ಪಠ್ಯ ಪುಸ್ತಕಗಳು ರಾಜಕೀಯ ನಿಲುವು/ಹಿತಾಸಕ್ತಿಗಳಿಗೆ ಹೊರತಾಗಿರಲಿ

Date:

ರಾಜಕೀಯ ಪಕ್ಷಗಳು ತಮ್ಮ ವಿಚಾರಧಾರೆಗಳ ಪ್ರಚಾರಕ್ಕಾಗಿ ಪಠ್ಯಪುಸ್ತಕ ಪರಿಷ್ಕರಣೆ ಕಾರ್ಯಕ್ಕೆ ಮುಂದಾದರೆ, ಅದು ಎಲ್ಲಿಗೆ ಹೋಗುತ್ತದೆ? ಪಠ್ಯ ಪುಸ್ತಕಗಳ ಬಗ್ಗೆ ಇದ್ದ ಪಾವಿತ್ರ್ಯ ನಾಶವಾಗಿದೆ. 

ಪಠ್ಯ ಪುಸ್ತಕಗಳ ಪರಿಷ್ಕರಣ ಮೊದಲಿನಿಂದಲೂ ನಡೆಯುತ್ತಿತ್ತು. ಆದರೆ, ಸಾರ್ವತ್ರಿಕವಾಗಿ ಇಷ್ಟೊಂದು ವಾದ-ವಿವಾದ ಗಳಾಗುತ್ತಿರಲಿಲ್ಲ. ಅವೆಲ್ಲ ತಜ್ಞರ ವಲಯಕ್ಕೆ ಸೀಮಿತವಾಗಿರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಸರ್ಕಾರಗಳು ಬದಲಾದಂತೆ ಪಠ್ಯಗಳನ್ನು ಪರಿಷ್ಕರಿಸುವ ಪ್ರವೃತ್ತಿ ಕಂಡುಬರುತ್ತಿದ್ದು, ಇದು ಮಕ್ಕಳಲ್ಲಿ ಆತಂಕವನ್ನು ಉಂಟುಮಾಡುವ ಮತ್ತು ಶಿಕ್ಷಕರನ್ನು ಗೊಂದಲಕ್ಕೀಡು ಮಾಡುವಂತಾಗಿರುವುದು ವಿಷಾದನೀಯ. ಬರಗೂರು ರಾಮಚಂದ್ರಪ್ಪನವರ ನೇತೃತ್ವದ ಪಠ್ಯ ಪರಿಷ್ಕರಣ ಸಮಿತಿ ಮಾಡಿದ ಬದಲಾವಣೆ

- Advertisement -

ಸಾರ್ವಜನಿಕವಾಗಿ ಚರ್ಚೆಗೆ ಬಂತು. ನಂತರ ಬಂದ ಬಿಜೆಪಿ ಸರ್ಕಾರ ರೋಹಿತ್ ಚಕ್ರತೀರ್ಥರ ನೇತೃತ್ವದಲ್ಲಿ ಪಠ್ಯ ಪರಿಶೀಲನಾ ಸಮಿತಿ ರಚಿಸಿತು. ಇದರ ಬಗ್ಗೆ ಪರ-ವಿರೋಧ ಚರ್ಚೆಯಾಯಿತು. ಈಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬೊಮ್ಮಾಯಿ ನೇತೃತ್ವದ ಸರ್ಕಾರ ಪರಿಷ್ಕರಣೆ ಮಾಡಿ ಜಾರಿಗೆ ತಂದಿದ್ದ ಪಠ್ಯಪುಸ್ತಕಗಳನ್ನು ಬದಲಾವಣೆ ಮಾಡಿ ಶಿಕ್ಷಣ ಇಲಾಖೆ ಮೂಲಕ (2023-2024 ಸಾಲಿನ ಪಠ್ಯಪುಸ್ತಕ) ಆದೇಶ ಹೊರಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

ಸರ್ಕಾರ ಬದಲಾದಂತೆಲ್ಲ ಪಠ್ಯಕ್ರಮಗಳು ಬದಲಾಗುತ್ತಾ ಹೋದರೆ ಮಕ್ಕಳು ಮತ್ತು ಶಿಕ್ಷಕರ ಪರಿಸ್ಥಿತಿ ಏನು? ನಿಶ್ಚಿತವಾಗಿಯೂ ಪಠ್ಯಗಳ ಪರಿಷ್ಕರಣ ಗೊಂದಲ ಸೃಷ್ಟಿಸಿದೆ. ಗೊಂದಲಕ್ಕೆ ಕಾರಣ ಎಡ-ಬಲ ಪಂಥದವರ ದೃಷ್ಟಿಕೋನದಲ್ಲಿ ಪರಿಷ್ಕರಣ ನಡೆದಿರುವುದೇ ಆಗಿದೆ. ಪಠ್ಯಪುಸ್ತಕ ಪರಿಷ್ಕರಣೆ ಸುತ್ತಲಿನ ವಿವಾದಗಳು, ರಾಜಕೀಯ ಕೆಸರೆರಚಾಟಗಳು ಅನಪೇಕ್ಷಣೀಯವಾದದ್ದು. ಪರಿಷ್ಕರಣಗಳು ವಸ್ತುನಿಷ್ಠ ನೆಲೆಯಲ್ಲಿ ಆಗಿಲ್ಲ. ಪಠ್ಯ ಪುಸ್ತಕಗಳನ್ನು ಅಧಿಕಾರದಲ್ಲಿರುವವರು ತಮ್ಮತಮ್ಮ ಮೂಗಿನ ನೇರಕ್ಕೆ ಬದಲಿಸುವ/ ಪರಿಷ್ಕರಣಗೊಳಿಸುವ ಕೆಲಸ ಮಾಡಿದ್ದಾರೆ.

Advertisements

ಈ ಲೇಖನ ಓದಿದ್ದೀರಾ?: ಬಡವರಿಗೆ ನೀಡಿದರೆ ‘ಬಿಟ್ಟಿ’, ಕೋಟ್ಯಾಧೀಶರಿಗೆ ನೀಡಿದರೆ ‘ಪ್ರೋತ್ಸಾಹಕ’…!

ರಾಜಕೀಯ ಪಕ್ಷಗಳು ತಮ್ಮ ವಿಚಾರಧಾರೆಗಳ ಪ್ರಚಾರಕ್ಕಾಗಿ ಪಠ್ಯಪುಸ್ತಕ ಪರಿಷ್ಕರಣೆ ಕಾರ್ಯಕ್ಕೆ ಮುಂದಾದರೆ, ಅದು ಎಲ್ಲಿಗೆ ಹೋಗುತ್ತದೆ? ಈ ಹಿಂದೆ ವಿದ್ವಾಂಸರು, ಶಿಕ್ಷಣ ಕ್ಷೇತ್ರದ ಅನುಭವಿಗಳು ಮತ್ತು ಸಂಶೋಧಕರು ಮಕ್ಕಳು ಏನನ್ನು ಓದಬೇಕು ಎಂಬುದನ್ನು ನಿರ್ಧರಿಸುತ್ತಿದ್ದರು. ಈಗ ರಾಜಕಾರಣಿಗಳು ನಿರ್ಧರಿಸುತ್ತಿರುವುದು ಅಪಾಯಕಾರಿ ಬೇಳವಣಿಗೆ. ಒಟ್ಟಿನಲ್ಲಿ ಒಂದು ಗುಂಪು ಮಾಡಿದ್ದನ್ನು ಇನ್ನೊಂದು ಗುಂಪು ವಿರೋಧಿಸುತ್ತಿದೆ. ಪಠ್ಯ ಪುಸ್ತಕಗಳ ಬಗ್ಗೆ ಇದ್ದ ಪಾವಿತ್ರ್ಯ ನಾಶವಾಗಿದೆ.

