ಆಧಾರ್‌ – ಪ್ಯಾನ್‌ ಕಾರ್ಡ್‌ ಜೋಡಣೆ | ಇದು ಹಗಲು ದರೋಡೆ‌ ಅಲ್ಲದೆ ಮತ್ತೇನು: ಜೆಡಿಎಸ್ ಪ್ರಶ್ನೆ

Date:

  • ಆಧಾರ್ ಜೋಡಿಸದಿದ್ದರೆ ದಂಡ ವಿಧಿಸಿ ಎನ್ನುವ ಕಾನೂನು ಎಲ್ಲಿದೆ
  • ಕೇಂದ್ರ ಸರ್ಕಾರದ್ದು ಸರ್ವಾಧಿಕಾರಿ ನಡೆ ಎಂದ ಜೆಡಿಎಸ್‌

ಸಾವಿರ ರೂಪಾಯಿ ದುಬಾರಿ ಶುಲ್ಕದೊಂದಿಗೆ ಆಧಾರ್ ಮತ್ತು ಪ್ಯಾನ್‌ ಕಾರ್ಡ್‌ ಜೋಡಣೆ ಮಾಡಬೇಕೆಂದಿರುವ ಕೇಂದ್ರ ಸರ್ಕಾರದ ನಿರ್ಧಾರ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್‌ “ಇದು ಹಗಲು ದರೋಡೆ ಅಲ್ಲದೆ ಮತ್ತೇನು?” ಎಂದು ಪ್ರಶ್ನಿಸಿದೆ.

ಪ್ಯಾನ್‌ ಮತ್ತು ಆಧಾರ್ ಲಿಂಕ್‌ ಮಾಡುವ ದಿನಾಂಕವನ್ನು ಮಾರ್ಚ್ 31 ಕೊನೆಯ ದಿನಾಂಕ ಎಂದು ಹೇಳಲಾಗಿತ್ತು. ಆದರೆ, ಜೂನ್‌ 30ರವರೆಗೆ ಸರ್ಕಾರ ಗಡುವು ವಿಸ್ತರಿಸಿದೆ. ದುಬಾರಿ ಶುಲ್ಕದೊಂದಿಗೆ ಪ್ಯಾನ್‌ ಜೋಡಣೆ ಮಾಡುವ ಪ್ರಕ್ರಿಯೆ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್‌, “ಆಧಾರ್ ಮತ್ತು ಪ್ಯಾನ್ ಕಾರ್ಡ್ ಜೋಡಣೆ ಮಾಡಲು ಸಾವಿರ ರೂಪಾಯಿ ಶುಲ್ಕ ನಿಗದಿ ಮಾಡಿರುವುದು ಹಗಲು ದರೋಡೆ‌ ಅಲ್ಲದೆ ಮತ್ತೇನು? ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಜನಸಾಮಾನ್ಯರ ದುಡ್ಡು ಈ ರೀತಿ ಸುಲಿಗೆ ‌ಮಾಡುವುದು ಅಭ್ಯಾಸವಾಗಿಬಿಟ್ಟಿದೆ. ಇವರನ್ನು ಅಧಿಕಾರಕ್ಕೆ ತಂದು ಜನಸಾಮಾನ್ಯರು ಪರಿತಪಿಸುತ್ತಿದ್ದಾರೆ” ಎಂದು ವ್ಯಂಗ್ಯವಾಡಿದೆ.

“ನಕಲಿ ಪ್ಯಾನ್ ಕಾರ್ಡು ಹೊಂದಿದವರನ್ನು ಹಿಡಿಯಲು ಈ ಕ್ರಮ ಎಂದು ಪ್ರಲಾಪ‌ ಕೊಚ್ಚುವವರೆ, ನಾಲ್ಕು ಜನ ಕಳ್ಳರನ್ನು ಹಿಡಿಯಲು ಸಕಲ ಜನಸಾಮಾನ್ಯರೇಕೆ ಶುಲ್ಕ ತೆರಬೇಕು? ಇದನ್ನು ದುಡ್ಡು ಕೊಟ್ಟು ಮಾಡಿಸಿಕೊಳ್ಳುವಂತೆ ಕಡ್ಡಾಯಗೊಳಿಸಿದ್ದು ಏಕೆ? ಹೀಗೆ ಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ವ್ಯವಸ್ಥೆಯೇ ಜನದ್ರೋಹಿಯಾದದ್ದು. ನಾಚಿಕೆಯಾಗಬೇಕು” ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದೆ.

