ಅಂದು ಇಂದಿರಾ, ಇಂದು ಮೋದಿ: ಪುನಃ ಸಾಕ್ಷಿಯಾದ ರಾಮಲೀಲಾ ಮೈದಾನ!

Date:

 ಅದೇ ದೆಹಲಿ, ಅದೇ ರಾಮಲೀಲಾ ಮೈದಾನ. 51 ವರ್ಷಗಳ ಅಂತರದಲ್ಲಿ ಎರಡು ಬೃಹತ್ ಪ್ರತಿಭಟನೆಗಳು. ಎರಡು ವಿಭಿನ್ನ ರಾಜಕೀಯ ಸನ್ನಿವೇಶಗಳು.

- Advertisement -

1975ರ ಜೂನ್ 25. ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ಜನಸಾಗರ ಸೇರಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಮಲೀಲಾ ಮೈದಾನದಲ್ಲಿ ವಿಪಕ್ಷಗಳ ಬಲಪ್ರದರ್ಶನ; ಬೀದಿ ಹೋರಾಟ ಬೇರುಮಟ್ಟದ...

ನವಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಸಮಾವೇಶವು ಭಾರತೀಯ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ರಾಜಕೀಯ ಮೈಲಿಗಲ್ಲಾಗಿ ದಾಖಲಾಗಿದೆ. ಚುನಾವಣಾ ಆಕ್ರಮ, ಎಸ್‌ಐಆರ್ ಷಡ್ಯಂತ್ರದ ವಿರುದ್ಧ ಮತ್ತು ಮುಖ್ಯ ಚುನಾವಣಾ...

ಮಣಿಪುರವನ್ನು ಜನಾಂಗೀಯ ಘರ್ಷಣೆಯ ದಳ್ಳುರಿಗೆ ತಳ್ಳಿ ಕೈಚೆಲ್ಲಿದೆ ಮೋ-ಶಾ...

ಮ್ಯಾನ್ಮಾರ್‌ನೊಂದಿಗೆ ಸುಮಾರು 400 ಕಿಲೋಮೀಟರ್ ಗಡಿ ಹಂಚಿಕೊಳ್ಳುವ ಈಶಾನ್ಯ ಭಾರತದ ಗಡಿ ರಾಜ್ಯ ಮಣಿಪುರದಲ್ಲಿ ಶತಮಾನಗಳಿಂದ ಬೆಳೆದು ಬಂದಿದ್ದ ಸೌಹಾರ್ದತೆಯ ಬೇರುಗಳನ್ನು ಸಂಪೂರ್ಣವಾಗಿ ಕೊಳೆತು ಹೋಗಲು ಕೇಂದ್ರ ಸರ್ಕಾರ ಬಿಟ್ಟಂತಿದೆ. 2023ರಿಂದ ನಡೆಯುತ್ತಿರುವ...

ಅಮೆರಿಕ ಮಧ್ಯಂತರ ಚುನಾವಣೆ: ಡೊನಾಲ್ಡ್ ಟ್ರಂಪ್ ಕುರ್ಚಿಗಿಲ್ಲ ಕುತ್ತು;...

ಅಮೆರಿಕದ ಕಾಂಗ್ರೆಸ್‌ಗೆ ನ. 3ರಂದು ನಡೆಯಲಿರುವ 'ಮಧ್ಯಂತರ ಚುನಾವಣೆ' ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಬಹುದೊಡ್ಡ ಅಗ್ನಿಪರೀಕ್ಷೆ. ಈ ಸಮರದಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಬಹುಮತ ಕಳೆದುಕೊಂಡರೂ ಅವರ ಅಧ್ಯಕ್ಷ ಸ್ಥಾನಕ್ಕೇನೂ ಕುತ್ತಿಲ್ಲ;...

2026ರ ನವೆಂಬರ್ 1. ನರೇಂದ್ರ ಮೋದಿ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ‘ಇಂಡಿಯಾ’ ಒಕ್ಕೂಟದ ನಾಯಕರು ಅದೇ ಮೈದಾನದಲ್ಲಿ ಒಗ್ಗೂಡಿದರು. 1975ರ ಮಹಾಸಭೆಯನ್ನು ನೆನಪಿಸುವಂತಹ ಮತ್ತೊಂದು ಅಮೋಘ  ಮಹಾಸಭೆ ಭಾನುವಾರ ನಡೆಯಿತು.

ಅಂದು ಪ್ರಧಾನಿ ರಾಜೀನಾಮೆಗೆ ಒತ್ತಾಯ. ಇಂದು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ.