ಇದಕ್ಕೆ ಪರಿಹಾರವೆಂದರೆ, ಪಠ್ಯ ಪುಸ್ತಕ ರಚನೆಗೆ ರಾಜಕೀಯ ಹಿತಾಸಕ್ತಿಯಿಲ್ಲದ ವಿಷಯ ತಜ್ಞರ ಸ್ಥಾಯಿ ಸಮಿತಿಯನ್ನು ರಚಿಸುವುದೇ ಆಗಿದೆ. ಆದರೆ, ನಿಷ್ಪಕ್ಷ ತಜ್ಞರನ್ನು ಹುಡುಕುವುದು ಅಷ್ಟು ಸುಲಭವಾಗಿ ಉಳಿದಿಲ್ಲ. ಒಟ್ಟಿನಲ್ಲಿ ಈಗ ಮಕ್ಕಳ ಪಠ್ಯಗಳು ರಾಜಕಾರಣದ ಬಣ್ಣ ಪಡೆದುಕೊಂಡಿದೆ. ಇದರಲ್ಲಿ ಆ ಪಕ್ಷ, ಈ ಪಕ್ಷ ಎನ್ನುವ ಬೇಧವೇನಿಲ್ಲ. ರಾಜಕೀಯ ಪಕ್ಷಗಳು ಶಿಕ್ಷಣ ಅಥವಾ ಪಠ್ರಕ್ರಮದ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಬೇಕೆಂಬ ಗಂಡಾಂತರಕಾರಿ ಚಪಲದಿಂದ ದೂರವಿರಬೇಕು. ಇಲ್ಲದಿದ್ದರೆ, ಕರ್ನಾಟಕಕ್ಕೆ ‘ಅರಾಜಕತೆಯ ಆಡುಂಬೊಲ’ ಎನ್ನುವ ಕಳಂಕ ಮೆತ್ತಿಕೊಳ್ಳುವುದರಲ್ಲಿ ಯಾವ ಅನುಮಾನವೂ ಇಲ್ಲ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಶೀಲ ಶಂಕೆ ಹಿನ್ನೆಲೆಯಲ್ಲಿ ಪತ್ನಿಯನ್ನೇ ಹತ್ಯೆಗೈದ ಪತಿ!

ಶೀಲ ಶಂಕೆ ಹಿನ್ನೆಲೆಯಲ್ಲಿ ಪತಿಯೇ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಆಘಾತಕಾರಿ...

ಉಡುಪಿ | ವೃದ್ಧೆಯನ್ನು ಭಾವನಾತ್ಮಕವಾಗಿ ನಂಬಿಸಿ ಚಿನ್ನದ ಸರ ಕಳವು; ಆರೋಪಿ ಬಂಧನ

ವೃದ್ಧೆಯೊಬ್ಬರನ್ನು ಭಾವನಾತ್ಮಕವಾಗಿ ನಂಬಿಸಿ ಮನೆಯಲ್ಲಿದ್ದ ಚಿನ್ನದ ಸರ ಕಳವು ಮಾಡಿದ ಪ್ರಕರಣವನ್ನು...

ರಾಯಚೂರು | ಸ್ಮಶಾನದಲ್ಲಿ ಹೂತ ಶವಗಳ ಅವಶೇಷ ಸಾಗಣೆ ಆರೋಪ: ಮೂವರು ಪೊಲೀಸ್ ವಶಕ್ಕೆ

ನಗರದ 13ನೇ ವಾರ್ಡ್‌ನ ಮಾರುತಿ ನಗರ ಸ್ಮಶಾನದಲ್ಲಿ ಹೂತು ಹಾಕಿದ ಶವಗಳ...

ಚಿಂತಾಮಣಿ ನಗರದಲ್ಲಿ ಧಾರಾಕಾರ ಮಳೆ ವಾಹನ ಸವಾರರು ಜನರ ಪರದಾಟ-ತಗ್ಗುಪ್ರದೇಶಗಳು ಜಲಾವೃತ

ನಗರದಲ್ಲಿ ರಾತ್ರಿ 8 ಸುಮಾರಿಗೆ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು...