿಗೆ ಒಲವು ತೋರುತ್ತಿದೆ. ದೆಹಲಿ ಮಟ್ಟದಲ್ಲಿ ಬಿಜೆಪಿ ವರಿಷ್ಠರು ಮತ್ತು ಅಕಾಲಿದಳ ನಾಯಕರ ನಡುವೆ ಸತತ ಮಾತುಕತೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.

ಪಂಜಾಬ್‌ನಲ್ಲಿ ಕಳೆದುಹೋದ ರಾಜಕೀಯ ನೆಲೆ ಕಂಡುಕೊಳ್ಳಲು ಅಕಾಲಿದಳಕ್ಕೆ ಮತ್ತು ರಾಜ್ಯದಲ್ಲಿ ಬಲವರ್ಧನೆಗೆ ಬಿಜೆಪಿಗೆ ಒಂದೇ ವೇದಿಕೆಯ ಅಗತ್ಯವಿದೆ. ರೈತರ ಕೆಲವು ಬಾಕಿ ಬೇಡಿಕೆಗಳಿಗೆ ಪರಿಹಾರ ಕಂಡುಕೊಳ್ಳುವ ಷರತ್ತಿನ ಮೇಲೆ ಬಿಜೆಪಿ-ಅಕಾಲಿದಳ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವೆನ್ನಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಮಲೀಲಾ ಮೈದಾನದಲ್ಲಿ ವಿಪಕ್ಷಗಳ ಬಲಪ್ರದರ್ಶನ; ಬೀದಿ ಹೋರಾಟ ಬೇರುಮಟ್ಟದ ಜನಾಂದೋಲನವಾಗಬೇಕು…

ನವಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಸಮಾವೇಶವು...

ಕೊಪ್ಪಳ | ರಸ್ತೆ ಅಪಘಾತ: ತಂದೆ, ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವು

ಕೊಪ್ಪಳ ತಾಲ್ಲೂಕಿನ ಗಿಣಿಗೇರಾ ಸಮೀಪ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ...

ಪ್ರಜ್ವಲ್ ಚಾಲಕ, ಡಿಕೆಶಿ ಭೇಟಿಯ ದಾಖಲೆ ಬಿಡುಗಡೆ: ಇದು ಬರೀ ‘ಟ್ರೈಲರ್’, ಸಿನಿಮಾ ಮುಂದಿದೆ ಎಂದ ಎಚ್‌ಡಿಕೆ

ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋಗಳು ಸಾರ್ವಜನಿಕವಾಗಿ ಹೊರಬರುವ ಮುನ್ನ...