ಅಂದು ಇಂದಿರಾ ಗಾಂಧಿಯವರ ಚುನಾವಣೆಯನ್ನು ಅಲಹಾಬಾದ್ ಹೈಕೋರ್ಟ್ ಅಸಿಂಧುಗೊಳಿಸಿದ ತೀರ್ಪು ಹೋರಾಟಕ್ಕೆ ತಕ್ಷಣದ ಕಾರಣವಾಗಿ ಒದಗಿತ್ತು.

ಇಂದು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR), ವ್ಯಾಪಕ ಮತದಾರರ ಹೆಸರುಗಳ ಅಳಿಸುವಿಕೆ ಹಾಗೂ ಗಂಭೀರ ಚುನಾವಣಾ ಅಕ್ರಮಗಳ ಆರೋಪ ಪ್ರತಿಭಟನೆಗೆ ಕಾರಣ.

ಅಂದು ಜೆಪಿ ಅಹಿಂಸಾತ್ಮಕ ಸತ್ಯಾಗ್ರಹಕ್ಕೆ ಕರೆ ನೀಡಿದ್ದರು.

ಇಂದು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಸೇರಿದಂತೆ ಪ್ರತಿ ಪಕ್ಷಗಳ ನಾಯಕರು ‘ಮತ ಉಳಿಸಿ, ದೇಶ ಉಳಿಸಿ’ ಘೋಷಣೆಯಡಿ ಒಗ್ಗಟ್ಟಾಗಿದ್ದರು.

ಅಂದು ಅಧಿಕಾರದಲ್ಲಿದ್ದುದು ಕಾಂಗ್ರೆಸ್. ಇಂದು ಅಧಿಕಾರದಲ್ಲಿರುವುದು ಬಿಜೆಪಿ. ಅಂದು ವಿರೋಧ ಪಕ್ಷಗಳ ಒಗ್ಗಟ್ಟಿನ ಗುರಿ ಇಂದಿರಾ ಗಾಂಧಿ ಸರ್ಕಾರವಾಗಿತ್ತು.

ಇಂದು ವಿರೋಧ ಪಕ್ಷಗಳ ಒಗ್ಗಟ್ಟಿನ ಗುರಿ ಮೋದಿ ಸರ್ಕಾರದ ನೀತಿಗಳು ಮತ್ತು ಚುನಾವಣಾ ಆಯೋಗದ ಕಾರ್ಯವೈಖರಿ. ಆದರೆ, ಎರಡೂ ಹೋರಾಟಗಳ ನಡುವೆ ಮಹತ್ವದ ವ್ಯತ್ಯಾಸ ಉಂಟು!

1975ರ ಪ್ರತಿಭಟನೆಯ ಬೆನ್ನಲ್ಲೇ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಯಿತು. ವಿರೋಧ ಪಕ್ಷಗಳ ನಾಯಕರನ್ನು ಬಂಧಿಸಲಾಯಿತು. ಪತ್ರಿಕಾ ಸ್ವಾತಂತ್ರ್ಯಕ್ಕೆ ನಿರ್ಬಂಧ ಬಿತ್ತು.

2026ರ ಪ್ರತಿಭಟನೆಗೆ ದೆಹಲಿ ಪೊಲೀಸರು ಅಧಿಕೃತ ಅನುಮತಿ ನೀಡಿದ್ದರು. ಆದರೂ, ಬಿಜೆಪಿ ನಾಯಕರು ಈ ಹೋರಾಟವನ್ನು ಅರಾಜಕತೆ ಸೃಷ್ಟಿಸುವ ಪ್ರಯತ್ನವೆಂದು ಟೀಕಿಸಿದ್ದರು. 1975ರಲ್ಲಿ ಹೋರಾಟದ ಕೇಂದ್ರಬಿಂದುವಾಗಿದ್ದು ಪ್ರಧಾನಿಯ ಚುನಾವಣೆಯ ಸಿಂಧುತ್ವ.

2026ರಲ್ಲಿ ಹೋರಾಟದ ಕೇಂದ್ರಬಿಂದುವಿನಲ್ಲಿರುವುದು ಚುನಾವಣಾ ಆಯೋಗ ಎಸ್.ಐ.ಆರ್ ಎಂಬ ಅಕ್ರಮ ಪ್ರಕ್ರಿಯೆ ಮತ್ತು ಆ ಮೂಲಕ ತಯಾರಿಸಲಾಗಿರುವ ಮತದಾರರ ಪಟ್ಟಿಯ ವಿಶ್ವಾಸಾರ್ಹತೆ.

ಪ್ರತಿಪಕ್ಷಗಳು ಗ್ಯಾನೇಶ್ ಕುಮಾರ್ ಮತ್ತು ಮೋದಿ ಸರ್ಕಾರದ ಮೇಲೆ ಮತಗಳ್ಳತನದ ಆರೋಪ ಮಾಡುತ್ತಿವೆ. ಚುನಾವಣಾ ಆಯೋಗವು ಪಟ್ಟಿಯ ಪರಿಷ್ಕರಣೆಯ ಉದ್ದೇಶ ನಕಲಿ ಮತ್ತು ಅನರ್ಹ ಹೆಸರುಗಳನ್ನು ತೆಗೆದುಹಾಕುವುದೆಂದು ಸಮರ್ಥಿಸಿಕೊಳ್ಳುತ್ತಿದೆ.

1975ರ ಹೋರಾಟದ ನಂತರ ಏನಾಯಿತು ಎಂಬುದು ಈಗಾಗಲೆ ಇತಿಹಾಸ. 2026ರ ಹೋರಾಟ ಮುಂದೆ ಯಾವ ಪರಿಣಾಮ ಬೀರುತ್ತದೆ ಎಂಬುದು ಇನ್ನೂ ನಿರ್ಧಾರವಾಗಬೇಕಿದೆ. 1975ರ ಪ್ರತಿಭಟನೆಯನ್ನು 2026ರ ಪ್ರತಿರೋಧದ ಜೊತೆ ನೇರವಾಗಿ ಸಮೀಕರಿಸಲಾಗದು.

ಆದರೆ ಎರಡೂ ಸಮಾವೇಶಗಳು ಒಂದು ಸಾಮಾನ್ಯ ಸಂಗತಿಯನ್ನು ನೆನಪಿಸುತ್ತವೆ.

ಆಡಳಿತದ ವಿರುದ್ಧ ಜನರನ್ನು ಸಂಘಟಿಸುವ, ಪ್ರಶ್ನಿಸುವ ಮತ್ತು ಪ್ರತಿಭಟಿಸುವ ರಾಜಕೀಯ ವೇದಿಕೆಗಳು ಮತ್ತು ರಾಮಲೀಲಾ ಮೈದಾನ.

51 ವರ್ಷಗಳ ಹಿಂದೆ ಕೇಳಿಬಂದದ್ದು ಅಧಿಕಾರದ ಸಿಂಧುತ್ವದ ಪ್ರಶ್ನೆ. ಇಂದು ಕೇಳಿಬರುತ್ತಿರುವುದು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಪ್ರಶ್ನೆ.

ಕಾಲ ಬದಲಾಗಿದೆ. ಅಧಿಕಾರದಲ್ಲಿರುವ ಪಕ್ಷ ಬದಲಾಗಿದೆ. ಪ್ರಶ್ನೆಗಳೂ ಬದಲಾಗಿವೆ. ಆದರೆ ರಾಜಕೀಯ ಪ್ರತಿಭಟನೆ ಮತ್ತು ಅದರ ತಾಣ ರಾಮಲೀಲಾ ಮೈದಾನ ಬದಲಾಗಿಲ್ಲ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಶ್ಚಿಮ ಬಂಗಾಳ: ಚರ್ಚ್ ಉದ್ಘಾಟನೆ ವೇಳೆ ದುಷ್ಕರ್ಮಿಗಳಿಂದ ದಾಳಿ; ಧರ್ಮಗುರುಗಳು, ಭಕ್ತರ ಮೇಲೆ ಹಲ್ಲೆ

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ನಾರಾಯಣತಲಾದಲ್ಲಿ ಶನಿವಾರ (ಅ.31)...

ರಾಮಮಂದಿರ ಲೂಟಿ ಪ್ರಕರಣ: ಸಿಬಿಐ ತನಿಖೆ ಕೋರಿದ್ದ ಅರ್ಜಿಗಳ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಅಯೋಧ್ಯೆಯ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕಾಣಿಕೆ ಕಳವು ಮತ್ತು ಹಣಕಾಸು...

ವಿಮಾನ ದರ | ಅಗತ್ಯಬಿದ್ದರೆ ಟಿಕೆಟ್‌ ಬೆಲೆ ನಿಯಂತ್ರಿಸಲು ಕೇಂದ್ರಕ್ಕೆ ಅಧಿಕಾರ!

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಹಾಗೂ ವಿಮಾನಯಾನ ಇಂಧನ (ಎಟಿಎಫ್) ಬೆಲೆ...