“ಈ ಜೋಡಣೆ ಪ್ರಕ್ರಿಯೆ ಈ ತಿಂಗಳೊಳಗೆ ಮಾಡದಿದ್ದರೆ 10 ಸಾವಿರ ರೂ. ದಂಡ ತೆರಬೇಕಂತೆ! ಪ್ಯಾನ್ ಕಾರ್ಡ್‌ಗೆ ಆಧಾರ್ ಜೋಡಿಸದಿದ್ದರೆ ಅಥವಾ ತಡವಾಗಿ ಜೋಡಿಸುವುದಕ್ಕೆ ದಂಡ ವಿಧಿಸಲು ಯಾವ ಕಾನೂನಿನಲ್ಲಿ ಅವಕಾಶವಿದೆ? ಇದು ಸರ್ವಾಧಿಕಾರಿ ನಡೆ. ಹೇಳುವವರು-ಕೇಳುವವರು ಇಲ್ಲದ ಕುಸಿದ ವ್ಯವಸ್ಥೆಗೆ ಹಿಡಿದ ಕನ್ನಡಿ” ಎಂದು ಹೇಳಿದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪನಿಶ್ಮೆಂಟ್‌ಗೆ ಆಸ್ಪದ ಕೊಡಬೇಡಿ, ಒಳ್ಳೆ ಕೆಲಸ ಮಾಡಿ: ಬಿಬಿಎಂಪಿ ಅಧಿಕಾರಿಗಳಿಗೆ ಡಿಸಿಎಂ ಎಚ್ಚರಿಕೆ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಡಿಸಿಎಂ ಸಭೆ 'ಪನಿಶ್ಮೆಂಟ್ ಮಾಡೋದು ದೊಡ್ಡ...

ಕೇಂದ್ರದ ಯೋಜನೆ ರಾಜ್ಯದ ಜನರಿಗೆ ತಲುಪಿಸುವಲ್ಲಿ ರಾಜಕಾರಣ ಮಾಡಿದರೆ ರಾಜ್ಯಕ್ಕೆ ನಷ್ಟ: ಬೊಮ್ಮಾಯಿ

'ಕೇಂದ್ರ ಸರ್ಕಾರಕ್ಕೆ 9 ವರ್ಷ, ನರೇಂದ್ರ ಮೋದಿ ಆಡಳಿತ ಮುಂದುವರೆಯಲಿʼ 'ಐದು ಗ್ಯಾರಂಟಿಗಳ...

ನೂತನ ಸಚಿವರಿಗೆ ಕೊಠಡಿ ಹಂಚಿಕೆ: ಇಲ್ಲಿದೆ ಪೂರ್ಣ ಮಾಹಿತಿ

ಪೂರ್ಣ ಪ್ರಮಾಣದ ಸಂಪುಟ ರಚನೆ ಮಾಡಿದ ಸಿಎಂ ಹೊಸ ಸಚಿವರಿಗೆ ಶಕ್ತಿ ಸೌಧದಲ್ಲಿ...

ಆರ್‌ಎಸ್‌ಎಸ್‌-ಬಜರಂಗದಳದ ದಲಿತರು, ಶೂದ್ರರನ್ನು ಸೆಳೆಯಬೇಕಿದೆ: ಸತೀಶ್‌ ಜಾರಕಿಹೊಳಿ

ಒಂದು ಸಂಘಟನೆ ನಿಷೇಧಿಸಿದರೆ ಮತ್ತೊಂದು ಹುಟ್ಟಿಕೊಳ್ಳುತ್ತದೆ ದಲಿತರಿಗೆ ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆ...